Tata AIA PARAS Scholarship 2025-26- ಟಾಟಾ ಎಐಎ ಲೈಫ್ ಇನ್ಶುರೆನ್ಸ್ ಸ್ಕಾಲರ್‌ಶಿಪ್ | ಈ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 15,000 ರೂ. ಆರ್ಥಿಕ ನೆರವು

Spread the love

WhatsApp Group Join Now
Telegram Group Join Now

ಟಾಟಾ ಎಐಎ ಪ್ಯಾರಾಸ್ ವಿದ್ಯಾರ್ಥಿವೇತನದ (Tata AIA PARAS Scholarship 2025-26) ಅಡಿಯಲ್ಲಿ ಪ್ರತೀ ವರ್ಷವೂ 15,000 ರೂ. ಆರ್ಥಿಕ ನೆರವು ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…

‘ಟಾಟಾ ಎಐಎ ಪ್ಯಾರಾಸ್ ವಿದ್ಯಾರ್ಥಿವೇತನ’ (Tata AIA PARAS Scholarship Program 2025-26) ಟಾಟಾ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ನ (ಟಾಟಾ ಎಐಎ) ಸಿಎಸ್‌ಆರ್ ಉಪಕ್ರಮವಾಗಿದ್ದು, ಇದು ಹಿಂದುಳಿದ ಹಿನ್ನೆಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.

ಎಲ್ಲ ವರ್ಗದ ವಿದ್ಯಾರ್ಥಿನಿಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಅಂಗವಿಕಲರು, ತೃತೀಯ ಲಿಂಗ (Transgender) ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ. ಪ್ರತೀ ವರ್ಷವೂ 15,000 ರೂ. ಹಣ ಪಡೆಯಬಹುದಾಗಿದೆ.

ಇದನ್ನೂ ಓದಿ: Karnataka PDO Recruitment 2026- 994 ಪಿಡಿಒ ಹುದ್ದೆಗಳ ನೇಮಕಾತಿ | ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ…

ಏನಿದು ಟಾಟಾ ಎಐಎ ಪ್ಯಾರಾಸ್ ವಿದ್ಯಾರ್ಥಿವೇತನ?

ಟಾಟಾ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (TATA AIA) ಎಂಬುದು ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಐಎ ಗ್ರೂಪ್ ಲಿಮಿಟೆಡ್ ರಚಿಸಿದ ಜಂಟಿ ಉದ್ಯಮ ಕಂಪನಿಯಾಗಿದೆ.

ಸಮಾಜ ಸೇವೆಯಲ್ಲೂ ತನ್ನ ವಿಶಿಷ್ಟ ಕೊಡುಗೆ ಸಲ್ಲಿಸುತ್ತಿವ ಸದರಿ ಕಂಪನಿಯು ಹಲವು ಸಾಮಾಜಿಕ ಕೊಡುಗೆ ನೀಡುತ್ತಿದೆ. ಆ ಪೈಕಿ ‘ಟಾಟಾ ಎಐಎ ಪ್ಯಾರಾಸ್ ವಿದ್ಯಾರ್ಥಿವೇತನ’ ಕೂಡ ಒಂದಾಗಿದೆ.

ಇದನ್ನೂ ಓದಿ: Alvas Free Education Admission- ಉಚಿತ ಶಿಕ್ಷಣಕ್ಕಾಗಿ ಆಳ್ವಾಸ್ ಸಂಸ್ಥೆಯಿಂದ ಅರ್ಜಿ ಆಹ್ವಾನ | ವಸತಿ, ಊಟೋಪಚಾರ ಸಂಪೂರ್ಣ ಉಚಿತ | ಅರ್ಜಿ ಲಿಂಕ್ ಇಲ್ಲಿದೆ

ಯಾರೆಲ್ಲ ಅರ್ಹರು?

