Ujjwala Yojana 2.0- ಉಜ್ವಲ ಯೋಜನೆ 2.0: ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

Spread the love

WhatsApp Group Join Now
Telegram Group Join Now

ಮಹಿಳೆಯರಿಗೆ ಕೇಂದ್ರ ಸರ್ಕಾರದ ‘ಉಜ್ವಲ ಯೋಜನೆ 2.0’ (Ujjwala Yojana 2.0) ಅಡಿಯಲ್ಲಿ ಉಚಿತ ಗ್ಯಾಸ್ ಮತ್ತು ಸ್ಟೌವ್ ನೀಡಲಾಗುತ್ತಿದೆ. ಈ ಕುರಿತ ಸಂಪೂರ್ಣ ವಿವರವಾದ ಮಾಹಿತಿ ಇಲ್ಲಿದೆ…

ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಕುಟುಂಬಗಳ ಮಹಿಳೆಯರು ಇಂದಿಗೂ ಮರದ ಒಲೆ, ಕೆರೊಸಿನ್ ಮೊದಲಾದ ಹಳೇ ಕಾಲದ ಇಂಧನವನ್ನು ಬಳಸಿಕೊಂಡು ಅಡುಗೆ ಮಾಡುವ ಸ್ಥಿತಿಯಲ್ಲಿದ್ದಾರೆ.

ಇದರಿಂದ ಹೊಗೆ ಸಮಸ್ಯೆ ಉಂಟಾಗಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (Pradhan Mantri Ujjwala Yojana – PMUY) ಅನ್ನು ಆರಂಭಿಸಿದೆ.

ಇದನ್ನೂ ಓದಿ: Pumpset Akrama Sakrama Yojana- ಪಂಪ್‌ಸೆಟ್ ಅಕ್ರಮ-ಸಕ್ರಮ ಯೋಜನೆ: ರೈತರಿಗೆ ಹಗಲು ಹೊತ್ತಲ್ಲೇ 7 ಗಂಟೆ ಉಚಿತ ವಿದ್ಯುತ್

Free LPG Connection – ಉಚಿತ ಎಲ್‌ಪಿಜಿ ಗ್ಯಾಸ್ ಸಂಪರ್ಕ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (PMUY) ಮುಂದುವರಿದ ಹಂತವಾಗಿರುವ ಉಜ್ವಲ ಯೋಜನೆ 2.0 ಅಡಿಯಲ್ಲಿ, ಅರ್ಹ ಬಡ ಕುಟುಂಬಗಳ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಗ್ಯಾಸ್ ಸಂಪರ್ಕ, ಗ್ಯಾಸ್ ಸ್ಟೌವ್ ಹಾಗೂ ಮೊದಲ ಸಿಲಿಂಡರ್ ಅನ್ನು ನೀಡಲಾಗುತ್ತಿದೆ.

ಈಗಾಗಲೇ ದೇಶಾದ್ಯಂತ 10 ಕೋಟಿಗೂ ಹೆಚ್ಚು ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದಿವೆ. ಈ ಲೇಖನದಲ್ಲಿ ಉಜ್ವಲ ಯೋಜನೆ 2.0 ಅಡಿಯಲ್ಲಿ ಯಾರು ಅರ್ಜಿ ಸಲ್ಲಿಸಬಹುದು, ಯಾವ ಸೌಲಭ್ಯಗಳು ದೊರೆಯುತ್ತವೆ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಇದನ್ನೂ ಓದಿ: Nabard Recruitment 2026- ಪದವಿಧರರಿಗೆ ನಬಾರ್ಡ್ ಬ್ಯಾಂಕ್ ಡೆವಲಪ್‌ಮೆಂಟ್ ಅಸಿಸ್ಟೆಂಟ್ ಹುದ್ದೆಗಳು | 162 ಹುದ್ದೆಗಳಿಗೆ ಅರ್ಜಿ ಆಹ್ವಾನ

Ujjwala Yojana 2.0 Eligibility – ಉಜ್ವಲ ಯೋಜನೆ 2.0 ಯಾರು ಅರ್ಜಿ ಸಲ್ಲಿಸಬಹುದು?

ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿದಾರರು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕು. ಪ್ರಮುಖವಾಗಿ ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯಾಗಿರಬೇಕು. ಮಹಿಳೆಯ ವಯಸ್ಸು 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ಇರಬೇಕು.

ಅರ್ಜಿದಾರರ ಕುಟುಂಬವು ಬಿಪಿಎಲ್ (BPL) ರೇಷನ್ ಕಾರ್ಡ್ ಹೊಂದಿರಬೇಕು. ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಈಗಾಗಲೇ ಎಲ್‌ಪಿಜಿ ಗ್ಯಾಸ್ ಸಂಪರ್ಕ ಇರಬಾರದು.

