Vidyasiri- ಎಸ್‌ಎಸ್‌ಎಲ್‌ಸಿ ನಂತರದ ವಿದ್ಯಾರ್ಥಿಗಳಿಗೆ 15,000 ರೂ. ಆರ್ಥಿಕ ನೆರವು | ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಈಗಲೇ ಅರ್ಜಿ ಸಲ್ಲಿಸಿ…

Spread the love

ಎಸ್‌ಎಸ್‌ಎಲ್‌ಸಿ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ (Vidyasiri) ಯೋಜನೆಯಡಿ 15,000 ರೂ. ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರವು ‘ವಿದ್ಯಾಸಿರಿ’ ಯೋಜನೆ ಆಯೋಜಿಸಿದ್ದು; 2025-26ನೇ ಸಾಲಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ 15,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ. ವಸತಿ, ಆಹಾರ, ಶುಲ್ಕ ಮರುಪಾವತಿ ಮತ್ತು ಇತರ ಅಗತ್ಯಗಳಿಗಾಗಿ ಈ ನೆರವು ನೀಡಲಾಗುತ್ತದೆ.

ಯಾರೆಲ್ಲ ಅರ್ಹರು?
  • ವಿದ್ಯಾರ್ಥಿಗಳು ಹಿಂದುಳಿದ ವರ್ಗ, ಪ್ರವರ್ಗ-1ರ ಅಲೆಮಾರಿ/ ಅರೆಅಲೆಮಾರಿ ಸಮುದಾಯಗಳಿಗೆ ಸೇರಿರಬೇಕು.
  • PUC, ITI, Diploma, Degree, PG ಇತ್ಯಾದಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
  • ವಾರ್ಷಿಕ ಆದಾಯ ಹಿಂದುಳಿದ ವರ್ಗದವರಿಗೆ ₹2.00 ಲಕ್ಷ, ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ವಾರ್ಷಿಕ ಆದಾಯ ₹2.50 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಸರ್ಕಾರಿ ವಿದ್ಯಾರ್ಥಿ ನಿಲಯ ಅಥವಾ ಖಾಸಗಿ ಪಿಜಿ, ಹಾಸ್ಟೆಲ್‌ನಲ್ಲಿ ವಾಸವಾಗಿರಬೇಕು.
  • ಹಿಂದಿನ ಶೈಕ್ಷಣಿಕ ವರ್ಷವನ್ನು ಯಾವುದೇ ಹಿನ್ನಡೆಯಿಲ್ಲದೆ ಉತ್ತೀರ್ಣರಾಗಿರಬೇಕು.

SBI Junior Associates Recruitment 2025- ಎಸ್‌ಬಿಐ ಬ್ಯಾಂಕ್ 6,589 ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಸರ್ಕಾರಿ ಅವಕಾಶ | ಕನ್ನಡದಲ್ಲೂ ಪರೀಕ್ಷೆಗೆ ಅವಕಾಶ

ವಿದ್ಯಾರ್ಥಿವೇತನದ ವಿವರ

ಪ್ರತಿ ತಿಂಗಳಿಗೆ ₹1,500 ಸಹಾಯಧನದಂತೆ ಒಟ್ಟು 10 ತಿಂಗಳಿಗೆ ₹15,000 ವಿದ್ಯಾರ್ಥಿವೇತನ ಒದಗಿಸಲಾಗುತ್ತದೆ. ಈ ಮೊತ್ತವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ಯಾವೆಲ್ಲ ಸೌಲಭ್ಯಗಳು ಸಿಗಲಿವೆ?

ರಾಜ್ಯ ಸರ್ಕಾರದ ವಿದ್ಯಾಸಿರಿ ವಿದ್ಯಾರ್ಥಿವೇತನ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಈ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತದೆ:

  • ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
  • ಶುಲ್ಕ ಮರುಪಾವತಿ ಯೋಜನೆ
  • ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ
  • ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿವೇತನ

Navodaya PUC Free Admission 2025- ನವೋದಯ ವಿದ್ಯಾಲಯದಲ್ಲಿ ಉಚಿತ ಪಿಯು ಪ್ರವೇಶಕ್ಕೆ ಅರ್ಜಿ ಆಹ್ವಾನ | ಪರೀಕ್ಷೆ ಇಲ್ಲದೇ ನೇರ ಪ್ರವೇಶ

ಅರ್ಜಿ ಸಲ್ಲಿಕೆ ಹೇಗೆ?

ರಾಜ್ಯ ಸರ್ಕಾರದ ssp.postmatric.karnataka.gov.in ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ತಮ್ಮ SATS ID ಅಥವಾ USN/Registration Number ಬಳಸಿ ಲಾಗಿನ್ ಆಗಬೇಕು.

ಹೊಸ ಬಳಕೆದಾರರಾದರೆ ಮೊದಲಿಗೆ New Student Registration ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು
  • ಜಾತಿ ಮತ್ತು ಆದಾಯ ಪ್ರಮಾಣಪತ್ರ (ಆರ್‌ಡಿ ಸಂಖ್ಯೆ ಸೇರಿದಂತೆ)
  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಪೋಷಕರ ಆಧಾರ್ ಕಾರ್ಡ್
  • ಹಿಂದಿನ ವರ್ಷದ ಅಂಕಪಟ್ಟಿ
  • ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ವಿವರ
  • ವಿಳಾಸ ದೃಢೀಕರಣ ಪತ್ರ
  • ವೈದ್ಯಕೀಯ ಪ್ರಮಾಣಪತ್ರ (ಅನ್ವಯಿಸಿದರೆ)
  • ಪಿಯುಸಿ ವಿದ್ಯಾರ್ಥಿಗಳಿಗೆ SATS ಐಡಿ
  • ಇತರೆ ಕೋರ್ಸ್ ವಿದ್ಯಾರ್ಥಿಗಳಿಗೆ ಯುಎಸ್‌ಎನ್/ರಿಜಿಸ್ಟ್ರೇಶನ್ ಸಂಖ್ಯೆ

ವಿದ್ಯಾಸಿರಿ ವಿದ್ಯಾರ್ಥಿವೇತನ ಯೋಜನೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಶಿಕ್ಷಣದಲ್ಲಿ ಮುಂದುವರಿಯಲು ಉನ್ನತ ಬೆಂಬಲವಾಗಿದೆ. ಎಲ್ಲ ಅರ್ಹ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಬೇಕು ಎಂಬುದು ಸರ್ಕಾರದ ಉದ್ದೇಶ. ಆದ್ದರಿಂದ ಈ ವಿಶೇಷ ಸೌಲಭ್ಯವನ್ನು ತಪ್ಪಿಸಿಕೊಳ್ಳದೆ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ…

  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 30, 2025
  • ಅರ್ಜಿ ಲಿಂಕ್: Apply Now

Bhu Suraksha Yojana- ರೈತರೇ ಇನ್ಮುಂದೆ ಜಮೀನಿನ ಎಲ್ಲಾ ದಾಖಲೆಗಳನ್ನು ಮೊಬೈಲ್‌ನಲ್ಲೇ ಪಡೆಯಿರಿ | ಭೂಸುರಕ್ಷಾ ಯೋಜನೆಗೆ ಅಧಿಕೃತ ಚಾಲನೆ


Spread the love
WhatsApp Group Join Now
Telegram Group Join Now
error: Content is protected !!