‘ಟಾಟಾ ಎಐಎ ಪ್ಯಾರಾಸ್ ವಿದ್ಯಾರ್ಥಿವೇತನ’ ಪಡೆಯಲು ತೃತೀಯ ಲಿಂಗ ವಿದ್ಯಾರ್ಥಿಗಳು, ಅಂಗವಿಕಲರು, ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿದಾರರು ಬಿ.ಕಾಂ, ಬಿ.ಎಸ್ಸಿ., ಬಿಬಿಎ, ಬಿಬಿಐ, ಬಿಎ, ವಾಣಿಜ್ಯ, ಅರ್ಥಶಾಸ್ತ್ರ, ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು, ಬ್ಯಾಂಕಿಂಗ್, ವಿಮೆ, ನಿರ್ವಹಣೆ, ಡೇಟಾ ಸೈನ್ಸ್, ಅಂಕಿಅಂಶಗಳು ಇತ್ಯಾದಿ ವೃತ್ತಿಪರ ಕ್ಷೇತ್ರಗಳಲ್ಲಿ ಪದವಿಪೂರ್ವ ಕೋರ್ಸ್ ಕಲಿಯುತ್ತಿರುವವರು ಅರ್ಹರಾಗಿರುತ್ತಾರೆ.

ಮೇಲ್ಕಾಣಿಸಿದ ಅರ್ಹ ವಿದ್ಯಾರ್ಥಿಗಳ ಕುಟುಂಬದ ಆದಾಯವು (ಎಲ್ಲಾ ಮೂಲಗಳಿಂದ) ವಾರ್ಷಿಕ 5 ಲಕ್ಷ ರೂ.ಗಿಂತ ಹೆಚ್ಚಿರಬಾರದು. ಅಖಂಡ ಭಾರತದ ಎಲ್ಲಾ ರಾಜ್ಯಗಳ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Tata AIA PARAS Scholarship 2025-26
Tata AIA PARAS Scholarship 2025-26

ಇದನ್ನೂ ಓದಿ: TaTa Capital Pankh Scholarship 2025- ಪಿಯುಸಿ ವಿದ್ಯಾರ್ಥಿಗಳಿಗೆ ₹15,000 ಆರ್ಥಿಕ ನೆರವು | ಟಾಟಾ ಸ್ಕಾಲರ್‌ಶಿಪ್ ಅರ್ಜಿ ಆಹ್ವಾನ

ವಾರ್ಷಿಕ ಎಷ್ಟು ನೆರವು ಸಿಗುತ್ತದೆ?

‘ಟಾಟಾ ಎಐಎ ಪ್ಯಾರಾಸ್ ವಿದ್ಯಾರ್ಥಿವೇತನ’ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ವರ್ಷಕ್ಕೆ 15,000 ರೂ. ಸ್ಥಿರ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ. ಈ ಮೊತ್ತವು ಬೋಧನಾ ಶುಲ್ಕಗಳು, ಪರೀಕ್ಷಾ ಶುಲ್ಕಗಳು ಮತ್ತು ಇತರ ಶೈಕ್ಷಣಿಕ ಸಂಬಂಧಿತ ವೆಚ್ಚಗಳಿಗೆ ಒಳಗೊಂಡಿರುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
  • ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಗುರುತಿನ ಪುರಾವೆ
  • 10 ಮತ್ತು 12ನೇ ತರಗತಿಯ ಅಂಕಪಟ್ಟಿ
  • ಇತ್ತೀಚಿನ ಕುಟುಂಬ ಆದಾಯ ಪುರಾವೆ
  • ಇತ್ತೀಚಿನ ಶಾಲಾ/ಕಾಲೇಜು ಶುಲ್ಕ ರಶೀದಿ
  • ವಿದ್ಯಾರ್ಥಿ ಗುರುತಿನ ಚೀಟಿ
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್‌ಬುಕ್
  • ಜಾತಿ ಪ್ರಮಾಣಪತ್ರ (ಎಸ್‌ಸಿ/ಎಸ್ಟಿಗಳಿಗೆ)
  • ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
  • ಅನಾಥಾಶ್ರಮದಿಂದ ಅನಾಥ ಪ್ರಮಾಣಪತ್ರ (ಅನ್ವಯಿಸಿದರೆ)
  • ಸರ್ಕಾರೇತರ ಸಂಸ್ಥೆಯಿAದ ಟಿಜಿ ಗುರುತಿನ ಪುರಾವೆ (ಅನ್ವಯಿಸಿದರೆ)

