ಅನರ್ಹರ ರೇಷನ್ ಕಾರ್ಡು ರದ್ದು (Ration Card Raddu) ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಪಡಿತರ ಚೀಟಿಯ ಅರ್ಹತಾ ಮಾನದಂಡಗಳನ್ನು ಉಲ್ಲಂಘಿಸಿ ಸುಳ್ಳು ಮಾಹಿತಿ ಒದಗಿಸಿ ಪಡೆದಿರುವ ಬಿಪಿಎಲ್ ರೇಷನ್ ಕಾರ್ಡುಗಳನ್ನು ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸಿಎಂ ಸೂಚನೆ ಏನು?
2025ರ ಮೇ 30ರಂದು ವಿಧಾನಸೌಧದಲ್ಲಿ ನಡೆದ ರಾಜ್ಯದ ‘ಪ್ರಗತಿ ಪರಿಶೀಲನೆ ಸಭೆ’ಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ಸಭೆ ನಡೆಸಿದ ವೇಳೆ, ಈ ವಿಷಯ ಗಂಭೀರವಾಗಿ ಎತ್ತಿಹಿಡಿದರು.
ಈಗಾಗಲೇ ಅನರ್ಹ ಕಾರ್ಡುಗಳನ್ನು ರದ್ದುಪಡಿಸಲು ಸೂಚನೆ ನೀಡಿದ್ದರೂ ಪ್ರಗತಿ ಯಾಕೆ ನಿಧಾನ? ಯಾವ ಪ್ರಮಾಣದ ಕಾರ್ಡ್ಗಳು ನಿಜಕ್ಕೂ ಅರ್ಹವಿದೆ? ಶೇ.80-90 ಅರ್ಹತೆ ಹೊಂದಿರುವ ಜಿಲ್ಲೆಗಳು ಹೇಗೆ ಸಾಧ್ಯ?
ಯಾವುದೇ ಜಿಲ್ಲೆಯಲ್ಲಿಯೂ ಶೇ. 60ಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್’ಗಳು ನೈಜವಾಗಿ ಹೊಂದಿರುವ ಸಾಧ್ಯತೆ ಕಡಿಮೆ. ಹಾಗಿದ್ದರೆ ಶೇ.80-90 ಅರ್ಹತೆ ಹೊಂದಿರಲು ಹೇಗೆ ಸಾಧ್ಯ? ಇಂತಹ ಕಾರ್ಡುಗಳು ಶಂಕಾಸ್ಪದವಾಗಿವೆ. ತಕ್ಷಣವೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಅನರ್ಹ ಪಡಿತರ ಚೀಟಿ ಶೀಘ್ರ ರದ್ದು!
ರಾಜ್ಯದ ಬಡ ಕುಟುಂಬಗಳಿಗೆ ಸರ್ಕಾರ ಹಲವು ಮಹತ್ವದ ಸೌಲಭ್ಯಗಳನ್ನು ಒದಗಿಸುತ್ತಿದೆ. ಆದರೆ ಅನರ್ಹರು ನಕಲಿ ದಾಖಲೆಗಳಿಂದ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಪಡೆದು ಈ ಸೌಲಭ್ಯಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇದರಿಂದ ನಿಜವಾದ ಅರ್ಹರಿಗೆ ಸರ್ಕಾರಿ ಸವಲತ್ತು ಪಡೆಯಲಾಗದಂತಹ ದುಃಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ, ಸಿಎಂ ಸಿದ್ದರಾಮಯ್ಯನವರು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳ ಸಭೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಎತ್ತಿಹಿಡಿದು, ಅನರ್ಹ ಪಡಿತರ ಚೀಟಿಗಳ ಪತ್ತೆ ಹಚ್ಚಿ, ಶೀಘ್ರವಾಗಿ ರದ್ದುಪಡಿಸುವಂತೆ ಸೂಚನೆ ನೀಡಿದ್ದಾರೆ.

ಅನರ್ಹರಿಗೆ ಸರ್ಕಾರಿ ಸೌಲಭ್ಯ
ಸದ್ಯಕ್ಕೆ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್’ದಾರರಿಗೆ ‘ಅನ್ನಭಾಗ್ಯ’ ಯೋಜನೆಯಲ್ಲಿ ಪ್ರತಿ ತಿಂಗಳು ತಲಾ 10 ಕೆ.ಜಿ. ಆಹಾರ ಧಾನ್ಯ ನೀಡಲಾಗುತ್ತಿದೆ. ಜೊತೆಗೆ ಗೃಹಲಕ್ಷಿö್ಮ ಯೋಜನೆಯಡಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದೆ.
