Railway Technician Jobs- ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾದವರಿಗೆ ಬೆಂಗಳೂರು ರೈಲ್ವೆ ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

WhatsApp Group Join Now
Telegram Group Join Now

ಬೆಂಗಳೂರು ರೈಲ್ವೇ ವಿಭಾಗದ ವಿವಿಧ ಟೆಕ್ನಿಷಿಯನ್ಸ್ ಹುದ್ದೆಗಳ (Railway Technician Jobs) ಭರ್ತಿಗೆ ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2025ರ ಎರಡನೇ ಕೇಂದ್ರಿಕೃತ ಉದ್ಯೋಗ ಅಧಿಸೂಚನೆಯನ್ನು ಜಾರಿ ಮಾಡಿದೆ. ನಿನ್ನೆ ಜೂನ್ 28ರಂದು ಪ್ರಕಟವಾದ ಈ ಅಧಿಸೂಚನೆಯ ಮೂಲಕ ಒಟ್ಟು 6,238 ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಐಟಿಐ ಹಾಗೂ ತಾಂತ್ರಿಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಹುದ್ದೆಗಳ ಒಟ್ಟು ವಿವರ
  • ಟೆಕ್ನಿಷಿಯನ್ ಗ್ರೇಡ್-I: 183 ಹುದ್ದೆಗಳು
  • ಟೆಕ್ನಿಷಿಯನ್ ಗ್ರೇಡ್-III: 6,055 ಹುದ್ದೆಗಳು
  • ಒಟ್ಟು ಹುದ್ದೆಗಳು: 6,238 ಹುದ್ದೆಗಳು

ಟೆಕ್ನಿಷಿಯನ್ ಗ್ರೇಡ್-I ಪದವೀಧರ ಅಥವಾ ಡಿಪ್ಲೊಮಾ ಅರ್ಹತೆಯವರಿಗೆ ಸೂಕ್ತವಾಗಿದ್ದು, ಗ್ರೇಡ್-III SSLC ಮತ್ತು ಐಟಿಐ ಪಾಸಾದವರಿಗೆ ಮುಕ್ತ ಅವಕಾಶವನ್ನು ಒದಗಿಸುತ್ತದೆ.

Karnataka PM-Kisan- 7.19 ಲಕ್ಷ ರೈತರಿಗೆ ಪಿಎಂ ಕಿಸಾನ್ ಹಣ ಬಂದ್ | ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯಾ? ತಕ್ಷಣ ಚೆಕ್ ಮಾಡಿ…

ಬೆಂಗಳೂರು RRB ವ್ಯಾಪ್ತಿಯಲ್ಲಿ ಹುದ್ದೆಗಳ ವಿವರ

ಈ ನೇಮಕಾತಿಯಲ್ಲಿ ಬೆಂಗಳೂರು RRBಗೆ ವಿಶೇಷ ಒತ್ತು ನೀಡಲಾಗಿದ್ದು, ಇಲ್ಲಿ ಒಟ್ಟು 140 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಟೆಕ್ನಿಷಿಯನ್ ಗ್ರೇಡ್-I / ಸಿಗ್ನಲ್ 09 ಹುದ್ದೆಗಳು ಹಾಗೂ ಟೆಕ್ನಿಷಿಯನ್ ಗ್ರೇಡ್-III 131 ಸೇರಿ ಒಟ್ಟು 140 ಹುದ್ದೆಗಳ ನೇಮಕಾತಿ ನಡೆಯಲಿದೆ. ವಿಭಾಗವಾರು ಹುದ್ದೆಗಳ ಪಟ್ಟಿ ಈ ಕೆಳಗಿನಂತಿದೆ:

