JobsNews

Sub Inspector Recruitment- 3,073 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಸುವರ್ಣಾವಕಾಶ

Spread the love

ದೇಶದ ವಿವಿಧ ಪೊಲೀಸ್ ಪಡೆಗಳಲ್ಲಿ ಖಾಲಿ ಇರುವ ಸಬ್ ಇನ್‌ಸ್ಪೆಕ್ಟರ್ (Sub Inspector Recruitment) ಹುದ್ದೆಗಳ ನೇಮಕಾತಿಗೆ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಸಿಬ್ಬಂದಿ ಆಯ್ಕೆ ಆಯೋಗವು (SSC) ದೇಶದ ವಿವಿಧ ಪೊಲೀಸ್ ಪಡೆಗಳ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಪ್ರಸ್ತುತ 3,073 ಎಸ್‌ಐ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ದೆಹಲಿ ಪೊಲೀಸ್‌ನಲ್ಲಿ 212 ಹಾಗೂ ಕೇಂದ್ರದ ವಿವಿಧ ಪೊಲೀಸ್ ಪಡೆಗಳಲ್ಲಿ 2,861 ಹುದ್ದೆಗಳು ಸೇರಿ ಒಟ್ಟು 3,073 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: Voluntary Retirement- ಸ್ವಯಂ ನಿವೃತ್ತಿ ಪಡೆದ ಸರ್ಕಾರಿ ನೌಕರರಿಗೆ ಭತ್ಯೆ | ಕೇಂದ್ರ ಸಿಬ್ಬಂದಿ ಸಚಿವಾಲಯದ ಮಹತ್ವದ ಮಾಹಿತಿ

ಹುದ್ದೆಗಳ ವಿವರ
  • ದೆಹಲಿ ಪೊಲೀಸ್: 210
  • ಸಿಆರ್‌ಪಿಎಫ್: 1,029
  • ಬಿಎಸ್‌ಎಫ್: 223
  • ಐಟಿಬಿಪಿ: 233
  • ಸಿಐಎಸ್‌ಎಫ್: 1,294
  • ಎಸ್‌ಎಸ್‌ಬಿ: 82
  • ಒಟ್ಟು ಹುದ್ದೆಗಳು: 3,073
ವಿದ್ಯಾರ್ಹತೆ

ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆಯ ದಿನದೊಳಗೆ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ದೆಹಲಿ ಪೊಲೀಸ್‌ನಲ್ಲಿನ ಹುದ್ದೆಗಳಿಗೆ ಅಭ್ಯರ್ಥಿಗಳು ವಾಹನ ಚಾಲನೆ ಪರವಾನಗಿಯನ್ನು ಪಡೆದಿರಬೇಕು.

ದೇಶದ ವಿವಿಧ ಪೊಲೀಸ್ ಪಡೆಗಳಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
Sub Inspector Recruitment
ವಯೋಮಿತಿ

2025 ಆಗಸ್ಟ್ 1ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳು 20-25 ವರ್ಷದೊಳಗಿರಬೇಕು. 2000ರ ಆಗಸ್ಟ್ 2 ಹಾಗೂ 2005ರ ಆಗಸ್ಟ್ 1ರ ನಡುವೆ ಜನಿಸಿರಬೇಕು. ಪರಿಶಿಷ್ಟರಿಗೆ 5 ವರ್ಷ, ಹಿಂದುಳಿದವರಿಗೆ 3 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ಇದನ್ನೂ ಓದಿ: Karnataka Arogya Sanjeevini Scheme 2025- ಸರ್ಕಾರಿ ನೌಕರರಿಗೆ ‘ಆರೋಗ್ಯ ಸಂಜೀವಿನಿ’ ಯೋಜನೆ ಜಾರಿ | ಅಕ್ಟೋಬರ್ 1ರಿಂದ ನಗದುರಹಿತ ಚಿಕಿತ್ಸೆ

ವೇತನಶ್ರೇಣಿ

ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ 35,400 ರಿಂದ 1,12,400 ವೇತನ ಶ್ರೇಣಿ ಒಂದೇ ಆಗಿದ್ದರೂ, ಸಿಎಪಿಎಫ್‌ನಲ್ಲಿ ಈ ಹುದ್ದೆಗಳನ್ನು ಗ್ರೂಪ್ ಬಿ (ನಾನ್-ಗೆಜೆಟೆಡ್) ನಾನ್ ಮಿನಿಸ್ಟ್ರಿಯಲ್ ಎಂದು ಪರಿಗಣಿಸಲಾಗಿದ್ದರೆ, ದೆಹಲಿ ಪೊಲೀಸ್‌ನಲ್ಲಿ ಇದೇ ಹುದ್ದೆಗಳನ್ನು ಗ್ರೂಪ್ ‘ಸಿ’ ಎಂದು ವರ್ಗಿಕರಿಸಲಾಗಿದೆ.

