HDFC ಬ್ಯಾಂಕ್ ಧನಸಹಾಯದೊಂದಿಗೆ ಪ್ರತೀ ವರ್ಷ ನೀಡುವ ‘ಪರಿವರ್ತನ್ ಇಸಿಎಸ್‌ಎಸ್ ವಿದ್ಯಾರ್ಥಿವೇತನ 2025-26’ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ….
HDFC Parivartan ECSS Scholarship 2025-26ರ ಅಡಿಯಲ್ಲಿ 1 ರಿಂದ 12ನೇ ತರಗತಿಯ ವರೆಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್, ಯುಜಿ ಮತ್ತು ಪಿಜಿ (ಸಾಮಾನ್ಯ ಮತ್ತು ವೃತ್ತಿಪರ ಎರಡೂ) ಕೋರ್ಸ್ಗಳನ್ನು ಕಲಿಯುತ್ತಿರುವವರಿಗೆ ಹಣಕಾಸು ಸಹಾಯ ನೀಡಲಾಗುತ್ತದೆ.
‘ಪರಿವರ್ತನ್ ಇಸಿಎಸ್‌ಎಸ್ ವಿದ್ಯಾರ್ಥಿವೇತನ’ವು ಹೆಸರೇ ಹೇಳುವಂತೆ (Parivartan Educational Crisis Scholarship Support -ECSS) ವೈಯಕ್ತಿಕ ಅಥವಾ ಕೌಟುಂಬಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಅಥವಾ ಇತರ ಆರ್ಥಿಕ ತೊಂದರೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ 75,000 ರೂ. ವರೆಗೂ ಆರ್ಥಿಕ ಸಹಾಯ ಒದಗಿಸುವ ವಿಶೇಷ ಯೋಜನೆಯಾಗಿದೆ.
Who can apply?- ಯಾವ್ಯಾವ ವಿದ್ಯಾರ್ಥಿಗಳಿಗೆ ಅನ್ವಯ?
ಮೊದಲೇ ಹೇಳಿದಂತೆ ‘ಪರಿವರ್ತನ್ ಇಸಿಎಸ್‌ಎಸ್ 2025-26’ ವಿದ್ಯಾರ್ಥಿವೇತನವು 1ರಿಂದ 10ನೇ ತರಗತಿ ಹಾಗೂ ಪಿಯುಸಿ, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್, ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳು ಈ ಯೋಜನೆಯಡಿ ಆರ್ಥಿಕ ಸಹಾಯ ಪಡೆದುಕೊಳ್ಳಬಹುದಾಗಿದೆ. ಈ ಕೆಳಗಿನ ಮೂರು ವಿಧದ ಸ್ಕಾಲರ್‌ಶಿಪ್ ನೀಡಲಾಗುತ್ತದೆ:
- ಶಾಲಾ-ಪದವಿಪೂರ್ವ ವಿದ್ಯಾರ್ಥಿಗಳಿಗೆ ಪರಿವರ್ತನ್ ECSS ಸ್ಕಾಲರ್‌ಶಿಪ್
- ಪದವಿ ವಿದ್ಯಾರ್ಥಿಗಳಿಗೆ ಪರಿವರ್ತನ್ ECSS ಸ್ಕಾಲರ್‌ಶಿಪ್
- ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರಿವರ್ತನ್ ECSS ಸ್ಕಾಲರ್‌ಶಿಪ್
1. ಶಾಲಾ ವಿದ್ಯಾರ್ಥಿಗಳಿಗೆ ಪರಿವರ್ತನ್ ECSS ಸ್ಕಾಲರ್‌ಶಿಪ್
ಈ ವಿದ್ಯಾರ್ಥಿವೇತನಕ್ಕೆ ಪ್ರಸ್ತುತ ಖಾಸಗಿ, ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1 ರಿಂದ 12ನೇ ತರಗತಿ, ಡಿಪ್ಲೊಮಾ, ಐಟಿಐ ಮತ್ತು ಪಾಲಿಟೆಕ್ನಿಕ್ ಕೋರ್ಸ್ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಗಮನಿಸಿ: ಡಿಪ್ಲೊಮಾ ಕೋರ್ಸ್ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ 12ನೇ ತರಗತಿಯ ನಂತರ ಡಿಪ್ಲೊಮಾವನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
Financial assistance amount- ಆರ್ಥಿಕ ಸಹಾಯ ಎಷ್ಟು?
