PM Kisan 20th Installment- ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ₹2,000 ಜಮಾ | ಹಣ ಜಮಾ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

WhatsApp Group Join Now
Telegram Group Join Now

ಕೇಂದ್ರ ಸರ್ಕಾರವು ರೈತರ ಬ್ಯಾಂಕ್ ಖಾತೆಗೆ ಪಿಎಂ ಕಿಸಾನ್ 20ನೇ ಕಂತಿನ 2,000 ರೂ. ಹಣ ಜಮಾ (PM Kisan 20th Installment) ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 20ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ತಾಜಾ ವಿವರಗಳು, ಹಣ ಜಮಾ ತಪಾಸಣೆಯ ವಿಧಾನ, ಅರ್ಹತೆ ಕ್ರಮಗಳು ಹಾಗೂ ಇನ್ನಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವದ ರೈತ ಸಹಾಯ ಯೋಜನೆಯಾಗಿದೆ. ದೇಶದ ಎಲ್ಲಾ ಸಣ್ಣ ಹಾಗೂ ಸೀಮಿತ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ ₹6,000 ನೇರ ನಗದು ಸಹಾಯಧನ ನೀಡುವುದು ಈ ಯೋಜನೆಯ ಉದ್ದೇಶ. ಈ ಹಣವನ್ನು ವರ್ಷದಲ್ಲಿ ಮೂರು ಕಂತುಗಳಲ್ಲಿ ನೀಡಲಾಗುತ್ತದೆ:

  • ಮೊದಲ ಕಂತು (₹2,000): ಏಪ್ರಿಲ್-ಜುಲೈ
  • ಎರಡನೇ ಕಂತು (₹2,000): ಆಗಸ್ಟ್-ನವೆಂಬರ್
  • ಮೂರನೇ ಕಂತು (₹2,000): ಡಿಸೆಂಬರ್-ಮಾರ್ಚ್

Five Days Work Week- ಕಾರ್ಮಿಕರಿಗೆ ಇನ್ಮುಂದೆ ವಾರಕ್ಕೆ ಐದೇ ದಿನ ಕೆಲಸ | ಕಾರ್ಮಿಕ ಇಲಾಖೆ ಮಹತ್ವದ ಅಪ್ಡೇಟ್ಸ್ ಇಲ್ಲಿದೆ…

20ನೇ ಕಂತಿನ ಬಿಡುಗಡೆ ತಾರೀಖು ಏನು?

ಈವರೆಗೆ ಯೋಜನೆಯಡಿ ಒಟ್ಟು 19 ಕಂತುಗಳ ಹಣ ರೈತರ ಖಾತೆಗೆ ಜಮಾ ಮಾಡಲಾಗಿದೆ. ಕೊನೆಯ 19ನೇ ಕಂತಿನ ಹಣವನ್ನು ಕಳೆದ ಫೆಬ್ರವರಿ 2025ರಲ್ಲಿ ಬಿಡುಗಡೆಯಾಗಿತ್ತು.

ಹೀಗಾಗಿ, ಯೋಜನೆಯ ವೇಳಾಪಟ್ಟಿಯ ಪ್ರಕಾರ 20ನೇ ಕಂತಿನ ಹಣವನ್ನು ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ರೈತರ ಖಾತೆಗೆ ನೇರವಾಗಿ ಜಮಾ ಮಾಡುವ ಸಾಧ್ಯತೆ ಇದೆ. ಸರಿಯಾದ ದಾಖಲೆಗಳು ಹೊಂದಿರುವ ರೈತರ ಖಾತೆಗೆ ಯಾವುದೇ ವಿಳಂಬವಿಲ್ಲದೆ ಹಣ ತಲುಪಲಿದೆ.

ಕೇಂದ್ರ ಸರ್ಕಾರವು ರೈತರ ಬ್ಯಾಂಕ್ ಖಾತೆಗೆ ಪಿಎಂ ಕಿಸಾನ್ 20ನೇ ಕಂತಿನ 2,000 ರೂ. ಹಣ ಜಮಾ ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
PM Kisan 20th Installment June 2025 Karnataka Farmers
ಯಾರಿಗೆ ಈ ಹಣ ಲಭಿಸುತ್ತದೆ?

20ನೇ ಕಂತಿನ ಹಣವನ್ನು ಪಡೆಯಲು ರೈತರು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕು:

  • ಇ-ಕೆವೈಸಿ (e-KYC) ಪೂರ್ಣಗೊಳಿಸಿರಬೇಕು
  • ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿರಬೇಕು
  • NPCI ಮಾಪಿಂಗ್ (Aadhaar–DBT ಲಿಂಕ್) ಅಗತ್ಯ
  • ಜಮೀನು ದಾಖಲೆಗಳು ಸರಿಯಾಗಿರಬೇಕು

