ಕುರಿ-ಮೇಕೆ ಸಾಕಾಣಿಕೆಗೆ ರಾಜ್ಯ ಸರ್ಕಾರ ‘ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ’ (Amrutha Swabhimani Kurigahi Subsidy) ಜಾರಿಗೊಳಿಸಿದ್ದು; ಈ ಯೋಜನೆಯ ಅಡಿಯಲ್ಲಿ ಸಹಾಯಧನ ಪಡೆಯುವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕುರಿ ಸಾಕಾಣಿಕೆ ಕಳೆದ ಕೆಲವು ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲಿ ಲಾಭದಾಯಕ ವೃತ್ತಿಯಾಗಿ ರೂಪಾಂತರಗೊಂಡಿದೆ. ಎಲ್ಲಾ ಸಮುದಾಯದ ಜನರೂ ಈಗ ಕುರಿ ಸಾಕಾಣಿಕೆಯಲ್ಲಿ ತೊಡಗಿದ್ದು; ಇಂದು ಇದು ಯುವಕರಿಗೆ ಉದ್ಯೋಗದ ಅವಕಾಶವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ‘ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ’ (Amruta Swabhimani Kurigahi Scheme) ಹೆಸರಿನಲ್ಲಿ ಕುರಿ ಸಾಕಾಣಿಕೆಗೆ ಪ್ರೋತ್ಸಾಹ ನೀಡಲು ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ.
Amrutha Swabhimani Kurigahi Scheme Details- ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ವಿವರ
ಈ ಯೋಜನೆಯಡಿ 20 ಕುರಿ ಅಥವಾ ಮೇಕೆ ಮತ್ತು 1 ಟಗರನ್ನು ಒಳಗೊಂಡ ಘಟಕವನ್ನು ಫಲಾನುಭವಿಗೆ ದೊರೆಯುತ್ತದೆ. ಘಟಕದ ಒಟ್ಟು ವೆಚ್ಚ 1,75,000 ರೂ. (ಒಂದು ಲಕ್ಷ ಎಪ್ಪತ್ತೈದು ಸಾವಿರ ರೂಪಾಯಿಗಳು) ಆಗಿರುತ್ತದೆ.
ಒಟ್ಟು ವೆಚ್ಚದಲ್ಲಿ ರಾಜ್ಯ ಸರ್ಕಾರದಿಂದ ಶೇ.25ರಷ್ಟು ಸಹಾಯಧನ, ಎನ್‌ಸಿಡಿಸಿ ಮೂಲಕ ಶೇ.50ರಷ್ಟು ಸಾಲ ಮತ್ತು ಉಳಿದ ಶೇ.25ರಷ್ಟು ಫಲಾನುಭವಿಯ ವಂತಿಕೆ ಆಗಿರುತ್ತದೆ.
ಗ್ರಾಮೀಣ ಪ್ರದೇಶದ ಆರ್ಥಿಕತೆಯ ಮೇಲೆ ಕುರಿ ಸಾಕಾಣಿಕೆಯ ಪರಿಣಾಮ ದೊಡ್ಡ ಮಟ್ಟದಲ್ಲಿ ಕಂಡು ಬರುತ್ತಿರುವುದರಿಂದ, ಈ ಯೋಜನೆ ಯುವಕರಿಗೆ ಸ್ವಯಂ ಉದ್ಯೋಗವನ್ನು ಸೃಷ್ಟಿಸುವಲ್ಲಿ ಸಹಕಾರಿಯಾಗಿದೆ.
Purpose of the Scheme- ಯೋಜನೆಯ ಉದ್ದೇಶವೇನು?
ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಕಲ್ಪಿಸುವುದು, ಪರಂಪರೆಯ ಕುರಿಗಾಹಿ ಕುಟುಂಬಗಳಿಗೆ ಆರ್ಥಿಕ ಬಲ ನೀಡುವುದು ಹಾಗೂ ಮಾಂಸ ಹಾಗೂ ಉಣ್ಣೆ ಉತ್ಪಾದನೆ ಹೆಚ್ಚಳಕ್ಕೆ ಬಲ ನೀಡುವುದು ಈ ಯೋಜನೆ ಉದ್ದೇಶವಾಗಿದೆ.
ಇದೇ ಕಾರಣಕ್ಕೆ ಕುರಿ ಸಾಕಾಣಿಕೆಯನ್ನು ವೈಜ್ಞಾನಿಕ ಪದ್ಧತಿಯಲ್ಲಿ ನಡೆಸಲು ರಾಜ್ಯ ಸರ್ಕಾರ ಹಣಕಾಸಿನ ನೆರವನ್ನು ಒದಗಿಸುತ್ತಿದೆ. ಹೆಚ್ಚು ಮಂದಿ ಯುವಕರು ಕುರಿ ಸಾಕಾಣಿಕೆಯನ್ನು ಬಿಸಿನೆಸ್ ಆಗಿ ನೋಡಲು ಇದು ನೆರವಾಗುತ್ತದೆ.

