ಮಹಿಳೆಯರು ಮನೆಯಲ್ಲೇ ಕುಳಿತು ಸ್ವಾವಲಂಬಿ ಉದ್ಯಮ ಆರಂಭಿಸಲು ರಾಜ್ಯ ಸರ್ಕಾರ ಉಚಿತ ಹೊಲಿಗೆ ಯಂತ್ರ (Uchita Holige Yantra Scheme) ನೀಡುತ್ತಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಉಚಿತ ಹೊಲಿಗೆ ಯಂತ್ರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.
ಇದೀಗ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಉಚಿತ ಹೊಲಿಗೆ ಯಂತ್ರ ಯೋಜನೆಯಡಿಯಲ್ಲಿ 2025-26ನೇ ಸಾಲಿನ ಹೊಲಿಗೆ ಯಂತ್ರ ವಿತರಣೆಗೆ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
Solar Free Electricity- ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ…
ಯಾರೆಲ್ಲ ಈ ಯೋಜನೆಗೆ ಅರ್ಜಿ ಹಾಕಬಹುದು?
- ಈ ಯೋಜನೆಯಡಿ ಕನಿಷ್ಠ 18 ವರ್ಷದಿಂದ ಗರಿಷ್ಠ 55 ವರ್ಷ ವಯಸ್ಸಿನೊಳಗೆ ಮಹಿಳೆಯರು ಅರ್ಜಿ ಸಲ್ಲಿಸಬಹುದು.
- ಆದಾಯ ಮಿತಿಯು ಗ್ರಾಮೀಣ ಪ್ರದೇಶದ ಕುಟುಂಬಗಳು ವರ್ಷಕ್ಕೆ ₹98,000 ಒಳಗೆ ಮತ್ತು ನಗರ ಪ್ರದೇಶ ಕುಟುಂಬಗಳು ವರ್ಷಕ್ಕೆ ₹1,20,000 ಒಳಗೆ ಇರಬೇಕು.
- ಅರ್ಜಿ ಸಲ್ಲಿಸುವ ಮಹಿಳೆ ಹಿಂದುಳಿದ ವರ್ಗಗಳಾದ ಪ್ರವರ್ಗಗಳು – 1, 2ಎ, 3ಎ, 3ಬಿ ಗೆ ಸೇರಿರಬೇಕು.
- ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ, ಲಿಂಗಾಯತ, ಒಕ್ಕಲಿಗ, ಮರಾಠ, ಹಟ್ಟಿಗೊಲ್ಲ, ಕಾಡುಗೊಲ್ಲ ಮತ್ತು ಉಪಸಮುದಾಯದ ಮಹಿಳೆಯರು ಈ ಯೋಜನೆಗೆ ಅರ್ಹರಲ್ಲ.
- ಬಹುಮುಖ್ಯವಾಗಿ ಈ ಹಿಂದೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಯಾವುದೇ ಇನ್ನೊಂದು ಯೋಜನೆಯ ಸೌಲಭ್ಯ ಈವರೆಗೆ ಪಡೆದಿರಬಾರದು.

ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್ (UID)
- ಜಾತಿ ಪ್ರಮಾಣ ಪತ್ರ (ಪರಿಷ್ಕೃತ)
- ಆದಾಯ ಪ್ರಮಾಣ ಪತ್ರ (ಈಚಿನ ವರ್ಷದ್ದು)
- ಪಾಸ್‌ಪೋರ್ಟ್ ಅಳತೆಯ ಎರಡು ಫೋಟೋ
- ಬ್ಯಾಂಕ್ ಪಾಸ್‌ಬುಕ್ ನಕಲು
- ವಿಳಾಸದ ಪ್ರಮಾಣ (ರೇಶನ್ ಕಾರ್ಡ್)
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ರಾಜ್ಯ ಸರ್ಕಾರದ ಅಧಿಕೃತ ಪೋರ್ಟಲ್ – ಸೇವಾ ಸಿಂಧು (Seva Sindhu) ಮೂಲಕ ಅರ್ಜಿ ಸಲ್ಲಿಕೆ ಅವಕಾಶ ನೀಡಲಾಗಿದೆ. ಗ್ರಾಮಒನ್ (Grama One), ಕರ್ನಾಟಕಒನ್ (Karnataka One) ಹಾಗೂ ಬೆಂಗಳೂರುಒನ್ (Bangalore One) ಕೇಂದ್ರಗಳಲ್ಲಿ ಕನಿಷ್ಠ ಸೇವಾಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2025ರ ಜೂನ್ 30
ಈ ದಿನಾಂಕದ ನಂತರ ಸಲ್ಲಿಸಲಾದ ಅರ್ಜಿಗಳನ್ನು ನಿಗಮ ಪರಿಗಣಿಸುವುದಿಲ್ಲ. ಆದ್ದರಿಂದ ಆಸಕ್ತಿಯುಳ್ಳ ಅರ್ಹ ಮಹಿಳೆಯರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಉಚಿತ ಯೋಜನೆಯ ಲಾಭ ಪಡೆಯಬಹುದಾಗಿದೆ.
ಯಂತ್ರ ವಿತರಣೆಯ ವಿಧಾನ ಮತ್ತು ತರಬೇತಿ
ಅರ್ಜಿ ಮಂಜೂರಾದ ಬಳಿಕ, ನಿಗಮದಿಂದ ಸ್ವೀಕೃತ ಪಟ್ಟಿ ಪ್ರಕಟಿಸಲಾಗುತ್ತದೆ. ನಂತರ ಆಯ್ಕೆಗೊಂಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಗುತ್ತದೆ. ಕೆಲವು ಜಿಲ್ಲೆಗಳಲ್ಲಿ ಮೂಲಭೂತ ಹೊಲಿಗೆ ತರಬೇತಿ ಕೋರ್ಸ್ ಅನ್ನೂ ಕೂಡ ಒದಗಿಸಲಾಗುತ್ತದೆ.
ಸೂಚನೆ: ಈ ಯೋಜನೆಗೆ ಸಂಬಂಧಿಸಿದಂತೆ ಮಹಿಳೆಯರು ನಕಲಿ ಗ್ರಾಹಕ ಸೇವಾ ಕೇಂದ್ರಗಳು ಅಥವಾ ಏಜೆಂಟ್‌ಗಳಿAದ ದೂರವಿರುವುದು ಉತ್ತಮ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ…
ಹೆಚ್ಚಿನ ಮಾಹಿತಿಗೆ ಆಯಾ ಜಿಲ್ಲಾ ಕಛೇರಿಯ ದೂರವಾಣಿ ಸಂಖ್ಯೆಗಳನ್ನು ಪಡೆಯಲು ಇಲ್ಲಿ ಒತ್ತಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.