AgricultureGovt SchemesNews

Rural Godown Subsidy Scheme- ರೈತರಿಗೆ ಗೋದಾಮು ನಿರ್ಮಾಣಕ್ಕೆ ಸಹಾಯಧನ | ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…

Grameen Bhandaran Yojana (GBY) Details

Spread the love

ಗೋದಾಮು ನಿರ್ಮಾಣ ಮಾಡಲು ‘ಗ್ರಾಮೀಣ ಭಂಡಾರಣ್ ಯೋಜನೆ’ಯಡಿ (Rural Godown Subsidy Scheme) ನಬಾರ್ಡ್ ಸಹಯೋಗದಲ್ಲಿ ಸಹಾಯಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಅತಿಯಾದ ಮಳೆ ಮತ್ತು ಪ್ರಕೃತಿ ವಿಕೋಪಗಳಿಂದ ಕೃಷಿ ಉತ್ಪನ್ನಗಳನ್ನು ರಕ್ಷಿಸಿಡಲು ಗೋದಾಮುಗಳು ಅತ್ಯವಶ್ಯಕವಾಗಿವೆ. ರೈತರು ಸಣ್ಣ ಪ್ರಮಾಣದ ಗೋದಾಮು ನಿರ್ಮಾಣ ಮಾಡಿಕೊಳ್ಳಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಸಹಾಯಧನ ಪಡೆಯಬಹುದಾಗಿದೆ.

ಇದರ ಯೋಜನೆ ಗೋದಾಮು ನಿರ್ಮಾಣಕ್ಕಾಗಿ ‘ನಬಾರ್ಡ್’ (Nabard) ಸಹಯೋಗದಲ್ಲಿ ‘ಗ್ರಾಮೀಣ ಭಂಡಾರಣ್ ಯೋಜನೆ’ಯಡಿ (Grameen Bhandaran Yojana) ಸಹಾಯಧನ ಲಭ್ಯವಿದ್ದು; ರೈತರು, ರೈತ ಗುಂಪುಗಳು, ಸಹಕಾರಿ ಸಂಘಗಳು, ಸರ್ಕಾರೇತರ ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.

LIC Golden Jubilee Scholarship Scheme 2025- ಎಲ್‌ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | 40,000 ರೂ. ಆರ್ಥಿಕ ನೆರವು

ಗ್ರಾಮೀಣ ಭಂಡಾರಣ್ ಯೋಜನೆ ಸಬ್ಸಿಡಿ

ಗ್ರಾಮೀಣ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡಲು ಗೋದಾಮು ನಿರ್ಮಾಣಕ್ಕೆ ‘ನಬಾರ್ಡ್’ ಸಹಯೋಗದಲ್ಲಿ ‘ಗ್ರಾಮೀಣ ಭಂಡಾರಣ್ ಯೋಜನೆ’ಯನ್ನು (Grameen Bhandaran Yojana- GBY) ಅನುಷ್ಠಾನಗೊಳಿಸಲಾಗಿದೆ.

ಹೊಸದಾಗಿ ಗೋದಾಮು ನಿರ್ಮಾಣ ಮಾಡಲು ಹಾಗೂ ಈಗಾಗಲೇ ನಿರ್ಮಾಣವಾಗಿರುವ ಗೋದಾಮುಗಳ ನವೀಕರಣಕ್ಕೆ ಈ ಯೋಜನೆಯಡಿ ಸಹಾಯಧನ ಪಡೆಯುವುದು ಹೇಗೆ? ಸಬ್ಸಿಡಿ ಮೊತ್ತವೆಷ್ಟು? ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರವನ್ನು ಇಲ್ಲಿ ನೋಡೋಣ…

ಗೋದಾಮು ನಿರ್ಮಾಣ ಮಾಡಲು ‘ಗ್ರಾಮೀಣ ಭಂಡಾರಣ್ ಯೋಜನೆ’ಯಡಿ ನಬಾರ್ಡ್ ಸಹಯೋಗದಲ್ಲಿ ಸಹಾಯಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
Rural Godown Subsidy Scheme
ಯಾರಿಗೆಲ್ಲ ಸಿಗಲಿದೆ ಗೋದಾಮು ಸಹಾಯಧನ?

ಹೆಸರೇ ಹೇಳುವಂತೆ ಇದು ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳನ್ನು ಸಂರಕ್ಷಿಸಿಡುವ ಉದ್ದೇಶದಿಂದ ಅನುಷ್ಠಾನಗೊಳಿಸಲಾದ ಯೋಜನೆಯಾಗಿದೆ. ಗ್ರಾಮಾಂತರ ಪ್ರದೇಶದ ರೈತರು, ರೈತರ ಗುಂಪುಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ರೈತರು ಮತ್ತು ರೈತ ಗುಂಪುಗಳು ಮಾತ್ರವಲ್ಲದೇ ಸಹಕಾರಿ ಸಂಘಗಳು, ಕೃಷಿ ಸಂಸ್ಕರಣಾ ನಿಗಮಗಳು, ಸರ್ಕಾರೇತರ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಹಾಗೂ ವ್ಯಕ್ತಿಗಳು ಮತ್ತು ಪಾಲುದಾರಿಕೆ ಸಂಸ್ಥೆಗಳು ಕೂಡ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿದೆ.

