Free Solar Electricity- ಮನೆಗೆ ಉಚಿತ ಸೋಲಾರ್ ಕರೆಂಟ್ | ಮನೆಗೆ 20 ವರ್ಷ ಉಚಿತ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ..

Spread the love

WhatsApp Group Join Now
Telegram Group Join Now

ಸೂರ್ಯಘರ್ ಯೋಜನೆಯಡಿ ನಿಮ್ಮ ಮನೆಗೆ ಬರೋಬ್ಬರಿ 25 ವರ್ಷಗಳ ಕಾಲ ಉಚಿತ ಸೋಲಾರ್ ವಿದ್ಯುತ್ (Free Solar Electricity) ಪಡೆಯಬಹುದಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಪ್ರಧಾನಮಂತ್ರಿ ಸೂರ್ಯ ಘರ್ (PM Surya Ghar: Muft Bijli Yojana) ಯೋಜನೆಗೆ ದೇಶಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸೂರ್ಯಘರ್ ಮೇಲ್ಛಾವಣಿ ಯೋಜನೆಯು ವಿಶ್ವದ ಅತಿ ದೊಡ್ಡ ಸೌರ ಶಕ್ತಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

10 ಲಕ್ಷ ಮನೆಗಳಿಗೆ ಸೋಲಾರ್ ವಿದ್ಯುತ್

ಸೂರ್ಯ ಘರ್ ಯೋಜನೆ ಅಡಿಯಲ್ಲಿ ಇದುವರೆಗೆ 10 ಲಕ್ಷಕ್ಕೂ ಅಧಿಕ ಮನೆಗಳು ಸೌರಶಕ್ತಿ ಮೂಲಕ ವಿದ್ಯುತ್ ಪಡೆಯುತ್ತಿವೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಭಾರತವು ಸೌರಶಕ್ತಿಯಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ.

ಪ್ರಧಾನಿ ಮೋದಿ ದೂರದೃಷ್ಟಿಯ ನಾಯಕತ್ವದಲ್ಲಿ, ಸೂರ್ಯಘರ್ 10 ಲಕ್ಷ ಮನೆಗಳನ್ನು ಸೌರಶಕ್ತಿಯಿಂದ ಸಬಲೀಕರಣಗೊಳಿಸಿದ್ದು; ಇದೇ ಅಕ್ಟೋಬರ್ ವೇಳೆಗೆ 20 ಲಕ್ಷ ಮನೆಗಳನ್ನು ತಲುಪುವ ಗುರಿ ಇದೆ ಎಂದು ನವೀಕರಿಸಬಹುದಾದ ಇಂಧನ ಸಚಿವರು ಹೇಳಿದ್ದಾರೆ.

2 Lakh Loan Subsidy- ಸ್ವಯಂ ಉದ್ಯೋಗಕ್ಕೆ ಸರ್ಕಾರದಿಂದ 2 ಲಕ್ಷ ರೂಪಾಯಿ ಸಾಲ ಮತ್ತು ಸಬ್ಸಿಡಿ ಸೌಲಭ್ಯ | ಈಗಲೇ ಅರ್ಜಿ ಸಲ್ಲಿಸಿ…

25 ವರ್ಷ ಉಚಿತ ಸೋಲಾರ್ ವಿದ್ಯುತ್

2024ರ ಫೆಬ್ರವರಿಯಲ್ಲಿ ಜಾರಿಗೆ ತಂದಿರುವ ಈ ಯೋಜನೆಯಡಿ ಮನೆ, ವಾಣಿಜ್ಯ ಕಟ್ಟಡಗಳ ಮೇಲೆ ಸೌರ ವಿದ್ಯುತ್ ಘಟಕ ಸ್ಥಾಪಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಸರ್ಕಾರ ಸಹಾಯಧನ ಒದಗಿಸುತ್ತಿದ್ದು; ಸಬ್ಸಿಡಿ ಬಳಸಿಕೊಂಡು ಸೋಲಾರ್ ಘಟಕ ಸ್ಥಾಪಿಸಿದರೆ ಮನೆಗೆ ವಿದ್ಯುತ್ ಉಪಯೋಗಿಸಿ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಿ ಆದಾಯ ಕೂಡ ಗಳಿಸಬಹುದಾಗಿದೆ.

