ಕಡೆಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Result 2025) ಫಲಿತಾಂಶ ಪ್ರಕಟಣೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಕಡೆಗೂ ಬಂದಿದೆ. 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 (SSLC Exam-1) ಫಲಿತಾಂಶವನ್ನು 2025, ಮೇ 2ರ ಮಧ್ಯಾಹ್ನ 12:30ಕ್ಕೆ ಅಧಿಕೃತವಾಗಿ ಪ್ರಕಟಿಸಲಾಗುತ್ತಿದೆ.
ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ (KSEAB) ಅಧ್ಯಕ್ಷ ಡಾ. ಹೆಚ್. ಬಸವರಾಜೇಂದ್ರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದು, ಈ ವೇಳೆ ಶಾಲಾ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.
ಪರೀಕ್ಷೆಯ ಹಿಂದಿನ ವಿವರಗಳು
- ಪರೀಕ್ಷಾ ಅವಧಿ: ಮಾರ್ಚ್ 21ರಿಂದ ಏಪ್ರಿಲ್ 4, 2025ರ ವರೆಗೆ
- ಪ್ರಶ್ನೆಪತ್ರಿಕೆ ಮೌಲ್ಯಮಾಪನ: ಏಪ್ರಿಲ್ ಎರಡನೇ ವಾರದಲ್ಲಿ ಪ್ರಾರಂಭವಾಗಿ ಕಳೆದ ವಾರ ಪೂರ್ಣಗೊಂಡಿದೆ
- ಒಟ್ಟು ವಿದ್ಯಾರ್ಥಿಗಳು: ರಾಜ್ಯದಾದ್ಯಂತ ಸುಮಾರು 8.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು.

ಫಲಿತಾಂಶ ಪ್ರಕಟಣೆ ಪ್ರಮುಖ ಮಾಹಿತಿ
- ಫಲಿತಾಂಶ ಪ್ರಕಟಣೆ ದಿನಾಂಕ: 02-05-2025
- ಸಮಯ: ಬೆಳಗ್ಗೆ 11:30ರ ಸುದ್ದಿಗೋಷ್ಠಿ
- ಫಲಿತಾಂಶ ಲಭ್ಯವಾಗುವ ಸಮಯ: ಮಧ್ಯಾಹ್ನ 12:30 ರಿಂದ
- ಫಲಿತಾಂಶ ಪ್ರಕಟಣೆ ಸ್ಥಳ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಚೇರಿ, ಮಲ್ಲೇಶ್ವರಂ, ಬೆಂಗಳೂರು
- ಫಲಿತಾಂಶ ವೀಕ್ಷಣೆ ಜಾಲತಾಣ: https://karresults.nic.in
ಫಲಿತಾಂಶವನ್ನು ಹೀಗೆ ಚೆಕ್ ಮಾಡಿ
karresults.nic.in ಜಾಲತಾಣಕ್ಕೆ ಭೇಟಿ ನೀಡಿ, ‘SSLC Examination Results 2025’ ಲಿಂಕ್‌ನ್ನು ಕ್ಲಿಕ್ ಮಾಡಿ.
ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ಇತರ ಮಾಹಿತಿ ನಮೂದಿಸಿದರೆ, ಫಲಿತಾಂಶ ಪ್ರದರ್ಶನವಶಗುತ್ತದೆ. ನಂತರ, ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ
ಫಲಿತಾಂಶದೊಂದಿಗೆ ಪ್ರಕಟವಾಗುವ ಅಂಶಗಳು
SSLC ಫಲಿತಾಂಶದ ಜೊತೆಗೆ ಕೆಳಗಿನ ವಿವರಗಳು ಪ್ರಕಟವಾಗಲಿವೆ:
- ರಾಜ್ಯದ ಒಟ್ಟು ಉತ್ತೀರ್ಣ ಶೇಕಡಾವಾರು
- ಬಾಲಕರು ಹಾಗೂ ಬಾಲಕಿಯರ ಶೇಕಡಾ ಫಲಿತಾಂಶ
- ಜಿಲ್ಲಾವಾರು ಫಲಿತಾಂಶದ ವಿಶ್ಲೇಷಣೆ
- ಶೇಕಡಾ 100 ಉತ್ತೀರ್ಣಗೊಂಡ ಶಾಲೆಗಳ ಪಟ್ಟಿ
- ರಾಜ್ಯ ಮಟ್ಟದ ಟಾಪರ್‌ಗಳ ಹೆಸರುಗಳು ಮತ್ತು ಅಂಕಗಳು
- ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರಗಳು
ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಹೆಗಳು
ಫಲಿತಾಂಶವನ್ನು ಪರಿಶೀಲಿಸಲು ಅಧಿಕೃತ ಜಾಲತಾಣಗಳನ್ನಷ್ಟೇ ಉಪಯೋಗಿಸಿ. ಅನಧಿಕೃತ ವೆಬ್‌ಸೈಟ್‌ಗಳು ಅಥವಾ ಫೇಕ್ ಲಿಂಕ್‌ಗಳಿಗೆ ಕ್ಲಿಕ್ ಮಾಡುವುದನ್ನು ತಪ್ಪಿಸಿ.
ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ಸರಿಯಾಗಿ ನಮೂದಿಸಿ, ವೆಬ್‌ಸೈಟ್ ಲೋಡ್ ಆಗುವಲ್ಲಿ ವಿಳಂಬವಾದರೆ ತಾಳ್ಮೆಯಿಂದ ನಿರೀಕ್ಷಿಸಿ. ಫಲಿತಾಂಶದ ಪ್ರತಿಯನ್ನು PDF ಆಗಿ ಉಳಿಸಿ ಅಥವಾ ಪ್ರಿಂಟ್ ತೆಗೆದು ಭದ್ರವಾಗಿ ಇಟ್ಟುಕೊಳ್ಳಿ…
ATM Transaction Fee Hike- ಮೇ 1ರಿಂದ ಬ್ಯಾಂಕ್ ಎಟಿಎಂ ಶುಲ್ಕ ಹೆಚ್ಚಳ: ಆರ್‌ಬಿಐ ಪರಿಷ್ಕೃತ ನಿಯಮ ಜಾರಿ
ಪರೀಕ್ಷೆ ಫಲಿತಾಂಶದ ನಂತರ ಮುಂದಿನ ಹಂತಗಳು
ವಿದ್ಯಾರ್ಥಿಗಳು ತಮ್ಮ 10ನೇ ತರಗತಿಯ ಅಂಕಗಳ ಆಧಾರದ ಮೇಲೆ PU ಕೋರ್ಸ್ ಆಯ್ಕೆ, ಐಟಿಐ, ಪಾಲಿಟೆಕ್ನಿಕ್ ಅಥವಾ ಕೌಶಲ್ಯಾಭಿವೃದ್ಧಿ ತರಬೇತಿಗಳ ಕಡೆಗೆ ಗಮನಹರಿಸಬಹುದು.
ಹೆಚ್ಚು ಅಂಕ ಗಳಿಸಿದವರಿಗೆ ಪ್ರೌಢಶಿಕ್ಷಣ ಸ್ಕಾಲರ್‌ಶಿಪ್‌ಗಳು ಲಭ್ಯವಿರುವ ಸಾಧ್ಯತೆ ಇದೆ. ಪದವಿ ಶಿಕ್ಷಣಕ್ಕೆ ನಿರ್ಧಾರ ಮಾಡುತ್ತಿರುವವರು ತಮ್ಮ ಆಸಕ್ತಿಯ ವಿಭಾಗಗಳಲ್ಲಿ ಮುಂದೆ ಸಾಗಬಹುದು.
ಪರೀಕ್ಷೆ ಫಲಿತಾಂಶವು ನಿಮ್ಮ ಸಾಧನೆಯ ಒಂದು ಹಂತ ಮಾತ್ರವಾಗಿದ್ದು; ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಆಗದಿದ್ದರೆ ವಿಚಲಿತರಾಗುವ ಅಗತ್ಯವಿಲ್ಲ. ಮತ್ತೆ ಪರೀಕ್ಷೆ ಬರೆಯಲು ಮೂರು ಅವಕಾಶಗಳಿರುತ್ತವೆ. ಈ ಪ್ರಯಾಣದ ಮುಂದಿನ ಹಂತಗಳಲ್ಲೂ ನಿಮಗೆ ಯಶಸ್ಸು ಸಿಗಲಿ… ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು!
Arivu Education Loan Scheme- ಸರ್ಕಾರದಿಂದ 5 ಲಕ್ಷ ರೂಪಾಯಿ ವರೆಗೆ ಶಿಕ್ಷಣ ಸಾಲ | ಅರ್ಜಿ ಆಹ್ವಾನ