ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ (PUC Exam 2 Results 2025) ಇಂದು ಪ್ರಕಟವಾಗಿದೆ. ವಿದ್ಯಾರ್ಥಿಗಳು ಇಲ್ಲಿ ನೀಡಿರುವ ನೇರ ಲಿಂಕ್ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು…
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಇಂದು (ಮೇ 16) ಸಂಜೆ 5 ಗಂಟೆಗೆ ದ್ವಿತೀಯ ಪಿಯುಸಿ ಪರೀಕ್ಷೆ-2ರ (PUC II Exam-2) ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸುತ್ತಿದೆ. ಪರೀಕ್ಷೆ-2 ಬರೆದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್‌ಲೈನ್ ಮೂಲಕ ತ್ವರಿತವಾಗಿ ಪರಿಶೀಲಿಸಬಹುದು.
2.27 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಪ್ರಕಟ
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ದ್ವಿತೀಯ ಪಿಯುಸಿ ಪರೀಕ್ಷೆ-1 (PUC-1) ಫಲಿತಾಂಶ ಪ್ರಕಟವಾದ ಬಳಿಕ, ಅನುತ್ತೀರ್ಣರಾದ ಅಥವಾ ಅಂಕಗಳನ್ನು ಸುಧಾರಿಸಲು ಇಚ್ಛಿಸಿದ ವಿದ್ಯಾರ್ಥಿಗಳಿಗಾಗಿ ಅನ್ನು ಏಪ್ರಿಲ್ 24ರಿಂದ ಮೇ 8ರ ವರೆಗೆ ಪರೀಕ್ಷೆ-2 ಅನ್ನು ನಡೆಸಲಾಗಿತ್ತು. ಈ ವೇಳೆ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಅಂಕಿ-ಅಂಶ ಹೀಗಿದೆ:
- ಪುನರ್ ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳು: 1.57 ಲಕ್ಷ
- ಅಂಕಗಳ ಸುಧಾರಣೆಗಾಗಿ ಹಾಜರಾದವರು: 70,000
- ಒಟ್ಟು ಫಲಿತಾಂಶ ಪ್ರಕಟವಾಗುತ್ತಿರುವ ವಿದ್ಯಾರ್ಥಿಗಳು: 2.27 ಲಕ್ಷ
ಈ ಬಾರಿ ಯಾವುದೇ ಪರೀಕ್ಷಾ ಶುಲ್ಕವಿಲ್ಲದೇ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಲಾಗಿದ್ದರಿಂದಾಗಿ, ಶೇಕಡಾ 92.4ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

ತುರ್ತು ಫಲಿತಾಂಶ ಪ್ರಕಟಣೆಯ ಉದ್ದೇಶ
ವೃತ್ತಿಪರ ಶಿಕ್ಷಣ ಕೋರ್ಸ್ ಪ್ರವೇಶಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಿಇಟಿ (KCET) ಫಲಿತಾಂಶಕ್ಕೆ ಮುನ್ನವೇ KSEAB ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶವನ್ನು ಪ್ರಕಟಿಸುತ್ತಿದೆ. ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಮತ್ತು ಇತರ ವೃತ್ತಿಪರ ಕೋರ್ಸ್ ಪ್ರವೇಶದಲ್ಲಿ ದ್ವಿತೀಯ ಪಿಯುಸಿ ಅಂಕಗಳು ಪ್ರಮುಖ ಪಾತ್ರ ವಹಿಸುತ್ತವೆ.
ಫಲಿತಾಂಶ ಪ್ರಕಟವಾಗುವ ಜಾಲತಾಣಗಳು
ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶವನ್ನು ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ವೀಕ್ಷಿಸಬಹುದು:
ಫಲಿತಾಂಶ ವೀಕ್ಷಿಸುವ ವಿಧಾನ
- ಮೇಲ್ಕಂಡ ಜಾಲತಾಣಗಳಲ್ಲಿ ಯಾವುದನ್ನಾದರೂ ತೆರೆಯಿರಿ.
- ಮುಖ್ಯ ಪುಟದಲ್ಲಿ ‘PUC II Examination-2 Results 2025’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ (Register Number) ಮತ್ತು ಜನ್ಮ ದಿನಾಂಕ (Date of Birth) ನಮೂದಿಸಿ.