ಇದನ್ನೂ ಓದಿ: Mobile Kaladare Enu Madabeku- ಮೊಬೈಲ್ ಕಳುವಾದರೆ ಏನು ಮಾಡಬೇಕು? ಗಾಬರಿಯಾಗದೆ ಕೈಗೊಳ್ಳಬೇಕಾದ ಸರಿಯಾದ ಕ್ರಮಗಳು ಇಲ್ಲಿವೆ…

Ujjwala Yojana 2.0
Ujjwala Yojana 2.0

Priority Beneficiary Categories – ಈ ವರ್ಗದವರಿಗೆ ವಿಶೇಷ ಆದ್ಯತೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ (PMUY) ಮೇಲ್ಕಾಣಿಸಿದ ಅರ್ಹತೆಯುಳ್ಳವರಿಗೆ ಉಚಿತ ಗ್ಯಾಸ್ ಸಂಪರ್ಕ ಸಿಗುತ್ತಿದ್ದು; ಅದರಲ್ಲೂ ಈ ಕೆಳಗಿನ ವರ್ಗದ ಕುಟುಂಬಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ:

  • ಎಸ್‌ಸಿ / ಎಸ್‌ಟಿ ವರ್ಗದವರು
  • ಅಲೆಮಾರಿ ಮತ್ತು ಅರಣ್ಯವಾಸಿ ಸಮುದಾಯಗಳು
  • ಅಂತ್ಯೋದಯ ಅನ್ನ ಯೋಜನೆ (AAY) ಫಲಾನುಭವಿಗಳು
  • ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗದ ಕುಟುಂಬಗಳು

ಇದನ್ನೂ ಓದಿ: RBI Office Attendant Recruitment 2026- ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಆರ್‌ಬಿಐನಲ್ಲಿ ಸರ್ಕಾರಿ ಉದ್ಯೋಗ | 572 ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Ujjwala Yojana 2.0 Benefits – ಉಜ್ವಲ ಯೋಜನೆ 2.0 ಅಡಿಯಲ್ಲಿ ದೊರೆಯುವ ಸೌಲಭ್ಯಗಳು

ಉಜ್ವಲ ಯೋಜನೆ 2.0 ಮಹಿಳೆಯರಿಗೆ ಕೇವಲ ಗ್ಯಾಸ್ ಸಂಪರ್ಕವಷ್ಟೇ ಅಲ್ಲದೆ ಹಲವಾರು ಪ್ರಮುಖ ಸೌಲಭ್ಯಗಳನ್ನು ಒದಗಿಸುತ್ತದೆ. ಆ ಪೈಕಿ ಉಚಿತ ಹೊಸ ಎಲ್‌ಪಿಜಿ ಗ್ಯಾಸ್ ಸಂಪರ್ಕ ನೀಡಲಾಗುತ್ತದೆ.

ಇದರ ಜೊತೆಗೆ ಗ್ಯಾಸ್ ಸ್ಟೌವ್ (ಒಲೆ) ಕೂಡ ಉಚಿತವಾಗಿ ನೀಡಲಾಗುತ್ತದೆ. ವಿಶೇಷವೆಂದರೆ ಸಾಮಾನ್ಯವಾಗಿ ಗ್ಯಾಸ್ ಸಂಪರ್ಕಕ್ಕೆ ಸೆಕ್ಯೂರಿಟಿ ಡೆಪಾಸಿಟ್ ನೀಡಬೇಕಾಗುತ್ತದೆ. ಆದರೆ ಉಜ್ವಲ ಯೋಜನೆಯಡಿ ಯಾವುದೇ ಠೇವಣಿ ಕಟ್ಟುವ ಅಗತ್ಯವಿಲ್ಲ.

LPG Cylinder Subsidy Amount – ಸಿಲಿಂಡರ್ ಸಬ್ಸಿಡಿ ಎಷ್ಟು ಸಿಗುತ್ತದೆ?

WhatsApp Group Join Now
Telegram Group Join Now

ಮೊದ ಗ್ಯಾಸ್ ಸಿಲಿಂಡರ್ ಅನ್ನು ಉಚಿತವಾಗಿ ನೀಡಲಿದ್ದು; ನಂತರ ಪ್ರತಿ ಗ್ಯಾಸ್ ರೀಫಿಲ್ ಮಾಡುವಾಗ ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತದೆ. ಸಬ್ಸಿಡಿ ಹಣ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಪ್ರಸ್ತುತ ಉಜ್ವಲ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ ಮೇಲೆ ₹300 ಹೆಚ್ಚುವರಿ ಸಬ್ಸಿಡಿ ನೀಡಲಾಗುತ್ತಿದೆ.

ಇದನ್ನೂ ಓದಿ: Deepika Scholarship 2026 – ದೀಪಿಕಾ ವಿದ್ಯಾರ್ಥಿವೇತನ 2026: ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿನಿಯರಿಗೆ ವಾರ್ಷಿಕ ₹30,000 ಆರ್ಥಿಕ ನೆರವು | ಅರ್ಜಿ ಸಲ್ಲಿಸುವುದು ಹೇಗೆ?

