ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ರೈತರ ಖಾತೆಗೆ 20ನೇ ಕಂತಿನ ಹಣವನ್ನು (PM-Kisan 20th installment) ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಕೇಂದ್ರ ಸರ್ಕಾರದ ಮಹತ್ವದ ಕೃಷಿ ಸಹಾಯ ಯೋಜನೆಯಾದ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-KISAN) 20ನೇ ಕಂತಿನ ಹಣವನ್ನು ಶೀಘ್ರದಲ್ಲೇ ರೈತರ ಖಾತೆಗೆ ನೇರವಾಗಿ ಜಮಾ ಮಾಡುವ ಸಿದ್ಧತೆ ನಡೆದಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿ ಇದೆ.
PM-KISAN ಯೋಜನೆಯಡಿ ಭಾರತ ಸರ್ಕಾರವು ರೈತರಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ನೀಡುತ್ತಿದೆ. ಈ ಮೊತ್ತವನ್ನು ತಲಾ ₹2,000ರಂತೆ ಮೂರು ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ವಾರ್ಷಿಕ ಹಣವನ್ನು ವರ್ಗಾವಣೆ ಮಾಡುವ ಕಾಲಪಟ್ಟಿ ಹೀಗಿದೆ:
- ಮೊದಲ ಕಂತು: ಏಪ್ರಿಲ್-ಜುಲೈ
- ಎರಡನೇ ಕಂತು: ಆಗಸ್ಟ್-ನವೆಂಬರ್
- ಮೂರನೇ ಕಂತು: ಡಿಸೆಂಬರ್-ಮಾರ್ಚ್
20ನೇ ಕಂತು ಯಾವಾಗ ಖಾತೆಗೆ ಜಮಾ ಆಗಲಿದೆ?
ಈವರೆಗೆ ಒಟ್ಟು 19 ಕಂತುಗಳನ್ನು ಯಶಸ್ವಿಯಾಗಿ ಬಿಡುಗಡೆ ಮಾಡಲಾಗಿದ್ದು, ಕೊನೆಯ 19ನೇ ಕಂತಿನ ಹಣವನ್ನು ಕಳೆದ ಫೆಬ್ರವರಿ 2025ರಲ್ಲಿ ರೈತರ ಖಾತೆಗೆ ವರ್ಗಾಯಿಸಲಾಗಿತ್ತು. ಇದೀಗ 20ನೇ ಕಂತಿನ ಹಣ ಜಮಾ ಮಾಡಲು ಸರ್ಕಾರ ಮುಂದಾಗಿದೆ.
ಯೋಜನೆಯ ಮಾರ್ಗಸೂಚಿಯ ಪ್ರಕಾರ, 20ನೇ ಕಂತಿನ ಹಣವನ್ನು 2025ರ ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ರೈತರ ಖಾತೆಗೆ ಜಮಾ ಮಾಡುವ ಸಾಧ್ಯತೆ ಇದೆ.

ಈ ರೈತರಿಗೆ 20ನೇ ಕಂತಿನ ಹಣ ಜಮಾ
ಇದೀಗ 20ನೇ ಕಂತಿನ ಹಣ ಪಡೆಯಲು ರೈತರು ಈ ಕೆಳಗಿನ ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕು:
- ಇ-ಕೆವೈಸಿ (e-KYC) ಮಾಡಿರಬೇಕು
- ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮತ್ತು NPCI ಮ್ಯಾಪಿಂಗ್ ಅಗತ್ಯ
- ಅರ್ಜಿಯಲ್ಲಿನ ಜಮೀನು ವಿವರ ಸರಿಯಾಗಿರಬೇಕು
- 19ನೇ ಕಂತು ಪಡೆದಿದ್ದರೆ ಹೆಚ್ಚಿನ ದಾಖಲೆ ಬೇಕಾಗಿಲ್ಲ
ಅರ್ಹರ ಪಟ್ಟಿಯನ್ನು ಈ ರೀತಿ ಪರಿಶೀಲಿಸಿ
* PM-KISAN ವೆಬ್‌ಸೈಟ್‌ಗೆ ಭೇಟಿ ನೀಡಿ
* Beneficiary List ಕ್ಲಿಕ್ ಮಾಡಿ
* ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ
* Get Report ಕ್ಲಿಕ್ ಮಾಡಿದರೆ, ಹಳ್ಳಿಯ ಅರ್ಹ ರೈತರ ಪಟ್ಟಿ ತೆರೆದುಕೊಳ್ಳುತ್ತದೆ
ಹಣ ಜಮಾದ ಸ್ಥಿತಿ ಹೀಗೆ ಚೆಕ್ ಮಾಡುವ ವಿಧಾನ
ಇನ್ನು ಪಿಎಂ ಕಿಸಾನ್ ಹಣ ಜಮಾ ವಿವರವನ್ನು ರೈತರು ತಮ್ಮ ಮೊಬೈಲ್‌ನಲ್ಲಿಯೇ ಪರಿಶೀಲಿಸಬಹುದಾಗಿದೆ. ಅದಕ್ಕಾಗಿ ಮೊದಲಿಗೆ ವೆಬ್‌ಸೈಟ್‌ಗೆ ಹೋಗಿ
PM-Kisan Status-2025 ಕ್ಲಿಕ್ ಮಾಡಿ
ನಿಮ್ಮ ರಿಜಿಸ್ಟ್ರೇಷನ್ ಸಂಖ್ಯೆ ಹಾಕಿ, ಕ್ಯಾಪ್ಚಾ ನಮೂದಿಸಿ, ನಿಮ್ಮ ಮೊಬೈಲ್‌ಗೆ ಬಂದ OTP ನಮೂದಿಸಿದರೆ, Latest Installments Details ವಿಭಾಗದಲ್ಲಿ ಕಂತಿನವಾರು ಈ ಯೋಜನೆಯ ಹಣ ಜಮಾ ವಿವರ ತೋರಿಸುತ್ತದೆ.
ಈ ಕುರಿತ ಹೆಚ್ಚಿನ ಮಾಹಿತಿಗೆ ರೈತರು ಸ್ಥಳೀಯ ಕೃಷಿ ಇಲಾಖೆ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯಾಗಿ ತಮ್ಮ ಅರ್ಜಿ ಸ್ಥಿತಿ ಅಥವಾ ಇತರೆ ತಾಂತ್ರಿಕ ವಿವರಗಳ ಬಗ್ಗೆ ಮಾಹಿತಿ ಪಡೆಯಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.