Karnataka Social Educational Survey 2025- ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಏನೆಲ್ಲಾ ಪ್ರಶ್ನೆ ಕೇಳಲಾಗುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಕರ್ನಾಟಕ ಸರ್ಕಾರ ನಾಳೆ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರ ವರೆಗೆ ಒಟ್ಟು ಹದಿನಾರು ದಿನಗಳ ಕಾಲ ಜಾತಿಜನಗಣತಿ (Census) ಅಂದರೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 (Karnataka Social and Educational Survey 2025) ನಡೆಸಲಿದೆ…
ರಾಜ್ಯದಲ್ಲಿ ವಾಸ ಮಾಡುವ ಎಲ್ಲಾ ಜನಾಂಗದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ಜಾತಿ ಮತ್ತು ಇನ್ನಿತರ ಸುಮಾರು 60 ಮಾಹಿತಿಯ ಜನಗಣತಿಯನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ಪ್ರತಿ ಮನೆಗೂ ಬಂದು ನಿಗದಿಪಡಿಸಿದ ನಮೂನೆಯಲ್ಲಿ ನಿಮ್ಮಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ.
ವಿವಿಧ ಜಾತಿ ಸಂಘ-ಸಂಘಟನೆಗಳ ಸೂಚನೆ
ಪ್ರಮುಖವಾಗಿ ಈ ಸಮೀಕ್ಷೆಯಲ್ಲಿ ನಿಮ್ಮ ಕುಟುಂಬದ ವೈಯುಕ್ತಿಕ ಸ್ಥಿತಿಗತಿಗಳ ವಿವರಗಳನ್ನು ಸಂಪೂರ್ಣವಾಗಿ ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ಧರ್ಮ ಮತ್ತು ಜಾತಿ ಕಾಲಂನಲ್ಲಿ ನಿಮ್ಮ ನಿಮ್ಮ ಜಾತಿಗಳ ಹೆಸರುಗಳನ್ನು ಕಡ್ಡಾಯವಾಗಿ ನಮೂದಿಸಬೇಕಿದೆ.
ಈ ಬಗ್ಗೆ ಈಗಾಗಲೇ ನಾಡಿನ ಎಲ್ಲಾ ಜಾತಿ/ಧರ್ಮಗಳ ಸಂಘ-ಸಂಘಟನೆಗಳು ಪ್ರತ್ಯೇಕವಾಗಿ ಸಭೆ ನಡೆಸಿ ಸಮೀಕ್ಷಾ ನಮೂನೆಯಲ್ಲಿ ಏನೆಲ್ಲಾ ನಮೂದಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿವೆ. ತಮ್ಮ ತಮ್ಮ ಜಾತಿ, ಸಮುದಾಯದ ಜನರಿಗೆ ವೈಯಕ್ತಿಯವಾಗಿ ಹೀಗೆಯೇ ನಮೂದಿಸಬೇಕು ಎಂಬ ಮಾರ್ಗದರ್ಶನವನ್ನೂ ನೀಡಿವೆ.

ಪ್ರತೀ ಮನೆಗೂ ಸ್ಟಿಕರ್
ರಾಜ್ಯದಲ್ಲಿ ಈಗಾಗಲೇ ವಿದ್ಯುತ್ ಇಲಾಖೆಯ ಸಿಬ್ಬಂದಿಗಳ ಮೂಲಕ ಪ್ರತೀ ಮನೆಗೂ ಸ್ಟಿಕರ್ ಅಂಟಿಸಿರಲಾಗಿದೆ. ಈ ಸ್ಟಿಕರ್’ನಲ್ಲಿ UHID ನಮೂದಾಗಿರುತ್ತದೆ. ನಾಳೆ ಸೆಪ್ಟೆಂಬರ್ 22 ರಿಂದ ಪ್ರತೀ ಮನೆಗೂ ಆಯಾ ವಲಯದ ಶಿಕ್ಷಕರ ಮೂಲಕ ಈ ಸರ್ವೇ ಕಾರ್ಯ ಮಾಡುತ್ತಾರೆ.
ನಿಮ್ಮ ಮನೆಯಲ್ಲಿ ಅಂಟಿಸಿದ ಸ್ಟಿಕರ್’ನಲ್ಲಿ ದಾಖಲಾದ UHID ಮೂಲಕ ಪ್ರತೀ ಮನೆಯ ವರದಿ ದಾಖಲಿಸಲಾಗುತ್ತದೆ. ಸಮೀಕ್ಷೆಯ ಸಂದರ್ಭದಲ್ಲಿ ಸುಮಾರು 60 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಮೀಕ್ಷೆಯ ಬಳಿಕ ಸಮೀಕ್ಷೆ SURVEY ID ದಾಖಲಿಸುತ್ತಾರೆ.
