ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ 10 ದಿನ ಅವಕಾಶ | ತಪ್ಪದೇ ಈ ಅವಕಾಶ ಬಳಸಿಕೊಳ್ಳಿ Ration Card Correction Karnataka

Spread the love

Ration Card Correction Karnataka : ಬಿಪಿಎಲ್, ಎಪಿಎಲ್ ರೇಷನ್ ಕಾರ್ಡ್’ದಾರರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದೆ. ಈ ಹಿಂದೆ ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಿದ್ದ 20 ದಿನಗಳ ಕಾಲಾವಕಾಶ ಜುಲೈ 31ಕ್ಕೆ ಮುಕ್ತಾಯವಾಗಿದ್ದು; ಇದೀಗ ಪುನಃ 10 ದಿನಗಳ ಕಾಲ ರೇಷನ್​ ಕಾರ್ಡ್​​ ತಿದ್ದುಪಡಿಗೆ ಅವಕಾಶ (Ration Card Updates) ಕಲ್ಪಿಸಲಾಗಿದೆ.

WhatsApp Group Join Now
Telegram Group Join Now

ಪಡಿತರ ಚೀಟಿದಾರರು ಮತ್ತೆ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ಬಗ್ಗೆ ಆಹಾರ ಇಲಾಖೆ ಮಾಹಿತಿ ಹಂಚಿಕೊ೦ಡಿದೆ. ಈ ಅವಧಿಯಲ್ಲಿ ರೇಷನ್ ಕಾಡ್’ðದಾರರು ತಮಗೆ ಅಗತ್ಯವಾದ ತಿದ್ದುಪಡಿ ಮಾಡಿಕೊಳ್ಳುವ ಮೂಲಕ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗಳ ಸೌಲಭ್ಯದ ಜತೆಗೆ ಇತರ ಸರಕಾರಿ ಸೌಲಭ್ಯಗಳನ್ನು ಪಡೆಯಬಹುದು.

ಇದನ್ನೂ ಓದಿ: ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಪಡೆಯಲು ರೈತರಿಂದ ಅರ್ಜಿ ಆಹ್ವಾನ | ಆಗಸ್ಟ್ 31ರೊಳಗೆ ಅರ್ಜಿ ಸಲ್ಲಿಸಿ | ಅರ್ಹ ರೈತರ ಪಟ್ಟಿ ಇಲ್ಲಿದೆ… Ganga Kalyana Free Borewell Scheme

ಮತ್ತೆ ಮತ್ತೆ ಕಾಡಿದ ಸರ್ವರ್ ಸಮಸ್ಯೆ

ಈ ಹಿಂದೆ ಹಲವು ಬಾರಿ ರಾಜ್ಯ ಸರಕಾರ ಎಪಿಎಲ್ (APL Card), ಬಿಪಿಎಲ್ (BPL Card) ಹಾಗೂ ಅಂತ್ಯೋದಯ ಪಡಿತರ ಕಾರ್ಡ್ (Anthyodaya Card) ತಿದ್ದುಪಡಿಗೆ ಅವಕಾಶ ಕಲ್ಪಿಸಿತ್ತು. ಆದರೆ ಬಹುತೇಕರಿಗೆ ಸರ್ವರ್ ಸಮಸ್ಯೆ, ರಜಾ ದಿನಗಳ ನಿಮಿತ್ತ ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ವರ್ಷಗಳಿಂದ ಅವಕಾಶ ಕಲ್ಪಿಸಿಲ್ಲ. ಕೊನೆ ಪಕ್ಷ ತಿದ್ದುಪಡಿಗಾದರೂ ಹೆಚ್ಚಿನ ಸಮಯಾವಕಾಶ ನೀಡುವಂತೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತ ಬಂದಿದೆ. ಹೀಗಾಗಿ ಕಳೆದ ತಿಂಗಳು 20 ದಿನಗಳು, ಈ ತಿಂಗಳು ಆಗಸ್ಟ್’ನಲ್ಲಿ ಮತ್ತೆ 10 ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ ನೀಡÀಲಾಗಿದೆ.

