E-Swathu- ಇನ್ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೂ ಇ-ಸ್ವತ್ತು ವಿತರಣೆ | ಸರ್ಕಾರದ ಹೊಸ ಆದೇಶ

ಸರ್ಕಾರದ ಹೊಸ ಆದೇಶದ ಪ್ರಕಾರ ಇನ್ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೆ ಇ-ಸ್ವತ್ತು (E-Swathu) ದಾಖಲೆ ಸಿಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಇನ್ನು ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಇ-ಸ್ವತ್ತು ಪ್ರಕಾರ ಡಿಜಿಟಲ್ ದಾಖಲೆ (E-Kahatha) ನೀಡಲಾಗುತ್ತದೆ. ಆ ಮೂಲಕ ನಾನಾ ಬಗೆಯ ವಿವಾದ, ದಾಖಲೆ ಕೊರತೆ ಸಮಸ್ಯೆಗಳಿಗೆ ತೆರೆ ಬೀಳಲಿದೆ.
ಹೌದು, ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಎಲ್ಲ ಬಡಾವಣೆ, ಮನೆ, ಬಡಾವಣೆಯ ಸೈಟ್ ಹಾಗೂ ನಿರ್ಮಾಣಗೊಂಡ ಕಟ್ಟಡಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ ಪಿಐಡಿ ನಂಬರ್ ಜೊತೆಗೆ ತೆರಿಗೆ ಪಾವತಿ ಪದ್ದತಿಯನ್ನೂ ಸ್ಥಾಪಿಸಲಾಗುತ್ತದೆ.
ಈವರೆಗೆ ಪಂಚತಂತ್ರ 2.0 ತಂತ್ರಾಂಶದಲ್ಲಿ ಸುಮಾರು 1.40 ಲಕ್ಷ ಆಸ್ತಿ ನೋಂದಾಯಿತ ಆಗಿದ್ದು, 44 ಲಕ್ಷಕ್ಕೂ ಹೆಚ್ಚು ಆಸ್ತಿಗೆ ಇ-ಸ್ವತ್ತು ನೀಡಲಾಗಿದೆ. ಉಳಿದ 96 ಲಕ್ಷ ಆಸ್ತಿಗಳಿಗೆ ಇ-ಖಾತಾ ವಿತರಣೆಗೆ ತಯಾರಿ ಪೂರ್ಣಗೊಂಡಿದೆ.
E-Swathu Digital Records- ಇ-ಸ್ವತ್ತು ಯೋಜನೆ: ಗ್ರಾಮೀಣ ಆಸ್ತಿಗೆ ಡಿಜಿಟಲ್ ದಾಖಲೆ ಪಡೆಯಲು ಅರ್ಜಿ ಆಹ್ವಾನ
ಯಾವೆಲ್ಲಾ ಆಸ್ತಿಗಳಿಗೆ ಇ-ಸ್ವತ್ತು ಸಿಗುತ್ತದೆ?
- ಅಕ್ರಮ ಲೇಔಟ್‌ಗಳಲ್ಲಿ ರಿಜಿಸ್ಟ್ರೇಶನ್ ಮಾಡಿರುವ ಆಸ್ತಿಗಳು
- ಭೂ ಪರಿವರ್ತಿತ ಕೃಷಿ ಭೂಮಿಯಲ್ಲಿ ನಿರ್ಮಿತ ಬಡಾವಣೆಗಳು
- ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡ ಆಸ್ತಿಗಳು
- ಕಂದಾಯ ಭೂಮಿಯಲ್ಲಿ ನಿರ್ಮಾಣಗೊಂಡ ಮನೆ, ಕಟ್ಟಡಗಳು
- ಪಹಣಿ (RTC) ದಾಖಲೆ ಹೊಂದಿರುವ ಭೂಮಿಗಳು
- ಮೂಲ ಸೌಕರ್ಯಗಳು ಹೊಂದಿರುವ ಬಡಾವಣೆಗಳು

ಇ-ಸ್ವತ್ತು ಪಡೆದುಕೊಳ್ಳಲು ಬೇಕಾದ ದಾಖಲೆಗಳು
- ನೋಂದಾಯಿತ ಪ್ರಮಾಣ ಪತ್ರ (ಸೇಲ್ ಡೀಡ್)
- ತೆರಿಗೆ ಪಾವತಿ ರಸೀದಿ (2025ರ ಏಪ್ರಿಲ್ 7ರ ಒಳಗಾಗಿ)
- ವಿದ್ಯುತ್ ಬಿಲ್ (2025ರ ಏಪ್ರಿಲ್ 7ರ ಒಳಗಾಗಿ)
- ಪಹಣಿ (RTC)
- ಭೂ ಪರಿವರ್ತನೆ ಆದೇಶ (ಐಚ್ಛಿಕ)
- ಬಡಾವಣೆ ವಿನ್ಯಾಸ ಅನುಮೋದನೆ ಆದೇಶ
- ನಿವೇಶನ ಬಿಡುಗಡೆ ಪತ್ರ
ಮೇಲ್ಕಾಣಿಸಿದ ದಾಖಲೆಗಳಲ್ಲಿ ಒಂದಾದರೂ ಹೊಂದಿದ್ದರೆ, ಅರ್ಜಿ ಸಲ್ಲಿಸಿ 11ಬಿ ಇ-ಖಾತಾ ಪಡೆಯಬಹುದು.
