ಪೊಲೀಸ್ ಇಲಾಖೆಯಲ್ಲಿ ಸೇವೆಸಲ್ಲಿಸಲು ಬಯಸುವವರಿಗೆ ಭರ್ಜರಿ ಅವಕಾಶವಿದ್ದು; ಪಿಯುಸಿ ಪಾಸಾದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಹೆಡ್ ಕಾನ್‌ಸ್ಟೆಬಲ್ (PUC Pass Head Constable ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ…
ದೆಹಲಿ ಪೊಲೀಸ್ ಇಲಾಖೆಯಲ್ಲಿ ಒಟ್ಟು 509 ಹುದ್ದೆಗಳಿಗೆ ಸಿಬ್ಬಂದಿ ಆಯ್ಕೆ ಆಯೋಗವು (ಎಸ್‌ಎಸ್‌ಸಿ) ಅಧಿಸೂಚನೆ ಹೊರಡಿಸಿದೆ. ಗ್ರೂಪ್ ‘ಸಿ’ ವೃಂದದ ಈ ಹುದ್ದೆಗಳಿಗಾಗಿ ದ್ವಿತೀಯ ಪಿಯು ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: New BPL Ration Card- ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ | ರಾಜ್ಯ ಸರ್ಕಾರ ಹೇಳೊದೇನು?
ಹುದ್ದೆಗಳ ವಿವರ
- ಹೆಡ್‌ಕಾನ್‌ಸ್ಟೆಬಲ್ (ಮಿನಿಸ್ಟ್ರಿಯಲ್) ಪುರುಷ: 341
- ಹೆಡ್ ಕಾನ್‌ಸ್ಟೆಬಲ್ (ಮಿನಿಸ್ಟ್ರಿಯಲ್) ಮಹಿಳೆ: 168
- ಒಟ್ಟು ಹುದದೆಗಳು: 509
ವೇತನಶ್ರೇಣಿ
ದೆಹಲಿ ಪೊಲೀಸ್ ಇಲಾಖೆಯ ಗ್ರೂಪ್ ‘ಸಿ’ ವೃಂದ ಹುದ್ದೆಯಾದ ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಮಾಸಿಕ 25,500 ರಿಂದ 81,100 ರೂ. ವರೆಗೆ ವೇತನ ಇರಲಿದೆ. ಜೊತೆಗೆ ಸರ್ಕಾರದ ಎಲ್ಲಾ ಸವಲತ್ತುಗಳು ಅನ್ವಯವಾಗಲಿವೆ.
ವಯೋಮಿತಿ
ಅಭ್ಯರ್ಥಿಗಳು ಜುಲೈ 1ಕ್ಕೆ ಅನ್ವಯವಾಗುವಂತೆ 18-25 ವರ್ಷದವರಾಗಿರಬೇಕು. 2000 ಜುಲೈ 2 ಹಾಗೂ 2007 ಜುಲೈ 1ರ ನಡುವೆ ಜನಿಸಿರಬೇಕು. ವಿವಿಧ ಮೀಸಲಾತಿ ವರ್ಗಗಳಿಗೆ ನಿಯತಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ವಿದ್ಯಾರ್ಹತೆ
ಅರ್ಜಿ ಸಲ್ಲಿಕೆಯ ಕೊನೆಯ ದಿನದೊಳಗಾಗಿ ಆಕಾಂಕ್ಷಿಗಳು ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಉತ್ತೀರ್ಣರಾಗಿರಬೇಕು. ಜತೆಗೆ ವೃತ್ತಿಪರ ಅಗತ್ಯವಾಗಿ ಟೈಪಿಂಗ್ ತಿಳಿದಿರಬೇಕು.
ಇಂಗ್ಲಿಷ್‌ನಲ್ಲಿ ಪ್ರತಿ ನಿಮಿಷಕ್ಕೆ 30 ಪದ ಹಾಗೂ ಹಿಂದಿಯಲ್ಲಿ ಪ್ರತಿ ನಿಮಿಷಕ್ಕೆ 25 ಪದಗಳನ್ನು ಬೆರಳಚ್ಚು ಮಾಡುವ ಸಾಮರ್ಥ್ಯವಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ದೈಹಿಕ ಸಾಮರ್ಥ್ಯ ಪರೀಕ್ಷೆ
ಅಭ್ಯರ್ಥಿಗಳು 1600 ಮೀಟರ್ ಓಟವನ್ನು 7 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. 12.5 ಅಡಿಗಳ ಉದ್ದ ಜಿಗಿತ ಹಾಗೂ 3.5 ಅಡಿಗಳ ಎತ್ತರ ಜಿಗಿತವನ್ನು ಮೂರು ಪ್ರಯತ್ನಗಳಲ್ಲಿ ಮುಗಿಸಬೇಕಿರುತ್ತದೆ.
ಮಹಿಳೆಯರು 800 ಮೀಟರ್ ಓಟವನ್ನು 7 ನಿಮಿಷಗಳಲ್ಲಿ ಓಡಬೇಕು. 7 ಅಡಿ ಉದ್ದ ಜಿಗಿತ ಹಾಗೂ 2.25 ಅಡಿ ಎತ್ತರ ಜಿಗಿತ ಪೂರೈಸಬೇಕು.
