
ಕೇಂದ್ರ ಗೃಹ ಸಚಿವಾಲಯದ ಇಂಟಲಿಜೆನ್ಸ್ ಬ್ಯೂರೋದಲ್ಲಿ 3,717 ಗುಪ್ತಚರ ಅಧಿಕಾರಿ ಹುದ್ದೆಗಳಿಗೆ (Intelligence Bureau ACIO Recruitment) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಪೊಲೀಸ್ ಹಾಗೂ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಬಯಸುವ ಆಸೆ ಇರುವ ಅಭ್ಯರ್ಥಿಗಳಿಗೆ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಇಂಟಲಿಜೆನ್ಸ್ ಬ್ಯೂರೋ (IB) ಮಹತ್ವದ ಅವಕಾಶ ಒದಗಿಸಿದೆ.
ಸಹಾಯಕ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್ ಗ್ರೇಡ್-II/ಎಕ್ಸಿಕ್ಯೂಟಿವ್ (ACIO-II/Executive) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಗೊಂಡಿದೆ. Group-C (Non-Gazetted, Non-Ministerial) ವರ್ಗಕ್ಕೆ ಸೇರಿದ ಒಟ್ಟು 3,717 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ ಮತ್ತು ವಯೋಮಿತಿ
ಯಾವುದೇ ವಿಭಾಗದಲ್ಲಿ ಕನಿಷ್ಠ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ಜ್ಞಾನ ಹೊಂದಿರುವುದು ಅಪೇಕ್ಷಿತವಾಗಿದ್ದು; ಈ ಕೆಲಸದ ನಿರ್ವಹಣೆಯಲ್ಲಿ ತಾಂತ್ರಿಕ ತಜ್ಞತೆ ಮುಖ್ಯವಾಗಿರುತ್ತದೆ.
10-08-2025ಕ್ಕೆ ಅನ್ವಯವಾಗುವಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 18 ರಿಂದ 27 ವರ್ಷಗಳ ಒಳಗೆ ಇರಬೇಕು. SC/ST 5 ವರ್ಷ, OBC 3 ವರ್ಷ ಹಾಗೂ ಕ್ರೀಡಾಪಟುಗಳು ಮತ್ತು ಮಾಜಿ ಸೈನಿಕರಿಗೆ ಸರ್ಕಾರದ ನಿಯಮಗಳಂತೆ ವಿನಾಯಿತಿ ಇದೆ.

ವೇತನ ಶ್ರೇಣಿ (Pay Scale)
7ನೇ ವೇತನ ಆಯೋಗದ ಪ್ರಕಾರ ನೇಮಕವಾದ ಅಭ್ಯರ್ಥಿಗಳಿಗೆ ₹44,900 ರಿಂದ ₹1,42,400/- ವರೆಗೆ ಮಾಸಿಕ ವೇತನ ಸಿಗಲಿದೆ. ಜೊತೆಗೆ ಕೇಂದ್ರ ಸರ್ಕಾರದ ಡಿಎ, ಎಚ್‌ಆರ್‌ಎ, ಟಿಎ ಮುಂತಾದ ಎಲ್ಲಾ ಭತ್ಯೆಗಳು ಅನ್ವಯವಾಗುತ್ತವೆ.
UGCET 2025 Option Entry- ಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ಆಪ್ಷನ್ ಎಂಟ್ರಿ ಅವಧಿ ವಿಸ್ತರಣೆ | ಕೆಇಎ ಪ್ರಕಟಣೆ
ಪರೀಕ್ಷಾ ಕೇಂದ್ರಗಳು (Exam Centers)
ಭಾರತದ 148 ನಗರಗಳಲ್ಲಿ ಪರೀಕ್ಷೆ ನಿಗದಿಯಾಗಿದೆ. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಹಾಗೂ ಉಡುಪಿ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವೇಳೆಯಲ್ಲಿಯೇ ತಮ್ಮ ಆದ್ಯತೆಯ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.
ಅರ್ಜಿ ಶುಲ್ಕ (Application Fee)
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕವಾಗಿ ₹100/- ನಿಗದಿಪಡಿಸಲಾಗಿದೆ. ನೇಮಕಾತಿ ಪ್ರಕ್ರಿಯೆ ಶುಲ್ಕ ₹450/- ಆಗಿದ್ದು; ಒಟ್ಟು ₹550/- ಅರ್ಜಿ ಶುಲ್ಕವನ್ನು ಪಾವತಿಸಬೇಕು. ಎಸ್‌ಸಿ/ಎಸ್‌ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕವಿರುವುದಿಲ್ಲ.
ಅರ್ಜಿ ಸಲ್ಲಿಕೆ ವಿಧಾನ
ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಾಗಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಲಿಂಕ್ ಲಭ್ಯವಿರುತ್ತದೆ. ಪಾಸ್‌ಪೋರ್ಟ್ ಫೋಟೋ, ಸಹಿ, ಗುರುತಿನ ಚೀಟಿ (ಆಧಾರ್/ಪಾನ್/ವೋಟರ್ ಐಡಿ), ಪದವಿ ಪ್ರಮಾಣ ಪತ್ರ ಹಾಗೂ ಅರ್ಹತೆಗೆ ಅನುಗುಣವಾಗಿ ಜಾತಿ/ಇತರ ಪ್ರಮಾಣಪತ್ರ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.
ಪ್ರಮುಖ ದಿನಾಂಕಗಳು (Important Dates)
- ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ: 10-08-2025
- ಶುಲ್ಕ ಪಾವತಿ ಕೊನೆ ದಿನಾಂಕ: 12-08-2025
ಕೆಲವು ಮುಖ್ಯ ಸೂಚನೆಗಳು
ಈ ಹುದ್ದೆಗಳು ಅಖಿಲ ಭಾರತ ವರ್ಗಾವಣೆಗೆ ಒಳಪಟ್ಟಿವೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗಿರಬೇಕು. ಅಂಗವಿಕಲ ಅಭ್ಯರ್ಥಿಗಳಿಗೆ ಅವಕಾಶವಿಲ್ಲ.
ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ಅಗತ್ಯವಿದ್ದರೆ ಹೆಚ್ಚು ಅಥವಾ ಕಡಿಮೆಯಾಗಬಹುದು. ಅರ್ಜಿ ಸಲ್ಲಿಸುವ ವೇಳೆಯಷ್ಟರಲ್ಲೇ ಎಲ್ಲಾ ಪ್ರಮಾಣಪತ್ರಗಳು ಮಾನ್ಯವಾಗಿರಬೇಕು.
ಅಧಿಸೂಚನೆ : Download