New Ration Card Applications- ಹೊಸ ರೇಷನ್ ಕಾರ್ಡ್ ಅರ್ಜಿ | ಜಿಲ್ಲಾವಾರು ಅರ್ಜಿದಾರರ ಮಾಹಿತಿ ಇಲ್ಲಿದೆ…
ಇ-ಸ್ವತ್ತು (11ಬಿ) ಪಡೆಯಲು ಅರ್ಜಿ ಸಲ್ಲಿಕೆ ಹೇಗೆ?
ಆಸ್ತಿ ಮಾಲೀಕರು ತಮ್ಮ ಪೂರಕ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅರ್ಜಿಯನ್ನು ಪರಿಶೀಲಿಸಿ ಡಿಜಿಟಲ್ ಸಹಿ ಸಮೇತ ಇ-ಖಾತಾ ತಯಾರಿಸುತ್ತಾರೆ.
ನಂತರ ಪಂಚಾಯಿತಿ ಅಧ್ಯಕ್ಷರ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. 3 ದಿನಗಳೊಳಗೆ ಅನುಮೋದನೆ ನೀಡಬೇಕಾಗಿದ್ದು, ವಿಳಂಬವಾದರೆ ಕಾರ್ಯನಿರ್ವಾಹಕ ಅಧಿಕಾರಿ (EO) ಅನುಮೋದನೆ ನೀಡಲು ನಿಯಮವಿದೆ.
ಸರ್ಕಾರದ ಷರತ್ತುಗಳೇನು?
ಸರ್ಕಾರ ಇ-ಸ್ವತ್ತು ವಿತರಣೆ ವೇಳೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಆ ಪ್ರಕಾರ ಸರ್ಕಾರಿ, ಅರಣ್ಯ, ಶಾಸನ ಬದ್ಧ ಸಂಸ್ಥೆಗಳ ಭೂಮಿಗೆ ಇ-ಖಾತಾ ಸಿಗುವುದಿಲ್ಲ. ಸಾರ್ವಜನಿಕ ಉದ್ದೇಶದ ಸಿಎ ಸೈಟ್‌ಗಳು ಹಾಗೂ ಉದ್ಯಾನವನ ಸ್ಥಳಗಳನ್ನು ಪಂಚಾಯಿತಿಗೆ ಉಚಿತವಾಗಿ ವರ್ಗಾವಣೆ ಮಾಡಬೇಕು.
ಲೇಔಟ್ ಪ್ಲಾನ್ ಅನುಮೋದನೆ ಇಲ್ಲದಿದ್ದರೂ ಮೂಲಭೂತ ಸೌಕರ್ಯ ಇದ್ದರೆ ಮಾತ್ರ 11ಬಿ ಸಿಗುತ್ತದೆ. ಕೇವಲ ಹುಂಡೆ ಖಾತಾ ಆಧಾರದ ಮೇಲೆ ಮಾರಾಟವಾದ ಆಸ್ತಿಗಳಿಗೂ ಸರ್ಕಾರ ಅವಕಾಶ ನೀಡಿದೆ.
ನಿಮಗೆ ಈ ಯೋಜನೆಯ ಬಗ್ಗೆ ಯಾವುದೇ ಅನುಮಾನ, ದಾಖಲೆ ಸಮಸ್ಯೆ ಅಥವಾ ಅರ್ಜಿ ಸಹಾಯ ಬೇಕಾದರೆ, ನಿಮ್ಮ ತಾಲೂಕು ಪಂಚಾಯಿತಿ ಅಥವಾ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ.