ಫಲಾನುಭವಿ ರೈತರ ಖಾತೆಗೆ ಪಿಎಂ-ಕಿಸಾನ್ 20ನೇ ಕಂತಿನ (PM Kisan 20th Installment) ಹಣವನ್ನು ಜಮಾ ಮಾಡಲು ಸರ್ಕಾರ ಸಿದ್ಧವಾಗಿದೆ. ಯಾವ ದಿನ ಹಣ ಜಮಾ ಆಗಲಿದೆ? ಯಾರಿಗೆಲ್ಲ ಹಣ ಸಿಗಲಿದೆ? ಈ ಕುರಿತ ಮಾಹಿತಿ ಇಲ್ಲಿದೆ…
ಸಣ್ಣ ರೈತರ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ಪಿಎಂ-ಕಿಸಾನ್ (PM-Kisan) ಯೋಜನೆಯ 20ನೇ ಕಂತಿನ ಹಣ ಜಮಾ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಇನ್ನರಡು ದಿನಗಳಲ್ಲಿ ಫಲಾನುಭವಿ ರೈತರ ಖಾತೆಗೆ ₹2,000 ಹಣ ನೇರವಾಗಿ ಜಮಾಗೊಳ್ಳಲಿದೆ.
ಹೌದು, ರೈತರಿಗೆ ವಾರ್ಷಿಕ ₹6,000 ನಗದು ಸಹಾಯಧನವನ್ನು ಮೂರು ಕಂತುಗಳಲ್ಲಿ ನೀಡುವ ಪಿಎಂ-ಕಿಸಾನ್ ಯೋಜನೆಯ 20ನೇ ಕಂತಿನ ಹಣ ಕೊಂಚ ತಡವಾಗಿ ಜಮಾ ಆಗುತ್ತಿದೆ. ಇದು ಈ ವರ್ಷದ ಮೊದಲ ಕಂತಾಗಿದ್ದು; ವಾಡಿಕೆಯಂತೆ ಜುಲೈ ಅಂತ್ಯದೊಳಗೇ ಬಿಡುಗಡೆ ಆಗಬೇಕಿತ್ತು. ವಿವಿಧ ಕಾರಣದಿಂದ ಸ್ವಲ್ಪ ತಡವಾಗಿ ಜಮಾ ಆಗುತ್ತಿದೆ.
20ನೇ ಕಂತಿನ ಹಣ ಈ ದಿನ ಜಮಾ
2019ರಿಂದ ಆರಂಭವಾದ ಪಿಎಂ-ಕಿಸಾನ್ ಯೋಜನೆಯ 20ನೇ ಕಂತು ಇದೀಗ ಬಿಡುಗಡೆ ಆಗಬೇಕಿದ್ದು; 19ನೇ ಕಂತಿನ ಹಣವನ್ನು 2025ರ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ 20ನೇ ಕಂತಿನ ಬಗ್ಗೆ ಕಿಸಾನ್ ಸಮ್ಮಾನ್ ‘ಎಕ್ಸ್’ ಖಾತೆಯಲ್ಲಿ ಕೇಂದ್ರದ ಕೃಷಿ ಮಂತ್ರಾಲಯದಿಂದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
‘ಎಕ್ಸ್’ ಖಾತೆ ಮಾಹಿತಿ ಪ್ರಕಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 02, 2025 ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ಫಲಾನುಭವಿ ರೈತರ ಖಾತೆ ನೇರ ನಗದು ವರ್ಗಾವಣೆ ಮೂಲಕ ಪಿಎಂ ಕಿಸಾನ್ ಹಣ ವರ್ಗಾವಣೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಯಾವೆಲ್ಲ ರೈತರಿಗೆ ಸಿಗಲಿದೆ ₹2,000 ಹಣ?
ಈ ಕಂತಿನ ಹಣವನ್ನು ಪಡೆಯಲು ರೈತರು ಈ ಕೆಳಗಿನ ಅರ್ಹತಾ ಶರತ್ತುಗಳನ್ನು ಪೂರೈಸಿರಬೇಕು:
- e-KYC ಪೂರ್ಣಗೊಂಡಿರಬೇಕು.
- ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು.
- NPCI (National Payments Corporation of India) ಮ್ಯಾಪಿಂಗ್ ಆಗಿರಬೇಕು.
