SSC CGL 2025 ಪರೀಕ್ಷೆ ಮೂಲಕ (SSC CGL 2025 Central Govt Jobs) ಕೇಂದ್ರ ಸರ್ಕಾರಿ 14,582 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿಧರರಿಗೆ ಇದೊಂದು ಸುವರ್ಣಾವಕಾಶವಾಗಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೇಂದ್ರ ಸರ್ಕಾರಿ (Government of India) ಉದ್ಯೋಗಕ್ಕಾಗಿ ಕಾಯುತ್ತಿರುವ ಪದವಿಧರರಿಗೆ ಸುವರ್ಣಾವಕಾಶ ಒದಗಿ ಬಂದಿದೆ. ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (SSC) 2025ನೇ ಸಾಲಿನ Combined Graduate Level (CGL) ಪರೀಕ್ಷೆ ಮೂಲಕ 14,582 ಗ್ರೂಪ್ ‘B’ ಹಾಗೂ ‘C’ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರ ವಿವಿಧ ಸಚಿವಾಲಯಗಳು, ಇಲಾಖೆಗಳು, ಸಂಸ್ಥೆಗಳು ಮತ್ತು ವಿವಿಧ ಸಾಂವಿಧಾನಿಕ ಸಂಸ್ಥೆಗಳು, ಶಾಸನಬದ್ಧಸಂಸ್ಥೆಗಳು, ನ್ಯಾಯಮಂಡಳಿಗಳು ಇತ್ಯಾದಿಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಸಿಜಿಎಲ್ ಪರೀಕ್ಷೆ ಮೂಲಕ ಈ ನೇಮಕಾತಿ ನಡೆಯಲಿದೆ.
ನೇಮಕಾತಿ ಸಂಕ್ಷಿಪ್ತ ವಿವರ
- ನೇಮಕಾತಿ ಸಂಸ್ಥೆ: ಕೇಂದ್ರ ಸಿಬ್ಬಂದಿ ಆಯೋಗ (SSC)
- ಪರೀಕ್ಷೆ: Combined Graduate Level (CGL) Examination 2025
- ಹುದ್ದೆಗಳ ಒಟ್ಟು ಸಂಖ್ಯೆ: 14,582
- ಹುದ್ದೆಗಳ ಸ್ವರೂಪ: Group ‘B’ ಮತ್ತು Group ‘C’
- ವಿದ್ಯಾರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು
ಹುದ್ದೆಗಳ ವಿವರ
ಈ ನೇಮಕಾತಿಯ ಮೂಲಕ ನೇಮಕವಾಗುವ ಪ್ರಮುಖ ಹುದ್ದೆಗಳ ವಿವರ ಇಲ್ಲಿವೆ:
- ಅಸಿಸ್ಟೆಂಟ್ ಸೆಕ್ಷನ್ ಆಫೀಸರ್
- ಇನ್‌ಸ್ಪೆಕ್ಟರ್ (Income Tax, Central Excise, Preventive Officer)
- ಅಕೌಂಟ್ಸ್ ಆಫೀಸರ್
- ಅಡಿಟರ್
- ಪೋಸ್ಟಲ್ ಅಸಿಸ್ಟೆಂಟ್
- ಕಸ್ಟಮ್ಸ್ ಇನ್ಸ್ಪೆಕ್ಟರ್
- ಎಕ್ಸಿಕ್ಯೂಟಿವ್ ಅಸಿಸ್ಟೆಂಟ್
- ರಿಸರ್ಚ್ ಅಸಿಸ್ಟೆಂಟ್
- ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್
- ಸ್ಟಾಟಿಸ್ಟಿಕಲ್ ಆಫೀಸರ್
- ಸಹಾಯಕರ ಹುದ್ದೆಗಳು ಮತ್ತಿತರ ಇಲಾಖೆಗಳಲ್ಲೂ ಲಭ್ಯವಿವೆ.
ಪರೀಕ್ಷೆ ಹೇಗಿರಲಿದೆ?
ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದಾಗಿದ್ದು, ಒಟ್ಟು 200 ಅಂಕದ 100 ಪ್ರಶ್ನೆಗಳಿಗೆ 60 ನಿಮಿಷಗಳಲ್ಲಿ ಉತ್ತರಿಸಬೇಕಿದೆ. ಸಾಮಾನ್ಯ ಬುದ್ಧಿಮತ್ತೆ, ಸಾಮಾನ್ಯ ಜ್ಞಾನ, ಗಣಿತೀಯ ಸಾಮರ್ಥ್ಯ (Quantitative Aptitude), ಇಂಗ್ಲಿಷ್ ಭಾಷಾ ಸಾಮರ್ಥ್ಯದ ತಲಾ 25 ಪ್ರಶ್ನೆಗಳಿರುತ್ತವೆ. ಹಿಂದಿ ಅಥವಾ ಇಂಗ್ಲಿಷ್‌ನಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಆಯಾ ವಿದ್ಯಾರ್ಹತೆಗೆ ಅನುಗುಣವಾದ ಪಠ್ಯಕ್ರಮ ಇರಲಿದೆ.

ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು
- ಬೆಂಗಳೂರು
- ಮೈಸೂರು
- ಮಂಗಳೂರು
- ಬೆಳಗಾವಿ
- ಕಲಬುರಗಿ
- ಶಿವಮೊಗ್ಗ
- ಹುಬ್ಬಳ್ಳಿ
- ಉಡುಪಿ
ವಿದ್ಯಾರ್ಹತೆ ಏನು?
- ಸಾಮಾನ್ಯ ಹುದ್ದೆಗಳಿಗೆ: ಯಾವುದೇ ಶಾಖೆಯ ಪದವಿ
- ಅಸಿಸ್ಟೆಂಟ್ ಅಡಿಟ್ ಅಥವಾ ಅಕೌಂಟ್ಸ್ ಆಫೀಸರ್ ಹುದ್ದೆಗಳಿಗೆ: ಪದವಿಗೆ ಜೊತೆಗೆ CA/ CMA/ Company Secretary ಅಥವಾ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ
- Junior Statistical Officer ಹುದ್ದೆಗೆ: ಪದವಿಯಲ್ಲಿ Statistics ವಿಷಯವಿರಬೇಕು ಅಥವಾ ಪಿಯುಸಿಯಲ್ಲಿ ಗಣಿತದಲ್ಲಿ ಕನಿಷ್ಠ 60% ಅಂಕಗಳಿರಬೇಕು.
ವಯೋಮಿತಿ ವಿವರ
ಹೆಚ್ಚಿನ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 30 ವರ್ಷ. ಕೆಲವು ಹುದ್ದೆಗಳಿಗೆ 27 ಮತ್ತು 12 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಎಸ್ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ. ಯಾವ ಹುದ್ದೆಗೆ ಎಷ್ಟು ವಯೋಮಿತಿ ಎಂಬುದನ್ನು ಅಧಿಸೂಚನೆಯಲ್ಲಿ ಪ್ರತ್ಯೇಕವಾಗಿ ನೀಡಲಾಗಿದೆ.
ವೇತನ ಶ್ರೇಣಿ ಎಷ್ಟು?
ಆಯಾ ವೃಂದದ ಹುದ್ದೆಗನುಸಾರ ಲೆವೆಲ್ 4, 5, 6, 7 ಎಂದು ವಿಭಾಗಿಸಿ ವೇತನಶ್ರೇಣಿಯನ್ನು ನೀಡಲಾಗಿದೆ.
