8, 9 ಮತ್ತು 10ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶ ಪ್ರಕಟಕ್ಕೆ ಸುಪ್ರೀಂ ಕೋರ್ಟ್ ತಡೆ Supreme Court stay on 8th, 9th and 10th class board exam

Spread the love

Supreme Court stay on 8th, 9th and 10th class board exam : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 8, 9 ಹಾಗೂ 10ನೇ ತರಗತಿಗಳ ಅರ್ಧ ವಾರ್ಷಿಕ ಬೋರ್ಡ್ ಪರೀಕ್ಷೆಗಳ ಫಲಿತಾಂಶವನ್ನು (half yearly board exam) ಪ್ರಕಟಿಸದಂತೆ ಕರ್ನಾಟಕ ಸರಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಖಡಕ್ ಆದೇಶ ಹೊರಡಿಸಿದೆ.

WhatsApp Group Join Now
Telegram Group Join Now

ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಬೋರ್ಡ್ ಪರೀಕ್ಷೆ ನಡೆಸಲಾಗಿತ್ತು. ಬಾಕಿ ಜಿಲ್ಲೆಗಳಲ್ಲಿ ಸಾರ್ವಜನಿಕರ ಗಮನಕ್ಕೆ ತರದೆ ಪರೀಕ್ಷೆ ನಡೆಸಲಾಗಿತ್ತು. ಒಟ್ಟು ಎಂಟು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಬೋರ್ಡ್ ಪರೀಕ್ಷೆ ವಿವಾದವಾಗುತ್ತಿದ್ದಂತೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಫಲಿತಾಂಶಕ್ಕೆ ರಾಜ್ಯ ಸರಕಾರ ತಡೆ ನೀಡಿತ್ತು.

ಇದನ್ನೂ ಓದಿ: ಕಡಿಮೆ ಬೆಲೆ ಹೆಚ್ಚು ವ್ಯಾಲಿಡಿಟಿಯ BSNL ಹೊಸ ರೀಚಾರ್ಜ್ ಯೋಜನೆಗಳು BSNL low price high validity new recharge plans

ಅದರ ಬೆನ್ನಲ್ಲೇ ಸರಕಾರದ ನಿಲುವು ಪ್ರಶ್ನಿಸಿ ಖಾಸಗಿ ಶಾಲೆಗಳ ಪರ ವಕೀಲ ಕೆ ವಿ ಧನಂಜಯ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಕಳೆದ ವರ್ಷದ ಆದೇಶ ಉಲ್ಲೇಖಿಸಿ ಸರಕಾರವನ್ನು ಕೋರ್ಟ್ ತರಾಟೆ ತೆಗೆದುಕೊಂಡಿದೆ.

Supreme Court stay on 8th, 9th and 10th class board exam

ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಅವರು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆಸಲಾಗಿದ್ದ ಅರ್ಧ ವಾರ್ಷಿಕ ಬೋರ್ಡ್ ಪರೀಕ್ಷೆಗಳ ವಿರುದ್ಧ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದಾರೆ. ಅರ್ಧ ವಾರ್ಷಿಕ ಬೋರ್ಡ್ ಪರೀಕ್ಷೆ ನಡೆಸಿದ ರಾಜ್ಯ ಸರಕಾರಕ್ಕೆ ತರಾಟೆ ತೆಗೆದುಕೊಂಡಿರುವ ಕೋರ್ಟ್, ಫಲಿತಾಂಶ ಪ್ರಕಟಿಸದಂತೆಯೂ ಸೂಚಿಸಿದೆ.

ಈ ರೀತಿಯ ವಿಧಾನವನ್ನು ಯಾವ ರಾಜ್ಯದಲ್ಲಿಯೂ ಅಳವಡಿಸಿಕೊಂಡಿಲ್ಲ. ಸರಕಾರಕ್ಕೆ ವಿದ್ಯಾರ್ಥಿಗಳ ಕಲ್ಯಾಣದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಉತ್ತಮ ಶಾಲೆಗಳನ್ನು ತೆರೆಯಿರಿ. ಪರೀಕ್ಷೆಯನ್ನು ಯಾವುದೇ ಜಿಲ್ಲೆಯಲ್ಲಿ ನಡೆಸದಿದ್ದರೆ, ಆ ಜಿಲ್ಲೆಗಳಲ್ಲಿ ನಡೆಸಲು ಅನುಮತಿ ನೀಡುವುದಿಲ್ಲ ಎಂದು ನ್ಯಾಯಾಲಯ ತಾಕೀತು ಮಾಡಿದೆ.

ಇದನ್ನೂ ಓದಿ: ದನದ ಕೊಟ್ಟಿಗೆ ನಿರ್ಮಾಣಕ್ಕೆ 57,000 ಸಹಾಯಧನ | ಹೀಗೆ ಅರ್ಜಿ ಸಲ್ಲಿಸಿ… Cattle Shed Mgnrega Subsidy


Spread the love
WhatsApp Group Join Now
Telegram Group Join Now

Leave a Comment

error: Content is protected !!