ಇದರ ಜೊತೆಗೆ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ವಿದ್ಯುತ್, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಸರ್ಕಾರಿ ಸೌಲಭ್ಯಗಳು ಸಿಗುತ್ತಿವೆ. ಇದೇ ಕಾರಣಕ್ಕೆ ಅನರ್ಹರು ಕೂಡ ನಕಲಿ ದಾಖಲೆ ನೀಡಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದ್ದಾರೆ. ಇದರಿಂದ ಅನರ್ಹರರಿಗೆ ಸರ್ಕಾರಿ ಸೌಲಭ್ಯಗಳು ದುರ್ಬಳಕೆಯಾಗುತ್ತಿವೆ.
ಈಗಾಗಲೇ ರದ್ದಾದ ಕಾರ್ಡುಗಳೆಷ್ಟು?
ಈಗಾಗಲೇ ನಕಲಿ ದಾಖಲಾತಿಗಳೊಂದಿಗೆ ಪಡಿತರ ಚೀಟಿ ಪಡೆದವರನ್ನು ಗುರುತಿಸಿದ ಆಹಾರ ಇಲಾಖೆಯು 2023-24ರಲ್ಲಿ 74,342 ಹಾಗೂ 2024-25ರಲ್ಲಿ 16,719 ಚೀಟಿ ಸೇರಿ ಒಟ್ಟು 91,061 ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಿದೆ.
ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 1,3254 ಬಿಪಿಎಲ್ ಕಾರ್ಡುಗಳು ರದ್ದಾಗಿವೆ. ಎರಡನೇ ಸ್ಥಾನದಲ್ಲಿರುವ ರಾಜಧಾನಿ ಬೆಂಗಳೂರಿನಲ್ಲಿ 7,631 ಕಾರ್ಡುಗಳನ್ನು ರದ್ದುಪಡಿಸಲಾಗಿದೆ. ಅದೇ ರೀತಿ ಮೈಸೂರು ಜಿಲ್ಲೆಯಲ್ಲಿ 6.095, ತುಮಕೂರು ಜಿಲ್ಲೆಯಲ್ಲಿ 5,222 ಹಾಗೂ ಧಾರವಾಡ ಜಿಲ್ಲೆಯಲ್ಲಿ 3,722 ಬಿಪಿಎಲ್ ಕಾರ್ಡುಗಳು ರದ್ದಾಗಿವೆ.
ಯಾವ್ಯಾವ ಕಾರ್ಡ್ ರದ್ದು?
- ಆದಾಯ ತೆರಿಗೆ ಪಾವತಿದಾರರು
- ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚಿರುವವರು
- ದೊಡ್ಡ ಹಿಡುವಳಿದಾರ ರೈತರು
- ಸರ್ಕಾರಿ ನೌಕರರು
- ಮೃತ ಫಲಾನುಭವಿಗಳು
- ಆರು ತಿಂಗಳಿಂದ ಪಡಿತರ ಪಡೆಯದ ಕಾರ್ಡ್
e-Swathu Property Details- ನಿಮ್ಮ ಆಸ್ತಿಯ ಇ-ಸ್ವತ್ತು ದಾಖಲೆಯನ್ನು ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಿರಿ
ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ಮೊಬೈಲ್’ನಲ್ಲಿಯೇ ನೋಡಿ…
ಮೊಬೈಲ್’ನಲ್ಲಿಯೇ ರದ್ದುಗೊಳಿಸಲಾದ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಫಲಾನುಭವಿಗಳ ಹೆಸರುಗಳನ್ನು (Show cancelled/suspended list) ಚೆಕ್ ಮಾಡಬಹುದಾಗಿದೆ.
- ಮೊದಲಿಗೆ ಆಹಾರ ಇಲಾಖೆ ಇ-ಸರ್ವೀಸ್ ವೆಬ್‌ಸೈಟ್’ಗೆ ahara.karnataka.gov.in ಹೋಗಿ:
- ಅಲ್ಲಿ ‘e-Services’ ಆಯ್ಕೆಮಾಡಿ
- ನಂತರ ‘Show cancelled/suspended list’ ಆಯ್ಕೆಮಾಡಿ
- ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು ಆಯ್ಕೆಮಾಡಿ
- ‘Go’ ಕ್ಲಿಕ್ ಮಾಡಿದರೆ, ರದ್ದಾದ ಕಾರ್ಡಿನ ಹೆಸರು, ದಿನಾಂಕ, ಕಾರಣದ ಮಾಹಿತಿ ಸಿಗುತ್ತದೆ.