PM Kisan 21st Installment- ನವೆಂಬರ್ 19ಕ್ಕೆ ಪಿಎಂ-ಕಿಸಾನ್ ₹2,000 ಹಣ ಜಮಾ | ಈ ರೈತರಿಗೆ ಸಿಗೋಲ್ಲ ಹಣ

Spread the love

WhatsApp Group Join Now
Telegram Group Join Now

ಇದೇ ನವೆಂಬರ್ 19ಕ್ಕೆ ದೇಶಾದ್ಯಂತ ಫಲಾನುಭವಿ ರೈತರ ಖಾತೆಗೆ ಪಿಎಂ-ಕಿಸಾನ್ ಯೋಜನೆಯ 21ನೇ ಕಂತಿನ ಹಣ (PM Kisan 21st Installment) ಜಮಾ ಆಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ…

ಕಡೆಗೂ ಪಿಎಂ-ಕಿಸಾನ್ ಯೋಜನೆಯ 21ನೇ ಕಂತಿನ ಹಣ ಜಮಾ ಕುರಿತು ಕೇಂದ್ರ ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಇದೇ ನವೆಂಬರ್ 19ಕ್ಕೆ ದೇಶಾದ್ಯಂತ ಫಲಾನುಭವಿ ರೈತರಿಗೆ ತಲಾ 2,000 ರೂ. ಹಣ ಜಮಾ ಆಗಲಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 21ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ಅರ್ಹ ರೈತರ ಖಾತೆಗೆ ಬಿಡುಗಡೆ ಮಾಡಲಿದ್ದಾರೆ. ನವೆಂಬರ್ 19ರಂದು ಫಲಾನುಭವಿ ರೈತರ ಖಾತೆಗೆ 2,000 ಹಣ ಸಂದಾಯವಾಗಲಿದೆ.

ಇದನ್ನೂ ಓದಿ: Gruhalakshmi Multipurpose Cooperative Society Loan- ಗೃಹಲಕ್ಷ್ಮಿ ಸೊಸೈಟಿಗೆ ಚಾಲನೆ | ಮಹಿಳೆಯರಿಗೆ ಸರ್ಕಾರದಿಂದ 3 ಲಕ್ಷ ರೂ. ವರೆಗೆ ಸಾಲ

ವಾರ್ಷಿಕ 6,000 ರೂ. ಸಹಾಯಧನ

ದೇಶದ ಸಣ್ಣ ರೈತರನ್ನು ಆರ್ಥಿಕವಾಗಿ ಪ್ರೋತ್ಸಾಹಿಸುವ ಉದ್ದೇಶದಿಂದ 2019ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯಜನೆಯನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದೆ. ಈ ಯೋಜನೆಯಡಿ ರೈತರಿಗೆ ತಲಾ ನಾಲ್ಕು ತಿಂಗಳಿಗೆ ಒಮ್ಮೆ 2,000 ರೂ. ನಂತೆ ವಾರ್ಷಿಕ 6,000 ರೂ. ಹಣ ನೀಡಲಾಗುತ್ತದೆ.

ಕೇಂದ್ರ ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಈಗಲೇ 20 ಕಂತುಗಳಲ್ಲಿ ಬರೋಬ್ಬರಿ 11 ಕೋಟಿ ಅರ್ಹ ರೈತ ಕುಟುಂಬಗಳಿಗೆ ಒಟ್ಟು 3.70 ಲಕ್ಷ ಕೋಟಿ ರೂ. ಹಣ ವಿತರಣೆ ಮಾಡಲಾಗಿದೆ. ಇದೀಗ 21ನೇ ಕಂತಿನ ಹಣ ರೈತರಿಗೆ ತಲುಪಿಸಲಾಗುತ್ತಿದೆ.

