PM Kusum-B Solar Pumpset Yojana- ಸೋಲಾರ್ ಪಂಪ್‌ಸೆಟ್‌ಗಳಿಗೆ ರೈತರಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

WhatsApp Group Join Now
Telegram Group Join Now

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದ ‘ಪಿಎಂ ಕುಸುಮ್-ಬಿ ಸೋಲಾರ್ ಪಂಪ್‌ಸೆಟ್ ಯೋಜನೆ’ಗೆ (PM Kusum-B Solar Pumpset Yojana) ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಹಗಲಿನಲ್ಲಿ ವಿದ್ಯುತ್ ಸಿಗದೇ ರಾತ್ರಿಯೆಲ್ಲ ನಿದ್ದೆಗೆಟ್ಟು ಬೆಳೆಗಳಿಗೆ ನೀರು ಹಾಯಿಸುವ ರೈತರ ಕಷ್ಟದ ದಿನಗಳು ಇನ್ಮುಂದೆ ಕೊನೆಯಾಗಲಿವೆ. ವಿದ್ಯುತ್ ಕಡಿತ, ಅಸ್ಥಿರ ವಿದ್ಯುತ್ ಸರಬರಾಜು, ಡೀಸೆಲ್ ವೆಚ್ಚ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಇದೀಗ ‘ಪಿಎಂ ಕುಸುಮ್-ಬಿ ಸೋಲಾರ್ ಪಂಪ್‌ಸೆಟ್ ಯೋಜನೆ’ ರೈತರ ಬದುಕಿಗೆ ಹೊಸ ಬೆಳದಿಂಗಳಂತೆ ಒದಗಿ ಬಂದಿದೆ.

ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಕೃಷಿಯಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸಲು ಸೋಲಾರ್ ವಿದ್ಯುತ್ ಚಾಲಿತ ಪಂಪ್‌ಸೆಟ್‌ಗಳನ್ನು ಭಾರೀ ಸಬ್ಸಿಡಿಯೊಂದಿಗೆ ನೀಡುತ್ತಿದೆ. ಇವು ಸಂಪೂರ್ಣ ಹಗಲಿನಲ್ಲಿ ಕೆಲಸ ಮಾಡುವುದರಿಂದ ರೈತರ ಬಹುಪಾಲು ಸಮಸ್ಯೆಗಳು ಕೊನೆಯಾಗಲಿವೆ.

ಇದನ್ನೂ ಓದಿ: Karnataka New BPL Card List- 2.93 ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ | ಈ ಹೊಸ ಪಟ್ಟಿಯಲ್ಲಿ ನೀವಿದ್ದೀರಾ?

ಏನಿದು PM-KUSUM ಘಟಕ-ಬಿ ಯೋಜನೆ?

ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ (PM-KUSUM) ಯೋಜನೆಯ ಘಟಕ-ಬಿ ವಿಶೇಷವಾಗಿ ಗ್ರಿಡ್ ಸಂಪರ್ಕವಿಲ್ಲದ ಪ್ರದೇಶಗಳ ರೈತರಿಗೆ ವಿನ್ಯಾಸಗೊಳಿಸಲಾದ ಸೌರ ವಿದ್ಯುತ್ ಯೋಜನೆಯಾಗಿದೆ.

ಈ ಯೋಜನೆಯಡಿ 7.5 ಎಚ್‌ಪಿ ವರೆಗೆ ಸೌರಶಕ್ತಿ ಚಾಲಿತ ಪಂಪ್‌ಸೆಟ್ ಸ್ಥಾಪನೆ ಮಾಡಬಹುದು. ಇದು ರೈತರ ಖರ್ಚನ್ನು ಕಡಿಮೆ ಮಾಡುವ, ಸ್ವಾವಲಂಬಿ ಮತ್ತು ಪರಿಸರ ಸ್ನೇಹಿ ಕೃಷಿಯನ್ನು ಉತ್ತೇಜಿಸುವ ಮಹತ್ವದ ಯೋಜನೆ ಇದು.

PM Kusum-B Solar Pumpset Yojana
PM Kusum-B Solar Pumpset Yojana
ಯೋಜನೆಯ ಪ್ರಮುಖ ಲಾಭಗಳು
  • ಪ್ರತಿ ವರ್ಷ ಡೀಸೆಲ್‌ಗೆ ಖರ್ಚು ಆಗುವ ₹50,000 ವರೆಗಿನ ಹಣ ಉಳಿಸಬಹುದು.
  • ವಿದ್ಯುತ್ ಕಡಿತ? ಟ್ರಿಪ್ಪಿಂಗ್? ಕಾಯುವ ಅವಶ್ಯಕತೆ ಇಲ್ಲ. ಸೂರ್ಯ ಇದ್ದಷ್ಟೂ ನೀರು ಹರಿಯುತ್ತಲೇ ಇರುತ್ತದೆ.
  • ವಿದ್ಯುತ್ ಮತ್ತು ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗಿ ಕೃಷಿ ಉತ್ಪಾದಕತೆ ಹೆಚ್ಚಳವಾಗಲಿದೆ.
  • ರೈತರು ಕೇವಲ ಶೇ.20ರಷ್ಟು ಮೊತ್ತವೇ ಪಾವತಿಸಬೇಕಾಗಿರುವುದು ಈ ಯೋಜನೆಯ ದೊಡ್ಡ ಆಕರ್ಷಣೆ!

