ಕರ್ನಾಟಕ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ 3,500 ಹುದ್ದೆಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಶೀಘ್ರದಲ್ಲಿಯೇ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…
ಕರ್ನಾಟಕದಲ್ಲಿ ಪೊಲೀಸ್ ಸೇವೆಗೆ ಸೇರುವ ಕನಸು ಕಂಡಿರುವ ಸಾವಿರಾರು ಯುವಕರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದು ನೀಡಿದೆ. ಕರ್ನಾಟಕ ಗೃಹ ಇಲಾಖೆಯು ಒಟ್ಟು 3,500 ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್ (Civil Police Constable – CPC) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಮಹತ್ವದ ಆದೇಶವನ್ನು ಹೊರಡಿಸಿದೆ.
ನಗರ-ಜಿಲ್ಲಾ ಘಟಕಗಳಿಗೆ ಹುದ್ದೆಗಳ ಹಂಚಿಕೆ
ಈ ಹುದ್ದೆಗಳು ಕಲ್ಯಾಣ ಕರ್ನಾಟಕೇತರ ಮೀಸಲಾತಿ ವ್ಯಾಪ್ತಿಗೆ ಸೇರಿದ್ದು, ರಾಜ್ಯದ ವಿವಿಧ ನಗರ ಮತ್ತು ಜಿಲ್ಲಾ ಪೊಲೀಸ್ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ.
ಸರ್ಕಾರ ಹೊರಡಿಸಿದ ಪತ್ರದಲ್ಲಿ, ಈ 3,500 ಹುದ್ದೆಗಳ ಜಿಲ್ಲೆ ಹಾಗೂ ಘಟಕಗಳಂತೆ ಹಂಚಿಕೆ ಮಾಡಿರುವ ವಿವರವಾದ ಪಟ್ಟಿಯನ್ನು ನೀಡಲಾಗಿದೆ. ಪ್ರತಿ ಘಟಕವೂ ತನ್ನ ಪಾಲಿನ ಹುದ್ದೆಗಳ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆಗೆ ಸಿದ್ದವಾಗಬೇಕಿದೆ.
ಇದನ್ನೂ ಓದಿ: PM Kisan 21st Installment- ನವೆಂಬರ್ 19ಕ್ಕೆ ಪಿಎಂ-ಕಿಸಾನ್ ₹2,000 ಹಣ ಜಮಾ | ಈ ರೈತರಿಗೆ ಸಿಗೋಲ್ಲ ಹಣ
ಜಿಲ್ಲಾ-ಘಟಕವಾರು ಹುದ್ದೆಗಳ ವಿವರ
ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಜೊತೆಗೆ 3,500 ಹುದ್ದೆಗಳ ಜಿಲ್ಲೆ ಹಾಗೂ ಘಟಕಗಳಂತೆ ಹಂಚಿಕೆ ಮಾಡಿರುವ ವಿವರವಾದ ಪಟ್ಟಿಯನ್ನು ನೀಡಿದೆ. ಆ ಪ್ರಕಾರ ಬೆಂಗಳೂರು ನಗರ ಘಟಕದಲ್ಲಿ ಮಾತ್ರ ಕ್ರೀಡಾ ಮೀಸಲಾತಿಯಡಿಯಲ್ಲಿ 105 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.
