SBI Loan Interest Rate Cut- ಎಸ್‌ಬಿಐ ಬ್ಯಾಂಕಿನಲ್ಲಿ ಅತೀ ಕಡಿಮೆ ಬಡ್ಡಿ ಸಾಲ ಸೌಲಭ್ಯ | ಹೊಸ ಬಡ್ಡಿದರಗಳ ಮಾಹಿತಿ ಇಲ್ಲಿದೆ…

Spread the love

ಇತ್ತೀಚೆಗೆ ಆರ್‌ಬಿಐ ರೆಪೋ ದರವನ್ನು (RBI Repo Rate) ಇಳಿಕೆ ಮಾಡಿದ ನಂತರ ದೇಶದ ಅತೀ ದೊಡ್ಡ ಬ್ಯಾಂಕ್ ಎಸ್‌ಬಿಐ (State Bank of India- SBI) ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಧನವಿನಿಮಯ ನೀತಿಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಅದರ ಪರಿಣಾಮವಾಗಿ ದೇಶದ ಅತಿದೊಡ್ಡ ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳಲ್ಲೊAದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಸಾಲದ ಬಡ್ಡಿದರಗಳಲ್ಲಿ ಇಳಿಕೆ ಮಾಡಿದೆ. ಈ ಬಡ್ಡಿದರ ಪರಿಷ್ಕರಣೆ ಕಳೆದ ಏಪ್ರಿಲ್ 15, 2025 ರಿಂದಲೇ ಜಾರಿಗೆ ಬಂದಿದೆ.

ಆರ್‌ಬಿಐ ರೆಪೋ ದರ ಇಳಿಕೆಯ ಪ್ರಭಾವ

ಆರ್‌ಬಿಐ ಇತ್ತೀಚೆಗೆ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು (0.25%) ಕಡಿಮೆ ಮಾಡಿದೆ. ರೆಪೋ ದರ ಅಂದರೆ ಆರ್‌ಬಿಐ ಇತರೆ ವಾಣಿಜ್ಯ ಬ್ಯಾಂಕ್‌ಗಳಿಗೆ ಕಡಿಮೆ ಅವಧಿಗೆ ಸಾಲ ನೀಡುವ ಬಡ್ಡಿದರ.

ಬ್ಯಾಂಕುಗಳು ಸಾರ್ವಜನಿಕರಿಗೆ ನೀಡುವ ಸಾಲದ ಬಡ್ಡಿದರಗಳು ರೆಪೋ ದರವನ್ನು ಅವಲಂಬಿಸಿತ್ತವೆ. ಹೀಗಾಗಿ ಎಸ್‌ಬಿಐ ತನ್ನ ಹಲವು ಪ್ರಮುಖ ಸಾಲದ ಬಡ್ಡಿದರಗಳನ್ನು ಕಡಿಮೆ ಮಾಡಿದೆ.

Karnataka SSLC 2025 Result- SSLC ಪರೀಕ್ಷೆ-1 ಫಲಿತಾಂಶ ನಾಳೆಯೇ ಪ್ರಕಟ | ರಿಸಲ್ಟ್ ಹೀಗೆ ಚೆಕ್ ಮಾಡಿ…