Karnataka Gruhalakshmi Payment- ಗೃಹಲಕ್ಷ್ಮಿ ಬಾಕಿ ಎಲ್ಲಾ ಕಂತುಗಳ ಹಣ ಮಹಿಳೆಯರ ಖಾತೆಗೆ ಜಮಾ | ನಿಮಗಿನ್ನೂ ಹಣ ಬಂದಿಲ್ಲವೇ? ಇಲ್ಲಿದೆ ಸಂಪೂರ್ಣ ಮಾಹಿತಿ…

ಅರ್ಹರ ಪಟ್ಟಿಯನ್ನು ಹೇಗೆ ಪರಿಶೀಲಿಸಬೇಕು?
  • PM-KISAN ವೆಬ್‌ಸೈಟ್‌ಗೆ ಭೇಟಿ ನೀಡಿ
  • Beneficiary List ಕ್ಲಿಕ್ ಮಾಡಿ
  • ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ
  • Get Report ಕ್ಲಿಕ್ ಮಾಡಿದರೆ, ಹಳ್ಳಿಯ ಅರ್ಹ ರೈತರ ಪಟ್ಟಿ ತೆರೆದುಕೊಳ್ಳುತ್ತದೆ
ಹಣ ಜಮಾ ಸ್ಥಿತಿಯನ್ನು ಪರಿಶೀಲಿಸುವ ವಿಧಾನ

ಇನ್ನು ಪಿಎಂ ಕಿಸಾನ್ ಹಣ ಜಮಾ ವಿವರವನ್ನು ರೈತರು ತಮ್ಮ ಮೊಬೈಲ್‌ನಲ್ಲಿಯೇ ಪರಿಶೀಲಿಸಬಹುದಾಗಿದೆ. ಅದಕ್ಕಾಗಿ ಮೊದಲಿಗೆ ವೆಬ್‌ಸೈಟ್‌ಗೆ ಹೋಗಿ
‘PM-Kisan Status-2025’ ಕ್ಲಿಕ್ ಮಾಡಿ

ನಿಮ್ಮ ರಿಜಿಸ್ಟ್ರೇಷನ್ ಸಂಖ್ಯೆ ಹಾಕಿ, ಕ್ಯಾಪ್ಚಾ ನಮೂದಿಸಿ, ನಿಮ್ಮ ಮೊಬೈಲ್‌ಗೆ ಬಂದ OTP ನಮೂದಿಸಿದರೆ, Latest Installments Details ವಿಭಾಗದಲ್ಲಿ ಕಂತಿನವಾರು ಈ ಯೋಜನೆಯ ಹಣ ಜಮಾ ವಿವರ ತೋರಿಸುತ್ತದೆ.

Uchita Holige Yantra Scheme- ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ | ಜೂನ್ 30ರೊಳಗೆ ಅರ್ಜಿ ಹಾಕಿ

ರೈತರಿಗೆ ಉಪಯುಕ್ತ ಸಲಹೆಗಳು
  • ಬ್ಯಾಂಕ್ ಖಾತೆ ನಿರಂತರವಾಗಿ ಸಕ್ರಿಯವಾಗಿರಲಿ
  • ಮೊಬೈಲ್ ಸಂಖ್ಯೆ ಆಧಾರ್ ಹಾಗೂ ಬ್ಯಾಂಕ್‌ಗಾಗಿ ಲಿಂಕ್ ಆಗಿರಲಿ
  • ಯಾವುದೇ ತಾಂತ್ರಿಕ ತೊಂದರೆ ಇದ್ದರೆ ಸ್ಥಳೀಯ ಕೃಷಿ ಸಹಾಯಕ ಅಧಿಕಾರಿ ಅಥವಾ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ
  • e-KYC ಸಮಯಕ್ಕೆ ಮುಗಿಸಲು CSC ಕೇಂದ್ರಗಳಿಗೆ ಭೇಟಿ ನೀಡಿ

ರೈತರು ತಮ್ಮ ದಾಖಲೆಗಳನ್ನು ಸರಿಯಾಗಿ ನವೀಕರಿಸಿಕೊಂಡರೆ ಮತ್ತು e-KYC ಪೂರ್ಣಗೊಳಿಸಿದ್ದರೆ, ಜೂನ್ ಅಂತ್ಯದೊಳಗೆ ಅಥವಾ ಜುಲೈ ಆರಂಭದಲ್ಲಿ 20ನೇ ಕಂತಿನ ₹2,000 ನಗದು ಸಹಾಯಧನ ಖಾತೆಗೆ ನೇರವಾಗಿ ಜಮಾ ಆಗಲಿದೆ. ಯೋಜನೆಯ ಎಲ್ಲಾ ಅನುಕೂಲಗಳನ್ನು ಸದುಪಯೋಗಪಡಿಸಿಕೊಳ್ಳಲು ಈ ಮಾಹಿತಿಯನ್ನು ಇತರ ರೈತರಿಗೂ ಹಂಚಿಕೊಳ್ಳಿ.

Cow and Chaff Cutter Subsidy- 1+1 ಹಸು ಹಾಗೂ ಮೇವು ಕತ್ತರಿಸುವ ಯಂತ್ರ ಯೋಜನೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
error: Content is protected !!