ಗ್ರಾಮ ಪಂಚಾಯತಿ ಈ ಸೇವೆಗಳಿಗೆ ವಾಟ್ಸಾಪ್’ನಲ್ಲೇ ಪರಿಹಾರ | ಈ ನಂಬರ್‌ಗೆ ಹಾಯ್ ಅಂತ ಕಳಿಸಿದರೆ ಕುಳಿತಲ್ಲೇ ಪರಿಹಾರ… Panchamitra gram Panchayat whatsapp chat

Spread the love

WhatsApp Group Join Now
Telegram Group Join Now

Panchamitra gram Panchayat whatsapp chat : ಇತ್ತೀಚೆಗೆ ರಾಜ್ಯ ಸರ್ಕಾರ ರಾಜ್ಯದ ಗ್ರಾಮ ಪಂಚಾಯತಿಗಳ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಮತ್ತು ಸೇವೆಗಳಿಗಾಗಿ ಆರಂಭಿಸಿರುವ ‘ಪಂಚಮಿತ್ರ ವ್ಯಾಟ್ಸಪ್ ಚಾಟ್’ (Panchamitra whatsapp chat) ಮತ್ತು ‘ಪಂಚಮಿತ್ರ ಪೋರ್ಟಲ್’ (Panchmitra Portal) ಗ್ರಾಮೀಣಾಭಿವೃದ್ಧಿಯ ಚಹರೆಯನ್ನೇ ಬದಲಿಸಿದೆ. ಈ ವೇದಿಕೆಯ ಮೂಲಕ ಸಾರ್ವಜನಿಕರು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಬೇರೆ ಬೇರೆ ಇಲಾಖೆಗಳ ಹಲವು ಸೇವೆಗಳನ್ನು ವಾಟ್ಸಾಪ್ ಚಾಟ್ ಮುಖಾಂತರವೇ ಪಡೆಯಬಹುದಾಗಿದೆ.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯ (Karnataka State Rural Development and Panchayat Raj Commission) ಆರಂಭಿಸಿರುವ ‘ಪಂಚಮಿತ್ರ’ ವಾಟ್ಸಾಪ್ ಚಾಟ್‌ಗೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು; ಕೇಲವೇ ದಿನಗಳಲ್ಲಿ ಲಕ್ಷಾಂತರ ಜನ ಬಳಕೆದಾರರಾಗಿದ್ದಾರೆ. ‘ಪಂಚಮಿತ್ರ ಪೋರ್ಟಲ್’ನಲ್ಲಿ ನಿತ್ಯ ಸಾವಿರಾರು ಕುಂದು-ಕೊರತೆ ದೂರುಗಳು ದಾಖಲಾಗುತ್ತಿವೆ.

ನವೋದಯ ಉಚಿತ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ | 6-12ನೇ ತರಗತಿ ವರೆಗೂ ವಸತಿ, ಊಟೋಪಚಾರ ಸಹಿತ ಸಂಪೂರ್ಣ ಉಚಿತ ಶಿಕ್ಷಣ JNV Entrance Exam Application 2024

ಕುಳಿತಲ್ಲೇ ಹಲವು ಸೇವೆಗಳು

ಇದು ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಯಲ್ಲೂ ಇಲ್ಲದ ವಿಶೇಷ ಸೌಲಭ್ಯ. ರಾಜ್ಯದ 5,991 ಗ್ರಾಮ ಪಂಚಾಯತಿಗಳಲ್ಲಿ ಈ ಸೇವೆ ಆರಂಭವಾಗಿದ್ದು; ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ ಸೇವೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿ ಪರಿಶೀಲಿಸಲು ಹಾಗೂ ಗ್ರಾಮ ಪಂಚಾಯತಿಗಳಿಗೆ ಸಂಬAಧಿಸಿದ ಕುಂದುಕೊರತೆ ದಾಖಲಿಸಬಹುದಾಗಿದೆ.