ಅರ್ಜಿ ಶುಲ್ಕ ಮತ್ತು ನೋಂದಣಿ

ಅಭ್ಯರ್ಥಿಗಳು ssಛಿ.gov.iಟಿ ಪೋರ್ಟಲ್’ನಲ್ಲಿಯೇ ಒಂದು ಬಾರಿಯ ನೋಂದಣಿ ಮಾಡಿಕೊಳ್ಳಬೇಕು. ಉಳಿದೆಲ್ಲ ಪರೀಕ್ಷೆಗಳಿಗೂ ಈ ನೋಂದಣಿ ಸಂಖ್ಯೆ ಉಳಿದುಕೊಳ್ಳಲಿದೆ. ಇದಲ್ಲದೆ, mySSC  ಆ್ಯಪ್ ಮೂಲಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಮಹಿಳೆಯರು ಹಾಗೂ ಪರಿಶಿಷ್ಟರಿಗೆ ಯಾವುದೇ ಶುಲ್ಕವಿಲ್ಲ. ಈ ಅಭ್ಯರ್ಥಿಗಳು ಅಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Delhi Police Constable Recruitment 2025- ಪಿಯುಸಿ ಪಾಸಾದವರಿಗೆ ದಿಲ್ಲಿ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 7,565 ಹುದ್ದೆಗಳ ನೇಮಕಾತಿ

ದೈಹಿಕ ಸಾಮರ್ಥ್ಯ ಪರೀಕ್ಷೆ

ಅಭ್ಯರ್ಥಿಗಳು 100 ಮೀಟರ್ ಓಟವನ್ನು 16 ಸೆಕೆಂಡುಗಳಲ್ಲಿ 1.6 ಕಿ.ಮೀ ದೂರವನ್ನು, 6.5 ನಿಮಿಷಗಳಲ್ಲಿ 3.65 ಮೀ. ಉದ್ದ ಜಿಗಿತ ಹಾಗೂ 1.2 ಮೀಟರ್ ಎತ್ತರ ಜಿಗಿತ ಮತ್ತು 7.25 ಕೆಜಿ ತೂಕದ ಗುಂಡನ್ನು 4.5 ಮೀ ದೂರ ಎಸೆಯಬೇಕು. ಇದಕ್ಕೆ ಮೂರು ಪ್ರಯತ್ನಗಳು ಇರಲಿವೆ.

ಮಹಿಳೆಯರ ನೂರು ಮೀಟರ್ ಓಟಕ್ಕೆ 18 ಸೆಕೆಂಡ್, 800 ಮೀ. ಓಟಕ್ಕೆ 4 ನಿಮಿಷ ನೀಡಲಾಗುತ್ತದೆ. 2.7 ಮೀಟರ ಉದ್ದ ಜಿಗಿತ, 0.9 ಮೀ. ಎತ್ತರ ಜಿಗಿತವನ್ನು ಮೂರು ಪ್ರಯತ್ನಗಳಲ್ಲಿ ಪೂರೈಸಬೇಕು. ನಿಗದಿತ ಎತ್ತರ ಹಾಗೂ ತೂಕ ಹೊಂದಿದ ಅಭ್ಯರ್ಥಿಗಳನ್ನಷ್ಟೇ ಇದಕ್ಕೆ ಪರಿಗಣಿಸಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಪತ್ರಿಕೆ 1) ನಡೆಸಲಾಗುತ್ತದೆ. ನಂತರ ದೈಹಿಕ ಕ್ಷಮತೆ ಪರೀಕ್ಷೆ ಇರಲಿದೆ. ಬಳಿಕ ಎರಡನೇ ಪತ್ರಿಕೆಗೆ ಹಾಜರಾಗಬೇಕಾಗುತ್ತದೆ. ನಂತರದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ದಾಖಲಾತಿಗಳನ್ನು ಪರಿಶೀಲಿಸುವ ಮೂಲಕ ಅಂತಿಮ ಆಯ್ಕೆಪಟ್ಟಿ ಸಿದ್ಧಪಡಿಸಲಾಗುತ್ತದೆ.

ಇದನ್ನೂ ಓದಿ: Canara Bank 3500 Apprentice Recruitment 2025- ಕೆನರಾ ಬ್ಯಾಂಕ್ 3500 ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಅವಕಾಶ

ಪರೀಕ್ಷಾ ಕೇಂದ್ರಗಳು

ಕರ್ನಾಟಕದಲ್ಲಿ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಗಳಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.

ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 16-10-2025
  • ಶುಲ್ಕ ಪಾವತಿಗೆ ಅಂತಿನ ದಿನ: 17-10-2025
  • ಅರ್ಜಿ ತಿದ್ದುಪಡಿಗೆ ಅವಕಾಶ: ಅಕ್ಟೋಬರ್ 24-26, 2025
  • ಪರೀಕ್ಷೆ ಅವಧಿ: ನವೆಂಬರ್/ಡಿಸೆಂಬರ್ 2025

ಅಧಿಸೂಚನೆ ಲಿಂಕ್: Download

Karnataka 994 PDO Vacancies- 994 ಪಿಡಿಒ ಹುದ್ದೆ ಖಾಲಿ | ನೇಮಕಾತಿ ಯಾವಾಗ? ಜಿಲ್ಲಾವಾರು ಖಾಲಿ ಹುದ್ದೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now

Related Articles

Back to top button
error: Content is protected !!