ಪ್ರತಿಷ್ಠಿತ ಕೋ-ಆಪರೇಟಿವ್ ಬ್ಯಾಂಕಿನ (The Bangalore City Cooperative Bank Recruitment) 74 ಖಾಲಿ ಹುದ್ದೆಗಳ ಭರ್ತಿಗೆ ಎಸ್‌ಎಸ್‌ಎಲ್‌ಸಿ ಹಾಗೂ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜಧಾನಿ ಬೆಂಗಳೂರಿನಲ್ಲಿ 1909ರಲ್ಲಿ ಸ್ಥಾಪನೆಯಾದ ಒಟ್ಟು 22 ಶಾಖೆಗಳನ್ನು ಹೊಂದಿರುವ ‘ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ನಲ್ಲಿ ಖಾಲಿ ಇರುವ ಕಿರಿಯ ಸಹಾಯಕರು ಮತ್ತು ಅಟೆಂಡರ್ ಹುದ್ದೆಗಳಿಗೆ ಅರ್ಜಿ ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪದವೀಧರ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ಹುದ್ದೆಗಳ ವಿವರ
- ಕಿರಿಯ ಸಹಾಯಕರು: 62
- ಅಟೆಂಡರ್: 12
- ಒಟ್ಟು ಹುದ್ದೆಗಳು: 74
ವಿದ್ಯಾರ್ಹತೆ ವಿವರ
ಕಿರಿಯ ಸಹಾಯಕರ ಹುದ್ದೆಗೆ ಭಾರತದ ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ ಯಾವುದೇ ವಿಶ್ವವಿದ್ಯಾನಿಲಯ ಪದವಿಯಲ್ಲಿ ತೇರ್ಗಡೆಯಾಗಿರಬೇಕು.
ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ, ಬರೆಯುವಿಕೆ ಕನ್ನಡವನ್ನು ಸ್ವಚ್ಚವಾಗಿ ಮಾತನಾಡಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು ಮತ್ತು ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್‌ನಲ್ಲಿ ಜ್ಞಾನ ಹೊಂದಿರಬೇಕು.
ಆಟೆಂಡರ್ ಹುದ್ದೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಸದರಿ ಪರೀಕ್ಷೆಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.
LIC Recruitment- LICಯ 841 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷವಾಗಿರಬೇಕು. ಗರಿಷ್ಠ ವಯೋಮಿತಿಯು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷಗಳು ಹಾಗೂ ಇತರೆ ಅಭ್ಯರ್ಥಿಗಳಿಗೆ 35 ವರ್ಷಗಳಾಗಿರಬೇಕು.

ಅರ್ಜಿ ಸಲ್ಲಿಕೆಯ ವಿಧಾನ
ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ bccbl.co.in ಅನ್ನು ತೆರೆದ ಕೂಡಲೇ ಕಂಪ್ಯೂಟರ್ ಪರದೆಯ ಮೇಲೆ BCCBANK RECRUITMENT 2025 ಎಂದು ಮೂಡುತ್ತದೆ ಮತ್ತು ಅಧಿಸೂಚನೆ / ಪರೀಕ್ಷಾ ಶುಲ್ಕ ವಿವರಗಳು ಲಭ್ಯವಾಗಲಿದ್ದು, ಅಭ್ಯರ್ಥಿಗಳು ಅಧಿಸೂಚನೆಯಲ್ಲಿನ ವಿವರಗಳನ್ನು ಮತ್ತು ಅರ್ಜಿ ಸಲ್ಲಿಸುವ ಸೂಚನೆಗಳನ್ನು ತಪ್ಪದೇ ಓದಿಕೊಂಡು ಅದರಂತೆ ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು.
ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಅಥವಾ ಸಮಸ್ಯೆ ಎದುರಾದಲ್ಲಿ ಸಹಾಯವಾಣಿ 9036072155 ಅನ್ನು ಬೆಳಿಗ್ಗೆ 10.00 ಗಂಟೆಯಿAದ ಸಂಜೆ 6.00 ಗಂಟೆಯ ವರೆಗೆ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕದ ವಿವರ
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಕಿರಿಯ ಸಹಾಯಕರು ಹುದ್ದೆಗೆ 750/- ರೂ. ಹಾಗೂ ಅಟೆಂಡರ್ ಹುದ್ದೆಗೆ 600/- ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಇನ್ನು ಇತರ ವರ್ಗದ ಅಭ್ಯರ್ಥಿಗಳು ಕಿರಿಯ ಸಹಾಯಕರು ಹುದ್ದೆಗೆ 1000/- ರೂ. ಹಾಗೂ ಅಟೆಂಡರ್ ಹುದ್ದೆಗೆ 800/- ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಅರ್ಜಿ ಶುಲ್ಕ ಪಾವತಿ ವಿಧಾನ
Payment using Net Banking, Credit Card, Debit Card ಮತ್ತು UPI ಮುಖಾಂತರ ಅರ್ಜಿ ಶುಲ್ಕ ಮತ್ತು Payment Gateway ಶುಲ್ಕವನ್ನು ದಿನಾಂಕ 10-09-2025 ರೊಳಗೆ ಪಾವತಿಸಬಹುದು. ಇದನ್ನು ಹೊರತುಪಡಿಸಿ ಡಿ.ಡಿ, ಪೋಸ್ಟಲ್ ಆರ್ಡರ್ ಮತ್ತು ಮನಿ ಆರ್ಡರ್’ಗಳನ್ನು ಸ್ವೀಕರಿಸಲಾಗುವುದಿಲ್ಲ.