ಇದನ್ನೂ ಓದಿ: ತೋಟಗಾರಿಕೆ ಬೆಳೆಗಳಿಗೆ ನರೇಗಾ ಸಹಾಯಧನ: ಯಾವ ಬೆಳೆಗೆ ಎಷ್ಟು ಹಣ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ… Mnarega Subsidy for Horticulture Crops

ತಿದ್ದುಪಡಿ ದಿನಾಂಕ ಮತ್ತು ಸಮಯ

ಆಗಸ್ಟ್ 1ರಿಂದ 10ರ ವರೆಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಬೆಳಗ್ಗೆ 10 ಗಂಟೆಯಿ೦ದ ರಾತ್ರಿ 9 ಗಂಟೆಯ ವರೆಗೆ ಬಯೋಮೆಟ್ರಿಕ್ ಸೌಲಭ್ಯ ಇರುವ ಗ್ರಾಮ ಒನ್ ಕೇಂದ್ರ (Grama One Center), ಕರ್ನಾಟಕ ಒನ್ (karnataka One) ಹಾಗೂ ಬೆಂಗಳೂರು ಒನ್ (Bangalore One) ಕೇಂದ್ರಗಳಲ್ಲಿ ಪಡಿತರ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

Ration Card Correction Karnataka
ಏನೆಲ್ಲ ತಿದ್ದುಪಡಿ ಮಾಡಬಹುದು?
  • ರೇಷನ್ ಕಾರ್ಡ್’ನಲ್ಲಿರುವ ಫಲಾನುಭವಿಗಳ ಮಾಹಿತಿ
  • ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆ
  • ಮೃತಪಟ್ಟ ಕುಟುಂಬ ಸದಸ್ಯರ ಹೆಸರು ತೆಗೆದು ಹಾಕುವುದು
  • ಐದು ವರ್ಷದೊಳಗಿನ ಮಕ್ಕಳ ಹೆಸರು ಸೇರ್ಪಡೆ
  • ಹೊಸದಾಗಿ ಮದುವೆಯಾಗಿ ಬಂದ ಸೊಸೆಯ ಹೆಸರು ಸೇರ್ಪಡೆ
  • ನ್ಯಾಯಬೆಲೆ ಅಂಗಡಿ ಬದಲಾವಣೆ
  • ಬೇರೆ ಜಿಲ್ಲೆಗೆ ವರ್ಗಾವಣೆ ಸೇರಿದಂತೆ ವಿವಿಧ ತಾಂತ್ರಿಕ ದೋಷಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ರಾಜ್ಯಾದ್ಯಂತ 50 ಲಕ್ಷ ರೇಷನ್ ಕಾರ್ಡ್ ರದ್ದು | ನಿಮ್ಮ ಕಾರ್ಡ್ ಈ ಪಟ್ಟಿಯಲ್ಲಿದೆಯಾ? 50 lakh ration card cancellation

ತಿದ್ದುಪಡಿಗೆ ಬೇಕಾದ ದಾಖಲೆಗಳೇನು?
  • ಪ್ರಸ್ತುತ ಇರುವ ರೇಷನ್ ಕಾರ್ಡ್ ಪ್ರತಿ
  • ಕುಟುಂಬ ಸದಸ್ಯರ ಆಧಾರ್ ಕಾರ್ಡ್
  • ಮಕ್ಕಳು ಮತ್ತು ಹೊಸ ಸೊಸೆಯಂದಿರ ಹೆಸರು ಸೇರ್ಪಡೆಗೆ ಅವರ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ
  • ತೀರಿಹೋದ ಹಿರಿಯರ ಮರಣ ಪ್ರಮಾಣ ಪತ್ರ
  • ಮೊಬೈಲ್ ನಂಬರ್
ತಿದ್ದುಪಡಿ ಎಲ್ಲಿ ಮಾಡಿಸಬೇಕು?

ರೇಷನ್ ಕಾರ್ಡ್’ನಲ್ಲಿನ ತಿದ್ದುಪಡಿಗಾಗಿ ಗ್ರಾಮ ಒನ್, ಕಾಮನ್ ಸರ್ವೀಸ್ ಸೆಂಟರ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು, ತಿದ್ದುಪಡಿಗೆ 10 ದಿನಗಳ ಸಮಯ ನೀಡಲಾಗಿದೆ. ಅರ್ಜಿದಾರರು ಆಗಸ್ಟ್ 01 ರಿಂದ 10ರ ನಡುವೆ ಬೆಳಗ್ಗೆ 10ರಿಂದ ರಾತ್ರಿ 09 ಗಂಟೆಯ ಒಳಗೆ ಅಗತ್ಯ ದಾಖಲೆಗಳ ಸಮೇತ ತಿದ್ದುಪಡಿ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಬಹುದು.

ಇದನ್ನೂ ಓದಿ: 1.73 ಲಕ್ಷ ರೇಷನ್ ಕಾರ್ಡ್ ವಿತರಣೆ | ನಿಮಗೆ ಹೊಸ ರೇಷನ್ ಕಾರ್ಡ್ ಸಿಗುತ್ತಾ? ಮೊಬೈಲ್‌ನಲ್ಲೇ ಚೆಕ್ ಮಾಡಿ… New BPL Ration Card List


Spread the love
WhatsApp Group Join Now
Telegram Group Join Now

Leave a Comment

error: Content is protected !!