SBI CBO Recruitment Bengaluru 2025- ಬೆಂಗಳೂರು ವೃತ್ತ ಎಸ್‌ಬಿಐ ಬ್ಯಾಂಕುಗಳ 289 ಹುದ್ದೆಗಳಿಗೆ ಅರ್ಜಿ ಆಹ್ವಾನ | ಕನ್ನಡ ಬಲ್ಲವರಿಗೆ ಅವಕಾಶ

Spread the love

WhatsApp Group Join Now
Telegram Group Join Now

ಬೆಂಗಳೂರಿನ ಎಸ್‌ಬಿಐ ಬ್ಯಾಂಕಿನ ವಿವಿಧ ಬ್ರಾಂಚುಗಳ ಸರ್ಕಲ್ ಬೇಸ್ಡ್ ಆಫೀಸರ್ (SBI CBO Recruitment Bengaluru 2025) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2025ನೇ ಸಾಲಿನ Circle Based Officer (CBO) ಹುದ್ದೆಗಳ ನೇಮಕಾತಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ದೇಶದಾದ್ಯಾಂತ ಒಟ್ಟು 2,964 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು; ಬೆಂಗಳೂರು ವೃತ್ತಕ್ಕೆ 289 ಹುದ್ದೆಗಳನ್ನು ಮೀಸಲಿಡಲಾಗಿದೆ.

ಈ ಹಿಂದೆ ಪ್ರಕಟಿಸಿದ ಅಧಿಸೂಚನೆಯಲ್ಲಿ, ಈಶಾನ್ಯ ವಲಯದ ರಾಜ್ಯಗಳಿಗೆ ಸ್ಥಳೀಯ ಭಾಷೆ ಸೂಚಿಸಲು ಅವಕಾಶ ನೀಡಲಾಗಿತ್ತು. ಆದರೆ, ಇಂಗ್ಲಿಷ್ ಅನ್ನು ಭಾಷಾ ಆಯ್ಕೆ ಪಟ್ಟಿಯಲ್ಲಿ ಸೇರಿಸಲಾಗಿರಲಿಲ್ಲ. ಇದನ್ನು ತಿದ್ದುಪಡಿ ಮಾಡಿ ಇದೀಗ ಹೊಸ ಅಧಿಸೂಚನೆಯು ಬಿಡುಗಡೆಯಾಗಿದೆ.

ಇದರಿಂದಾಗಿ, ನಾಗಾಲ್ಯಾಂಡ್ ಹಾಗೂ ಅರುಣಾಚಲ ಪ್ರದೇಶದ ಅಭ್ಯರ್ಥಿಗಳಿಗೆ ಇಂಗ್ಲಿಷ್ ಭಾಷೆಯನ್ನು ಸ್ಥಳೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಈ ಹಿಂದೆ ಮೇ ತಿಂಗಳಿನಲ್ಲಿ ಅಧಿಸೂಚನೆ ಹೊರಡಿಸಿದಾಗ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸಬೇಕಾಗಿಲ್ಲ ಎಂದು ಎಸ್‌ಬಿಐ ತಿಳಿಸಿದೆ.

KCET Counselling Date- ಜುಲೈ ಮೊದಲ ವಾರ ಕೆಸಿಇಟಿ ಕೌನ್ಸೆಲಿಂಗ್ ಆರಂಭ | ವಿಳಂಬಕ್ಕೆ ಕಾರಣವೇನು? ಕೆಇಎ ಸ್ಪಷ್ಟನೆ ಇಲ್ಲಿದೆ…

ಬೆಂಗಳೂರು ವೃತ್ತ ಹುದ್ದೆಗಳ ವಿವರ

ರಾಜಧಾನಿ ಬೆಂಗಳೂರು ವೃತ್ತಕ್ಕೆ ಒಟ್ಟು 289 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ವರ್ಗವಾರು ಹಂಚಿಕೆ ಈ ರೀತಿ ಇದೆ:

  • ಸಾಮಾನ್ಯ ವರ್ಗ (UR): 103
  • ಓಬಿಸಿ: 77
  • ಎಸ್‌ಸಿ: 27
  • ಎಸ್‌ಟಿ: 27
  • ಆರ್ಥಿಕ ದುರ್ಬಲ ವರ್ಗ (EWS): 25
ಅರ್ಜಿ ಸಲ್ಲಿಕೆ ಅರ್ಹತೆಗಳು

ಯಾವುದೇ ಪದವಿಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಥವಾ ಮೆಡಿಕಲ್, ಎಂಜಿನಿಯರಿAಗ್, ಚಾರ್ಟರ್ಡ್ ಅಕೌಂಟೆಂಟ್ ಅಥವಾ ಕಾಸ್ಟ್ ಅಕೌಂಟೆಂಟ್ ಪದವಿ (ಅಥವಾ ತತ್ಸಮಾನ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೂ ಕೂಡ ಅವಕಾಶವಿದೆ.