ಇದನ್ನೂ ಓದಿ: Karnataka Jatiganati Mobile Self Survey- ಮೊಬೈಲ್‌ನಲ್ಲಿ ನೀವೇ ಮಾಡಿಕೊಳ್ಳಿ ಜಾತಿಗಣತಿ ಸಮೀಕ್ಷೆ | ನೇರ ಲಿಂಕ್ ಇಲ್ಲಿದೆ…
ಎನ್‌ಸಿಸಿ ಕೆಡೆಟ್‌ಗಳಿಗೆ ಪ್ರೋತ್ಸಾಹ
ನೇಮಕಾತಿಯಲ್ಲಿ ಎನ್‌ಸಿಸಿ ಅಭ್ಯರ್ಥಿಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತದೆ. ಎನ್‌ಸಿಸಿಸಿ ಪ್ರಮಾಣಪತ್ರ ಹೊಂದಿದವರಿಗೆ ಶೇ.5 ಬೋನಸ್ ಅಂಕ ನೀಡಲಾಗುತ್ತದೆ. ‘ಬಿ’ ಪ್ರಮಾಣಪತ್ರಕ್ಕೆ ಶೇ.3 ಹಾಗೂ ‘ಎ’ ಪ್ರಮಾಣಪತ್ರ ಹೊಂದಿರುವವರಿಗೆ ಶೇ.2 ಅಂಕಗಳ ಬೋನಸ್ ನೀಡಲಾಗುತ್ತದೆ.
ಇದಲ್ಲದೆ, ಪದವಿ ಹಾಗೂ ಸ್ನಾತಕೋತ್ತರ ಡಿಪ್ಲೊಮಾದಲ್ಲಿ ಡಿಸ್ಟಿಂಕ್ಷನ್ ಪಡೆದವರಿಗೆ ಶೇ.5, ಪ್ರಥಮ ದರ್ಜೆ ಪಡೆದವರಿಗೆ ಶೇ.4, ದ್ವಿತೀಯ ದರ್ಜೆ-ಶೇ.3 ಹಾಗೂ ಉತ್ತೀರ್ಣರಿಗೆ ಶೇ.2ರಷ್ಟು ಬೋನಸ್ ಅಂಕಗಳನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಮೊದಲಿಗೆ ಆನ್‌ಲೈನ್‌ನಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ 100 ಅಂಕಗಳಿಗೆ ನಡೆಸಲಾಗುತ್ತದೆ. ನಂತರ ದೈಹಿಕ ಸಹಿಷ್ಣುತೆ ಪರೀಕ್ಷೆಯಲ್ಲಿ ಅರ್ಹತೆ ಗಳಿಸಬೇಕು. ಟೈಪಿಂಗ್ ಪರೀಕ್ಷೆಗೆ 25 ಅಂಕಗಳಿರುತ್ತವೆ.
ನAತರ ದೆಹಲಿ ಪೊಲೀಸರಿಂದ ಕಂಪ್ಯೂಟರ್ ಜ್ಞಾನದ ಪರೀಕ್ಷೆ ನಡೆಸಲಾಗುತ್ತಿದ್ದು, ಇದು ಅರ್ಹತಾದಾಯಕವಾಗಿರುತ್ತದೆ. ದಾಖಲಾತಿಗಳ ಪರಿಶೀಲನೆ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಪರೀಕ್ಷಾ ಕೇಂದ್ರಗಳು
ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ರಾಜ್ಯದಲ್ಲಿ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಗಳಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.
ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಕೆ ವಿವರ
ಅಭ್ಯರ್ಥಿಗಳು ಆಧಾರ್ ದೃಢೀಕರಣ ವ್ಯವಸ್ಥೆ ಬಳಸಿಕೊಂಡು ssಛಿ.gov.iಟಿ ಪೋರ್ಟಲ್‌ನಲ್ಲಿ ನೋಂದಣಿ ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಸುವಂತೆ ಸೂಚಿಸಲಾಗಿದೆ. ಇದರಿಂದ ಫೋಟೋ ಹಾಗೂ ಸಹಿ ಸರಿಯಿಲ್ಲವೆಂಬ ಕಾರಣಕ್ಕೆ ಅರ್ಜಿ ತಿರಸ್ಕೃತವಾಗುವ ಪ್ರಮೇಯ ಇರುವುದಿಲ್ಲ.
ಸಾಮಾನ್ಯ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಮಹಿಳೆಯರು ಹಾಗೂ ಪರಿಶಿಷ್ಟರಿಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 20-10-2025
- ಶುಲ್ಕ ಪಾವತಿ ಕೊನೇ ದಿನಾಂಕ: 21-10-2025
- ಅರ್ಜಿ ತಿದ್ದುಪಡಿ ಅವಧಿ: ಅಕ್ಟೋಬರ್ 27-29ರ ವರೆಗೆ
- ಪರೀಕ್ಷೆಯ ಸಂಭಾವ್ಯ ಅವಧಿ: 2025ರ ಡಿಸೆಂಬರ್/ 2026ರ ಜನವರಿ
ಅಧಿಸೂಚನೆ: Download

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.