Govt SchemesNews

Gruha Lakshmi Scheme- ಒಟ್ಟಿಗೆ ಎರಡು ಕಂತಿನ 4,000 ರೂ. ಗೃಹಲಕ್ಷ್ಮಿ ಹಣ ಜಮಾ | ಹಣ ಜಮಾ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು? ಇಲ್ಲಿದೆ ಮಾಹಿತಿ…

Spread the love

‘ಗೃಹಲಕ್ಷ್ಮಿ ಯೋಜನೆ’ಯಡಿ (Gruha Lakshmi Scheme) ಮಹಿಳೆಯರಿಗೆ ಒಟ್ಟಿಗೆ ಎರಡು ಕಂತಿನ ಹಣ ಜಮಾ ಮಾಡುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ..

WhatsApp Group Join Now
Telegram Group Join Now

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ ಯೋಜನೆ’ ಅಡಿಯಲ್ಲಿ ಫಲಾನುಭವಿ ಮಹಿಳೆಯರ ಖಾತೆಗೆ ಈ ತನಕ 21 ಕಂತುಗಳ ಹಣ ಸಂದಾಯ ಮಾಡಲಾಗಿದೆ. ಇದೀಗ ಬಾಕಿ ಉಳಿದಿರುವ ಎರಡು ಕಂತುಗಳ ಹಣ ಪಾವತಿಗೆ ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ‘ಗೃಹಲಕ್ಷ್ಮಿ ಯೋಜನೆ’ಯ ಫಲಾನುಭವಿ ಮಹಿಳೆಯರಿಗೆ ಶುಭ ಸುದ್ದಿ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯೋಜನೆಯ ಎರಡು ಕಂತಿನ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯಡಿ ಈತನಕ ಬಿಡುಗಡೆಯಾದ ಒಟ್ಟು ಕಂತುಗಳೆಷ್ಟು? ಪ್ರತೀ ಫಲಾನುಭವಿ ಮಹಿಳೆಯ ಬ್ಯಾಂಕ್ ಖಾತೆಗೆ ಜಮೆಯಾದ ಹಣವೆಷ್ಟು? ಮುಂದಿನ ಕಂತುಗಳ ಪಾವತಿ ಯಾವಾಗ? ಎಂಬ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊAಡಿದ್ದಾರೆ.

ಇದನ್ನೂ ಓದಿ: PM Surya Ghar Scheme- ಮನೆಗೆ ಪಿಎಂ ಸೂರ್ಯ ಘರ್ ಯೋಜನೆ ಉಚಿತ ಸೋಲಾರ್ ವಿದ್ಯುತ್ ಪಡೆಯೋದು ಹೇಗೆ? ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್…

ಪ್ರತೀ ಮಹಿಳೆಗೂ 42,000 ರೂ. ಸಂದಾಯ

ರಾಜ್ಯ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಈ ತನಕ ಒಟ್ಟು 21 ಕಂತುಗಳ ಹಣ ವರ್ಗಾವಣೆ ಮಾಡಲಾಗಿದೆ. ಒಟ್ಟು 1 ಕೋಟಿ 24 ಲಕ್ಷ ಮಹಿಳೆಯರು ಫಲಾನುಭವಿಗಳಾಗಿದ್ದು; ಇವರಿಗೆ ಇಲ್ಲಿಯವರೆಗೂ ತಲಾ 42,000 ರೂ. ಪಾವತಿಸಲಾಗಿದೆ.

ಆಗಸ್ಟ್ ವರೆಗಿನ ಎಲ್ಲಾ ಕಂತುಗಳು ಪಾವತಿಯಾಗಿದ್ದು; ಇದೀಗ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಎರಡು ತಿಂಗಳ ಕಂತುಗಳು ಮಾತ್ರ ಬಾಕಿ ಉಳಿದಿವೆ. ಈ ಎರಡೂ ಕಂತುಗಳ ಹಣವನ್ನು ಏಕಕಾಲಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

‘ಗೃಹಲಕ್ಷ್ಮಿ ಯೋಜನೆ’ಯಡಿ ಮಹಿಳೆಯರಿಗೆ ಒಟ್ಟಿಗೆ ಎರಡು ಕಂತಿನ ಹಣ ಜಮಾ ಮಾಡುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ...
Gruha Lakshmi Scheme 2025
ಹಣ ಬಿಡುಗಡೆ ಕುರಿತು ಸಚಿವರು ಹೇಳಿದ್ದೇನು?

ಈವರೆಗೆ 21 ಕಂತುಗಳ ಗೃಹಲಕ್ಷ್ಮಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಿದ್ದೇವೆ. ಸುಮಾರು 1 ಕೋಟಿ 24 ಲಕ್ಷ ಮಹಿಳೆಯರು ನಮ್ಮ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ.