ಇದನ್ನೂ ಓದಿ: Mevu Kattarisuva Yantra- ಮೇವು ಕತ್ತರಿಸುವ ಯಂತ್ರ ಮತ್ತು ರಬ್ಬರ್ ಕೌ-ಮ್ಯಾಟ್ ವಿತರಣೆಗೆ ರೈತರಿಂದ ಅರ್ಜಿ ಆಹ್ವಾನ
ಸಮೀಕ್ಷೆಯಲ್ಲಿ ಸರಿಯಾದ ಉತ್ತರ ನೀಡಿ ಸಹಕರಿಸಿ
ಸಮೀಕ್ಷಾ ನಮೂನೆಯಲ್ಲಿ ಒಟ್ಟು 60 ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಇಲ್ಲಿ ವೈಯಕ್ತಿಯ ಸ್ಥಿತಿ, ಕುಟುಂಬ ಸ್ಥಿತಿ, ಉದ್ಯೋಗ, ಜಾತಿ, ಕುಲ ಕಸುಬು ಸೇರಿದಂತೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವ ಮೂಲಕ ಸಮೀಕ್ಷೆಗೆ ನಾಡಿನ ಜನತೆ ಸಹಕರಿಸಬೇಕಿದೆ.
ಸಮೀಕ್ಷೆಯ ಸಂಧರ್ಭದಲ್ಲಿ ರೇಷನ್ ಕಾರ್ಡ್, ಮನೆಯ ಮುಖ್ಯ ಸದಸ್ಯನ ಆಧಾರ್ ಕಾರ್ಡ್, ಮತದಾರ ಚೀಟಿ, ಜಾತಿ ಪ್ರಮಾಣ ಪತ್ರ ಇವುಗಳಲ್ಲಿ ಯಾವುದಾದರೂ ಒಂದನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ.
ಯಾವೆಲ್ಲ ಪ್ರಶ್ನೆಗಳನ್ನು ಕೇಳಲಾಗುತ್ತದೆ?
- ಮನೆಯ ಮುಖ್ಯಸ್ಥನ ಹೆಸರು
- ತಂದೆಯ ಹೆಸರು
- ತಾಯಿಯ ಹೆಸರು
- ಕುಟುಂಬದ ಕುಲದ ಹೆಸರು (ಸರ್ನೇಮ್)
- ಮನೆಯ ವಿಳಾಸ
- ಮೊಬೈಲ್ ಸಂಖ್ಯೆ
- ರೇಷನ್ ಕಾರ್ಡ್ ಸಂಖ್ಯೆ
- ಆಧಾರ್ ಸಂಖ್ಯೆ
- ವೋಟರ್ ಐಡಿ ಸಂಖ್ಯೆ
- ಕುಟುಂಬದ ಒಟ್ಟು ಸದಸ್ಯರು
- ಧರ್ಮ (Religion)
- ಜಾತಿ ಹಾಗೂ ಉಪಜಾತಿ
- ಜಾತಿ ವರ್ಗ (SC/ST/OBC/GEN/OTHER)
- ಜಾತಿ ಪ್ರಮಾಣ ಪತ್ರ ಇದೆಯೇ?
- ಜಾತಿ ಪ್ರಮಾಣಪತ್ರ ಸಂಖ್ಯೆ
- ಜನ್ಮ ದಿನಾಂಕ
- ವಯಸ್ಸು
- ಜನ್ಮ ಸ್ಥಳ
- ವೈವಾಹಿಕ ಸ್ಥಿತಿ
- ಲಿಂಗ (male/female/others)
- ವಿದ್ಯಾಬ್ಯಾಸ
- ಮನೆಯಲ್ಲಿ ಓದಿದವರ ಸಂಖ್ಯೆ
- ಮಕ್ಕಳು ಶಾಲೆಗೆ ಹೋಗುತ್ತಿದ್ದಾರ?
- ಯಾವ ಶಾಲೆ? (govt/pvt school)
- ಮನೆಯಲ್ಲಿ ಶಾಲೆ ಬಿಟ್ಟವರು ಇದ್ದಾರಾ?
- ನಿಮ್ಮ ಮುಖ್ಯ ಉದ್ಯೋಗ
- ಮನೆಯಲ್ಲಿ ಎಷ್ಟು ಜನ ಉದ್ಯೋಗದಲ್ಲಿ ಇದ್ದಾರೆ
- ಕೆಲಸದ ಪ್ರಕಾರ (govt/pvt)
- ನಿರುದ್ಯೋಗಿಗಳು ಇದ್ದಾರಾ?