Unit Cost Details- ಘಟಕ ವೆಚ್ಚದ ವಿವರ
ಯೋಜನೆಯಡಿ 20 ಹೆಣ್ಣು ಕುರಿ ಅಥವಾ ಮೇಕೆಗಳು, 1 ಗಂಡು ಟಗರು ಅಥವಾ ಹೋತ ಸೇರಿ ಒಟ್ಟು 21 ಪ್ರಾಣಿಗಳ ಘಟಕವನ್ನು ಸರ್ಕಾರ ‘ಲಾಭದಾಯಕ ಸಾಕಾಣಿಕೆ ಘಟಕ’ ಎಂದು ಪರಿಗಣಿಸಿದೆ.
Total Cost & Subsidy- ಒಟ್ಟು ವೆಚ್ಚ ಮತ್ತು ಸಹಾಯಧನ
ಒಟ್ಟು ಘಟಕದ ವೆಚ್ಚವು 1,75,000 ರೂ. ಆಗಿದ್ದು; ಅದರ ವಿಂಗಡಣೆ ಹೀಗಿದೆ:
- NCDC ಸಾಲ: 87,500 ರೂ. ಶೇ. 50ರಷ್ಟು
- ಸರ್ಕಾರದ ಸಹಾಯಧನ: 43,750 ರೂ. ಶೇ. 25ರಷ್ಟು
- ಫಲಾನುಭವಿಯ ವಂತಿಕೆ: 43,750 ರೂ. ಶೇ.25ರಷ್ಟು
ಇದಲ್ಲಿನ 43,750 ಸಹಾಯಧನವೇ ಫಲಾನುಭವಿಗೆ ನೇರ ಲಾಭವಾಗಲಿದೆ. ಈ ಮೊತ್ತವನ್ನು ಸರ್ಕಾರ ಉಚಿತವಾಗಿ ನೀಡಲಿದ್ದು; ಇದನ್ನು ಮರುಪಾವತಿಸುವ ಅಗತ್ಯವಿಲ್ಲ.
Eligibility for Subsidy- ಸಹಾಯಧನಕ್ಕೆ ಯಾರು ಅರ್ಹರು?
ಯೋಜನೆಯ ಪ್ರಯೋಜನ ಪಡೆಯಲು ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು. ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಕುರಿ ಸಾಕಾಣಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರಬೇಕು.
ಪ್ರಮುಖವಾಗಿ ಸ್ಥಳೀಯ ಅಥವಾ ಜಿಲ್ಲಾ ‘ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘ’ದ ಸದಸ್ಯರಾಗಿರಬೇಕು. ಸರ್ಕಾರದ FRUITS ಪೋರ್ಟಲ್‌ನಲ್ಲಿ ನೋಂದಣಿ ಆಗಿರಬೇಕು. ಕನಿಷ್ಠ 1000 ಚದರ ಅಡಿ ಜಾಗ ಹೊಂದಿರಬೇಕು.
ಗಮನಾರ್ಹವೆಂದರೆ ಒಂದು ಕುಟುಂಬದಲ್ಲಿ ಒಬ್ಬ ಸದಸ್ಯನಿಗೆ ಮಾತ್ರ ಅವಕಾಶವಿದೆ. ಅದೇ ರೀತಿ ಕಳೆದ 3 ವರ್ಷಗಳಲ್ಲಿ ಪಶುಸಂಗೋಪನಾ ಇಲಾಖೆಯಿಂದ ಯಾವುದೇ ಸಬ್ಸಿಡಿ ಪಡೆದಿದ್ದರೆ, ಈ ಯೋಜನೆಗೆ ಅರ್ಹರಲ್ಲ.
ಇದನ್ನೂ ಓದಿ: Karnataka Grama Panchayat Election 2026- ಗ್ರಾಮ ಪಂಚಾಯತಿ ಚುನಾವಣೆ ಸಿದ್ಧತೆ | ಮಹತ್ವದ ಮಾಹಿತಿ ಇಲ್ಲಿದೆ…
Current Status of the Scheme- ಈಗ ಯೋಜನೆಯ ಸ್ಥಿತಿ ಹೇಗಿದೆ?
2026ರ ಆರಂಭದ ವೇಳೆಗೆ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಯೋಜನೆ ಜಾರಿಯಲ್ಲಿದೆ. ಕೆಲವು ಜಿಲ್ಲೆಗಳಲ್ಲಿ ಅನುದಾನದ ಬಿಡುಗಡೆಯಲ್ಲಿ ವಿಳಂಬ ಕಂಡುಬಂದಿದ್ದರೂ, ಸಾವಿರಾರು ಫಲಾನುಭವಿಗಳು ಈಗಾಗಲೇ ಲಾಭ ಪಡೆದಿದ್ದಾರೆ.
ಹೊಸ ಅರ್ಜಿ ಹಾಕಲು ಮತ್ತು ಅನುದಾನ ಲಭ್ಯತೆ ಕುರಿತು ಮಾಹಿತಿ ಪಡೆಯಲು ಜಿಲ್ಲಾ ಪಶುಸಂಗೋಪನಾ ಕಚೇರಿರನ್ನು ಸಂಪರ್ಕಿಸುವ ಮೂಲಕ ಸಂಪೂರ್ಣ ವಿವರ ಪಡೆಯಬಹುದಾಗಿದೆ.
How to Apply- ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸುವುದು ಸಂಪೂರ್ಣ ಸರಳ ಕ್ರಮವಾಗಿದ್ದು; ನಿಮ್ಮ ತಾಲ್ಲೂಕು ಪಶುಸಂಗೋಪನಾ ಅಥವಾ ಪಶುವೈದ್ಯಕೀಯ ಸೇವಾ ಕಚೇರಿಗೆ ಭೇಟಿ ಮಾಡಿ ಅಧಿಕೃತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಬೇಕು.
ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್‌ಬುಕ್ ಪ್ರತಿಗೆ, ಇತ್ತೀಚಿನ ಫೋಟೋ, ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ) ಹಾಗೂ ಕುರಿ ಸೊಸೈಟಿ ಸದಸ್ಯತ್ವದ ಪುರಾವೆ ದಾಖಲೆಗಳೊಂದಿಗೆ ಕಚೇರಿಗೆ ಅರ್ಜಿ ಸಲ್ಲಿಕೆ ಮಾಡಬೇಕು.
ಇದನ್ನೂ ಓದಿ: Personal Loan Tips- ತಕ್ಷಣಕ್ಕೆ ಪರ್ಸನಲ್ ಲೋನ್ ಬೇಕಾ? ಈ ಐದು ಟಿಪ್ಸ್ ಪಾಲಿಸಿ
Beneficiary Selection Process- ಫಲಾನುಭವಿಗಳ ಆಯ್ಕೆ ಹೀಗೆ ನಡೆಯುತ್ತದೆ
ಅರ್ಜಿ ಸಲ್ಲಿಸಿದ ನಂತರ ಜಿಲ್ಲಾ ಪಂಚಾಯಿತಿ CEO, ಪಶುಸಂಗೋಪನಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರು ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ್ ನೇತೃತ್ವದ ಜಿಲ್ಲಾ ಮಟ್ಟದ ಸಮಿತಿ ಪರಿಶೀಲನೆ ನಡೆಸುತ್ತದೆ.
ಇವರ ಸಮೀಕ್ಷೆ ಮತ್ತು ಲಭ್ಯ ಫಲಾನುಭವಿ ಗುರಿಯ ಆಧಾರದಲ್ಲಿ ಅಂತಿ ಆಯ್ಕೆ ಮಾಡಲಗುತ್ತದೆ. ಆಯ್ಕೆಯಾದ ಫಲನುಭವಿಗಳು ಘಟಕ ವೆಚ್ಚಕ್ಕೆ ಅನುಗುಣವಾಗಿ ಸಹಾಯಧನ ಪಡೆದು ಕುರಿ-ಮೇಕೆ ಸಾಕಾಣಿಕೆ ಮಾಡಬಹುದಾಗಿದೆ.
ಕುರಿ ಸಾಕಾಣಿಕೆಯನ್ನು ವೃತ್ತಿಯಾಗಿ ಮಾಡುವವರಿಗೆ ಈ ಯೋಜನೆ ದೊಡ್ಡ ಅವಕಾಶವಾಗಿದ್ದು; ಸರಿಯಾದ ನಿರ್ವಹಣೆ ಮತ್ತು ವೈಜ್ಞಾನಿಕ ಸಾಕಾಣಿಕೆ ತಂತ್ರಗಳನ್ನು ಅನುಸರಿಸಿದರೆ, ಉತ್ತಮ ಆದಾಯದ ಜೊತೆಗೆ ಸರ್ಕಾರದ ಸಹಾಯದ ಲಾಭವೂ ಸಿಗುತ್ತದೆ.