Gruha Lakshmi scheme 11th installment : ಗೃಹಲಕ್ಷ್ಮೀ ಯೋಜನೆಯ (Gruha Lakshmi scheme) ಹಣ ಜಮಾ ಕುರಿತು ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.
2023ರ ಸೆಪ್ಟೆಂಬರ್ ತಿಂಗಳಿನಿ೦ದ ಗೃಹಲಕ್ಷ್ಮಿ ಯೋಜನೆ ಜಾರಿಯಲ್ಲಿದ್ದು; ರಾಜ್ಯದಲ್ಲಿ ಸರಿಸುಮಾರು ಒಂದು ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಯಡಿ ಪ್ರತೀ ತಿಂಗಳು 2000 ರೂಪಾಯಿ ಆರ್ಥಿಕ ನೆರವು ಪಡೆಯುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ಫಲಾನುಭವಿ ಮಹಿಳೆಯರಿಗೆ ಈಗಾಗಲೇ 10 ಕಂತುಗಳ ಹಣ ಒಟ್ಟು 20,000 ರೂಪಾಯಿ ಸಂದಾಯವಾಗಿದೆ. 11ನೇ ಕಂತಿನ 2,000 ರೂಪಾಯಿ ಯಾವಾಗ ಖಾತೆಗೆ ಜಮೆಯಾಗಲಿದೆ? ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ…

ಗ್ಯಾರಂಟಿ ಯೋಜನೆಗಳಿಗೆ ಸಿದ್ದು ಬಲ
ಲೋಕಸಭಾ ಚುನಾವಣೆಯ ನಂತರ ಗೃಹಲಕ್ಷ್ಮೀ ಯೋಜನೆಯೂ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರಕಾರ ಕಳೆದೊಂದು ವರ್ಷದಿಂದ ಜಾರಿಗೆ ತಂದಿದ್ದ ಪಂಚ ಗ್ಯಾರಂಟಿಗಳೆಲ್ಲವೂ ಸ್ಥಗಿತಗೊಳ್ಳಲಿವೆ. ಸ್ವತಃ ಕಾಂಗ್ರೆಸ್ ಶಾಸಕರೇ ಈ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಲು ಸಿಎಂ ಮೇಲೆ ಒತ್ತಡ ತರುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
ಗ್ಯಾರಂಟಿ ಯೋಜನೆಗಳ ಬಂದ್ ಕುರಿತು ವ್ಯಾಪಕವಾಗಿ ಹರಡಿದ್ದ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ಬಂದ್ ಆಗುವುದಿಲ್ಲ’ ಎಂದು ಹೇಳಿದ್ದರು. ಇದೀಗ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದ್ದು; ಗ್ಯಾರಂಟಿ ಯೋಜನೆಗಳು ಯಥಾಪ್ರಕಾರ ಮುಂದುವರೆದಿವೆ.
11ನೇ ಕಂತಿನ ಹಣ ಈ ದಿನ ಜಮಾ
ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ನಿಮಗೆ 10ನೇ (Gruha Lakshmi 11th installment) ಕಂತಿನ ಹಣ ಜಮೆ ಆಗಿದ್ದರೆ 11ನೇ ಕಂತಿನ ಹಣ ಬಿಡುಗಡೆಗೆ ಸಂಬ೦ಧಿಸಿದ೦ತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗುವುದು ವಿಳಂಬವಾಗಿತ್ತು.
ಕರ್ನಾಟಕ ಸರಕಾರ ಈ ಹಿಂದೆ ಹೊರಡಿಸಿರುವ ಆದೇಶದ ಅನ್ವಯ ಗೃಹಲಕ್ಷ್ಮಿ ಯೋಜನೆಯ ಹಣವು ಪ್ರತಿ ತಿಂಗಳ 20ನೇ ತಾರೀಖಿನ ಒಳಗಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಅದರಂತೆ ಜೂನ್ ತಿಂಗಳಲ್ಲಿ ಬರಬೇಕಾಗಿದ್ದ 11ನೇ ಕಂತಿನ ಹಣವು 20ರಿಂದ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.