- ದಿನದ ಆದಾಯ
- ತಿಂಗಳ ಆದಾಯ
- ತಿಂಗಳ ಖರ್ಚು
- ಯಾವುದಾದರೂ ಸಾಲ ಇದೆಯಾ ?
- ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇದೆಯಾ?
- ಪಿಂಚಣಿ (pension) ತೆಗೆದುಕೊಳ್ಳುತ್ತಿರಾ?
- ಎಷ್ಟು ಜಮೀನುಇದೆ?
- ಕೃಷಿ ಭೂಮಿ ಅಥವಾ ವಾಣಿಜ್ಯ ಭೂಮಿ ?
- ಸ್ವಂತ ಮನೆ ಅಥವಾ ಬಾಡಿಗೆ?
- ಯಾವ ರೀತಿಯ ಮನೆ?
- ವಿದ್ಯುತ್ ಸಂಪರ್ಕ ಇದೆಯಾ ?
- ಕುಡಿಯುವ ನೀರಿನ ಮೂಲ ಯಾವುದು?
- ಶೌಚಾಲಯ ಇದೆಯಾ?
- ಮನೆಯಲ್ಲಿ ಎಷ್ಟು ಕೊಠಡಿಗಳಿವೆ?
- ಮನೆಯಲ್ಲಿ ಇಂಟರ್ನೆಟ್ / ಮೊಬೈಲ್ ಇದೆಯೇ?
- ವಾಹನ ಇದೆಯೇ? (Bike/Car/etc)
- ರೇಷನ್ ಸಬ್ಸಿಡಿ ಪಡೆಯುತ್ತಿದ್ದೀರಾ?
- ವಸತಿ ಯೋಜನೆಯ ಲಾಭ ಪಡೆದಿದ್ದೀರಾ?
- ಈವರೆಗೆ ವಿಧ್ಯಾರ್ಥಿವೇತನ ಪಡೆದಿದ್ದೀರಾ?
- ಮೀಸಲಾತಿಯ ಲಾಭ ಪಡೆದಿದ್ದೀರಾ?
- ಆರೋಗ್ಯ ಯೋಜನೆಯ ಲಾಭ ಪಡೆದಿದ್ದೀರಾ?
- ಮನೆಯಲ್ಲಿ ವಿಧವೆ ಇದ್ದಾರಾ?
- ಅಂಗವಿಕಲರು ಇದ್ದಾರಾ?
- ಹಿರಿಯ ನಾಗರಿಕರು ಮನೆಯಲ್ಲಿ ಇದ್ದಾರೆಯೇ? (60+)
- ಫ್ಯಾಮಿಲಿನಲ್ಲಿ 6 ವರ್ಷಕ್ಕಿಂತ ಚಿಕ್ಕ ಮಕ್ಕಳು ಇದ್ದಾರಾ?
- ಯುವಕರು (18-25) ಇದ್ದಾರಾ?
- ಯಾವುದಾದರೂ ಸಾಮಾಜಿಕ ಸಂಘ ಸಂಸ್ಥೆಯಲ್ಲಿ ಸೇರಿದ್ದಾರ?
- ಮನೆಯಲ್ಲಿ ಎಷ್ಟು ಜನ ಮತದಾರರು ಇದ್ದಾರೆ?
- ಮತದಾನ ಮಾಡುತ್ತಾರಾ?
- ನಿಮ್ಮ ಜಾತಿ ಆಧಾರದಲ್ಲಿ ಬೇಧಭಾವ ಅನುಭವಿಸಿದ್ದೀರಾ?
- ಈ ಜಾತಿ ಗಣತಿಯಿಂದ ಏನನ್ನು ಅಪೇಕ್ಷಿಸುತ್ತೀರಿ?
ಹೀಗೆ ಒಟ್ಟು 60 ಪ್ರಶ್ನೆಗಳನ್ನು ಕೇಳಲಾಗುತ್ತದೆ ಹಾಗೂ ನಿಮ್ಮ ಉತ್ತರವನ್ನು ಸಮೀಕ್ಷಾಧಿಕಾರಿಗಳು ಸಮೀಕ್ಷೆಯ ಆ್ಯಪ್’ನಲ್ಲಿ ದಾಖಲಿಸುತ್ತಾರೆ. ದಯಮಾಡಿ ಯಾರೂ ತಪ್ಪು ಮಾಹಿತಿ ನೀಡಬೇಡಿ. ಸರಿಯಾದ ಮಾಹಿತಿ ಒದಗಿಸುವ ಮೂಲಕ ಸಮೀಕ್ಷೆಗೆ ಸಹಕರಿಸುವುದು ಎಲ್ಲರ ಹೊಣೆಯಾಗಿದೆ.