Small Savings Schemes Interest Rates 2026- ಸರ್ಕಾರದ ಈ ಉಳಿತಾಯ ಯೋಜನೆಗಳಲ್ಲಿ ಸಿಗಲಿದೆ ಭರ್ಜರಿ ಬಡ್ಡಿ | ಯಾವುದಕ್ಕೆ ಎಷ್ಟು ಬಡ್ಡಿ? ಇಲ್ಲಿದೆ ಸಂಪೂರ್ಣ ಪಟ್ಟಿ…

Spread the love

WhatsApp Group Join Now
Telegram Group Join Now

ಕೇಂದ್ರ ಸರ್ಕಾರವು ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು (Small Savings Schemes Interest Rates 2026) ಯಥಾಸ್ಥಿತಿಯಲ್ಲಿ ಮುಂದುವರೆಸಿದೆ. ಯಾವ ಉಳಿತಾಯ ಯೋಜನೆಯಲ್ಲಿ ಎಷ್ಟು ಬಡ್ಡಿ ಸಿಗಲಿದೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…

ಹೂಡಿಕೆ ಎಂದರೆ ಬಹುತೇಕ ಜನರಿಗೆ ಇನ್ನೂ ಅಪಾಯದ ಭಾವನೆ ಇದೆ. ಷೇರು ಮಾರುಕಟ್ಟೆಯ (Stock market) ಏರುಪೇರಿನಲ್ಲಿ ಹಣ ಹಾಕುವುದಕ್ಕೆ ಅನೇಕರಿಗೆ ಧೈರ್ಯವಿಲ್ಲ. ಅಂತಹವರಿಗೆ ಸಣ್ಣ ಉಳಿತಾಯ ಯೋಜನೆಗಳು (Government Savings Schemes) ಭರವಸೆಯ ಆಶ್ರಯವಾಗಿವೆ. ಈಗ ಅಂತಹ ಉಳಿತಾಯಗಾರರಿಗೆ ಕೇಂದ್ರ ಸರ್ಕಾರ ಒಂದು ಆತ್ಮಸ್ಥೈರ್ಯ ನೀಡುವ ಸುದ್ದಿ ನೀಡಿದೆ.

ಇದನ್ನೂ ಓದಿ: KSCCF Recruitment 2026- ಪಿಯುಸಿ, ಪದವಿಧರರಿಗೆ ಸಹಕಾರ ಮಹಾ ಮಂಡಳಿಯಲ್ಲಿ ಉದ್ಯೋಗಾವಕಾಶ | ಅರ್ಜಿ ಆಹ್ವಾನ

High Interest Rates Continue – ಭರ್ಜರಿ ಬಡ್ಡಿದರ ಮುಂದುವರಿಕೆ

2025ರ ಕೊನೆಯ ದಿನವಾದ ಡಿಸೆಂಬರ್ 31ರಂದು, ಕೇಂದ್ರ ಸರ್ಕಾರವು ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವುದಾಗಿ ಘೋಷಿಸಿದೆ.

ಅಂದರೆ, 2026ರ ಜನವರಿ-ಮಾರ್ಚ್ ತ್ರೈಮಾಸಿಕಕ್ಕೂ ಈಗಿರುವ ಬಡ್ಡಿದರಗಳೇ ಅನ್ವಯವಾಗಲಿವೆ. ಹಾಗಾಗಿ ವಿವಿಧ ಉಳಿತಾಯ ಯೋಜನೆಗಳ ಬಡ್ಡಿದರ ಯಥಾಸ್ಥಿಯಲ್ಲಿ ಮುಂದುವರೆಯಲಿದ್ದು; ಯಾವ ಉಳಿತಾಯ ಯೋಜನೆಗೆ ಎಷ್ಟು ಬಡ್ಡಿ ಸಿಗಲಿದೆ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ನೋಡೋಣ.

ಇದನ್ನೂ ಓದಿ: Karnataka Yashasvini Yojana 2026- ಯಶಸ್ವಿನಿ ಯೋಜನೆಯಡಿ ಹಸುಗೂಸಿನಿಂದ ವೃದ್ಧರ ವರೆಗೂ 5 ಲಕ್ಷ ರೂ. ಉಚಿತ ಚಿಕಿತ್ಸೆ | ಹೊಸ ಮಾರ್ಗಸೂಚಿ ಬಿಡುಗಡೆ

Rates Stable for Seventh Quarter – ಸತತ ಏಳನೇ ತ್ರೈಮಾಸಿಕಕ್ಕೂ ಬಡ್ಡಿದರ ಸ್ಥಿರ

ಹಣಕಾಸು ಸಚಿವಾಲಯದ ಪ್ರಕಟಣೆಯ ಪ್ರಕಾರ, ಸರ್ಕಾರವು ಸತತ ಏಳನೇ ತ್ರೈಮಾಸಿಕಕ್ಕೂ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಬದಲಾವಣೆ ಮಾಡಿಲ್ಲ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ರೆಪೊ ದರ ಕಡಿತ ಬಗ್ಗೆ ಚರ್ಚೆಗಳು ಜೋರಾಗಿದ್ದವು. ಬ್ಯಾಂಕುಗಳ ಎಫ್‌ಡಿ ಮೇಲಿನ ಬಡ್ಡಿ ಇಳಿಕೆಯಾಗುವ ಸಾಧ್ಯತೆಯೂ ಕಾಣುತ್ತಿತ್ತು.