ಈ 105 ಹುದ್ದೆಗಳ ಜೊತೆಗೆ ಕಲ್ಯಾಣ ಕರ್ನಾಟಕೇತರ 2,130 ಹುದ್ದೆಗಳು ಸೇರಿ ಒಟ್ಟು 2,235 ಹುದ್ದೆಗಳನ್ನು ಬೆಂಗಳೂರು ನಗರ ಘಟಕಕ್ಕೆ ಹಂಚಿಕೆ ಮಾಡಲಾಗಿದೆ. ಉಳಿದ ಜಿಲ್ಲೆ/ಘಟಕಗಳಿಗೆ ಹಂಚಿಕೆ ಮಾಡಲಾದ ಹುದ್ದೆಗಳ ವಿವರ ಈ ಕೆಳಗಿನಂತಿದೆ:
- ಮೈಸೂರು ನಗರ: 70
- ಹುಬ್ಬಳ್ಳಿ-ಧಾರವಾಡ ನಗರ: 75
- ಮಂಗಳೂರು ನಗರ: 125
- ಬೆಂಗಳೂರು ಜಿಲ್ಲೆ: 50
- ತುಮಕೂರು: 50
- ಕೋಲಾರ: 50
- ಚಿಕ್ಕಬಳ್ಳಾಪುರ: 50
- ಮೈಸೂರು ಜಿಲ್ಲೆ: 60
- ಚಾಮರಾಜನಗರ: 50
- ಹಾಸನ: 50
- ಕೊಡಗು: 50
- ಮಂಡ್ಯ: 50
- ದಾವಣಗೆರೆ: 50
- ಶಿವಮೊಗ್ಗ: 80
- ಚಿತ್ರದುರ್ಗ: 50
- ಹಾವೇರಿ: 50
- ದಕ್ಷಿಣ ಕನ್ನಡ (ಮಂಗಳೂರು ಜಿಲ್ಲೆ): 70
- ಉಡುಪಿ: 100
- ಉತ್ತರ ಕನ್ನಡ (ಕಾರವಾರ): 50
- ಚಿಕ್ಕಮಗಳೂರು: 50
- ಗದಗ: 35
ಮೀಸಲಾತಿ ಪ್ರಕ್ರಿಯೆಗೆ ಸ್ಪಷ್ಟ ಮಾರ್ಗಸೂಚಿ
ಸರ್ಕಾರವು ಕೊಡಿಸಿರುವ ನಿರ್ದೇಶನಗಳ ಪ್ರಕಾರ ನೇರ ನೇಮಕಾತಿ ಸಂಬಂಧ ಸರ್ಕಾರ ಹಿಂದಿನ ದಿನಗಳಲ್ಲಿ ನೀಡಿರುವ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಸಮತಳ ಮೀಸಲಾತಿ, ಕ್ರೀಡಾ ಮೀಸಲಾತಿ, ತೃತೀಯ ಲಿಂಗದ ಅಭ್ಯರ್ಥಿಗಳ ಮೀಸಲಾತಿಗಳಿಗೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರಗಳಲ್ಲಿ ನೀಡಿರುವ ಸೂಚನೆಗಳನ್ನು ಅನುಸರಿಸುವಂತೆ ಇಲಾಖೆಗಳಿಗೆ ತಿಳಿಸಲಾಗಿದೆ.
ವಿಶೇಷವಾಗಿ, ತೃತೀಯ ಲಿಂಗಿ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದ ಕ್ರಮಗಳನ್ನು ಪ್ರತ್ಯೇಕ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ.

ಬ್ಯಾಕ್ ಲಾಗ್ ಹುದ್ದೆಗಳ ವಿವರ ಕಡ್ಡಾಯ
ಪ್ರತಿ ನಗರ/ಜಿಲ್ಲಾ ಘಟಕವು ತಮ್ಮ ಮಟ್ಟದಲ್ಲಿ ನೇರ ನೇಮಕಾತಿಗೆ ಒಳಪಡುವ ಹುದ್ದೆಗಳ ಸಂಖ್ಯೆ, ಸಮತಳ ವರ್ಗೀಕರಣ ಮತ್ತು ಬ್ಯಾಕ್ ಲಾಗ್ ಹುದ್ದೆಗಳ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ ನೇಮಕಾತಿ ವಿಭಾಗಕ್ಕೆ ಸಲ್ಲಿಸಬೇಕು.
ಈ ಮಾಹಿತಿಯನ್ನು ಆಧಾರವಾಗಿ ಇಟ್ಟುಕೊಂಡು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನೇಮಕಾತಿ ಪರೀಕ್ಷೆ ಹಾಗೂ ಇತರ ಪ್ರಕ್ರಿಯೆಗಳನ್ನು ನಡೆಸಲಿದೆ.
ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಅವಕಾಶ
ಈ ಬಾರಿ 3,500ಕ್ಕೂ ಹೆಚ್ಚು ಹುದ್ದೆಗಳು ನೇಮಕವಾತ್ತಿರುವುದರಿಂದ, ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ಶಾರೀರಿಕ ಕ್ಷಮತಾ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಸೇರಿ ನೇಮಕಾತಿಯ ಎಲ್ಲ ಹಂತಗಳನ್ನು ನಿಯಮಾನುಸಾರ, ಪಾರದರ್ಶಕವಾಗಿ ನಡೆಸುವುದಾಗಿ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಭದ್ರತಾ ಪಡೆಗಳನ್ನು ಬಲಪಡಿಸುವ ಜೊತೆಗೆ ಯುವಕರಿಗೆ ಉದ್ಯೋಗಾವಕಾಶಗಳನ್ನೂ ಒದಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
KMF SHIMUL Recruitment- ಕೆಎಂಎಫ್ 194 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಶಿಮುಲ್ ಹಾಲು ಒಕ್ಕೂಟ ನೇಮಕಾತಿ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.