ಗಮನಾರ್ಹವೆಂದರೆ, ಕನಿಷ್ಠ ಎರಡು ವರ್ಷಗಳ ಕಾಲ ಬ್ಯಾಂಕಿಂಗ್ ಅನುಭವ ಹೊಂದಿರಬೇಕು. 30 ವರ್ಷದೊಳಗಿನವರೇ ಅರ್ಜಿ ಸಲ್ಲಿಸಲು ಅರ್ಹ. ಮೀಸಲಾತಿ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಕನ್ನಡ ಓದು-ಬರಹ ಬಲ್ಲವರಿಗೆ ಆದ್ಯತೆ

ಬೆಂಗಳೂರು ವೃತ್ತದ ಎಸ್‌ಬಿಐ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯವಾಗಿದೆ. ಅಭ್ಯರ್ಥಿಗಳು ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬಲ್ಲವರಾಗಿರಬೇಕು. ಸ್ಥಳೀಯ ಭಾಷಾ ನಿಪುಣತೆ ಹೊಂದಿದವರಿಗೆ ಮಾತ್ರ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುತ್ತದೆ.

PMAY Housing Loan Subsidy- ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ₹2.67 ಲಕ್ಷ ವರೆಗೆ ಸಹಾಯಧನ | ಪಿಎಂ ಆವಾಸ್ ಯೋಜನೆಗೆ ಅರ್ಜಿ ಆಹ್ವಾನ

ಬೆಂಗಳೂರಿನ ಎಸ್‌ಬಿಐ ಬ್ಯಾಂಕಿನ ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
SBI CBO Recruitment Bengaluru 2025 June 30
ವೇತನ ಮತ್ತು ಸವಲತ್ತುಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – ಸರ್ಕಲ್ ಬೇಸ್ಡ್ ಆಫೀಸರ್ (ಸಿಬಿಒ) ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಮಾಸಿಕ ₹48,480 ರಿಂದ ₹85,920 ವರೆಗೆ ವೇತನ ನಿಗದಿಪಡಿಸಲಾಗಿದೆ. DA, HRA, TA ಸೇರಿದಂತೆ ಎಲ್ಲಾ ಬಗೆಯ ಸರ್ಕಾರಿ ಸವಲತ್ತುಗಳು ಲಭ್ಯವಿವೆ. ನೇಮಕಾದ ಬಳಿಕ ಆರು ತಿಂಗಳ ಪ್ರಯೋಗಾತ್ಮಕ ಅವಧಿ ಇರುತ್ತದೆ.

ಅರ್ಜಿ ಶುಲ್ಕ ವೆಷ್ಟು?
  • ಸಾಮಾನ್ಯ, ಓಬಿಸಿ, ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ₹750
  • ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿಗೆ: ಶುಲ್ಕವಿಲ್ಲ (ಉಚಿತ)
ಪರೀಕ್ಷೆ ಹೇಗಿರುತ್ತದೆ?

ವಸ್ತುನಿಷ್ಠ ಪರೀಕ್ಷೆ (Objective – 120 ಅಂಕ): ಇಂಗ್ಲಿಷ್ ಭಾಷಾ ಜ್ಞಾನ, ಬ್ಯಾಂಕಿಂಗ್ ಅವಗಾಹನೆ, ಸಾಮಾನ್ಯ ಜ್ಞಾನ, ಕಂಪ್ಯೂಟರ್ ಜ್ಞಾನ ನಾಲೇಜ್‌ಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.