ಈ ಹಿನ್ನೆಲೆಯಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯೂ ಕಡಿತಗೊಳ್ಳಬಹುದು ಎಂಬ ಆತಂಕ ಸಾಮಾನ್ಯ ಹೂಡಿಕೆದಾರರಲ್ಲಿ ಇತ್ತು. ಆದರೆ ಸರ್ಕಾರದ ಈ ನಿರ್ಧಾರ, ವಿಶೇಷವಾಗಿ ಮಧ್ಯಮ ವರ್ಗ, ನಿವೃತ್ತರು ಮತ್ತು ಸುರಕ್ಷಿತ ಹೂಡಿಕೆ ಬಯಸುವವರ ಪಾಲಿಗೆ ದೊಡ್ಡ ನಿರಾಳತೆ ತಂದಿದೆ.

Small Savings Schemes Interest Rates 2026
Small Savings Schemes Interest Rates 2026

ಇದನ್ನೂ ಓದಿ: LIC Bima Sakhi Yojana- ಎಸ್‌ಎಸ್‌ಎಲ್‌ಸಿ ಪಾಸಾದ ಮಹಿಳೆಯರಿಗೆ ಎಲ್‌ಐಸಿ ಉದ್ಯೋಗ | ನಿಮ್ಮೂರಲ್ಲೇ ಸರ್ಕಾರಿ ನೌಕರಿ ಮಾಡುವ ಸುವರ್ಣಾವಕಾಶ

Why This Decision Matters – ಸರ್ಕಾರ ಈ ನಿರ್ಧಾರ ಕೈಗೊಂಡದ್ದು ಏಕೆ ಮುಖ್ಯ?

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ನಿರ್ಧರಿಸಲು ಸರ್ಕಾರವು ‘ಶ್ಯಾಮಲಾ ಗೋಪಿನಾಥ್ ಸಮಿತಿ’ (Shyamala Gopinath Committee) ಶಿಫಾರಸು ಮಾಡಿದ ಸೂತ್ರವನ್ನು ಅನುಸರಿಸುತ್ತದೆ. ಈ ಸೂತ್ರವು ಮಾರುಕಟ್ಟೆಯ ಬಡ್ಡಿದರಗಳ ಸರಾಸರಿಯನ್ನು ಆಧಾರವಾಗಿ ಇಟ್ಟುಕೊಂಡಿರುತ್ತದೆ.

ಇತ್ತೀಚಿನ ತಿಂಗಳಲ್ಲಿ ಬಡ್ಡಿದರಗಳು ಇಳಿಕೆಯಾಗುವ ಸೂಚನೆ ಇದ್ದರೂ, ಸರ್ಕಾರವು ಕೇವಲ ಮಾರುಕಟ್ಟೆ ಒತ್ತಡವನ್ನಷ್ಟೇ ನೋಡದೆ ಸಾಮಾಜಿಕ ಭದ್ರತೆ, ನಿವೃತ್ತರ ಆದಾಯ, ಮಹಿಳೆಯರು ಮತ್ತು ಮಕ್ಕಳ ಭವಿಷ್ಯದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಡ್ಡಿದರ ಕಡಿತಗೊಳಿಸದೇ ಮುಂದುವರಿಸಿದೆ.

ಇದನ್ನೂ ಓದಿ: February New Ration Card Application- ಫೆಬ್ರವರಿಯಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ | ಆಹಾರ ಸಚಿವರ ಮಹತ್ವದ ಮಾಹಿತಿ

Who Gains the Most? – ಈ ನಿರ್ಧಾರದಿಂದ ಯಾರಿಗೆ ಹೆಚ್ಚು ಲಾಭ?

ನಿವೃತ್ತರು: ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)ಯಲ್ಲಿ ಸಿಗುವ 8.2% ಬಡ್ಡಿ, ಇಂದು ಹೆಚ್ಚಿನ ದೊಡ್ಡ ಬ್ಯಾಂಕುಗಳ ಫಿಕ್ಸ್ಡ್ ಡಿಪಾಸಿಟ್‌ಗಿಂತಲೂ ಹೆಚ್ಚು. ನಿಯಮಿತ ಆದಾಯ ಬಯಸುವ ನಿವೃತ್ತರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಪೋಷಕರು: ಸುಕನ್ಯಾ ಸಮೃದ್ಧಿ ಯೋಜನೆ ಮೂಲಕ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ವಿವಾಹಕ್ಕಾಗಿ ಹೂಡಿಕೆ ಮಾಡುವ ಪೋಷಕರಿಗೆ 8.2% ಬಡ್ಡಿ ನಿಜಕ್ಕೂ ವರದಾನ. ಸುರಕ್ಷಿತವೂ ಹೌದು, ದೀರ್ಘಕಾಲಿಕ ಲಾಭವೂ ಖಚಿತ.