- 1 ರಿಂದ 6ನೇ ತರಗತಿಯ ವರೆಗೆ ವಿದ್ಯಾರ್ಥಿಗಳಿಗೆ 15,000 ರೂ.
- 7 ರಿಂದ 12ನೇ ತರಗತಿಯ, ಡಿಪ್ಲೊಮಾ, ಐಟಿಐ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ 18,000 ರೂ.
2. ಪದವಿ ವಿದ್ಯಾರ್ಥಿಗಳಿಗೆ ಪರಿವರ್ತನ್ ECSS ಸ್ಕಾಲರ್‌ಶಿಪ್
ಮಾನ್ಯತೆ ಪಡೆದ ಕಾಲೇಜುಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಪದವಿ ಸಾಮಾನ್ಯ ಕೋರ್ಸುಗಳಾದ ಬಿಕಾಂ, ಬಿಎಸ್ಸಿ, ಬಿಎ, ಬಿಸಿಎ, ಇತ್ಯಾದಿ ಮತ್ತು ವೃತ್ತಿಪರ ಕೋರ್ಸುಗಳಾದ ಬಿಟೆಕ್, ಎಂಬಿಬಿಎಸ್, ಎಲ್‌ಎಲ್‌ಬಿ, ಬಿ ಆರ್ಕ್, ನರ್ಸಿಂಗ್ ವಿದ್ಯಾರ್ಥಿಗಳು ಇದರ ನೆರವು ಪಡೆಯಬಹುದಾಗಿದೆ.
Financial assistance amount- ಆರ್ಥಿಕ ಸಹಾಯ ಎಷ್ಟು?
- ಸಾಮಾನ್ಯ ಪದವಿಪೂರ್ವ ಕೋರ್ಸ್ ವಿದ್ಯಾರ್ಥಿಗಳಿಗೆ 30,000 ರೂ.
- ವೃತ್ತಿಪರ ಪದವಿಪೂರ್ವ ಕೋರ್ಸ್ ವಿದ್ಯಾರ್ಥಿಗಳಿಗೆ 50,000 ರೂ.

3. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರಿವರ್ತನ್ ECSS ಸ್ಕಾಲರ್‌ಶಿಪ್
ಮಾನ್ಯತೆ ಪಡೆದ ಕಾಲೇಜುಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸುಗಳಾದ ಎಂಕಾಂ, ಎಂಎ, ಇತ್ಯಾದಿ ಮತ್ತು ವೃತ್ತಿಪರ ಕೋರ್ಸುಗಳಾದ ಎಂಟೆಕ್, ಎಂಬಿಎ, ಇತ್ಯಾದಿ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್ ಪ್ರಯೋಜನ ಪಡೆಯಬಹುದಾಗಿದೆ.
Financial assistance amount- ಆರ್ಥಿಕ ಸಹಾಯ ಎಷ್ಟು?
- ಸಾಮಾನ್ಯ ಸ್ನಾತಕೋತ್ತರ ಕೋರ್ಸ್ ವಿದ್ಯಾರ್ಥಿಗಳಿಗೆ 35,000 ರೂ.
- ವೃತ್ತಿಪರ ಸ್ನಾತಕೋತ್ತರ ಕೋರ್ಸ್ ವಿದ್ಯಾರ್ಥಿಗಳಿಗೆ 75,000 ರೂ.
General eligibility- ಸಾಮಾನ್ಯ ಅರ್ಹತೆಗಳು
- ಮೇಲ್ಕಾಣಿಸಿದ ಯಾವುದೇ ತರಗತಿ, ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕಗಳೊAದಿಗೆ ಉತ್ತೀರ್ಣರಾಗಿರಬೇಕು.
- ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷ ರೂ.ಗಿಂತ ಕಡಿಮೆ ಅಥವಾ ಸಮನಾಗಿರಬೇಕು.
