ಇನ್ಮುಂದೆ ಉದ್ಯೋಗಿಗಳು ಪಿಎಫ್ ಹಣಕ್ಕಾಗಿ (PF Fast Refund) ತಿಂಗಳಾನುಗಟ್ಟಲೇ ಕಾಯಬೇಕಿಲ್ಲ. ಅರ್ಜಿ ಸಲ್ಲಿಸಿದ ಮೂರೇ ದಿನಗಳಲ್ಲಿ ಸದಸ್ಯರ ಖಾತೆ ಹಣ ಜಮಾ ಆಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಉದ್ಯೋಗಿಗಳಿಗೆ ಭವಿಷ್ಯ ನಿಧಿ (PF) ಎಂಬುದು ತುರ್ತು ಸಂದರ್ಭಗಳಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುವ ಪ್ರಮುಖ ಉಳಿತಾಯವಾಗಿದ್ದರೂ, ಇದುವರೆಗೂ ಆ ಮೊತ್ತವನ್ನು ವಾಪಸ್ ಪಡೆಯುವುದು ಸುಲಭದ ಕೆಲಸವಾಗಿರಲಿಲ್ಲ.
ಪಿಎಫ್ ಹಣ ತೆಗೆಯಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ, ಪರಿಶೀಲನೆ, ಅನುಮೋದನೆ ಎಲ್ಲ ಪ್ರಕ್ರಿಯೆಗಳು ಮುಗಿದು ಮೊತ್ತ ಖಾತೆಗೆ ಜಮೆಯಾಗಲು ಸಾಮಾನ್ಯವಾಗಿ 15 ರಿಂದ 20 ದಿನಗಳವರೆಗೆ ಸಮಯ ಬೇಕಾಗುತ್ತಿತ್ತು. ಈ ನಡುವೆ ಹಣ ತುರ್ತು ಅವಶ್ಯಕತೆ ಇದ್ದವರ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಿತ್ತು.
ಇದನ್ನೂ ಓದಿ: Karnataka Jatiganati Mobile Self Survey- ಮೊಬೈಲ್ನಲ್ಲಿ ನೀವೇ ಮಾಡಿಕೊಳ್ಳಿ ಜಾತಿಗಣತಿ ಸಮೀಕ್ಷೆ | ನೇರ ಲಿಂಕ್ ಇಲ್ಲಿದೆ…

ಮೂರೇ ದಿನದಲ್ಲಿ ಹಣ ಖಾತೆಗೆ
ಆದರೆ, ಈಗ ಪರಿಸ್ಥಿತಿ ಬದಲಾಗುತ್ತಿದೆ. ಇಪಿಎಫ್ಒ (EPFO) 3.0 ಡಿಜಿಟಲ್ ಸುಧಾರಣೆ ಜಾರಿಗೆ ಬಂದ ನಂತರ, ಕೇವಲ 2 ರಿಂದ 3 ದಿನಗಳಲ್ಲೇ ಪಿಎಫ್ ಮೊತ್ತ ಸದಸ್ಯರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಅಂದರೆ, ಒಂದು ವಾರಕ್ಕಿಂತಲೂ ಕಡಿಮೆ ಅವಧಿಯಲ್ಲಿ, ತಕ್ಷಣ ಹಣ ಪಡೆಯುವ ಅವಕಾಶ ಸಿಗಲಿದೆ.
ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ಹೊಣೆಗಾರಿಕೆಯನ್ನು ದೇಶದ ಪ್ರಮುಖ ಐಟಿ ಸಂಸ್ಥೆಗಳಾದ ವಿಪ್ರೊ, ಟಿಸಿಎಸ್ ಮತ್ತು ಇನ್ಫೋಸಿಸ್ ಕೈಗೆತ್ತಿಕೊಂಡಿವೆ. ಹೊಸ ತಂತ್ರಜ್ಞಾನವನ್ನು ಬಳಸಿ ಅರ್ಜಿಯ ಪರಿಶೀಲನೆ ಮತ್ತು ಹಣ ವರ್ಗಾವಣೆಯ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲಾಗುತ್ತಿದೆ. ಇದರ ಮೂಲಕ ಸದಸ್ಯರು ಅರ್ಜಿ ಸಲ್ಲಿಸಿದ ತಕ್ಷಣವೇ ಅದು ಪ್ರಕ್ರಿಯೆಗೆ ಒಳಗಾಗುತ್ತದೆ ಮತ್ತು ಅನುಮೋದನೆಯಾದ ಕೂಡಲೇ ಹಣ ನೇರವಾಗಿ ಖಾತೆಗೆ ಸೇರುತ್ತದೆ.
ಇನ್ನೂ ಹಲವು ಸೌಕರ್ಯಗಳು
ಜೊತೆಗೆ EPFO ಭವಿಷ್ಯದಲ್ಲಿ ಇನ್ನೂ ಹಲವು ಸೌಲಭ್ಯಗಳನ್ನು ತರಲು ಮುಂದಾಗಿದೆ. ಎಟಿಎಂ ಮೂಲಕವೇ ಪಿಎಫ್ ಹಣವನ್ನು ವಿತ್ಡ್ರಾ ಮಾಡುವ ವ್ಯವಸ್ಥೆ ಸಹ ಸಾಧ್ಯವಾಗಬಹುದು ಎಂದು ಹೇಳಲಾಗುತ್ತಿದೆ. ಹಾಗೆಯೇ, ದೂರುಗಳು, ಕುಂದುಕೊರತೆಗಳ ನಿವಾರಣೆ, ಖಾತೆ ವಿವರಗಳ ತ್ವರಿತ ನವೀಕರಣ ಮುಂತಾದ ಸೇವೆಗಳನ್ನೂ ಡಿಜಿಟಲ್ ಮೂಲಕ ಸುಗಮಗೊಳಿಸಲಾಗುತ್ತಿದೆ.
ಹೊಸ EPFO 3.0 ವ್ಯವಸ್ಥೆಯಿಂದ ದೇಶದಾದ್ಯಂತ ಇರುವ 8 ಕೋಟಿ ಸದಸ್ಯರಿಗೆ ನೇರ ಪ್ರಯೋಜನ ಸಿಗಲಿದೆ. ತುರ್ತು ಸಂದರ್ಭಗಳಲ್ಲಿ ಪಿಎಫ್ ಹಣ ಪಡೆಯಲು ತಿಂಗಳಗಟ್ಟಲೆ ಕಾಯಬೇಕಾಗಿದ್ದ ದಿನಗಳು ಇನ್ನು ಮುಗಿಯುತ್ತವೆ. ಕೆಲವೇ ದಿನಗಳಲ್ಲಿ ಹಣ ಲಭ್ಯವಾಗುವುದರಿಂದ ಉದ್ಯೋಗಿಗಳು ಆರ್ಥಿಕ ಒತ್ತಡದಿಂದ ಹೊರಬರಲು ಸಹಾಯವಾಗಲಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.