  • ಸೂರ್ಯಘರ್ ಯೋಜನೆಯು ಪ್ರತಿ ತಿಂಗಳು 300 ಯೂನಿಟ್‌ಗಳ ವರೆಗೆ ಉಚಿತ ವಿದ್ಯುತ್ ಸಿಗಲಿದೆ.
  • 25 ವರ್ಷಗಳ ಸುದೀರ್ಘ ಬಾಳಿಕೆ ಬರುವ ಈ ಸೋಲಾರ್ ಘಟಕಗಳಿಗೆ 5 ವರ್ಷಗಳ ಕಾಲ ಉಚಿತ ನಿರ್ವಹಣೆ ಕೂಡ ಸಿಗಲಿದೆ.
  • 10*10 ಅಳತೆಯಲ್ಲಿ 1 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ಅಳವಡಿಸಿಕೊಂಡರೆ ತಿಂಗಳಿಗೆ 100 ಯೂನಿಟ್ ವಿದ್ಯುತ್ ಉತ್ಪಾದಿಸಬಹುದು.
  • ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡುವ ಮೂಲಕ ಆದಾಯ ಕೂಡ ಗಳಿಸಬಹುದಾಗಿದೆ.
  • ಇದು ಪರಿಸರ ಸ್ನೇಹಿ ವಿದ್ಯುತ್ ವ್ಯವಸ್ಥೆಯಾಗಿದ್ದು; ನಿಸರ್ಗಕ್ಕೆ ಕೊಡುಗೆ ನೀಡದಂತೆಯೂ ಆಗುತ್ತದೆ.

KCET Counselling 2025- ಜೂನ್ 25ರಿಂದ ಸಿಇಟಿ ಕೌನ್ಸಿಲಿಂಗ್ ಆರಂಭ | ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾಹಿತಿ ಇಲ್ಲಿದೆ

ಸೂರ್ಯಘರ್ ಯೋಜನೆಯಡಿ ನಿಮ್ಮ ಮನೆಗೆ ಬರೋಬ್ಬರಿ 25 ವರ್ಷಗಳ ಕಾಲ ಉಚಿತ ಸೋಲಾರ್ ವಿದ್ಯುತ್ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
Free Solar Electricity Surya Ghar Yojana Application
ಘಟಕದ ವೆಚ್ಚ, ಸಬ್ಸಿಡಿ ಮತ್ತು ಉಳಿತಾಯದ ವಿವರ

ಈ ಯೋಜನೆಯಡಿ 1 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕದಿಂದ ಮಾಸಿಕ 100 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಘಟಕ ಅಳವಡಿಕೆಗೆ 60,000 ದಿಂದ 80,000 ರೂ. ವೆಚ್ಚವಾಗುತ್ತದೆ. ಇದಕ್ಕೆ 30,000 ರೂ. ಸಬ್ಸಿಡಿ ಸಿಗಲಿದ್ದು, ವರ್ಷಕ್ಕೆ 9,600 ರೂ. ಉಳಿತಾಯವಾಗಲಿದೆ.

2 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕದಿಂದ ಮಾಸಿಕ 101ರಿಂದ 200 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಘಟಕ ಅಳವಡಿಕೆಗೆ 1,20,000 ದಿಂದ 1,60,000 ರೂ. ವೆಚ್ಚವಾಗುತ್ತದೆ. ಇದಕ್ಕೆ 60,000 ರೂ. ಸಬ್ಸಿಡಿ ಸಿಗಲಿದ್ದು, ವರ್ಷಕ್ಕೆ 21,600 ರೂ. ಉಳಿತಾಯವಾಗಲಿದೆ.