- ಇತ್ತೀಚಿನ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳು ವೈಯಕ್ತಿವಾಗಿ ಅಥವಾ ಕೌಟಂಬಿಕವಾಗಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
Required documents- ಅಗತ್ಯ ದಾಖಲಾತಿಗಳು
- ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
- ಹಿಂದಿನ ವರ್ಷದ ಅಂಕಪಟ್ಟಿಗಳು (2024-25)
- ಗುರುತಿನ ಪುರಾವೆ (ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ/ಚಾಲನಾ ಪರವಾನಗಿ)
- ಪ್ರಸ್ತುತ ವರ್ಷದ ಪ್ರವೇಶ ಪುರಾವೆ (ಶುಲ್ಕ ರಶೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/ಬಾನಾಫೈಡ್ ಪ್ರಮಾಣಪತ್ರ) (2025-26)
- ಅರ್ಜಿದಾರರ ಬ್ಯಾಂಕ್ ಪಾಸ್‌ಬುಕ್/ರದ್ದಾದ ಚೆಕ್
- ಆದಾಯ ಪ್ರಮಾಣ ಪತ್ರೆ
- ಅಫಿಡವಿಟ್
- ಕುಟುಂಬ/ವೈಯಕ್ತಿಕ ಬಿಕ್ಕಟ್ಟಿನ ಪುರಾವೆ (ಅನ್ವಯಿಸಿದರೆ)
How to apply?- ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಆಗಿದೆ. ಹಂತ ಹಂತದ ವಿವರ ಇಲ್ಲಿದೆ:
ಹಂತ 1: ಮೊದಲು ಅಧಿಕೃತ ಸ್ಕಾಲರ್‌ಶಿಪ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅದರ ಲಿಂಕ್ ಲೇಖನದ ಕೊನೆಯಲ್ಲಿ ನೀಡಿದೆ ಗಮನಿಸಿ.
ಹಂತ 2: ಮುಖಪುಟದಲ್ಲಿ ಕಾಣಿಸುವ Apply Now ಅಥವಾ ‘Register’ ಬಟನ್ ಮೇಲೆ ಕ್ಲಿಕ್ ಮಾಡಿ. ಹೊಸ ಬಳಕೆದಾರರಾದ ವಿದ್ಯಾರ್ಥಿಗಳು ತಮ್ಮ User ID ಮತ್ತು Password ರಚಿಸಿಕೊಂಡು ಹೊಸ ಖಾತೆಯನ್ನು ಸೃಷ್ಟಿಸಬೇಕು. ನಂತರ Login ಮಾಡಿ ಒಳಗೆ ಪ್ರವೇಶಿಸಬೇಕು.
ಹಂತ 3: ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆಯುತ್ತದೆ. ಅಲ್ಲಿ ಕೇಳಲಾಗಿರುವ ವೈಯಕ್ತಿಕ ಮಾಹಿತಿ, ವಿಳಾಸ, ಅಂಕಗಳು, ಬ್ಯಾಂಕ್ ವಿವರಗಳು ಮುಂತಾದ ಮಾಹಿತಿಗಳನ್ನು ಸರಿಯಾಗಿ ತುಂಬಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಕೊನೆಯಲ್ಲಿ ‘Submit’ ಬಟನ್ ಒತ್ತಬೇಕು.
ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಮೊಬೈಲ್ ಅಥವಾ ಇಮೇಲ್‌ಗೆ ದೃಢೀಕರಣ ಸಂದೇಶ ಬರುತ್ತದೆ. ನಂತರ ಸಂಸ್ಥೆ ಪರಿಶೀಲನೆ ನಡೆಸಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ.
ಅರ್ಜಿ ಕೊನೇ ದಿನಾಂಕ: 31-12-2025
ಅರ್ಜಿ ಲಿಂಕುಗಳು
- ಶಾಲಾ-ಪದವಿಪೂರ್ವ ಪರಿವರ್ತನ್ ECSS ಸ್ಕಾಲರ್‌ಶಿಪ್ : Apply Now
- ಪದವಿ ವಿದ್ಯಾರ್ಥಿಗಳಿಗೆ ಪರಿವರ್ತನ್ ECSS ಸ್ಕಾಲರ್‌ಶಿಪ್ : Apply Now
- ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರಿವರ್ತನ್ ECSS ಸ್ಕಾಲರ್‌ಶಿಪ್ : Apply Now
Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