ವಿಶೇಷವೆಂದರೆ ಗ್ರಾಮದ ಸಮಸ್ಯೆ ಕುರಿತು ನೇರಾನೇರ ದೂರು ದಾಖಲಿಸಲಾಗದಷ್ಟು ಹಳ್ಳಿ ರಾಜಕೀಯ ಕಲುಷಿತಗೊಂಡಿದೆ. ಪಂಚಾಯತಿ ಸಮಸ್ಯೆಗಳ ಕುರಿತು ನೀಡಿದ ದೂರುಗಳು ಹಲವು ಸಂದರ್ಭಗಳಲ್ಲಿ ವೈಯಕ್ತಿಕ ದ್ವೇಷ ಸಾಧನೆಗೆ ಕಾರಣವಾಗುತ್ತವೆ. ಆದರೆ ‘ಪಂಚಮಿತ್ರ ವಾಟ್ಸಾಪ್ ಚಾಟ್’ ಮೂಲಕ ದೂರು ನೀಡಿದರೆ ದೂರುದಾರರ ಗೌಪ್ಯತೆಯನ್ನೂ ಕಾಪಾಡಲಾಗುತ್ತದೆ. ಹಾಗಾಗಿ ಜನರು ನಿರ್ಭಯವಾಗಿ ದೂರು ನೀಡಬಹುದಾಗಿದೆ.

ರೈತರಿಗೆ ₹5 ಲಕ್ಷ ಶೂನ್ಯಬಡ್ಡಿ ಸಾಲ ವಿತರಣೆ | ಈ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ… Zero Interest Agricultural Loans

Panchamitra gram Panchayat whatsapp chat
ಯಾವೆಲ್ಲ ಸೇವೆಗಳು ಸಿಗುತ್ತವೆ?

ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ 17 ಸೇವೆಗಳು ಮತ್ತು ಸರ್ಕಾರದ ಇತರೆ ಇಲಾಖೆ ಸಂಬಂಧಿಸಿದ 72 ಸೇವೆಗಳು ಸೇರಿ ಒಟ್ಟು 89 ಸರ್ಕಾರಿ ಸೇವೆಗಳು ಪಂಚಮಿತ್ರ ಪೋರ್ಟಲ್ ಮತ್ತು ಪಂಚಮಿತ್ರ ವಾಟ್ಸಪ್ ಚಾಟ್ ಮುಖಾಂತರ ಸಾರ್ವಜನಿಕರಿಗೆ ಲಭ್ಯವಿರಲಿವೆ. ಪ್ರಮುಖ ಸೇವೆಗಳ ವಿವರ ಕೆಳಗಿನಂತಿದೆ:

  • ಕಟ್ಟಡ ನಿರ್ಮಾಣ ಪರವಾನಗಿ
  • ಹೊಸ ನೀರು ಪೂರೈಕೆ ಸಂಪರ್ಕ
  • ನೀರು ಸರಬರಾಜಿನ ಸಂಪರ್ಕ ಕಡಿತ
  • ಕುಡಿಯುವ ನೀರಿನ ನಿರ್ವಹಣೆ
  • ಬೀದಿ ದೀಪದ ನಿರ್ವಹಣೆ
  • ಗ್ರಾಮ ನೈರ್ಮಲ್ಯ ನಿರ್ವಹಣೆ
  • ಉದ್ದಿಮೆ ಪರವಾನಗಿ
  • ಸ್ವಾಧೀನ ಪ್ರಮಾಣ ಪತ್ರ
  • ನಾನಾ ಸೇವೆ ಸಂಬಂಧ ರಸ್ತೆ ಅಗೆತಕ್ಕೆ ಅನುಮತಿ
  • ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ
  • ನಿರಾಕ್ಷೇಪಣಾ ಪತ್ರ
  • ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ವಿತರಣೆ
  • ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು
  • ಹೊಸ ಇಲ್ಲವೇ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ
  • ಓವರ್ ಗ್ರೇಂಡ್ ಕೇಬಲ್ ಮೂಲಸೌಕರ್ಯ / ನೆಲದಾಳದ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ
  • ಜತೆಗೆ ನಮೂನೆ 9/11ಎ, ನಮೂನೆ 11ಬಿ

