BPL Card Cancellation Check- ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆಯಾ? ಮೊಬೈಲ್’ನಲ್ಲೇ ಚೆಕ್ ಮಾಡಿ…

Spread the love

WhatsApp Group Join Now
Telegram Group Join Now

ರಾಜ್ಯ ಸರಕಾರ ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ರದ್ದತಿ ಅಭಿಯಾನವನ್ನು ಚುರುಕುಗೊಳಿಸಿದೆ. ಇದೀಗ ರದ್ದಾದ ಅನರ್ಹ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ ಮಾಡಲಾಗಿದ್ದು; ಮೊಬೈಲ್’ನಲ್ಲಿಯೇ ರದ್ದಾದ ರೇಷನ್ ಕಾರ್ಡ್ (BPL Card Cancellation Check) ಪಟ್ಟಿ ಚೆಕ್ ಮಾಡಬಹುದಾಗಿದೆ…

ರಾಜ್ಯ ಸರಕಾರ ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ರದ್ದತಿ ಅಭಿಯಾನವನ್ನು ಚುರುಕುಗೊಳಿಸಿದೆ. ರಾಜ್ಯದಲ್ಲಿ ‘ಆಪರೇಷನ್ ಬಿಪಿಎಲ್’ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ಆರಂಭವಾಗಿದ್ದು; ಬರೋಬ್ಬರಿ 4.09 ಲಕ್ಷ ಬಿಪಿಎಲ್ ರೇಷನ್ ಕಾರ್ಡುಗಳು ರದ್ದಾಗಿವೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಚರಣೆ ನಡೆಸಿತಿದ್ದು; ಆದಾಯ ತೆರಿಗೆ ಪಾವತಿಸುವವರು, ಹೆಚ್ಚು ಕೃಷಿ ಭೂಮಿ ಹೊಂದಿರುವವರು ಸೇರಿದಂತೆ ಮಾನದಂಡ ಉಲ್ಲಂಘಿಸಿ ಸುಳ್ಳು ಮಾಹಿತಿ ನೀಡಿ ಪಡೆದಿದ್ದ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗಿದೆ.

ಇದನ್ನೂ ಓದಿ: Gruhalakshmi Payment- ನವೆಂಬರ್ 28ರೊಳಗೆ ಗೃಹಲಕ್ಷ್ಮಿ ಹಣ ಜಮಾ | ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ

ಯಾರೆಲ್ಲಾ ರೇಷನ್ ಕಾರ್ಡುಗಳು ರದ್ದು?

ಸರ್ಕಾರ ಬಿಪಿಎಲ್ ರೇಷನ್ ಕಾರ್ಡುಗಳನ್ನು ಹೊಂದಲು ಅದರದೇ ಆದ ನಿಯಮಗಳಿವೆ. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಬಡತನ ರೇಖೆಗಿಂತ ಕೆಳಗಿನವರು ಬಿಪಿಎಲ್ ಕಾರ್ಡ್ ಅನ್ನು ನೀಡಲಾಗುತ್ತಿದೆ. ಆದಾಯ ತೆರಿಗೆ ಪಾವತಿಸುತ್ತಿರುವ ಸದಸ್ಯರ ಹೊಂದಿರುವ ಕುಟುಂಬ, ಸರ್ಕಾರಿ ಹಾಗೂ ಆರೆ ಸರ್ಕಾರಿ ನೌಕರರು ಇರುವ ಕುಟುಂಬ, ನಿಗಮ-ಮಂಡಳಿಗಳಲ್ಲಿ ಕಾಯಂ ನೌಕರರಿರುವ ಕುಟುಂಬದವರು ಬಿಪಿಎಲ್ ಕಾರ್ಡ್ ಪಡೆಯು ಅರ್ಹರಲ್ಲ.

ಇನ್ನು ಮನೆಗಳನ್ನು ಬಾಡಿಗೆ ಕೊಟ್ಟು ಜೀವನ ನಡೆಸುತ್ತಿರುವವರು, 7.5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ರೈತರು, ಸ್ವಂತಕ್ಕೆAದು ನಾಲ್ಕು ಚಕ್ರಗಳ ವಾಹನವನ್ನು ಹೊಂದಿರುವವರು, ನಿಗದಿತ ವಾರ್ಷಿಕ ವರಮಾನಕ್ಕಿಂತ ಹೆಚ್ಚು ಗಳಿಸುತ್ತಿರುವವರು ಹಾಗೂ ನಿಯಮಕ್ಕಿಂತ ವಾರ್ಷಿಕವಾಗಿ ಹೆಚ್ಚು ವಹಿವಾಟು ಮಾಡುವವರು ಕೂಡ ಬಿಪಿಎಲ್ ಪಡೆಯಲು ಯೋಗ್ಯರಲ್ಲ.

ಹೀಗೆ ಮೇಲ್ಕಾಣಿಸಿದ ಅರ್ಹತೆಯುಳ್ಳವರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಅಂತಹ ಕಾರ್ಡುಗಳನ್ನು ಸಾರಾಸಗಟು ರದ್ದುಪಡಿಸಲಾಗುತ್ತಿದೆ. ಅದರಲ್ಲೂ ಸರ್ಕಾರಿ ನೌಕರರಿರುವ ಕುಟುಂಬದವರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಕಾರ್ಡು ರದ್ದಾಗುವುದು ಮಾತ್ರವಲ್ಲ, ದಂಡವನ್ನು ಕೂಡ ವಸೂಲಿ ಮಾಡಲಾಗುತ್ತಿದೆ. ಇನ್ನುಳಿದ ಕಾರ್ಡುಗಳನ್ನು ರದ್ದುಪಡಿಸಿ ಎಪಿಎಲ್ ಆಗಿ ಬದಲಾಯಿಸಲಾಗುತ್ತಿದೆ.

