Old pension scheme for govt employees : ಸರಕಾರಿ ನೌಕರರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿರುವ ಹಳೇ ಪಿಂಚಣಿ ಯೋಜನೆ ಮರುಜಾರಿ ಕುರಿತು ಸರಕಾರ ಗಂಭೀರ ಚಿಂತನೆ ನಡೆಸಿದ್ದು; ಈ ಸಂಬ೦ಧ ಆರ್ಥಿಕ ಇಲಾಖೆ ಮೂಲಕ ಮಹತ್ವದ ಆದೇಶ ಹೊರಡಿಸಿದೆ.
ಹೌದು, ಪ್ರಸ್ತುತ ಇರುವ ಹೊಸ ಪಿಂಚಣಿ ಯೋಜನೆಯನ್ನು (New Pension Scheme – NPS) ರದ್ದುಗೊಳಿಸಿ ಪುನಃ ಹಳೇ ಪಿಂಚಣಿ ಯೋಜನೆಯನ್ನೇ (Old Pension Scheme – OPS) ಮರುಜಾರಿಗೊಳಿಸಬೇಕು ಎಂಬುವುದು ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರರ ಬೇಡಿಯಾಗಿದೆ. ಈ ವಿಚಾರವಾಗಿ ಈಗಾಗಲೇ ಅನೇಕ ರೀತಿಯ ಮನವಿ, ಹಕ್ಕೊತ್ತಾಯದ ಪ್ರಕ್ರಿಯೆಗಳು ನಡೆದಿವೆ. ಇದೇ ಜುಲೈ 29ರಂದು ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿರುವ ರಾಜ್ಯ ಸರಕಾರಿ ನೌಕರರ ಪ್ರಮುಖ ಮೂರು ಬೇಡಿಕೆಗಳಲ್ಲಿ ಹಳೇ ಪಿಂಚಣಿ ಯೋಜನೆ ಮರುಜಾರಿ ಬೇಡಿಕೆ ಕೂಡ ಇರುವುದು ವಿಶೇಷ.
ಹಳೆಯ ಪಿಂಚಣಿ ಯೋಜನೆ ಮರುಜಾರಿ
ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆ ಜಾರಿಗೊಳಿಸಿದ್ದರಿಂದ ಸುಮಾರು ಲಕ್ಷಾಂತರ ನೌಕರರು ತೊಂದರೆಗೆ ಒಳಗಾಗಿದ್ದಾರೆ. ಇದರ ಈಡೇರಿಕೆಗಾಗಿ ನೌಕರರ ಸಂಘ ಹಾಗೂ ನಿವೃತ್ತ ನೌಕರರ ಸಂಘ ಸರಕಾರಕ್ಕೆ ಮನವಿ ಮಾಡುತ್ತ ಬಂದಿದೆ. ಸದ್ಯದಲ್ಲಿ ರಾಜ್ಯ ಸರಕಾರದ ಆರ್ಥಿಕ ಸ್ಥಿತಿ ಈ ಬೇಡಿಕೆ ಈಡೇರುವಷ್ಟು ಸುಭದ್ರವಾಗಿಲ್ಲ ಎಂಬ ಮಾಹಿತಿ ಇದೆ.
ಇದೀಗ ನೌಕರರ ಒತ್ತಡ ತೀವ್ರವಾದ್ದರಿಂದ ಮತ್ತು ಮುಷ್ಕರ ಕೈಗೊಳ್ಳುವ ಕಠಿಣ ನಿರ್ಧಾರ ಕೈಗೊಂಡಿರುವುದರಿ೦ದ ಹಳೇ ಪಿಂಚಣಿ ಯೋಜನೆ ಜಾರಿ ಮಾಡಲು ವಿತ್ತ ಇಲಾಖೆ ಮಾಹಿತಿ ಕೇಳಿದೆ. ರಾಜ್ಯ ಸರ್ಕಾರಿ ಸೇವೆಗೆ 2006ರ ಏಪ್ರಿಲ್ 1ಕ್ಕಿಂತ ಮೊದಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಆಗಿರುವ ನೌಕರರನ್ನು ಹಳೇ ಪಿಂಚಣಿ ಯೋಜನೆಗೆ ಒಳಪಡಿಸಲು ಎಲ್ಲ ಇಲಾಖೆಗಳಿಂದ ‘ಕ್ರೋಢಿಕೃತ ಮಾಹಿತಿ’ಯನ್ನು ಆರ್ಥಿಕ ಇಲಾಖೆ ಕೋರಿದೆ.