ಸೂಚನೆ : ಅನ್ವಯಿಸುವ ಸಂಸ್ಕರಣಾ ಶುಲ್ಕ (Processing Charges) ಹೆಚ್ಚುವರಿಯಾಗಿ ಪಾವತಿಸಬೇಕು.
ಲಿಖಿತ ಪರೀಕ್ಷೆ ಮತ್ತು ಕರೆ ಪತ್ರಗಳು
ಲಿಖಿತ ಪರೀಕ್ಷೆಗೆ ಹಾಜರಾಗಲು ಬ್ಯಾಂಕು ತೀರ್ಮಾನಿಸಿದ ಮಾನದಂಡದ ಅನುಗುಣವಾಗಿ ಅರ್ಹ ಅಭ್ಯರ್ಥಿಗಳಿಗೆ ಕರೆ ಪರೀಕ್ಷೆ ಪತ್ರಗಳನ್ನು ಕಳುಹಿಸಲಾಗುವುದು. ಕಿರಿಯ ಸಹಾಯಕರುಗಳ ಹುದ್ದೆಯ ಅಭ್ಯರ್ಥಿಗಳು ಕನ್ನಡ ಭಾಷೆ, ಸಾಮಾನ್ಯ ಆಂಗ್ಲ ಭಾಷೆ, ಸಾಮಾನ್ಯ ಜ್ಞಾನ, ಸಹಕಾರಿ ವಿಷಯ, ಭಾರತ ಸಂವಿಧಾನ, ಸಮಾಜದ ಯುಕ್ತವಾದ ಚಟುವಟಿಕೆಗಳು ಮತ್ತು ವಸ್ತುನಿಷ್ಟ ವಿಷಯಗಳಿಗೆ ಸಂಬಂಧಪಟ್ಟ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
ಅಟೆಂಡರ್ ಹುದ್ದೆಯ ಅಭ್ಯರ್ಥಿಗಳು ಕನ್ನಡ ಭಾಷೆ ಓದಲು / ಬರೆಯುವುದಕ್ಕೆ /ಸಾಮಾನ್ಯ ಜ್ಞಾನ / ಇತ್ಯಾದಿಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ಇರಲಿದೆ. ಪರೀಕ್ಷೆಯಲ್ಲಿನ ಅವರ ಸಾಧನೆಯ ಆಧಾರದ ಮೇಲೆ ಬ್ಯಾಂಕಿನ ಮಾನದಂಡದಂತೆ ಸಂದರ್ಶನ ಪತ್ರವನ್ನು ಕಳುಹಿಸಲಾಗುವುದು. ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿ ಅಭ್ಯರ್ಥಿಗಳ ಸಾಧನೆ ಆಧರಿಸಿ ಆಯ್ಕೆ ಮಾಡಲಾಗುವುದು.
ವೇತನ ಶ್ರೇಣಿ
ಕಿರಿಯ ಸಹಾಯಕರು ಹುದ್ದೆಗೆ 61,300 ರೂ. ದಿಂದ 1,12,900 ರೂ. ಹಾಗೂ ಅಟೆಂಡರ್ ಹುದ್ದೆಗೆ 44,425 ರೂ. ದಿಂದ 83,700 ರೂ. ಮಾಸಿಕ ವೇತನ ಶ್ರೇಣಿ ಇರಲಿದೆ.
ಇದರ ಜೊತೆಗೆ ಆಡಳಿತ ಮಂಡಳಿಯ ತೀರ್ಮಾನದ ರೀತ್ಯಾ ತುಟ್ಟಿ ಭತ್ಯೆ, ನಗರ ಪರಿಹಾರ ಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ಇತರೆ ಭತ್ಯೆಗಳನ್ನು ನೀಡಲಾಗುವುದು.
ಸಾಮಾನ್ಯ ಸೂಚನೆಗಳು
ಈಗಾಗಲೇ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳು ಸಂದರ್ಶನದ ಸಂದರ್ಭದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಯಿಂದ (Employer) ನಿರಪೇಕ್ಷಣಾ ಪತ್ರ ಸಲ್ಲಿಸಬೇಕು. ಅಭ್ಯರ್ಥಿಗಳು ಪರೀಕ್ಷೆಗೆ ಮತ್ತು ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಹಾಜರಾಗಬೇಕಾಗುತ್ತದೆ.
ಅಭ್ಯರ್ಥಿಗಳ ಅರ್ಹತೆ, ಲಿಖಿತ ಪರೀಕ್ಷೆ, ಸಂದರ್ಶನ ಅಥವಾ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಆಡಳಿತ ಮಂಡಳಿಯ ತೀರ್ಮಾನವೇ ಅಂತಿಮ. ಈ ಕುರಿತು ಪತ್ರ ವ್ಯವಹಾರವನ್ನು ಮಾನ್ಯ ಮಾಡುವುದಿಲ್ಲ.
ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಬ್ಯಾಂಕಿನ ಹಾಲಿ ಇರುವ ಅಥವಾ ಮುಂದೆ ಪ್ರಾರಂಭಿಸುವ ಕರ್ನಾಟಕ ರಾಜ್ಯದ ಯಾವುದೇ ಶಾಖೆ/ಕಛೇರಿಯಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ: 20-08-2025
- ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 10-09-2025
- ಶುಲ್ಕವನ್ನು ಪಾವತಿ ಕೊನೆಯ ದಿನಾಂಕ: 10-09-2025
ಅಧಿಸೂಚನೆ: Download
ಅರ್ಜಿ ಲಿಂಕ್: bccbl.co.in
PM Surya Ghar Free Solar Power- ಮನೆ ಮನೆಗೆ ಉಚಿತ ಸೋಲಾರ್ ವಿದ್ಯುತ್ | ಈಗಲೇ ಅರ್ಜಿ ಸಲ್ಲಿಸಿ…