ಕೇಂದ್ರ ಸರ್ಕಾರದ ಈ ಮಹತ್ವದ ಯೋಜನೆಯಡಿ (Sukanya Samriddhi Yojana) ಹೂಡಿಕೆ ಮಾಡಿದರೆ 15 ವರ್ಷದಲ್ಲಿ ಬರೋಬ್ಬರಿ ₹34.47 ಲಕ್ಷ ಸಿಗಲಿದೆ. ನಿಮ್ಮ ಮಕ್ಕಳ ಭವಿಷ್ಯಕ್ಕೆ ಭದ್ರತೆ ನೀಡುವ ಈ ಯೋಜನೆ ಕುರಿತ ಮಾಹಿತಿ ಇಲ್ಲಿದೆ…
ಮಕ್ಕಳ ಭವಿಷ್ಯವನ್ನು ಭದ್ರಗೊಳಿಸಲು ಪೋಷಕರು ಯಾವಾಗಲೂ ಚಿಂತಿಸುತ್ತಾರೆ. ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮದುವೆ ಖರ್ಚುಗಳು ಕುಟುಂಬದ ಮೇಲೆ ದೊಡ್ಡ ಹೊರೆ ಆಗುತ್ತವೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana – SSY) ಪೋಷಕರಿಗೆ ನಿಜವಾದ ಆರ್ಥಿಕ ಆಧಾರವಾಗಿ ಪರಿಣಮಿಸಿದೆ.
2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬೇಟಿ ಬಚಾವೋ, ಬೇಟಿ ಪದಾವೋ ಅಭಿಯಾನದ ಭಾಗವಾಗಿ ಜಾರಿಗೆ ತಂದ ಈ ಯೋಜನೆ ಈಗ ಲಕ್ಷಾಂತರ ಪೋಷಕರಿಗೆ ನಂಬಿಕೆಯ ಬೆಳಕಾಗಿದೆ. ಈವರೆಗೆ ದೇಶಾದ್ಯಂತ ಬರೋಬ್ಬರಿ 4.1 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ.
ಎಲ್ಲಿ ಖಾತೆ ತೆರೆಯಬಹುದು?
ಯಾವುದೇ ಅಂಚೆ ಕಚೇರಿಯಲ್ಲಿ ಅಥವಾ ಅಧಿಕೃತ ಬ್ಯಾಂಕ್‌ಗಳಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು. ಖಾತೆ ತೆರೆಯಲು ಮಗಳ ಜನನ ಪ್ರಮಾಣಪತ್ರ, ಪೋಷಕರ ಗುರುತಿನ ಚೀಟಿ ಹಾಗೂ ವಿಳಾಸದ ಸಾಕ್ಷ್ಯ ಇದ್ದರೆ ಸಾಕು.
ಖಾತೆ ತೆರೆಯುತ್ತಿದ್ದಂತೆಯೇ 15 ವರ್ಷಗಳ ವರೆಗೆ ಹೂಡಿಕೆ ಮಾಡಬಹುದು.ಖಾತೆ ತೆರೆಯುವ ದಿನದಿಂದ 21 ವರ್ಷಗಳ ಬಳಿಕ ಅಥವಾ ಮಗಳು ಮದುವೆಯಾಗುವಾಗ ಮೊತ್ತ ಬಿಡುಗಡೆಯಾಗುತ್ತದೆ.
ವರ್ಷಕ್ಕೆ ಕನಿಷ್ಠ ₹250 ರಿಂದ ಗರಿಷ್ಠ ₹1.5 ಲಕ್ಷವರೆಗೆ ಹೂಡಿಕೆ ಮಾಡಬಹುದು. ಪ್ರಸ್ತುತ ಬಡ್ಡಿದರವು ಶೇ. 8.2ರಷ್ಟಿದ್ದು; ಇದು ಇತರ ಸಣ್ಣ ಉಳಿತಾಯ ಯೋಜನೆಗಳಿಗಿಂತ ಹೆಚ್ಚು!