ಇನ್ನು 3 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕದಿಂದ ಮಾಸಿಕ 201ರಿಂದ 300 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಘಟಕ ಅಳವಡಿಕೆಗೆ 1,80,000 ದಿಂದ 2,40,000 ರೂ. ವೆಚ್ಚವಾಗುತ್ತದೆ. ಇದಕ್ಕೆ 60,000 ರೂ. ಸಬ್ಸಿಡಿ ಸಿಗಲಿದ್ದು, ವರ್ಷಕ್ಕೆ 35,000 ರೂ. ಉಳಿತಾಯವಾಗಲಿದೆ.

ಸಾಮಾನ್ಯ ವಾಸದ ಮನೆಗಳಿಗೆ 1ರಿಂದ 3 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ಅಳವಡಿಕೆಗೆ ಅವಕಾಶವಿದ್ದರೆ, ವಸತಿ ಸಮುಚ್ಛಯಗಳು, ಅಪಾರ್ಟ್ಮೆಂಟ್‌ಗಳಿಗೆ 500 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ಅಳವಡಿಸಿಕೊಳ್ಳಲು ಅವಕಾಶವಿದೆ. ಇದಕ್ಕೆ ಪ್ರತಿ ಕಿಲೋ ವ್ಯಾಟ್‌ಗೆ 18,000 ರೂ. ಸಬ್ಸಿಡಿ ದೊರೆಯಲಿದೆ.

Karnataka Swavalambi Sarathi Scheme- ಸ್ವಾವಲಂಬಿ ಸಾರಥಿ ಯೋಜನೆ: ಕಾರು, ಗೂಡ್ಸ್ ವಾಹನ ಖರೀದಿಗೆ ₹3 ಲಕ್ಷ ಸಬ್ಸಿಡಿಗೆ ಅರ್ಜಿ ಆಹ್ವಾನ | ಜೂನ್ 30ರೊಳಗೆ ಅರ್ಜಿ ಸಲ್ಲಿಸಿ…

ಅರ್ಜಿ ಸಲ್ಲಿಸುವುದು ಹೇಗೆ?

ಸೋಲಾರ್ ವಿದ್ಯುತ್ ಸಂಪರ್ಕ ಪಡೆಯಲು ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಮೊದಲಿಗೆ ಸೂರ್ಯಘರ್ consumer.pmsuryaghar.gov.in  ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ ನೋಂದಾಯಿಸಿದ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ವ್ಯಾಪ್ತಿಯ ಎಸ್ಕಾಂ ಪೋರ್ಟಲ್’ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕರೆಗೆ ಬೇಕಾಗುವ ದಾಖಲಾತಿಗಳು ಹೀಗಿವೆ:

  • ಆಧಾರ್ ಕಾರ್ಡ್
  • ಇತ್ತೀಚಿನ ವಿದ್ಯುತ್ ಬಿಲ್
  • ಬ್ಯಾಂಕ್ ಖಾತೆ ವಿವರಗಳು
  • ಮನೆ ಮಾಲೀಕತ್ವದ ದಾಖಲೆ ಅಥವಾ ಬಾಡಿಗೆ ಒಪ್ಪಂದ
  • ಸ್ಥಳೀಯ ಎಲೆಕ್ಟ್ರಿಕ್ ಕನೆಕ್ಷನ್ ನಂಬರ್ (Consumer Number)

ಮೇಲ್ಕಾಣಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ಲಿಂಕ್ ಬಳಸಿಕೊಂಡು ನೋಂದಣಿ ಮಾಡಿಕೊಳ್ಳುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

WhatsApp Group Join Now
Telegram Group Join Now

ಅರ್ಜಿ ಲಿಂಕ್ : Apply ಮಾಡಿ

Gram Panchayat B-Khata- ಅನಧಿಕೃತ ಆಸ್ತಿದಾರರಿಗೆ ಗುಡ್ ನ್ಯೂಸ್ | ಜುಲೈನಿಂದ ಗ್ರಾಮ ಪಂಚಾಯತಿ ಆಸ್ತಿಗಳಿಗೆ ಬಿ-ಖಾತೆ ವಿತರಣೆ


Spread the love
error: Content is protected !!