ರದ್ದಾದ ಅನರ್ಹ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ ಮಾಡಲಾಗಿದ್ದು; ಮೊಬೈಲ್’ನಲ್ಲಿಯೇ ರದ್ದಾದ ರೇಷನ್ ಕಾರ್ಡ್ ಪಟ್ಟಿ ಚೆಕ್ ಮಾಡಬಹುದಾಗಿದೆ...
BPL Card Cancellation Check

ಇದನ್ನೂ ಓದಿ: LKG UKG Teacher Recruitment 2025- ಸರ್ಕಾರಿ ಶಾಲೆ ಎಲ್‌ಜಿ-ಯುಕೆಜಿಗೆ ಶಿಕ್ಷಕರು, ಆಯಾಗಳ ನೇಮಕಾತಿ | ಸರ್ಕಾರದ ಅಧಿಕೃತ ಸೂಚನೆ

ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ಮೊಬೈಲ್’ನಲ್ಲಿಯೇ ನೋಡಿ…

ಹೀಗೆ ರದ್ದುಗೊಳಿಸಲಾದ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಫಲಾನುಭವಿಗಳ ಹೆಸರುಗಳನ್ನು (Show cancelled/suspended list) ಮೊಬೈಲ್’ನಲ್ಲಿಯೇ ಚೆಕ್ ಮಾಡಬಹುದಾಗಿದೆ. ಅದಕ್ಕಾಗಿ ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ…

Show cancelled/ suspended list

ಆಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಇ-ಸರ್ವಿಸ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಬಲಗಡೆ ಕೆಲವು ಆಯ್ಕೆಗಳು ಕಾಣುತ್ತವೆ. ವಿಧಾನ, ಇ ಪಡಿತರ ಚೀಟಿ, ಇ-ಸ್ಥಿತಿ, ಇ-ನ್ಯಾಯಬೆಲೆ ಅಂಗಡಿ, ಸಾರ್ವಜನಿಕ ದೂರು ಮತ್ತು ಬಹುಮಾನ ಯೋಜನೆ, ಎಸ್‌ಎಂಎಸ್ ಸೇವೆ, ಸೌಕರ್ಯ ಕೇಂದ್ರಗಳು, ಅಂಕಿ ಅಂಶ, ಟೆಂಡರ್, ದರಗಳು, ಹೀಗೆ ಹಲವು ಆಯ್ಕೆಗಳು ಕಾಣಿಸುತ್ತವೆ.

ಅವುಗಳ ಪೈಕಿ ಎರಡನೇ ಆಯ್ಕೆ e-Ration card ಮೇಲೆ ಒತ್ತಿದರೆ ಮತ್ತಷ್ಟು ಆಯ್ಕೆಗಳು ತೆರೆದುಕೊಳ್ಳುತ್ತವೆ. ಅವುಗಳಲ್ಲಿ 6ನೇ ಆಯ್ಕೆ Show cancelled/suspended list ಮೇಲೆ ಒತ್ತಿ. ಪುನಃ ಮತ್ತೊಂದು ಪುಟ ಒಪನ್ ಆಗುತ್ತದೆ.

ಇದನ್ನೂ ಓದಿ: SSLC Pass Karnataka Govt Jobs- SSLC ಪಾಸಾದವರಿಗಾಗಿಯೆ ಇವೆ ರಾಜ್ಯ ಸರ್ಕಾರದ ಈ ಹುದ್ದೆಗಳು | ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಮಾಹಿತಿ…

ಅಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು ಆಯ್ಕೆ ಮಾಡಿಕೊಳ್ಳಬೇಕು. ನಂತರ ‘Go’ ಮೇಲೆ ಒತ್ತಬೇಕು. ಆಗ ಯಾವೆಲ್ಲ ಹೆಸರನ್ನು ತೆಗೆಯಲಾಗಿದೆ? ಯಾವಾಗ ತೆಗೆಯಲಾಗಿದೆ? ಯಾವ ಕಾರಣಕ್ಕಾಗಿ ರದ್ದುಗೊಳಿಸಲಾಗಿದೆ ಎಂಬ ಕಾರಣವುಳ್ಳ ಸಂಪೂರ್ಣ ವಿವರ ಈ ಕೆಳಗಿನಂತೆ ಲಭ್ಯವಾಗುತ್ತದೆ.

ಒಂದುವೇಳೆ ನೀವು ಅರ್ಹರಿದ್ದರೂ ಕೂಡ ನಿಮ್ಮ ಕುಟುಂಬದ ಯಜಮಾನನರ ಹೆಸರು ರದ್ದಾದ ಅಥವಾ ತಡೆ ಹಿಡಿಯಲಾದ ರೇಷನ್ ಕಾರ್ಡ್ ಪಟ್ಟಿಯಲ್ಲಿದ್ದರೆ, ಕೂಡಲೇ ಸ್ಥಳೀಯ ಆಹಾರ ಇಲಾಖೆ ಕಚೇರಿಗೆ ಭೇಟಿ ನೀಡಿ ಪೂರಕ ದಾಖಲೆಗಳನ್ನು ಸಲ್ಲಿಸಿ ಮತ್ತೆ ಬಿಪಿಎಲ್ ಕಾರ್ಡ್ ಪಡೆಯಬಹುದಾಗಿದೆ.

Udhyogini Yojana 2025 – ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ 3 ಲಕ್ಷ ರೂ. ಬಡ್ಡಿ ಇಲ್ಲದ ಸಾಲ ಸೌಲಭ್ಯ | ಮಹಿಳಾ ನಿಗಮದಿಂದ ಅರ್ಜಿ ಆಹ್ವಾನ

WhatsApp Group Join Now
Telegram Group Join Now


Spread the love
error: Content is protected !!