ಇದನ್ನೂ ಓದಿ: PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…

ಇದೇ ನವೆಂಬರ್ 19ಕ್ಕೆ ದೇಶಾದ್ಯಂತ ಫಲಾನುಭವಿ ರೈತರ ಖಾತೆಗೆ ಪಿಎಂ-ಕಿಸಾನ್ ಯೋಜನೆಯ 21ನೇ ಕಂತಿನ ಹಣ ಜಮಾ ಆಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ...
PM Kisan 21st Installment
ಅನರ್ಹರಿಗೆ ಕಡಿವಾಣ

ಪಿಎಂ-ಕಿಸಾನ್ ಯೋಜನೆಯ ಆರಂಭದಿAದಲೂ ಅನರ್ಹ ಫಲಾನುಭವಿಗಳ ಹಾವಳಿ ಶುರುವಾಗಿದ್ದು; ಅದನ್ನು ತಡೆಯಲು ಸರ್ಕಾರ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತ ಬಂದಿವೆ. ಇಷ್ಟಾಗಿಯೂ ದೇಶಾದ್ಯಂತ ಲಕ್ಷಾಂತರ ಅನರ್ಹರು ಯೋಜನೆಯ ನಿಯಮ ಉಲ್ಲಂಘಿಸಿ ಹಣಕಾಸು ನೆರವು ಪಡೆಯುತ್ತಿದ್ದಾರೆ.

ಅನರ್ಹರರನ್ನು ಯೋಜನೆಯಿಂದ ಹೊರಗಿಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ದಾಖಲೆಗಳ ಪರಿಷ್ಕರಣೆ ಮಾಡುತ್ತಿದೆ. ಈಗಾಗಲೇ ದೇಶಾದ್ಯಂತ 35,44,213 ರೈತರ ಹೆಸರುಗಳನ್ನು ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಿಂದ ತೆಗೆದು ಹಾಕಿದ್ದು, ದಾಖಲೆಗಳ ಪರಿಷ್ಕರಣೆ ಮುಂದುವರೆದಿದೆ.

ಇದನ್ನೂ ಓದಿ: E-Swasthu Andolana- ಇ-ಸ್ವತ್ತು ಆಂದೋಲನ | ಗ್ರಾಮ ಪಂಚಾಯತಿ ವ್ಯಾಪ್ತಿಯ 1 ಕೋಟಿ ಆಸ್ತಿಗಳಿಗೆ ಇ-ಸ್ವತ್ತು

ಅರ್ಹರಿಗೆ ಮಾತ್ರ 21ನೇ ಕಂತಿನ ಹಣ

ದೇಶಾದ್ಯಂತ ಸುಮಾರು 10 ಕೋಟಿ ರೈತರು ಪಿಎಂ-ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದು, ಈ ಪೈಕಿ ಅಂದಾಜು 50 ಲಕ್ಷ ರೈತರು ಅಂತಿಮವಾಗಿ ಅನರ್ಹರೆಂದು ಗುರುತಿಸುವ ಸಾಧ್ಯತೆ ಇದೆ. ಇದು ಯೋಜನೆಯ ಆರ್ಥಿಕ ಹೊರೆ ಕಡಿಮೆ ಮಾಡುತ್ತದೆ.

ಹೀಗಾಗಿ 21ನೇ ಕಂತಿನ ಹಣವು ದಾಖಲೆ ಪರಿಷ್ಕರಣೆಯಲ್ಲಿ ಅರ್ಹರಾಗಿ ಉಳಿದ ರೈತರಿಗೆ ಮಾತ್ರ ಸಿಗಲಿದೆ. ನವೆಂಬರ್ 19ಕ್ಕೆ ಈ ಎಲ್ಲಾ ಫಲಾನುಭವಿ ರೈತರಿಗೆ ತಲಾ 2,000 ರೂ. ಹಣ ಸಂದಾಯ ಮಾಡಲಾಗುತ್ತಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.

MGNREGA Farmers Financial Assistance- ರೈತರಿಗೆ ₹5 ಲಕ್ಷ ನರೇಗಾ ಸಹಾಯಧನ | ಈ ಆರ್ಥಿಕ ನೆರವು ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
error: Content is protected !!