  • ಟ್ರ‍್ಯಾಕ್ ಮಷಿನ್
  • ಬ್ಲ್ಯಾಕ್‌ಸ್ಮಿತ್
  • ಬ್ರಿಜ್
  • ಕ್ಯಾರಿಯೇಜ್ ಮತ್ತು ವ್ಯಾಗನ್
  • ಡೀಸೆಲ್ (ಎಲೆಕ್ಟಿಕಲ್)
  • ಡೀಸೆಲ್ (ಮೆಕಾನಿಕಲ್)
  • ಎಲೆಕ್ಟಿಕಲ್ (TRS/TS)
  • EMU ವಿಭಾಗ
  • ಫಿಟ್ಟರ್
  • ರೆಫ್ರಿಜರೇಷನ್ ಮತ್ತು ಏರ್ ಕಂಡೀಷನಿAಗ್
  • ರಿವೆಟರ್
  • ಎಸ್‌ಎಂಡಿಟಿ
  • ವೆಲ್ಡರ್
  • ಕ್ರೇನ್ ಡ್ರೈವರ್
  • ಕಾರ್ಪೆಂಟರ್
  • ಎಲೆಕ್ಟಿಕಲ್ (ವರ್ಕ್ಶಾಪ್)
  • ಮಷಿನಿಸ್ಟ್
  • ಮಿಲ್ ರೈಟ್
  • ಪೇಂಟರ್
ಬೆಂಗಳೂರು ರೈಲ್ವೇ ವಿಭಾಗದ ವಿವಿಧ ಹುದ್ದೆಗಳ ಭರ್ತಿಗೆ ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
Railway Technician Jobs Bengaluru SSLC, ITI Apply
ವಿದ್ಯಾರ್ಹತೆ ಏನಿರಬೇಕು?

ಟೆಕ್ನಿಷಿಯನ್ ಗ್ರೇಡ್-III ಹುದ್ದೆಗಳಿಗೆ ಕನಿಷ್ಠ SSLC (10ನೇ ತರಗತಿ) ಪಾಸಾಗಿರಬೇಕು. ಸಂಬಂಧಿತ ಟ್ರೇಡ್‌ನಲ್ಲಿ ITI ಅರ್ಹತೆ ಹೊಂದಿರಬೇಕು.

ಟೆಕ್ನಿಷಿಯನ್ ಗ್ರೇಡ್-I ಹುದ್ದೆಗಳಿಗೆ ಕನಿಷ್ಠ B.Sc. (ಭೌತಶಾಸ್ತ್ರ/ಇಲೆಕ್ಟ್ರಾನಿಕ್ಸ್) ಅಥವಾ ಡಿಪ್ಲೊಮಾ/ಅಥವಾ ಇಂಜಿನಿಯರಿಂಗ್ ಪದವೀಧರರಾಗಿರಬೇಕು.

ಅಧಿಸೂಚನೆ ಪ್ರಕಾರ, ಅಭ್ಯರ್ಥಿಯು ಹೆಚ್ಚುವರಿ ವಿದ್ಯಾರ್ಹತೆಯನ್ನು ಹೊಂದಿದ್ದರೂ ನಿಗದಿತ ಪ್ರಾಥಮಿಕ ವಿದ್ಯಾರ್ಹತೆ ಇರಲೇಬೇಕು. ಉದಾಹರಣೆಗೆ, SSLC ಇಲ್ಲದ B.Sc. ಪದವಿದಾರರು ಗ್ರೇಡ್-III ಗೆ ಅರ್ಜಿ ಹಾಕಲು ಅನುಮತಿ ಇಲ್ಲ.

BDA Open Auction 2025- ಕಡಿಮೆ ಬೆಲೆಗೆ ಬಿಡಿಎ ಸೈಟ್ ಮಾರಾಟ | ಆರಂಭಿಕ ಬೆಲೆ ಕೇವಲ ₹5.58 ಲಕ್ಷ ಮಾತ್ರ | ಸಂಪೂರ್ಣ ಮಾಹಿತಿ ಇಲ್ಲಿದೆ…

ವಯೋಮಿತಿ ವಿವರ

ಟೆಕ್ನಿಷಿಯನ್ ಗ್ರೇಡ್-I ಹುದ್ದೆಗಳಿಗೆ 2025ರ ಜುಲೈ 1ಕ್ಕೆ ಅನ್ವಯವಾಗುವಂತೆ 18 ರಿಂದ 33 ವರ್ಷ ಹಾಗೂ ಟೆಕ್ನಿಷಿಯನ್ ಗ್ರೇಡ್-III ಹುದ್ದೆಗಳಿಗೆ 18 ರಿಂದ 30 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಮೀಸಲಾತಿ ವರ್ಗಗಳಿಗೆ ಕೇಂದ್ರ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯವಾಗುತ್ತದೆ.

