Pan Card for a Minor : ಯಾವುದೇ ಹಣಕಾಸು ವ್ಯವಹಾರಗಳನ್ನು (Finance Issues) ಮಾಡಲು ಪ್ರತಿಯೊಬ್ಬರಿಗೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಇನ್ನು ಮುಂದೆ 18 ವಯಸ್ಸಿನ ಒಳಗಿನ ಮಕ್ಕಳಿಗೂ ಕೂಡ ಹಣಕಾಸು ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಮಾಡಿದ್ದು, ಇದರ ಪ್ರಯೋಜನಗಳೇನು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…
ಅಪ್ರಾಪ್ತ ವಯಸ್ಸಿನವರಿಗೂ ಪಾನ್ ಕಾರ್ಡ್
ಭಾರತದಲ್ಲಿ ಎಲ್ಲಾ ತೆರಿಗೆದಾರರು (Tax Payers) ಪ್ರತಿಯೊಂದು ಹಣಕಾಸು ವ್ಯವಹಾರಗಳಿಗೆ 10 ಅಂಕಿಯ ಗುರುತಿನ ಸಂಖ್ಯೆ ಪ್ಯಾನ್ ಕಾರ್ಡ್ ಹೊಂದಿರಬೇಕಾಗುತ್ತದೆ. ಈ ಪ್ಯಾನ್ ಕಾರ್ಡ್ ಅನ್ನು ಕೇಂದ್ರ ಆದಾಯ ತೆರಿಗೆ ಇಲಾಖೆಯು (Income Tax Department), ಅರ್ಹ ಎಲ್ಲಾ ಭಾರತೀಯರಿಗೂ ವಿತರಿಸುತ್ತದೆ.
ನಿಮಗೆ ಗೊತ್ತಿರುವ ಹಾಗೆ ಪ್ಯಾನ್ ಕಾರ್ಡ್ ಅನ್ನು ವಯಸ್ಕರಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ, ಆದಾಯ ತೆರಿಗೆ ವಿಭಾಗದ ಸೆಕ್ಷನ್ 160ರ ಪ್ರಕಾರ, ಪ್ಯಾನ್ ಕಾರ್ಡ್’ಗೆ ಅರ್ಜಿ ಸಲ್ಲಿಸಲು ಮತ್ತು ಪ್ಯಾನ್ ಕಾರ್ಡ್ ಹೊಂದಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಇದನ್ನು ಅಪ್ರಾಪ್ತ ವಯಸ್ಸಿನವರು ಕೂಡ ಪಡೆಯಲು ಅವಕಾಶವಿದೆ. ಆದರೆ ಕಂಡಿಷನ್ ಏನೆಂದರೆ, ಅಪ್ರಾಪ್ತ ವಯಸ್ಸಿನವರು ಸ್ವತಃ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಅವರ ಪರವಾಗಿ ಅವರ ತಂದೆ ಅಥವಾ ತಾಯಿ ಅರ್ಜಿ ಸಲ್ಲಿಸಲು ಅವಕಾಶವಿದೆ.
18 ವಯಸ್ಸಿನ ಒಳಗಿನ ಮಕ್ಕಳಿಗೆ ಪಾನ್ ಕಾರ್ಡ್ ಯಾವಾಗ ಆಗುತ್ತೆ? When pan card is necessary for below 18 children?
ಪೋಷಕರು ಹೂಡಿಕೆ ಮಾಡುವಾಗ ಅಥವಾ ಪೋಷಕರು ಮಾಡುವ ಹೂಡಿಕೆಗೆ ತಮ್ಮ ಮಗುವನ್ನು ನಾಮಿನಿಯಾಗಿ (Nominee) ನೋಂದಣಿ ಮಾಡುವಾಗ 18 ವರ್ಷದ ಒಳಗಿನ ಮಕ್ಕಳಿಗೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ.
ಅದೇ ರೀತಿ 18 ವರ್ಷದ ಒಳಗಿನ ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲು, ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಲು ಕೂಡ ಪ್ಯಾನ್ ಕಾರ್ಡ್ ಅವಶ್ಯಕತೆ ಬೀಳುತ್ತದೆ. ಇಷ್ಟೇ ಅಲ್ಲದೆ ಇದನ್ನು ಒಂದು ಗುರುತಿನ ಚೀಟಿಯಾಗಿ ಕೂಡ ಉಪಯೋಗಿಸಬಹುದು.
18 ವರ್ಷದ ಮಕ್ಕಳ ಹೆಸರಿನಲ್ಲಿ ಪಾನ್ ಕಾರ್ಡ್ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲೇ ತಿಳಿಸಿದ ಹಾಗೆ, ಅಪ್ರಾಪ್ತ ವಯಸ್ಸಿನವರು ತಾವೇ ಸ್ವತಃ ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಇದರ ಬದಲಾಗಿ ಮಕ್ಕಳ ಹೆತ್ತವರು ಅಥವಾ ಪೋಷಕರು ಆದಾಯ ತೆರಿಗೆ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಗ್ರಾಹಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು
- ಪೋಷಕರ ವಿಳಾಸ ಪ್ರಮಾಣ ಪತ್ರ
- ಪೋಷಕರ ಗುರುತಿನ ಪ್ರಮಾಣ ಪತ್ರ
- ಅರ್ಜಿದಾರನ ಗುರುತಿನ ಕಾರ್ಡ್ (ಆಧಾರ್ ಕಾರ್ಡ್)
- ಮೊಬೈಲ್ ನಂಬರ್
1 thought on “18 ವಯಸ್ಸಿನ ಒಳಗಿನ ಮಕ್ಕಳಿಗೂ ಇನ್ಮುಂದೆ ಪ್ಯಾನ್ ಕಾರ್ಡ್ ಕಡ್ಡಾಯ | ಇದರ ಪ್ರಯೋಜನವೇನು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ Pan Card for a Minor”