ಇದನ್ನೂ ಓದಿ: Karnataka Kukkut Sanjeevini Yojane- ಕುಕ್ಕುಟ ಸಂಜೀವಿನಿ ಯೋಜನೆ | ಮಹಿಳೆಯರಿಗೆ ಉಚಿತ ಕೋಳಿ ಮರಿ, ಕೋಳಿ ಶೆಡ್ ನಿರ್ಮಾಣಕ್ಕೆ ಭರ್ಜರಿ ಸಹಾಯಧನ

ಹೇಗೆ ಅರ್ಜಿ ಸಲ್ಲಿಸಬೇಕು?

ಹಂತ 1: ಈ ಲೇಖನದ ಕೊನೆಯಲ್ಲಿ ನೀಡಲಾಗಿರುವ ಅರ್ಜಿ ಲಿಕ್ ಬಳಸಿಕೊಂಡು ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಕೆಳಗಿನ ಲಿಂಕ್ ಕ್ಲಿಕ್ ಮಾಡಿದರೆ ‘ಆನ್‌ಲೈನ್ ಅರ್ಜಿ ನಮೂನೆ ಪುಟ’ ತೆರೆದುಕೊಳ್ಳುತ್ತದೆ.

WhatsApp Group Join Now
Telegram Group Join Now

ಹಂತ 2: ಮುಖಪುಟದಲ್ಲಿ ಕಾಣಿಸುವ ‘Apply Now’ ಅಥವಾ ‘Register’ ಬಟನ್ ಮೇಲೆ ಕ್ಲಿಕ್ ಮಾಡಿ. ಹೊಸ ಬಳಕೆದಾರರಾದ ವಿದ್ಯಾರ್ಥಿಗಳು ತಮ್ಮ User ID ಮತ್ತು Password ರಚಿಸಿಕೊಂಡು ಹೊಸ ಖಾತೆಯನ್ನು ಸೃಷ್ಟಿಸಬೇಕು. ನಂತರ Login ಮಾಡಿ ಒಳಗೆ ಪ್ರವೇಶಿಸಬೇಕು.

ಇದನ್ನೂ ಓದಿ: Women Free Sewing Machine- ಉಚಿತ ಹೊಲಿಗೆ ಯಂತ್ರ ವಿತರಣೆ ಯೋಜನೆ | ಮಹಿಳೆಯರಿಗೆ ಸುವರ್ಣಾವಕಾಶ

ಹಂತ 3: ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆಯುತ್ತದೆ. ಅಲ್ಲಿ ಕೆಳಲಾಗಿರುವ ವೈಯಕ್ತಿಕ ಮಾಹಿತಿ, ವಿಳಾಸ, ಅಂಕಗಳು, ಬ್ಯಾಂಕ್ ವಿವರಗಳು ಮುಂತಾದ ಮಾಹಿತಿಗಳನ್ನು ಸರಿಯಾಗಿ ತುಂಬಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಕೊನೆಯಲ್ಲಿ ‘Submit’ ಬಟನ್ ಒತ್ತಬೇಕು.

ಅರ್ಜಿಯನ್ನು ಸಲ್ಲಿಸಿದ ನಂತರ ನಿಮ್ಮ ಮೊಬೈಲ್/ಇಮೇಲ್‌ಗೆ ತಪಾಸಣಾ ಸಂದೇಶ ಬರುತ್ತದೆ. ನಂತರ ಸಂಸ್ಥೆ ಪರಿಶೀಲನೆ ನಡೆಸಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ.

  • ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 31-12-2025
  • ಅರ್ಜಿ ಲಿಂಕ್: Apply Now

Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ


Spread the love
error: Content is protected !!