ವಿವರಣಾತ್ಮಕ ಪರೀಕ್ಷೆ (Descriptive – 50 ಅಂಕ): ಇಂಗ್ಲಿಷ್ ಭಾಷೆಯಲ್ಲಿ ಪತ್ರ ಬರವಣಿಗೆ ಹಾಗೂ ಪ್ರಬಂಧಗಳನ್ನು ಒಳಗೊಂಡಿರುತ್ತದೆ. ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕ ಕಡಿತ ಇರುವುದಿಲ್ಲ. ಇದರಲ್ಲಿ ಅರ್ಹತೆ ಪಡೆದವರು ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.

DA Hike July 2025- ಸರ್ಕಾರಿ ನೌಕರರಿಗೆ ಜುಲೈನಿಂದ ತುಟ್ಟಿಭತ್ಯೆ (DA) ಹೆಚ್ಚಳ | ಸಂಬಳ ಎಷ್ಟು ಏರಿಕೆಯಾಗಲಿದೆ?

ಸಂದರ್ಶನ ಮತ್ತು ತರಬೇತಿ
WhatsApp Group Join Now
Telegram Group Join Now

ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಸಂದರ್ಶನದ ಹಂತಕ್ಕೆ ಬರುತ್ತಾರೆ. ಎಸ್‌ಸಿ, ಎಸ್‌ಟಿ, ಓಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಇದನ್ನು ಅರ್ಜಿ ಸಲ್ಲಿಸುವಾಗಲೇ ಆಯ್ಕೆ ಮಾಡಿಕೊಳ್ಳಬೇಕು.

ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆಯ ಆರಂಭ: ಪ್ರಾರಂಭವಾಗಿದೆ
  • ಕೊನೆಯ ದಿನಾಂಕ: ಜೂನ್ 30, 2025
  • ಆನ್‌ಲೈನ್ ಪರೀಕ್ಷೆ: ಜುಲೈ 2025
ಮುಖ್ಯ ಸೂಚನೆಗಳು
  • ಒಬ್ಬ ಅಭ್ಯರ್ಥಿ ಒಂದು ಅರ್ಜಿ ಮಾತ್ರ ಸಲ್ಲಿಸಬಹುದು.
  • ಅಭ್ಯರ್ಥಿಗಳು ಪ್ರವೇಶಪತ್ರವನ್ನು ಬ್ಯಾಂಕ್ ವೆಬ್‌ಸೈಟ್’ನಿಂದ ಸ್ವತಃ ಡೌನ್‌ಲೋಡ್ ಮಾಡಿಕೊಳ್ಳಬೇಕು.
  • ಯಾವುದೇ ಮುದ್ರಿತ ಪ್ರವೇಶ ಪತ್ರ ಮನೆಗೆ ಕಳುಹಿಸಲಾಗದು.
  • ಅಭ್ಯರ್ಥಿಗಳು ಪರೀಕ್ಷೆ ಸಮಯದಲ್ಲಿ ಸರ್ಕಾರದಿಂದ ಮಾನ್ಯ ದಾಖಲೆಗಳೊಂದಿಗೆ ಹಾಜರಾಗಬೇಕು.

ಉತ್ತಮ ವೇತನ ಹಾಗೂ ಭದ್ರ ಭವಿಷ್ಯದ ನಿರೀಕ್ಷೆ ಹೊಂದಿದ ಅಭ್ಯರ್ಥಿಗಳಿಗೆ ಎಸ್‌ಬಿಐ ಸಿಬಿಒ ಹುದ್ದೆಗಳು ಒಂದು ಅಪೂರ್ವ ಅವಕಾಶವಾಗಿದೆ. ಕನ್ನಡ ಭಾಷೆ ಬಲ್ಲ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಸರಕಾರಿ ಬ್ಯಾಂಕ್ ಉದ್ಯೋಗವು ಈಗ ಸಾಕಷ್ಟು ಹತ್ತಿರವಾಗಿದೆ. ಅರ್ಹ ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಅರ್ಜಿ ಸಲ್ಲಿಸಿ ಈ ಈ ಸುವರ್ಣಾವಕಾಶ ಬಳಸಿಕೊಳ್ಳಿ…

ಅರ್ಜಿ ಲಿಂಕ್: Apply Now

Railway Technician Recruitment 2025- SSLC, ITI ಅಭ್ಯರ್ಥಿಗಳಿಂದ ಹುಬ್ಬಳ್ಳಿ, ಬೆಂಗಳೂರು ರೈಲ್ವೆ ಹುದ್ದೆಗಳಿಗೆ ಅರ್ಜಿ ಆಹ್ವಾನ


Spread the love
error: Content is protected !!