How to Apply for Ujjwala Yojana 2.0 – ಉಜ್ವಲ ಯೋಜನೆ 2.0ಗೆ ಅರ್ಜಿ ಸಲ್ಲಿಸುವ ವಿಧಾನ

ಅರ್ಹ ಮಹಿಳೆಯರು ಈ ಯೋಜನೆಗೆ ಆಪ್‌ಲೈನ್ ಮತ್ತು ಆನ್‌ಲೈನ್ ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು. ಆಪ್‌ಲೈನ್ ಮೂಲಕವಾದರೆ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ನೇರವಾಗಿ ಸಂಪರ್ಕಿಸಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಇನ್ನು ಮನೆಯಲ್ಲೇ ಕುಳಿತುಕೊಂಡು ಸುಲಭವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ:

ಹಂತ 1: ಮೊದಲು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್‌ಸೈಟ್ pmuy.gov.in ಗೆ ಭೇಟಿ ನೀಡಿ. ಅದರ ಡೈರೆಕ್ಟ್ ಲಿಂಕ್ ಲೇಖನದ ಕೊನೆಯಲ್ಲಿದೆ ಗಮನಿಸಿ.

Ujjwala Yojana 2.0
Ujjwala Yojana 2.0

ಹಂತ 2: ಮುಖಪುಟದಲ್ಲಿ ಕಾಣಿಸುವ Apply for New Ujjwala Connection ಅಥವಾ ಅದಕ್ಕೆ ಸಮಾನವಾದ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಗ್ಯಾಸ್ ಕಂಪನಿಯನ್ನು (Indane / HP / Bharat Gas) ಆಯ್ಕೆ ಮಾಡಿ.

ಇದನ್ನೂ ಓದಿ: Karnataka Yashasvini Yojana 2026- ಯಶಸ್ವಿನಿ ಯೋಜನೆಯಡಿ ಹಸುಗೂಸಿನಿಂದ ವೃದ್ಧರ ವರೆಗೂ 5 ಲಕ್ಷ ರೂ. ಉಚಿತ ಚಿಕಿತ್ಸೆ | ಹೊಸ ಮಾರ್ಗಸೂಚಿ ಬಿಡುಗಡೆ

ಹಂತ 3: ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆ ನಮೂದಿಸಿ OTP ಮೂಲಕ ದೃಢೀಕರಣ ಮಾಡಿ. ಬಳಿಕ ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ವೈಯಕ್ತಿಕ ವಿವರಗಳು, ವಿಳಾಸ ಮಾಹಿತಿ ಮತ್ತು ಕುಟುಂಬದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

ಹಂತ 4: ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ ಬಳಿಕ, ಸಂಬಂಧಪಟ್ಟ ಗ್ಯಾಸ್ ಏಜೆನ್ಸಿಯಿಂದ ಪರಿಶೀಲನೆ ನಡೆಸಲಾಗುತ್ತದೆ.

ಇದನ್ನೂ ಓದಿ: Crop Loss and Crop Insurance Scheme- ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರದ ಹಣ ರೈತರ ಖಾತೆಗೆ ಜಮಾ | ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

Required Documents – ಉಜ್ವಲ ಯೋಜನೆಗೆ ಅಗತ್ಯವಿರುವ ದಾಖಲೆಗಳು

ಆಪ್‌ಲೈನ್ ಅಥವಾ ಆನ್‌ಲೈನ್ ಯಾವುದೇ ವಿಧದಲ್ಲಿ ಅರ್ಜಿ ಸಲ್ಲಿಸಬೇಕಾದರೂ ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ:

  • ಪಾಸ್‌ಪೋರ್ಟ್ ಸೈಜ್ ಫೋಟೋ
  • ಆಧಾರ್ ಕಾರ್ಡ್
  • ಬಿಪಿಎಲ್ ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್‌ಬುಕ್ ಪ್ರತಿಗಳು
  • ರೇಷನ್ ಕಾರ್ಡಿನಲ್ಲಿ ಇರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಪ್ರತಿಗಳು

ಉಜ್ವಲ ಯೋಜನೆ 2.0 ದೇಶದ ಲಕ್ಷಾಂತರ ಮಹಿಳೆಯರ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತಿದೆ. ಹೊಗೆಮುಕ್ತ ಅಡುಗೆಮನೆಯಿಂದ ಆರೋಗ್ಯ ಸುಧಾರಣೆ, ಸಮಯ ಉಳಿತಾಯ ಹಾಗೂ ಜೀವನಮಟ್ಟದ ಏರಿಕೆಗೆ ಈ ಯೋಜನೆ ಸಹಕಾರಿಯಾಗುತ್ತಿದೆ. ನೀವು ಅಥವಾ ನಿಮ್ಮ ಕುಟುಂಬದವರು ಅರ್ಹರಾಗಿದ್ದರೆ, ಈ ಸೌಲಭ್ಯವನ್ನು ತಪ್ಪದೇ ಬಳಸಿಕೊಳ್ಳಿ.

  • ಆನ್‌ಲೈನ್ ಅರ್ಜಿ ಲಿಂಕ್: Apply Now
  • ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಲಿಂಕ್: pmuy.gov.in

February New Ration Card Application- ಫೆಬ್ರವರಿಯಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ | ಆಹಾರ ಸಚಿವರ ಮಹತ್ವದ ಮಾಹಿತಿ


Spread the love
error: Content is protected !!