10ನೇ ತರಗತಿ ಪಾಸಾದವರಿಂದ 44,228 ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ ಇಲ್ಲಿದೆ… India Post GDS Recruitment 2024

ಗ್ರಾಮ ಪಂಚಾಯತಿ ಸಮಸ್ಯೆಗಳಿಗೆ ಪರಿಹಾರ

ವಾಟ್ಸಾಪ್ ಮೂಲಕ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರು, ರಸ್ತೆ ಮತ್ತು ಸೇತುವೆಗಳ ದುರಸ್ತಿ, ಉದ್ಯೋಗ ಖಾತ್ರಿ ಯೋಜನೆಗೆ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬಂಧಿತ ಕುಂದುಕೊರತೆ ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕುಂದು-ಕೊರತೆಯ ಸ್ಥಿತಿ-ಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಲೂ ಅವಕಾಶ ಕಲ್ಪಿಸಲಾಗಿದೆ.

ಇವುಗಳ ಜೊತೆಗೆ ಚುನಾಯಿತ ಪ್ರತಿನಿಧಿಗಳ ವಿವರ, ಸಿಬ್ಬಂದಿ ಮಾಹಿತಿ, ಪೂರ್ಣಗೊಂಡ ಗ್ರಾಪಂ ಸಭೆಗಳ ನಡಾವಳಿ, ಗ್ರಾಪಂ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹ ವಿವರ, ಸೇವೆಗಳ ವಿವರಗಳು, ಸ್ವ ಸಹಾಯ ಗುಂಪಿನ ವಿವರ ಸೇರಿದಂತೆ ಹಲವು ಮಾಹಿತಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಮಹಿಳೆಯರಿಗೆ ಬಡ್ಡಿ ಇಲ್ಲದೇ 3 ಲಕ್ಷ ರೂಪಾಯಿ ಸಾಲ | 1.5 ಲಕ್ಷ ರೂಪಾಯಿ ಸಬ್ಸಿಡಿ | ಈ ಸೌಲಭ್ಯ ಪಡೆಯುವುದು ಹೇಗೆ? ಮಾಹಿತಿ ಇಲ್ಲಿದೆ… Udyogini Women Loan Scheme 2024

ವಾಟ್ಸಪ್ ಚಾಟ್‌ನಲ್ಲಿ ಸೇವೆ ಪಡೆಯುವುದು ಹೇಗೆ?

ಹಂತ 1: ಗ್ರಾಮ ಪಂಚಾಯತಿಯ ಸೇವೆಗಳನ್ನು ಪಡೆಯಲು ಪಂಚಮಿತ್ರ ವಾಟ್ಸಾಪ್ ನಂಬರ್ 82775 06000ಗೆ ಮೊದಲು ‘ಹಾಯ್’ (ಊi) ಎಂಬ ಸಂದೇಶ ಕಳಿಸಬೇಕು.

ಹಂತ 2: ನಂತರದಲ್ಲಿ ನಿಮಗೆ ಭಾಷೆಗಳ ಪಟ್ಟಿಯನ್ನು ತೋರಿಸಲಾಗುತ್ತದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆ ಆಯ್ಕೆಗಳ ಪೈಕಿ ಕನ್ನಡ ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಹಂತ 3: ಕೊನೆಯದಾಗಿ ನಿಮ್ಮ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡು ನಿಮಗೆ ಬೇಕಾಗಿರುವ ಸೇವೆಗಳ ಮಾಹಿತಿ ಅಥವಾ ಕುಂದು ಕೊರತೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅವುಗಳ ಲಾಭ ಪಡೆಯಬಹುದಾಗಿದೆ.

WhatsApp Group Join Now
Telegram Group Join Now

ಕುರಿ ಶೆಡ್, ದನದ ಕೊಟ್ಟಿಗೆ, ಕೃಷಿ ಹೊಂಡ, ಬದು ನಿರ್ಮಾಣಕ್ಕೆ ₹5 ಲಕ್ಷದ ವರೆಗೆ ಆರ್ಥಿಕ ನೆರವು Mgnrega Personal Work Subsidy


Spread the love
error: Content is protected !!