- ಜಮೀನು ದಾಖಲೆಗಳು ಸರಿಯಾಗಿರಬೇಕು.
- ರೈತರು ಸರ್ಕಾರಿ ಅಥವಾ ಖಾಸಗಿ ಉದ್ಯೋಗಿಳು ಆಗಿರಬಾರದು ಅಥವಾ ವಾರ್ಷಿಕ ಆದಾಯವು ₹10 ಲಕ್ಷಕ್ಕಿಂತ ಹೆಚ್ಚು ಇರಬಾರದು.
E-Swathu- ಇನ್ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೂ ಇ-ಸ್ವತ್ತು ವಿತರಣೆ | ಸರ್ಕಾರದ ಹೊಸ ಆದೇಶ
ನಿಮಗೆ ಹಣ ಬರುತ್ತಾ? ಹೀಗೆ ಚೆಕ್ ಮಾಡಿ…
- PM-KISAN ವೆಬ್‌ಸೈಟ್‌ಗೆ ಭೇಟಿ ನೀಡಿ
- Beneficiary List ಕ್ಲಿಕ್ ಮಾಡಿ
- ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ
- Get Report ಕ್ಲಿಕ್ ಮಾಡಿದರೆ, ಹಳ್ಳಿಯ ಅರ್ಹ ರೈತರ ಪಟ್ಟಿ ತೆರೆದುಕೊಳ್ಳುತ್ತದೆ. ಆ ಪಟ್ಟಿಯಲ್ಲಿರುವವರಿಗೆ ಖಚಿತವಾಗಿ 20ನೇ ಕಂತಿನ ಹಣ ಸಂದಾಯವಾಗಲಿದೆ.
Pauti Khate Campaign- ಈ ರೈತರಿಗೆ ಪಿಎಂ ಕಿಸಾನ್ ಸೇರಿ ಸರ್ಕಾರದ ಎಲ್ಲಾ ಸೌಲಭ್ಯಗಳು ಬಂದ್ | ಕಂದಾಯ ಸಚಿವರ ಎಚ್ಚರಿಕೆ
ಹಣ ಜಮಾ ಸ್ಥಿತಿಯನ್ನು ಪರಿಶೀಲಿಸುವ ವಿಧಾನ
ಇನ್ನು ಪಿಎಂ ಕಿಸಾನ್ ಹಣ ಜಮಾ ವಿವರವನ್ನು ರೈತರು ತಮ್ಮ ಮೊಬೈಲ್‌ನಲ್ಲಿಯೇ ಪರಿಶೀಲಿಸಬಹುದಾಗಿದೆ. ಅದಕ್ಕಾಗಿ ಮೊದಲಿಗೆ ವೆಬ್‌ಸೈಟ್‌ಗೆ ಹೋಗಿ
‘PM-Kisan Status-2025’ ಕ್ಲಿಕ್ ಮಾಡಿ
ನಿಮ್ಮ ರಿಜಿಸ್ಟ್ರೇಷನ್ ಸಂಖ್ಯೆ ಹಾಕಿ, ಕ್ಯಾಪ್ಚಾ ನಮೂದಿಸಿ, ನಿಮ್ಮ ಮೊಬೈಲ್‌ಗೆ ಬಂದ OTP ನಮೂದಿಸಿದರೆ, Latest Installments Details ವಿಭಾಗದಲ್ಲಿ ಕಂತಿನವಾರು ಈ ಯೋಜನೆಯ ಹಣ ಜಮಾ ವಿವರ ತೋರಿಸುತ್ತದೆ.
ಈ ಲೇಖನವನ್ನು ಬೇರೆಯ ರೈತರಿಗೂ ಹಂಚಿಕೊಳ್ಳಿ, ಅವರಿಗೆ ಸಹ ಈ ಯೋಜನೆಯ ಲಾಭ ಸಿಗುವಂತಾಗಲಿ. ಹೆಚ್ಚಿನ ಸಹಾಯ ಬೇಕಾದರೆ, ತಮ್ಮ ಗ್ರಾಮ ಪಂಚಾಯತಿಗಳಲ್ಲಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಪರ್ಕಿಸಬಹುದು.
‘X’ ಖಾತೆ ಅಧಿಕೃತ ಮಾಹಿತಿ: Click Here