7th pay pension calculator : ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರಿ ನೌಕರರ (Karnataka Govt Employees) ಪ್ರಮುಖ ಬೇಡಿಕೆಯಾಗಿದ್ದ 7ನೇ ವೇತನ ಆಯೋಗದ (7th Pay Commission) ವರದಿ ಜಾರಿಗೆ ಕಳೆದ ಜುಲೈ 15ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet meeting) ಅನುಮೋದನೆ ನೀಡಲಾಗಿದೆ. ಆರ್ಥಿಕ ಇಲಾಖೆ ಈ ಕುರಿತು ಈಗಾಗಲೇ ಅಧಿಕೃತ ಆದೇಶ ಹೊರಡಿಸಿದ್ದು; ಆ ಪ್ರಕಾರ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಗಳು ಆಗಸ್ಟ್’ನಿಂದಲೇ ಹೆಚ್ಚಳವಾಗಲಿವೆ.
ವೇತನದ ಜೊತೆಗೆ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳ ಪರಿಷ್ಕರಣೆ ಕುರಿತು 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಸರ್ಕಾರವು ಅಂಗೀಕರಿಸಿದ್ದು; ಸರ್ಕಾರಿ ನೌಕರರ ವೇತನ ಅಷ್ಟೇ ಅಲ್ಲದೇ ನೌಕರರ ಪಿಂಚಣಿಯೂ ಹೆಚ್ಚಳವಾಗಲಿದೆ.
ಪರಿಷ್ಕೃತ ಪಿಂಚಣಿ ವಿವರ
ಈಗಿನ ಕನಿಷ್ಠ ಮತ್ತು ಗರಿಷ್ಠ ಪಿಂಚಣಿ ಮೊತ್ತವನ್ನು ಕ್ರಮವಾಗಿ ಮಾಸಿಕ 8,500 ರೂಪಾಯಿ ಮತ್ತು 75,300 ರೂಪಾಯಿಂದ 13,500 ರೂಪಾಯಿ ಮತ್ತು 1,20,600 ರೂಪಾಯಿಗಳಿಗೆ ಪರಿಷ್ಕರಿಸಲಾಗಿದೆ.
ಅದೇ ರೀತಿ ಸಂವಾದಿ ಕುಟುಂಬ ಪಿಂಚಣಿಯ ಕನಿಷ್ಠ ಮತ್ತು ಗರಿಷ್ಠ ಮಿತಿಯನ್ನು ಕ್ರಮವಾಗಿ ಮಾಸಿಕ 8,500 ರೂಪಾಯಿ ಮತ್ತು 45,180 ರೂಪಾಯಿಂದ ಮತ್ತು 13,500 ರೂಪಾಯಿ ಮತ್ತು 80,400 ರೂಪಾಯಿಗಳಿಗೆ ಪರಿಷ್ಕರಿಸಲಾಗಿದೆ.
ಇನ್ನು ಮರಣ ಮತ್ತು ನಿವೃತ್ತಿ ಉಪದಾನದ ಈಗಿನ ಗರಿಷ್ಠ ಮಿತಿ 20 ಲಕ್ಷ ರೂಪಾಯಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದಿನಾಂಕ 01-07-2022ಕ್ಕೆ ಮೊದಲು ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿದ್ದಾಗ ಮೃತರಾದ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ನಿಗದಿಪಡಿಸುವಂತೆ ಆದೇಶದಲ್ಲಿ ಹೇಳಿದೆ.
ವೇತನ, ಪಿಂಚಣಿ ಲೆಕ್ಕಾಚಾರಕ್ಕೆ ಹೇಗೆ?
7ನೇ ವೇತನ ಆಯೋಗ ವರದಿಯ ಶಿಫಾರಸುಗಳ ಅನ್ವಯ ನೌಕರರ ಮನೆ ಬಾಡಿಗೆ, ನಗರ ಪರಿಹಾರ, ವೈದ್ಯಕೀಯ ಭತ್ಯೆ, ನೌಕರರ ಸಾಮೂಹಿಕ ವಿಮಾ ಯೋಜನೆಯಲ್ಲೂ ಪರಿಷ್ಕರಣೆಯ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ.