ಎಸ್‌ಬಿಐ ಬಡ್ಡಿದರಗಳಲ್ಲಿ ಪ್ರಮುಖ ಬದಲಾವಣೆಗಳು
  1. ಇಬಿಆರ್ (External Benchmark Based Rate): ಇಬಿಆರ್ ಅನ್ನು ಎಸ್‌ಬಿಐ 8.90% ರಿಂದ 8.65% ಕ್ಕೆ ಇಳಿಸಿದೆ. ಈ ದರ ಹೋಮ್ ಲೋನ್, ಎಂಎಸ್‌ಎAಇ ಸಾಲಗಳ ಬಡ್ಡಿದರ ನಿರ್ಧಾರಕ್ಕೆ ಮುಖ್ಯ ಆಧಾರವಾಗಿದೆ.
  2. ಆರ್‌ಎಲ್‌ಎಲ್‌ಆರ್ (Repo Linked Lending Rate): ಆರ್‌ಬಿಐ ರೆಪೋ ದರಕ್ಕೆ ನೇರವಾಗಿ ಲಿಂಕ್ ಆಗಿರುವ ಆರ್‌ಎಲ್‌ಎಲ್‌ಆರ್ ಅನ್ನು ಕೂಡ ಶೇಕಡಾ 0.25 ರಷ್ಟು ಇಳಿಸಲಾಗಿದೆ.
  3. ಎಂಸಿಎಲ್‌ಆರ್ (Marginal Cost of Funds based Lending Rate): ಎಂಸಿಎಲ್‌ಆರ್ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಇದರ ಅಡಿಯಲ್ಲಿ ಇರುವ ಸಾಲಗಳ ಬಡ್ಡಿದರ ಸ್ಥಿರವಾಗಿರಲಿದೆ.
ಇತ್ತೀಚೆಗೆ ಆರ್‌ಬಿಐ ರೆಪೋ ದರವನ್ನು ಇಳಿಕೆ ಮಾಡಿದ ನಂತರ ದೇಶದ ಅತೀ ದೊಡ್ಡ ಬ್ಯಾಂಕ್ ಎಸ್‌ಬಿಐ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ...
SBI Loan Interest Rate Cut
ಗೃಹ ಸಾಲದ ಬಡ್ಡಿದರಗಳು

ಎಸ್‌ಬಿಐ ಇತ್ತೀಚೆಗೆ ಗೃಹ ಸಾಲದ ಬಡ್ಡಿದರಗಳ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿದ್ದು, ಹೊಸ ಗ್ರಾಹಕರಿಗೆ ಇದು ಲಾಭದಾಯಕವಾಗಿದೆ. ಏಪ್ರಿಲ್ 2025ರಿಂದ ಬದಲಾದ ಗೃಹಸಾಲಗಳ ಬಡ್ಡಿದರ ಈ ಕೆಳಗಿನಂತಿದೆ:

  • ಸಾಮಾನ್ಯ ಹೋಮ್ ಲೋನ್: 8.00% – 8.95% (ಸಿಬಿಲ್ ಸ್ಕೋರ್ ಆಧಾರಿತ)
  • ಮ್ಯಾಕ್ಸ್ಗೇನ್ (Maxgain) ಹೋಮ್ ಲೋನ್: 8.25% – 9.15%
  • ಟಾಪ್-ಅಪ್ ಲೋನ್‌ಗಳು: 8.30% – 10.80%

ಹೆಚ್ಚಿನ ಸಿಬಿಲ್ ಸ್ಕೋರ್ ಅಂದರೆ, 750ಕ್ಕಿಂತ ಮೇಲ್ಮಟ್ಟದ ಸಿಬಿಲ್ ಸ್ಕೋರ್ ಹೊಂದಿದ್ದರೆ ಮಾತ್ರ ಮೇಲ್ಕಾಣಿಸಿದ ಕಡಿಮೆ ಬಡ್ಡಿದರದ ಲಾಭ ಗ್ರಾಹಕರಿಗೆ ಸಿಗಲಿದೆ.

Gruhalakshmi Three Months Payment- ಒಂದೇ ತಿಂಗಳಲ್ಲಿ ಮೂರು ಕಂತಿನ ₹6,000 ಗೃಹಲಕ್ಷ್ಮೀ ಹಣ ಜಮಾ | ಮಹಿಳಾ ಸಚಿವರು ಹೇಳಿದ್ದೇನು?

ಎಂಸಿಎಲ್‌ಆರ್ ದರಗಳ ವಿವರ

MCLR ಎಂದರೆ, ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ ಎಂದರ್ಥ. ಇದು ಬ್ಯಾಂಕ್‌ಗಳು ನೀಡಬಹುದಾದ ಕನಿಷ್ಠ ಬಡ್ಡಿದರವಾಗಿದ್ದು, ಈ ದರಕ್ಕಿಂತ ಕಡಿಮೆ ಬಡ್ಡಿಗೆ ಸಾಲ ನೀಡಲು ಅನುಮತಿಸುವುದಿಲ್ಲ. ಎಂಸಿಎಲ್‌ಆರ್ ದರಗಳ ವಿವರ ಈ ಕೆಳಗಿನಂತಿದೆ:

  • 1 ರಾತ್ರಿ- 8.20%
  • 1 ತಿಂಗಳು- 8.20%
  • 3 ತಿಂಗಳು- 8.55%
  • 6 ತಿಂಗಳು- 8.90%
  • 1 ವರ್ಷ- 9.00%
  • 2 ವರ್ಷ- 9.05%
  • 3 ವರ್ಷ- 9.10%

Google Pay Instant Loan Info- 9 ಲಕ್ಷ ರೂ. ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲಿಯೇ ಅರ್ಜಿ ಹಾಕಿ | ಇಲ್ಲಿದೆ ಸಂಪೂರ್ಣ ಮಾಹಿತಿ…

ಗ್ರಾಹಕರಿಗೆ ಇದರಿಂದೇನು ಲಾಭ?
  • ರೆಪೋ ದರ ಇಳಿಕೆಯಿಂದ ನೇರವಾಗಿ ಬಡ್ಡಿದರಗಳು ಕಡಿಮೆಯಾಗುತ್ತವೆ. ಹೊಸ ಗ್ರಾಹಕರಿಗೆ ಇದು ಅತ್ಯುತ್ತಮ ಸಮಯವಾಗಿ ಪರಿಗಣಿಸಬಹುದು.
  • ಹೋಮ್ ಲೋನ್, ಎಜುಕೇಶನ್ ಲೋನ್ ಅಥವಾ ಪರ್ಸನಲ್ ಲೋನ್ ಪಡೆಯುವವರಿಗೆ ಕಡಿಮೆ ಬಡ್ಡಿದರದ ಲಾಭ ಸಿಗುತ್ತದೆ.
  • ಫ್ಲೋಟಿಂಗ್ ಬಡ್ಡಿದರ ಹೊಂದಿರುವ ಹಳೆಯ ಸಾಲಗಳ ಮಾಸಿಕ ಕಂತುಗಳು (Monthly EMI) ಕೂಡ ಕಡಿಮೆಯಾಗುವ ಸಾಧ್ಯತೆ ಇದೆ.
ಗೃಹ ಸಾಲ ಪಡೆಯಲು ಉತ್ತಮ ಅವಕಾಶ

ಕಡಿಮೆ ಬಡ್ಡಿದರದ ಲಾಭ ಪಡೆಯಲು ಉತ್ತಮ ಸಿಬಿಲ್ ಸ್ಕೋರ್ ಅತ್ಯಗತ್ಯವಾಗಿದೆ. ಲೋನ್ ಪ್ರೊಸೆಸಿಂಗ್ ಫೀಸ್, ಇನ್ಶೂರೆನ್ಸ್ ಪ್ರೀಮಿಯಂ ಮೊದಲಾದ ಅಡಚಣೆಗಳು ಇದ್ದರೂ, ಬಡ್ಡಿದರ ಕಡಿತ ಒಟ್ಟು ಸಾಲದ ವೆಚ್ಚದಲ್ಲಿ ರಿಯಾಯಿತಿ ತರುತ್ತದೆ.

ಎಲ್ಲ ಬಡ್ಡಿದರಗಳ ಸಮಗ್ರ ಪರಿಶೀಲನೆಯ ಬಳಿಕ, ನಿಮ್ಮ ಆದಾಯ, ಸಾಲ ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ಮಾಡುವುದು ಸೂಕ್ತ. ಎಸ್‌ಬಿಐ ಈಗ ನೀಡುತ್ತಿರುವ ಕಡಿಮೆ ಬಡ್ಡಿದರವು ಗೃಹ ಸಾಲ ಪಡೆಯುವವರಿಗೆ ಉತ್ತಮ ಅವಕಾಶವಾಗಿದೆ. ಸರಿಯಾದ ಯೋಜನೆ ಮಾಡಿಕೊಂಡರೆ ಕಡಿಮೆ ಬಡ್ಡಿದರದ ಈ ಅವಕಾಶವನ್ನು ಬಳಸಿಕೊಳ್ಳಬಹುದು.

Low Interest Home Loan- ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ಪಡೆಯುವ ಸರಳ ವಿಧಾನ | ಪ್ರಮುಖ ಬ್ಯಾಂಕುಗಳ ಪಟ್ಟಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!