ಅರ್ಜಿ ಶುಲ್ಕ ವಿವರ

ಎಸ್‌ಸಿ/ಎಸ್‌ಟಿ, ಮಹಿಳೆ, ಮಾಜಿ ಸೈನಿಕರು, ಅಂಗವಿಕಲರು, ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ ₹250 ಹಾಗೂ ಇತರ ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೆ ₹500 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಪರೀಕ್ಷೆಗೆ ಹಾಜರಾದ ಮೇಲೆ ₹250 ಅಥವಾ ₹400 ಮರುಪಾವತಿಯಾಗುತ್ತದೆ. ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದರೆ ಪ್ರತಿ ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೂಲಕ ಆಯ್ಕೆ ಮಾಡಲಾಗುತ್ತದೆ. ಟೆಕ್ನಿಷಿಯನ್ ಗ್ರೇಡ್-I ಮತ್ತು ಗ್ರೇಡ್-III ಹುದ್ದೆಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ನಡೆಯುತ್ತದೆ.

ಅಧಿಸೂಚನೆಯಲ್ಲಿ ಪರೀಕ್ಷೆಯ ಮಾದರಿ, ಪ್ರಶ್ನೆಗಳ ಸಂಖ್ಯೆ, ವಿಷಯಗಳ ವಿವರಗಳನ್ನು ನೀಡಲಾಗಿದೆ. ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಂಡು ಚೆನ್ನಾಗಿ ಅಧ್ಯಯನ ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now

Uchita Holige Yantra- ಉಚಿತ ಹೊಲಿಗೆ ಯಂತ್ರ ಅರ್ಜಿ ಸಲ್ಲಿಕೆಗೆ ಎರಡೇ ದಿನ ಬಾಕಿ | ಕೂಡಲೇ ಅರ್ಜಿ ಹಾಕಿ…

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು
  • ಫಲಿತಾಂಶದ ನಿರೀಕ್ಷೆಯಲ್ಲಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
  • ಒಂದೇ ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದರೆ ಅರ್ಜಿ ತಿರಸ್ಕಾರವಾಗುತ್ತದೆ.
  • ಹೆಸರು, ಪಾಲಕರ ಹೆಸರು, ಜನ್ಮ ದಿನಾಂಕವನ್ನು SSLC ಅಂಕಪಟ್ಟಿಯಲ್ಲಿರುವAತೆ ಸಲ್ಲಿಸಬೇಕು.
  • ಆಯ್ಕೆಗೊಂಡ ಅಭ್ಯರ್ಥಿಗಳನ್ನು ತಮ್ಮ ಅರ್ಜಿ ಸಲ್ಲಿಸಿದ ಖಖಃ ವ್ಯಾಪ್ತಿಯಲ್ಲೇ ನಿಯೋಜಿಸಲಾಗುತ್ತದೆ.
ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಪ್ರಾರಂಭ: 28-06-2025
  • ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 28-07-2025
  • ಶುಲ್ಕ ಪಾವತಿ ಕೊನೆ ದಿನಾಂಕ: 30-07-2025
  • ಅರ್ಜಿ ತಿದ್ದುಪಡಿ ಅವಧಿ: 01-10 ಆಗಸ್ಟ್ 2025
  • ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: 11-15 ಆಗಸ್ಟ್ 2025
ಅರ್ಜಿ ಸಲ್ಲಿಕೆ ವಿಧಾನ

ಅಭ್ಯರ್ಥಿಗಳು RRB ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ನಿಗದಿತ ಸಮಯಕ್ಕೆ ಸಲ್ಲಿಸುವುದು ಅತ್ಯಂತ ಅವಶ್ಯಕ. ಅರ್ಜಿ ಸಲ್ಲಿಸುವಾಗ ಎಲ್ಲ ದಾಖಲೆಗಳು ಸರಿ ಮತ್ತು ಸ್ಪಷ್ಟವಾಗಿರಬೇಕು.

ಈ ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ವಿಧಾನ, ಅರ್ಹತೆ ಮತ್ತು ಪರೀಕ್ಷಾ ಮಾದರಿ ವಿವರಗಳನ್ನು ಸಂಪೂರ್ಣವಾಗಿ ಓದಿ, ಮನನ ಮಾಡಿಕೊಂಡ ನಂತರವೇ ಅರ್ಜಿ ಸಲ್ಲಿಸಿರಿ. ಅರ್ಜಿ ಸಲ್ಲಿಕೆ ವೇಳೆ ಸಣ್ಣ ತಪ್ಪು ಕೂಡ ಅರ್ಜಿ ತಿರಸ್ಕಾರಕ್ಕೆ ಕಾರಣವಾಗಬಹುದು.

ಅಧಿಸೂಚನೆ: Download

Solar Electricity Subsidy- ನಿಮ್ಮ ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
error: Content is protected !!