ಇದನ್ನೂ ಓದಿ: Digital E-Stamp Karnataka- ಇನ್ಮುಂದೆ ಮೊಬೈಲ್‌ನಲ್ಲೇ ಡಿಜಿಟಲ್ ಇ-ಸ್ಟ್ಯಾಂಪ್ ಖರೀದಿಸಿ | ಸಂಪೂರ್ಣ ಮಾಹಿತಿ ಇಲ್ಲಿದೆ…

ಎಷ್ಟು ಸಬ್ಸಿಡಿ ಸಿಗಲಿದೆ?

ಪಿಎಂ ಕುಸುಮ್-ಬಿ ಸೋಲಾರ್ ಪಂಪ್‌ಸೆಟ್ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಶೇ.30ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.50ರಷ್ಟು ಸಹಾಯಧನ ನೀಡಲಿವೆ.

ರೈತರು ಸೋಲಾರ್ ಘಟಕ ಸ್ಥಾಪನೆಯ ಒಟ್ಟುವೆಚ್ಚದಲ್ಲಿ ಕೇವಲ ಶೇ.20ರಷ್ಟು ಹಣ ಪಾವತಿಸಿದರೆ ಸಾಕು. ಅಂದರೆ, ಲಕ್ಷಾಂತರ ರೂ. ವೆಚ್ಚದ ಪಂಪ್‌ಸೆಟ್ ನಿಮಗೆ ಕೇವಲ ಶೇ.20ರಷ್ಟು ಹಣದಲ್ಲಿ ಸಿಗಲಿದೆ!

ಈ ಯೋಜನೆಗೆ ಯಾರೆಲ್ಲ ಅರ್ಹರು?
  • ರೈತರು
  • ರೈತರ ಗುಂಪುಗಳು
  • ರೈತ ಉತ್ಪಾದಕ ಸಂಸ್ಥೆಗಳು (FPO)
  • ಗ್ರಾಮ ಪಂಚಾಯತ್‌ಗಳು
  • ಸಹಕಾರ ಸಂಘಗಳು
  • ನೀರು ಬಳಕೆದಾರರ ಸಂಘಗಳು

ಇದನ್ನೂ ಓದಿ: Constable GD Recruitment- ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಕಾನ್‌ಸ್ಟೆಬಲ್ ಹುದ್ದೆಗಳು | 25,487 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
  1. ಆಧಾರ್ ಕಾರ್ಡ್
  2. ಭೂ ದಾಖಲೆಗಳು (RTC/Pahani)
  3. ಬ್ಯಾಂಕ್ ಪಾಸ್‌ಬುಕ್
  4. ಮೊಬೈಲ್ ಸಂಖ್ಯೆ
  5. ಘೋಷಣಾ ನಮೂನೆ
  6. ಫೋಟೋ
PM Kusum-B Solar Pumpset Yojana
PM Kusum-B Solar Pumpset Yojana
ಹೇಗೆ ಅರ್ಜಿ ಸಲ್ಲಿಸಬೇಕು?

ರೈತರು ಸೋಲಾರ್ ಪಂಪ್‌ಸೆಟ್‌ಗೆ ಅರ್ಜಿ ಸಲ್ಲಿಕೆ ಮಾಡುವುದು ತುಂಬಾ ಸರಳವಾದ ಪ್ರಕ್ರಿಯೆ. ಅದಕ್ಕಾಗಿ ಈ ಕೆಳಗಿನ ಹಂತಹಳನ್ನು ಅನುಸರಿಸಿ:

ಆನ್‌ಲೈನ್ ನೋಂದಣಿ: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (KREDL) ವತಿಯಿಂದ ನಿರ್ವಹಿಸಲ್ಪಡುವ ಅಧಿಕೃತ ಪೋರ್ಟಲ್ souramitra.comನಲ್ಲಿ ನೋಂದಣಿ ಮಾಡಬೇಕಾಗುತ್ತದೆ. ಅಧಿಕೃತ ವೆಬ್‌ಸೈಟ್ ಅನ್ನು ಸರ್ಕಾರ ನೀಡಿದ್ದು ಆ ಮೂಲಕವೇ ನೋಂದಣಿ ಮಾಡಬೇಕು.