ತೆರಿಗೆ ಪ್ರಯೋಜನಗಳು
ಸುಕನ್ಯಾ ಸಮೃದ್ಧಿ ಯೋಜನೆ ಮೂರು ಹಂತಗಳಲ್ಲೂ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಮೊದಲನೆಯದಾಗಿ ಈ ಯೋಜನೆಯಡಿ ಹೂಡಿಕೆ ಮಾಡಿದ ಮೊತ್ತಕ್ಕೆ Income Tax Section 80C ಅಡಿಯಲ್ಲಿ ವಿನಾಯಿತಿ ಇದೆ.
ಎರಡನೇಯದಾಗಿ ಖಾತೆಗೆ ಸೇರುವ ವಾರ್ಷಿಕ ಬಡ್ಡಿಗೂ ತೆರಿಗೆ ಇಲ್ಲ. ಮೂರನೇ ಪ್ರಯೋಜನವೆಂದರೆ ಮೆಚೂರಿಟಿ ಮೊತ್ತ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಅಂದರೆ, ನೀವು ಹಾಕಿದ ಮೊತ್ತದ ಪ್ರತಿಯೊಂದು ರೂಪಾಯಿಯೂ ನಿಮ್ಮ ಮಗಳಿಗೆ ತಲುಪುತ್ತದೆ.
Magha Rain Karnataka- ಮಘೆ ಮಳೆ ಅಬ್ಬರ | ಎಲ್ಲೆಡೆ ಇನ್ನೂ ಐದು ದಿನ ಭಾರೀ ಮಳೆ
₹34.47 ಲಕ್ಷ ಪಡೆಯಿರಿ
ಯೋಜನೆ ಹೇಗೆ ಲಾಭದಾಯಕ ಎಂಬುದನ್ನು ಸರಳ ಉದಾಹರಣೆಯಿಂದ ನೋಡೋಣ. ನೀವು ಪ್ರತಿ ತಿಂಗಳು ₹6,000, ಅಂದರೆ ವರ್ಷಕ್ಕೆ ₹72,000 ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ ಒಟ್ಟು ₹10.8 ಲಕ್ಷ ಹೂಡಿಕೆ ಆಗುತ್ತದೆ.
ಇದಕ್ಕೆ ಬಡ್ಡಿ ಸೇರಿ ಬರೋಬ್ಬರಿ ₹34.47 ಲಕ್ಷ ಮೆಚೂರಿಟಿ ಮೊತ್ತ ಕೈ ಸೇರುತ್ತದೆ. ಇದು ಚಕ್ರಬಡ್ಡಿಯ ಶಕ್ತಿಯನ್ನು ತೋರಿಸುತ್ತದೆ. ಹೂಡಿಕೆ ಮೂರರಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.
ಇಂದಿನ ಕಾಲದಲ್ಲಿ ಮಕ್ಕಳ ಶಿಕ್ಷಣ ವೆಚ್ಚ ಹಾಗೂ ಮದುವೆ ಖರ್ಚುಗಳನ್ನು ನಿಭಾಯಿಸುವುದು ದೊಡ್ಡ ಸವಾಲು. ಬ್ಯಾಂಕ್‌ಗಳ FD ಅಥವಾ ಇತರ ಉಳಿತಾಯ ವಿಧಾನಗಳಿಗಿಂತ ಸುಕನ್ಯಾ ಸಮೃದ್ಧಿ ಯೋಜನೆ ಹೆಚ್ಚು ಸುರಕ್ಷಿತವಾಗಿದ್ದು, ಸರ್ಕಾರದಿಂದಲೇ ಭರವಸೆ ನೀಡಲ್ಪಟ್ಟಿದೆ. ಹೀಗಾಗಿ, ನಿಮ್ಮ ಮಗಳ ಭವಿಷ್ಯಕ್ಕಾಗಿ ಇಂದೇ ಒಂದು ಚಿಕ್ಕ ಹೆಜ್ಜೆ ಹಾಕಿದರೆ, ನಾಳೆ ಆಕೆಗೆ ದೊಡ್ಡ ಆರ್ಥಿಕ ಭದ್ರತೆ ದೊರೆಯುತ್ತದೆ.
LIC Recruitment- LICಯ 841 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