Mobile Canteen Subsidy- ಮೊಬೈಲ್ ಕ್ಯಾಂಟೀನ್ ತೆರೆಯಲು ಅರ್ಜಿ ಆಹ್ವಾನ | 4 ಲಕ್ಷ ರೂ. ಸಹಾಯಧನ

ಗೋದಾಮು ನಿರ್ಮಾಣಕ್ಕೆ ಸಬ್ಸಿಡಿ ಮೊತ್ತವೆಷ್ಟು?

ಗ್ರಾಮೀಣ ಭಂಡಾರಣ್ ಯೋಜನೆಯಡಿ ಗೋದಾಮು ನಿರ್ಮಾಣಕ್ಕೆ ವರ್ಗವಾರು ಸಹಾಯಧನ ಹಂಚಿಕೆ ಮಾಡಲಾಗಿದ್ದು; ಒಟ್ಟು ಘಟಕ ವೆಚ್ಚದ ಶೇ.15ರಿಂದ ಶೇ.33.33ರಷ್ಟು ಸಹಾಯಧನ ಪಡೆಯಲು ಅವಕಾಶವಿದೆ. ವರ್ಗವಾರು ಸಬ್ಸಿಡಿ ಮೊತ್ತದ ವಿವರ ಈ ಕೆಳಗಿನಂತಿದೆ:

  • ಎಸ್‌ಸಿ/ಎಸ್‌ಟಿ ಉದ್ಯಮಿಗಳು ಮತ್ತು ಸಹಕಾರಿ ಸಂಸ್ಥೆಗಳು: ಬಂಡವಾಳ ವೆಚ್ಚದ 33.33%, ₹3 ಕೋಟಿಗಳ ವರೆಗೆ
  • ರೈತರು, ಕೃಷಿ ಪದವೀಧರರು ಮತ್ತು ಸಹಕಾರಿ ಸಂಸ್ಥೆಗಳು: ಬಂಡವಾಳ ವೆಚ್ಚದ 25%, ₹2.25 ಕೋಟಿಗಳ ವರೆಗೆ
  • ವ್ಯಕ್ತಿಗಳು, ಕಂಪನಿಗಳು ಮತ್ತು ನಿಗಮಗಳು: ಬಂಡವಾಳ ವೆಚ್ಚದ 15%, ₹1.35 ಕೋಟಿಗಳ ವರೆಗೆ

Bagar Hukum- 42 ಸಾವಿರ ಬಗರ್‌ಹುಕುಂ ಅರ್ಜಿ ತಿರಸ್ಕಾರ | ಯಾರೆಲ್ಲ ಅನರ್ಹರು? ಇಲ್ಲಿದೆ ಮಾಹಿತಿ…

ಅರ್ಜಿ ಸಲ್ಲಿಸುವುದು ಹೇಗೆ?

ಗೋದಾಮು ನಿರ್ಮಾಣ ಮಾಡಲು ಇಚ್ಛಿಸುವ ಅರ್ಹ ಫಲಾನುಭವಿಗಳು ಗ್ರಾಮೀಣ ಭಂಡಾರಣ್ ಯೋಜನೆಯಡಿ ಸಹಾಯಧನ ಸೌಲಭ್ಯ ಪಡೆಯಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ನಬಾರ್ಡ್ ಸಂಸ್ಥೆಯ ಅಧಿಕಾರಿಗಳನ್ನು ಭೇಟಿಯಾಗಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ.

ಗೋದಾಮಿನ ಗಾತ್ರ ಮತ್ತು ನಿರ್ಮಾಣ ವೆಚ್ಚದ ಯೋಜನಾ ವರದಿ, ಗೋದಾಮು ನಿರ್ಮಾಣ ಮಾಡಲಿರುವ ಭೂಮಿಯ ಮಾಲೀಕತ್ವದ ದಾಖಲೆಗಳು, ಬ್ಯಾಂಕಿನ ಸಾಲ ಅನುಮೋದನೆ ದಾಖಲೆಗಳು, ಬ್ಯಾಂಕ್ ಪಾಸ್ ಬುಕ್ ಪ್ರತಿ, ಫೋಟೋ, ಆಧಾರ್ ಕಾರ್ಡ್ ಮುಂತಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಆಸಕ್ತ ರೈತರು ನಾವು ಕೆಳಗೆ ನೀಡಿರುವ ಗ್ರಾಮೀಣ ಭಂಡಾರಣ್ ಯೋಜನೆ ಕುರಿತ ಸಂಪೂರ್ಣ ಮಾಹಿತಿಯುಳ್ಳ ಮಾರ್ಗಸೂಚಿಯನ್ನು ಡೌನ್‌ಲೋಡ್ ಮಾಡಿ, ಓದಿ. ಸಂಪೂರ್ಣ ಮಾಹಿತಿ ಪಡೆದ ನಂತರ ಅರ್ಜಿ ಸಲ್ಲಿಸಬಹುದಾಗಿದೆ.

  • ಗೋದಾಮು ನಿರ್ಮಾಣ ಮಾರ್ಗಸೂಚಿ: Downkoad
  • ಗ್ರಾಮೀಣ ಭಂಡಾರಣ್ ಯೋಜನೆ ಅಧಿಕೃತ ವೆಬ್‌ಸೈಟ್: dmi.gov.in

Karnataka Gramin Bank Recruitment 2025- ಕರ್ನಾಟಕ ಗ್ರಾಮೀಣ ಬ್ಯಾಂಕ್ 1,425 ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಲ್ಲಾ ಹಂತದ ವಿದ್ಯಾರ್ಹತೆಗೂ ಅವಕಾಶ


Spread the love
WhatsApp Group Join Now
Telegram Group Join Now

Related Articles

Back to top button
error: Content is protected !!