ಮಾರಾಟಗಾರ/ಏಜೆನ್ಸಿ ಆಯ್ಕೆ: ನಂತರ souramitra.com ಪೋರ್ಟಲ್‌ನಲ್ಲಿ ನಿಮ್ಮ ಜಿಲ್ಲೆಯಲ್ಲಿ ಲಭ್ಯವಿರುವ ಅನುಮೋದಿತ ಮಾರಾಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು. ಸಬ್ಸಿಡಿ ಹೊರತುಪಡಿಸಿ ಉಳಿಯುವ ಶೇ.20ರಷ್ಟು ಮೊತ್ತವನ್ನು ರೈತರು ಪಾವತಿಸಬೇಕು.

ಪರಿಶೀಲನೆ ಮತ್ತು ಸ್ಥಾಪನೆ: ಪಾವತಿ ಪೂರ್ಣಗೊಂಡ ಬಳಿಕ, ಆಯ್ದ ಏಜೆನ್ಸಿ ಪಂಪ್‌ಸೆಟ್ ಅನ್ನು ನಿಮ್ಮ ಹೊಲದಲ್ಲಿ ಅಳವಡಿಸುತ್ತದೆ. ಗಮನಿಸುವ ಅಂಶವೆಂದರೆ ನೋಂದಣಿಯಲ್ಲಿ ಯಾರೊಂದಿಗೂ ಔಖಿP ಹಂಚಿಕೊಳ್ಳಬೇಡಿ. ಅನುಮಾನಗಳಿಗೆ ಅಧಿಕೃತ ಸಹಾಯವಾಣಿಗೆ ಕರೆ ಮಾಡಿ. ಸರಕಾರದ ಅಧಿಕೃತ ವೆಬ್‌ಸೈಟ್‌ಗಳನ್ನೇ ಅನುಸರಿಸಿ.

WhatsApp Group Join Now
Telegram Group Join Now

ಇದನ್ನೂ ಓದಿ: E-Svattu 2.0- ಇ-ಸ್ವತ್ತು ಅರ್ಜಿ ಸಲ್ಲಿಕೆ ಆರಂಭ | ಮನೆಯಲ್ಲಿ ಕೂತೆ ಅರ್ಜಿ ಸಲ್ಲಿಸಿ | ಅರ್ಜಿ ಲಿಂಕ್ ಇಲ್ಲಿದೆ…

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಸದರಿ ಯೋಜನೆಯು ಇದೇ ಡಿಸೆಂಬರ್ ತಿಂಗಳಲ್ಲೇ ಮುಕ್ತಾಯಗೊಳ್ಳಲಿದ್ದು; ಆಸಕ್ತ ರೈತರು ಕೂಡಲೇ ಅರ್ಜಿ ಸಲ್ಲಿಸಿ ಲಾಭ ಪಡೆಯಬೇಕು. ಯೋಜನೆಗೆ ಬೇಡಿಕೆ ಹೆಚ್ಚಿರುವುದರಿಂದ ಸಾಧ್ಯವಾದಷ್ಟು ಬೇಗ ನೋಂದಣಿ ಮಾಡಿಕೊಳ್ಳುವುದು ಉತ್ತಮ.

ಪಿಎಂ-ಕುಸುಮ್ ಬಿ ಯೋಜನೆಯು ವಿದ್ಯುತ್ ಸಮಸ್ಯೆಯಿಂದ ಕಂಗೆಟ್ಟಿರುವ ರೈತರ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ತರಬಲ್ಲದು. ನೀರಾವರಿ ಸಮಸ್ಯೆಯಿರುವ ಕ್ಷೇತ್ರಗಳಿಗೆ ಇದು ಹೇಳಿ ಮಾಡಿಸಿದ ಯೋಜನೆ. ಸರ್ಕಾರದ ಸಬ್ಸಿಡಿ ಬಳಸಿಕೊಂಡು ನೀರಾವರಿ ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಕೊಳ್ಳಲು ಇದು ಸುವರ್ಣಾವಕಾಶವಾಗಿದೆ.

ಸಹಾಯವಾಣಿ ಸಂಖ್ಯೆಗಳು
  • KREDL ಹೆಲ್ಪ್ ಲೈನ್: 080-22202100 \ 8095132100
  • CESC ಸಹಾಯವಾಣಿ: 9449598669
  • ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ ನಿಮ್ಮ ಹತ್ತಿರದ ವಿದ್ಯುತ್ ವಿತರಣಾ ಕಚೇರಿಯಲ್ಲಿಯೂ ಸಹ ನೆರವು ಸಿಗಲಿದೆ.

ಅರ್ಜಿ ಸಲ್ಲಿಕೆಯ ಹಂತ ಹಂತದ ಮಾಹಿತಿ ಲಿಂಕ್: Download
ಅಧಿಕೃತ ವೆಬ್‌ಸೈಟ್ ಲಿಂಕ್: souramitra.com / kredl.karnataka.gov.in

Low Interest Loan Eligibility- ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ


Spread the love
error: Content is protected !!