- ಲೆವೆಲ್ 4: ₹25,500 – ₹81,100
- ಲೆವೆಲ್ 5: ₹29,200 – ₹92,300
- ಲೆವೆಲ್ 6: ₹35,400 – ₹1,12,400
- ಲೆವೆಲ್ 7: ₹44,900 – ₹1,42,400
ಅರ್ಜಿ ಶುಲ್ಕ ಹಾಗೂ ಸಲ್ಲಿಕೆ ಮಾಹಿತಿ
- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ₹100
- ಎಸ್‌ಸಿ/ಎಸ್‌ಟಿ/ಅಂಗವಿಕಲರು/ಮಾಜಿ ಸೈನಿಕರಿಗೆ: ಶುಲ್ಕವಿಲ್ಲ
- ಅರ್ಜಿ ಸಲ್ಲಿಕೆ ವೆಬ್‌ಸೈಟ್: https://ssc.gov.in/
- ಆಧಾರ್ ಆಧಾರಿತ ದೃಢೀಕರಣ ಕಡ್ಡಾಯ
- ಅರ್ಜಿ ಸಲ್ಲಿಕೆ ವೇಳೆ ದಾಖಲಾತಿಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಬೇಕು
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ: ಜೂನ್ 11, 2025
- ಅರ್ಜಿ ಸಲ್ಲಿಕೆಗೆ ಕೊನೆ ದಿನ: ಜುಲೈ 4, 2025
- ಶುಲ್ಕ ಪಾವತಿ ಅಂತಿಮ ದಿನ: ಜುಲೈ 5, 2025
- ಅರ್ಜಿ ತಿದ್ದುಪಡಿ ಅವಕಾಶ: ಜುಲೈ 9 – 11, 2025
- ಟಿಯರ್–I ಪರೀಕ್ಷೆ: ಆಗಸ್ಟ್ 13 – 30, 2025
- ಟಿಯರ್–II ಪರೀಕ್ಷೆ: ಡಿಸೆಂಬರ್ 2025
ಗಮನಿಸಬೇಕಾದ ಅಂಶಗಳು
- ವಯೋಮಿತಿ, ಶೈಕ್ಷಣಿಕ ಅರ್ಹತೆಗಳು 2025ರ ಆಗಸ್ಟ್ 1ರಿಂದಿಗೆ ಲೆಕ್ಕಿಸಲ್ಪಡುತ್ತದೆ.
- ಮೀಸಲಾತಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಸಂಬಂಧಿತ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
- ಹುದ್ದೆಗಳ ನೇಮಕಾತಿ ತಾತ್ಕಾಲಿಕವಾಗಿ ನಡೆಯಲಿದೆ. ದಾಖಲಾತಿಗಳ ಪರಿಶೀಲನೆಯ ನಂತರವೇ ಅಂತಿಮವಾಗುತ್ತದೆ.
- ಅನುಭವ ಬಯಸುವ ಹುದ್ದೆಗಳಿಗೆ, ಪದವಿ ಪೂರ್ಣಗೊಂಡ ನಂತರದ ಅನುಭವ ಮಾತ್ರ ಪರಿಗಣನೆಯಲ್ಲಿರುತ್ತದೆ.
ಉದ್ಯೋಗಾಕಾಂಕ್ಷಿಗಳಿಗೆ ಸಲಹೆ
SSC CGL ಪರೀಕ್ಷೆ ಭಾರತದ ಅತ್ಯಂತ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೊಂದು. ಈ ಪರೀಕ್ಷೆಯ ಮೂಲಕ ಕೇಂದ್ರ ಸರ್ಕಾರದ ಮಹತ್ವದ ಹುದ್ದೆಗಳು ಲಭ್ಯವಾಗುತ್ತವೆ. ಇದಕ್ಕಾಗಿ ತಯಾರಿ ಪ್ರಾರಂಭಿಸುವುದು ಅತ್ಯಾವಶ್ಯಕ. ಸರಿಯಾದ ಪಠ್ಯಕ್ರಮ, ಮಾದರಿ ಪ್ರಶ್ನೆಗಳು, ಹಿಂದಿನ ಪ್ರಶ್ನೆಪತ್ರಿಕೆಗಳ ಅಭ್ಯಾಸ ಮಾಡುವುದು ಉತ್ತಮ.
ಸಹಾಯವಾಣಿ: 1800 309 3063
ಅಧಿಸೂಚನೆ: Download