ಈ ಹಿನ್ನಲೆಯಲ್ಲಿ ಎಲ್ಲಾ ಸರಕಾರಿ ನೌಕರರ ಪರಿಷ್ಕೃತ ವೇತನ, ಭತ್ಯೆಗಳು ಹಾಗೂ ಪಿಂಚಣಿ ಮೊತ್ತವನ್ನು ಲೆಕ್ಕಾಚಾರ ಮಾಡಲು ಪ್ರತ್ಯೇಕ ವೆಬ್‌ಸೈಟ್ ಅಭಿವೃದ್ದಿಪಡಿಸಲಾಗಿದೆ. ಈ ವೆಬ್‌ಸೈಟ್ ಮೂಲಕ ನೌಕರರು ಇದೇ ಆಗಸ್ಟ್ ತಿಂಗಳಿ೦ದ ಹೆಚ್ಚಾಗಲಿರುವ ಪರಿಷ್ಕೃತ ವೇತನ, ಪಿಂಚಣಿ ಮೊತ್ತವನ್ನು ಪರಿಶೀಲಿಸಬಹುದು.
ಪಿಂಚಣಿ ಮೊತ್ತವನ್ನು ಹೀಗೆ Calculator ಮಾಡಿ…
6ನೇ ವೇತನ ಆಯೋಗದಲ್ಲಿದ್ದ ನಿಮ್ಮ ಸಂಬಳ, ಭತ್ಯೆ ಸೌಲಭ್ಯಗಳು ಹಾಗೂ ಇದೀಗ 7ನೇ ವೇತನ ಆಯೋಗದಲ್ಲಿ ಸಿಗಲಿರುವ ಪರಿಷ್ಕೃತ ಸಂಬಳ, ಭತ್ಯೆ ಹಾಗೂ ಕುಟುಂಬ ಪಿಂಚಣಿ ಸೌಲಭ್ಯಗಳ ವಿವರವನ್ನು ಲೇಖನದ ಕೊನೆಯಲ್ಲಿ ನೀಡಿರುವ ಸರ್ಕಾರಿ ವೆಬ್‌ಸೈಟ್ ಲಿಂಕ್ ಬಳಸಿ ಚೆಕ್ ಮಾಡಿಕೊಳ್ಳಬಹುದು.
ನಿಮ್ಮ ಪಿಂಚಣಿ ಲೆಕ್ಕಾಚಾರ ಮಾಡಲು ಕೆಳಗೆ ನೀಡಿರುವ ಲಿಂಕ್ ಒತ್ತಿ. ಆಗ ‘7th pay pension calculator’ ವೆಬ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಮೊದಲಿಗೆ ಕಾಣುವ ‘Present Pension Pay/ ಈಗಿನ ಪಿಂಚಣಿ ವೇತನ’ ಕಾಲಂ ನಲ್ಲಿ ನಿಮಗೆ ಸದ್ಯಕ್ಕೆ (6ನೇ ವೇತನ ಆಯೋಗ) ನಿಗದಿಯಾಗಿರುವ ಪಿಂಚಣಿ ಮೊತ್ತವನ್ನು ನಮೂದಿಸಿ, ಕೆಳಗಿರುವ Submit ಬಟನ್ ಕ್ಲಿಕ್ ಮಾಡಿದರೆ…
ಕೆಳಗಿನ ಕಾಲಂ ನಲ್ಲಿ 7th Pay Details/ 7ನೇ ವೇತನ ಆಯೋಗದ ವರದಿಯಂತೆ
- Current Pension Pay / ಈಗಿನ ಪಿಂಚಣಿ ವೇತನ
- New Pension Pay / ಪರಿಷ್ಕ್ರತ ಪಿಂಚಣಿ ವೇತನ (01-08-2024ರಿಂದ)
- DA / ತುಟ್ಟಿ ಭತ್ಯೆ
- Gross Pension / ಒಟ್ಟು ನಿವೃತ್ತಿ ವೇತನ ಮೊತ್ತದ ಸಂಪೂರ್ಣ ವಿವರ ದೊರೆಯುತ್ತದೆ.
ವೆಬ್‌ಸೈಟ್ ಲಿಂಕ್ : ಇಲ್ಲಿ ಒತ್ತಿ
7ನೇ ವೇತನ ಆಯೋಗ ವರದಿ ಜಾರಿಯ ಅಧಿಕೃತ ಆದೇಶ ಪ್ರತಿ ಹಾಗೂ ಪರಿಷ್ಕೃತ ವೇತನ ಶ್ರೇಣಿ ಪಟ್ಟಿ (ಡೌನ್‌ಲೋಡ್)
What about retired person who have crossed age of 70 years
Excellent