- ನಂತರ Submit ಬಟನ್ ಒತ್ತಿ.
- ನಿಮ್ಮ ಫಲಿತಾಂಶವು ಸ್ಕ್ರೀನ್ ಮೇಲೆ ತೋರಿಸುತ್ತದೆ.
- ನೀವು ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಬಹುದು ಅಥವಾ ಪಿಡಿಎಫ್ ರೂಪದಲ್ಲಿ ಉಳಿಸಿಕೊಳ್ಳಬಹುದು.
ಫಲಿತಾಂಶ ಪ್ರಕಟವಾಗುವ ಸಮಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ವೆಬ್‌ಸೈಟ್ ಪ್ರವೇಶಿಸುವ ಕಾರಣ ಕೆಲವೊಮ್ಮೆ ತಾಂತ್ರಿಕ ತೊಂದರೆಗಳು ಕಾಣಿಸಬಹುದು. ಈ ವೇಳೆ ವಿದ್ಯಾರ್ಥಿಗಳು ತಾಳ್ಮೆಯಿಂದ ಪ್ರಯತ್ನ ಮಾಡುವುದು ಉತ್ತಮ.
ಫಲಿತಾಂಶದ ನಂತರ ಮುಂದಿನ ಹಂತ
ಪಿಯುಸಿ ಪರೀಕ್ಷೆ-2 ಫಲಿತಾಂಶ ಪಡೆದ ಬಳಿಕ, ವಿದ್ಯಾರ್ಥಿಗಳು ಮುಂದಿನ ಹಂತಗಳತ್ತ ಕಣ್ಣು ಹರಿಸಲು ಆರಂಭಿಸುತ್ತಾರೆ:
- ಸಿಇಟಿ ಫಲಿತಾಂಶದೊಂದಿಗೆ ಪರಿಗಣನೆ: ಪಿಯುಸಿ ಅಂಕಗಳ ಪ್ರಕಾರ ಸಿಇಟಿ ರ‍್ಯಾಂಕ್ ನಿರ್ಧಾರವಾಗುವ ಸಾಧ್ಯತೆ ಇರುವುದರಿಂದ, ಈ ಫಲಿತಾಂಶ ಮಹತ್ವಪೂರ್ಣವಾಗಿದೆ.
- ಕಾಲೇಜು ಮತ್ತು ಕೋರ್ಸ್ ಆಯ್ಕೆ: ಇಂಜಿನಿಯರಿಂಗ್, ಬಿ.ಕಾಂ, ಬಿ.ಎಸ್‌ಸಿ, ನರ್ಸಿಂಗ್, ಫಾರ್ಮಸಿ, ಹೋಟೆಲ್ ಮ್ಯಾನೇಜ್‌ಮೆಂಟ್ ಸೇರಿದಂತೆ ವಿವಿಧ ಕೋರ್ಸ್’ಗಳಿಗೆ ಪ್ರವೇಶ ಆರಂಭವಾಗಲಿದೆ.
- ವಿದ್ಯಾರ್ಥಿವೇತನಕ್ಕೆ ಅರ್ಜಿ: ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರಿ ವಿದ್ಯಾರ್ಥಿವೇತನ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
ಈ ಫಲಿತಾಂಶವು ವಿದ್ಯಾರ್ಥಿಗಳ ಭವಿಷ್ಯದ ದಿಕ್ಕು ನಿರ್ಧರಿಸುವ ಬಹುಮುಖ್ಯ ಹಂತವಾಗಿದೆ. ಯಶಸ್ಸು ಪಡೆದವರಿಗೆ ಅಭಿನಂದನೆಗಳು. ಈ ಹಂತದಲ್ಲಿ ಸೋತವರೂ ನಿರಾಸೆಯಾಗದಿರಿ- ಇನ್ನೊಂದು ಅವಕಾಶ ನಿಮಗಾಗಿ ಕಾದಿದೆ. ಪರಿಶ್ರಮ ಮತ್ತು ತಾಳ್ಮೆಯೇ ಯಶಸ್ಸಿನ ದಾರಿ…