WhatsApp Group Join Now
Telegram Group Join Now

ಸುರಕ್ಷಿತ ಹೂಡಿಕೆ ಬಯಸುವವರು: ಷೇರು ಮಾರುಕಟ್ಟೆಯ ಅಪಾಯ ಬೇಡ, ಆದರೆ ಒಳ್ಳೆಯ ಆದಾಯ ಬೇಕು ಎನ್ನುವ ಮಧ್ಯಮ ವರ್ಗದ ಜನರಿಗೆ ಈ ಯೋಜನೆಗಳು ಸರಕಾರಿ ಗ್ಯಾರಂಟಿಯೊಂದಿಗೆ ಭರವಸೆಯ ಆಯ್ಕೆ.

ಇದನ್ನೂ ಓದಿ: Karnataka Cold Wave Warning- ಕರ್ನಾಟಕದಲ್ಲಿ ಮತ್ತೆ ಹೆಚ್ಚಿದ ಚಳಿ | ಹಲವು ಜಿಲ್ಲೆಗಳಲ್ಲಿ ಶೀತ ಅಲೆ ಎಚ್ಚರಿಕೆ!

Jan–Mar 2026 Interest Rates – 2026ರ ಜನವರಿ-ಮಾರ್ಚ್ ತ್ರೈಮಾಸಿಕದ ಪ್ರಮುಖ ಬಡ್ಡಿದರಗಳು

ಕೇಂದ್ರ ಸರ್ಕಾರ ಘೋಷಿಸಿದಂತೆ, ಜನವರಿ 1ರಿಂದ ಮಾರ್ಚ್ 31, 2026ರ ವರೆಗೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಹೀಗಿವೆ:

  • ಸುಕನ್ಯಾ ಸಮೃದ್ಧಿ ಯೋಜನೆ (SSY) – 8.2%
  • ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) – 8.2%
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) – 7.1%
  • ಕಿಸಾನ್ ವಿಕಾಸ್ ಪತ್ರ (KVP) – 7.5% (115 ತಿಂಗಳಲ್ಲಿ ಹಣ ದ್ವಿಗುಣ)
  • ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) – 7.7%
  • ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS) – 7.4%
  • ಒಂದು ವರ್ಷದ ಅವಧಿ ಠೇವಣಿ (FD) – 6.9%
  • ಮೂರು ವರ್ಷದ ಅವಧಿ ಠೇವಣಿ (FD) – 7.1%
  • ಐದು ವರ್ಷದ ಅವಧಿ ಠೇವಣಿ (FD) – 7.5%
  • ಪೋಸ್ಟ್ ಆಫೀಸ್ ಉಳಿತಾಯ ಖಾತೆ – 4.0%

ಇದನ್ನೂ ಓದಿ: Morarji Desai Residential School Admission 2026-27- ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಅರ್ಜಿ ಆಹ್ವಾನ | ಸಂಪೂರ್ಣ ಉಚಿತ ಶಿಕ್ಷಣ

Benefit from These Schemes – ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ

ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚುತ್ತಿರುವ ಈ ದಿನಗಳಲ್ಲಿ, ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಸ್ಥಿರವಾಗಿಟ್ಟಿರುವುದು ಸಾಮಾನ್ಯ ಜನರ ಪಾಲಿಗೆ ದೊಡ್ಡ ಧೈರ್ಯ.

ಅಪಾಯವಿಲ್ಲದ, ಸ್ಥಿರ ಆದಾಯ ನೀಡುವ ಹೂಡಿಕೆ ಹುಡುಕುತ್ತಿರುವವರು ಈಗಲೂ ಅಂಚೆ ಕಚೇರಿ ಮತ್ತು ಸರ್ಕಾರದ ಉಳಿತಾಯ ಯೋಜನೆಗಳತ್ತ ಗಮನಹರಿಸಬಹುದು.

ಹೂಡಿಕೆ ದೊಡ್ಡದಾಗಿರಬೇಕೆಂದಿಲ್ಲ, ನಿಯಮಿತ ಉಳಿತಾಯವೇ ಭವಿಷ್ಯದ ಭದ್ರತೆ ಎಂಬುದನ್ನು ಈ ನಿರ್ಧಾರ ಮತ್ತೊಮ್ಮೆ ನೆನಪಿಸುತ್ತದೆ. ಈ ಉಳಿತಾಯ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ.

SBI Digital Personal Loan- ಎಸ್‌ಬಿಐ ಡಿಜಿಟಲ್ ಪರ್ಸನಲ್ ಲೋನ್ | ₹35 ಲಕ್ಷದ ವರೆಗೆ ಸಾಲ ಸೌಲಭ್ಯ | ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
error: Content is protected !!