8,000ಕ್ಕೂ ಹೆಚ್ಚು ನೌಕರರಿಗೆ ಅನುಕೂಲ
2006ರ ಏಪ್ರಿಲ್ 1ಕ್ಕೂ ಮೊದಲು ರಾಜ್ಯ ಸಿವಿಲ್ ಸೇವೆಗಳಲ್ಲಿನ ಖಾಲಿ ಹುದ್ದೆ ಭರ್ತಿಗಾಗಿ ಹೊರಡಿಸಿದ ನೇಮಕಾತಿಯಾಗಿದ್ದರೂ ಹೊಸ ಪಿಂಚಣಿ ಯೋಜನೆ ವ್ಯಾಪ್ತಿಗೆ ಲಕ್ಷಾಂತರ ನೌಕರರು ಒಳಪಟ್ಟಿದ್ದಾರೆ. ಅವರ ಒತ್ತಾಯದ ಮೇರೆಗೆ ಕೆಲವು ಷರತ್ತುಗಳಿಗೆ ಒಳಪಟ್ಟು ಒಂದು ಬಾರಿಯ ಕ್ರಮವಾಗಿ ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆ (ಒಪಿಎಸ್) ವ್ಯಾಪ್ತಿಗೊಳಪಡಿಸಲು ಸರ್ಕಾರ ಈಗ ಒಪ್ಪಿಗೆ ನೀಡಿ ಆದೇಶಿಸಿದೆ.
ನೌಕರರ ಆಯ್ಕೆ ಅನುಸಾರ ನಿಗದಿತ ಅರ್ಹತೆ ಹೊಂದಿರುವುದನ್ನು ಸಕ್ಷಮ ನೇಮಕಾತಿ ಪ್ರಾಧಿಕಾರದಿಂದ ಖಚಿತಪಡಿಸಿಕೊಂಡು ಆಯಾ ಇಲಾಖೆಗಳ ಮುಖ್ಯಸ್ಥರು ಆಗಸ್ಟ್ 31ರ ಒಳಗೆ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಬೇಕು. ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸಿ, ದೃಢೀಕರಿಸಿದ ನಂತರವೇ ಪ್ರಸ್ತಾವನೆ ಸಲ್ಲಿಸಬೇಕೆಂದು ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ ಹೇಳಲಾಗಿದೆ.
2006ರ ಏಪ್ರಿಲ್ 1ರ ಅವಧಿಯಲ್ಲಿ ಹಾಗೂ ಆನಂತರದಲ್ಲಿ ನೇಮಕವಾದ ಸರಕಾರಿ ಉದ್ಯೋಗಿಗಳಿಗೆ ಶೀಘ್ರದಲ್ಲಿಯೇ ಹಳೇ ಪಿಂಚಣಿ ಯೋಜನೆಯೇ ಅನ್ವಯವಾಗಲಿದ್ದು; ಸುಮಾರು 8,000ಕ್ಕೂ ಹೆಚ್ಚು ನೌಕರರಿಗೆ ಇದರ ಪ್ರಯೋಜನ ಸಿಗಲಿದೆ ಎನ್ನಲಾಗುತ್ತಿದೆ.
2 thoughts on “ಸರಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಮರುಜಾರಿ? ಯಾರಿಗೆಲ್ಲ ಸಿಗಲಿದೆ ಇದರ ಲಾಭ? Old pension scheme for govt employees”