ಸೆಪ್ಟೆAಬರ್ ಮತ್ತು ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದು ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಳರ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: NMMS Scholarship 2025- 9ರಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ 12,000 ರೂ. ಸ್ಕಾಲರ್‌ಶಿಪ್ | NMMS ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಯಾವಾಗ ಹಣ ಸಿಗಲಿದೆ?

ಮಹಿಳಾ ಸಚಿವರು ನೀಡಿದ ಮಾಹಿತಿ ಪ್ರಕಾರ ಈಗಾಗಲೇ ಅಂದರೆ, ಕಳೆದ ಆಗಸ್ಟ್ 30ರಿಂದಲೇ ಆಗಸ್ಟ್ ಮತ್ತು ಸೆಪ್ಟೆಂಬರ್ ಎರಡು ಕಂತುಗಳ ಕಣ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ.

ಡಿಬಿಟಿ ಮೂಲಕ ಹಣ ವರ್ಗಾವಣೆ ಪ್ರಕ್ರಿಯೆ ನಡೆಯುವುದರಿಂದ ಎಲ್ಲಾ 1 ಕೋಟಿ 24 ಲಕ್ಷ ಫಲಾನುಭವಿಗಳಿಗೂ ಏಕಕಾಲಕ್ಕೆ ಹಣ ವರ್ಗಾವಣೆ ಮಾಡುವುದು ಕಷ್ಟಸಾಧ್ಯ. ಹೀಗಾಗಿ ಹಂತಹಂತವಾಗಿ ಹಣ ವರ್ಗಾವಣೆ ಆಗಲಿದ್ದು; ಆಯಾ ಫಲಾನುಭವಿ ಮಹಿಳೆಯರ ಖಾತೆಗೆ ಶೀಘ್ರದಲ್ಲಿಯೇ ಎರಡೂ ಕಂತಿನ ಹಣ ಜಮಾ ಆಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Karnataka Police Recruitment 2025- ಪೊಲೀಸ್ ಕಾನ್‌ಸ್ಟೇಬಲ್ ಕರ್ನಾಟಕ ಪೊಲೀಸ್ ಇಲಾಖೆ 4,656 ಹುದ್ದೆಗಳ ನೇಮಕಾತಿ | ರಾಜ್ಯ ಸರ್ಕಾರದಿಂದ ಚಾಲನೆ

ನಿಮ್ಮ ಹಣ ಜಮಾ ವಿವರ ಚೆಕ್ ಮಾಡಿ

ಈ ತನಕ ಜಮಾ ಆದ ಗೃಹಲಕ್ಷ್ಮಿ ಹಣದ ವಿವರವನ್ನು ನೋಡಲು ರಾಜ್ಯ ಸರ್ಕಾರ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ದಿಪಡಿಸಿದೆ. ಫಲಾನುಭವಿಗಳು Google Play Storeನಿಂದ ಈ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಹಣ ಜಮಾ ವಿವರ ತಿಳಿಯಬಹುದಾಗಿದೆ.

ನಾವು ಕೆಳಗೆ ನೀಡಿರುವ DBT Karnataka ಲಿಂಕ್ ಮೇಲೆ ಕ್ಲಿಕ್ ಮಾಡಿ Google Play Store ಅನ್ನು ಪ್ರವೇಶ ಮಾಡಿ. DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಬಳಿಕ ನಿಮ್ಮ ಆಧಾರ್ ಕಾರ್ಡ್ ನಂಬರ್ ಬಳಸಿ ಲಾಗಿನ್ ಆಗಲು ಪಾಸ್‌ವರ್ಡ್ ರಚಸಿಕೊಳ್ಳಿ.

ತದನಂತರ DBT Karnataka ಮೊಬೈಲ್ ಅಪ್ಲಿಕೇಶನ್ ಲಾಗಿನ್ ಆಗಿ. ಅಲ್ಲಿ ಮುಖಪುಟದಲ್ಲಿ ಪಾವತಿ ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ‘ಗೃಹಲಕ್ಷ್ಮಿ’ ಎನ್ನುವ ಆಯ್ಕೆ ಕಾಣಿಸುತ್ತದೆ. ಇದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈವರೆಗೆ ಜಮಾ ಆದ ಹಣ ವಿವರ ಸಿಗುತ್ತದೆ.

DBT Karnataka ಲಿಂಕ್: Download

Unauthorized BPL Ration Card- 12 ಲಕ್ಷ ಬಿಪಿಎಲ್ ಕಾರ್ಡ್ ರದ್ದತಿಗೆ ಸರ್ಕಾರದ ಸಿದ್ಧತೆ | ನೀವು ಈ ಪಟ್ಟಿಯಲ್ಲಿದ್ದೀರಾ?


Spread the love
WhatsApp Group Join Now
Telegram Group Join Now

Related Articles

Back to top button
error: Content is protected !!