Urgent BPL card for serious health problems : ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೊಸದಾಗಿ ಬಿಪಿಎಲ್ ಕಾರ್ಡ್ (BPL Card) ಶೀಘ್ರದಲ್ಲಿಯೇ ಸಿಗುತ್ತದೆ. ಸರಕಾರ ಬಿಪಿಎಲ್ ಕುಟುಂಬಕ್ಕೆ ನಿಗದಿಪಡಿಸಿರುವ ಅರ್ಹತೆಯನ್ನು ಹೊಂದಿದ್ದು; ಗಂಭೀರ ಆರೋಗ್ಯ ಸಮಸ್ಯೆಯಿಂದ ನರಳುತ್ತಿರುವವರು ತುರ್ತಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯಬಹುದಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಿಪಿಎಲ್ ಕಾರ್ಡ್ ಅತ್ಯಗತ್ಯವಾಗಿದ್ದು; ಇಂತಹ ಬಡ ರೋಗಿಗಳು ಅನೇಕ ಬಾರಿ ರೇಷನ್ ಕಾರ್ಡ್ ನೀಡುವಂತೆ ಆಗ್ರಹಿಸುತ್ತ ಬಂದಿದ್ದಾರೆ. ಇದರಿಂದಾಗಿ ಇಂಥವರಿಗಾದರೂ ಹೊಸ ಬಿಪಿಎಲ್ ಕಾರ್ಡ್ ಕೊಡಲು ಅನುಮತಿ ನೀಡುವಂತೆ ಆಹಾರ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಇದೀಗ ಗಂಭೀರ ಕಾಯಿಲೆಯಿಂದ ನರಳುತ್ತಿರುವವರಿಗೆ (Serious Health Problems) ತುರ್ತಾಗಿ ಬಿಪಿಎಲ್ ಕಾರ್ಡ್ ನೀಡಲು ಸರ್ಕಾರ ಅನುಮೋದನೆ ನೀಡಿದೆ.
ಸರಕಾರಿ ನೌಕರರ ಸಂಬಳ ಹೆಚ್ಚಳಕ್ಕೆ ಡೇಟ್ ಫಿಕ್ಸ್ | ನೌಕರರ ನಿಯೋಗಕ್ಕೆ ಸಿಎಂ ಭರವಸೆ Karnataka 7th Pay Commission
ಯಾರಿಗೆಲ್ಲ ತುರ್ತು ಬಿಪಿಎಲ್ ಕಾರ್ಡ್ ಸಿಗುತ್ತೆ?
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಉದ್ದೇಶದಿಂದ ಮೂರು ವರ್ಷದ ಹಿಂದೆ ಸಲ್ಲಿಕೆಯಾದ ಅರ್ಜಿಗಳನ್ನು ವಿಶೇಷ ‘ವೈದ್ಯಕೀಯ ಕೇಸ್’ (Medical Case) ಎಂದು ಪರಿಗಣಿಸಿ ವಿಲೇವಾರಿ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಸೂಕ್ತ ದಾಖಲಾತಿಗಳನ್ನು ಸಲ್ಲಿಸಿ ಹೊಸದಾಗಿ ಬಿಪಿಎಲ್ ಕಾರ್ಡ್ ಅನ್ನು ಕೂಡ ಪಡೆಯಲು ಸರಕಾರ ಅನುವು ಮಾಡಿಕೊಟ್ಟಿದೆ.
ಕ್ಯಾನ್ಸರ್, ಕಿಡ್ನಿ, ಹೃದ್ರೋಗ ಸೇರಿ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೊಸ ಬಿಪಿಎಲ್ ಕಾರ್ಡ್ ಶಿಘ್ರದಲ್ಲಿಯೇ ಸಿಗಲಿದೆ. ತುರ್ತು ಚಿಕಿತ್ಸೆಗೆ ಒಳಗಾಗುವವರು, ಗಂಭೀರ ಕಾಯಿಲಿಯಿಂದ ಬಳಲುತ್ತಿರುವವರು ಅರ್ಜಿ ಸಲ್ಲಿಸಬಹುದು. ಜ್ವರ, ತಲೆ ನೋವಿನಂತ ಮಾಮೂಲಿ ಕಾಯಿಲೆಗಳಿರುವವರಿಗೆ ಹೊಸ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶವಿಲ್ಲ.
ಹೇಗೆ ಅರ್ಜಿ ಸಲ್ಲಿಸಬೇಕು?
ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವವರು ತಮ್ಮ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಮನೆ ಬಾಡಿಗೆ ದಾಖಲೆ ಹಾಗೂ ವೈದ್ಯರಿಂದ ಆರೋಗ್ಯ ಸಂಬAಧಿಸಿದ ಪ್ರಮಾಣ ಪತ್ರಗಳೊಂದಿಗೆ ಸ್ಥಳಿಯ ಫುಡ್ ಇನ್ಸ್’ಸ್ಪೆಕ್ಟರ್ ಅವರ ಗಮನಕ್ಕೆ ತರಬೇಕು. ಆಗ ಫುಡ್ ಇನ್ಸ್’ಸ್ಪೆಕ್ಟರ್ ರೋಗಿಯ ಮನೆಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಎಲ್ಲ ದಾಖಲೆಗಳೊಂದಿಗೆ ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸುತ್ತಾರೆ.
ಮುಂದೆ ಖುದ್ದು ಭೇಟಿಯ ಪರಿಶಲನೆಯ ನಂತರ ಅರ್ಜಿದಾರರಿಗೆ ಗಂಭೀರ ಆರೋಗ್ಯ ಸಮಸ್ಯೆ ಇರುವುದು ಖಚಿತವಾದರೆ ಫುಡ್ ಇನ್ಸ್’ಸ್ಪೆಕ್ಟರ್ ಆಹಾರ ಇಲಾಖೆ ಉಪನಿರ್ದೇಶಕರಿಗೆ ಅರ್ಜಿಯನ್ನು ಅನುಮೋದನೆಗೆ ಕಳಿಸುತ್ತಾರೆ. ಅಂತಿಮವಾಗಿ ಉಪನಿರ್ದೇಶಕರು ಆಯುಕ್ತಾಲಯಕ್ಕೆ ಕಳುಹಿಸಿ ಅನುಮತಿ ಪಡೆದ ಬಳಿಕ ಸಂಬ೦ಧಿಸಿದ ಅರ್ಜಿದಾರರಿಗೆ ಕೂಡಲೇ, ಅಂದರೆ ಕೇವಲ 24 ಗಂಟೆಯೊಳಗೆ ಹೊಸ ಬಿಪಿಎಲ್ ಕಾರ್ಡ್ ವಿತರಿಸಲಾಗುತ್ತದೆ.
ಇವರ ಬಿಪಿಎಲ್ ಕಾರ್ಡ್ ರದ್ದು
ವಿಶೇಷವೆಂದರೆ ಈ ಹಿಂದೆ ಬಹಳಷ್ಟು ಜನ ಆರೋಗ್ಯ ಸಮಸ್ಯೆ ತೋರಿಸಿ ನಿಯಮಬಾಹಿರವಾಗಿ ಅರ್ಜಿ ಸಲ್ಲಿಸಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಹೀಗೆ ಸುಳ್ಳು ಆರೋಗ್ಯ ಸಮಸ್ಯೆ ತೋರಿಸಿ ಪಡೆದ ಸಾವಿರಾರು ಬಿಪಿಎಲ್ ಕಾರ್ಡ್’ಗಳನ್ನು ಪತ್ತೆ ಹಚ್ಚಿ ರದ್ದುಪಡಿಸಲು ಕೂಡ ಇಲಾಖೆ ಮುಂದಾಗಿದೆ.
ಗAಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಈಗಾಗಲೇ ಅರ್ಜಿ ಸಲ್ಲಿದ್ದರೆ ಅಂಥವರಿಗೆ ಶೀಘ್ರದಲ್ಲಿಯೇ ಹೊಸ ಬಿಪಿಎಲ್ ಕಾರ್ಡ್ ಸಿಗಲಿದೆ. ಇನ್ನು ಇಂತಹ ಆರೋಗ್ಯ ಸಮಸ್ಯೆಯುಳ್ಳವರು ಹೊಸದಾಗಿ ಅರ್ಜಿ ಸಲ್ಲಿಸಲು ಸರಕಾರ ಕೆಲವು ನಿಯಮಗಳನ್ನು ವಿಧಿಸಿದೆ. ಅದರಂತೆ ಅರ್ಹ ರೋಗಿಗಳು ಅರ್ಜಿ ಸಲ್ಲಿಸಿ ಅತ್ಯಂತ ಅತ್ಯಂತ ಶೀಘ್ರದಲ್ಲಿ ಹೊಸ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಬಹುದು.