ರಾಜ್ಯದಲ್ಲಿ ಬರೋಬ್ಬರಿ 23 ಲಕ್ಷ ಹಿರಿಯ ನಾಗರಿಕರ ವೃದ್ಧಾಪ್ಯವೇತನಕ್ಕೆ (Old Age Pension Cancelled ) ಸರ್ಕಾರ ಕತ್ತರಿ ಹಾಕುತ್ತಿದೆ. ಯಾರಿಗೆಲ್ಲ ವೃದ್ಧಾಪ್ಯ ವೇತನ ಬಂದ್ ಆಗಲಿದೆ? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…
ಸರ್ಕಾರದ ವೃದ್ಧಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಗಳಡಿಯಲ್ಲಿ ಲಕ್ಷಾಂತರ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಲಾಗಿದೆ. ಆ ಮೂಲಕ ರಾಜ್ಯಾದ್ಯಂತ ಸುಮಾರು 23.19 ಲಕ್ಷ ಜನರ ಪಿಂಚಣಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಏನಿದು ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆ?
ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಹಿರಿಯ ನಾಗರಿಕರಿಗೆ ತಮ್ಮ ಜೀವನದ ಇಳಿಗಾಲದಲ್ಲಿ ಆರ್ಥಿಕ ಭದ್ರತೆ ಒದಗಿಸಲು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ವಿಶೇಷವಾಗಿ ವೃದ್ಧಾಪ್ಯ ವೇತನ ಯೋಜನೆ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಗಳು ಪ್ರಮುಖವಾದವು. ಈ ಎರಡೂ ಯೋಜನೆಗಳ ಅಡಿಯಲ್ಲಿ ಒಟ್ಟು 53.20 ಲಕ್ಷ ಫಲಾನುಭವಿಗಳಿದ್ದು; ಯೋಜನೆಗಳ ವಿವರ ಹೀಗಿದೆ:
ವೃದ್ಧಾಪ್ಯ ವೇತನ ಯೋಜನೆ: 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ BPL ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳು ₹800ನ್ನು ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಪ್ರಸ್ತುತ 21.87 ಲಕ್ಷ ಮಂದಿ ಈ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದಾರೆ.
ಸಂಧ್ಯಾ ಸುರಕ್ಷಾ ಯೋಜನೆ: 65 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ BPL ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳು ₹1,200 ಅನ್ನು ನೇರವಾಗಿ ಪಿಂಚಣಿಯಾಗಿ ಒದಗಿಸಲಾಗುತ್ತದೆ. ಪ್ರಸ್ತುತ 31.33 ಲಕ್ಷ ಮಂದಿ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
Solar Free Electricity- ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ…
ಅನರ್ಹರರ ಪಿಂಚಣಿ ರದ್ದು
ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಶೇಕಡಾವಾರು ಬಹಳ ಕಡಿಮೆ ಇದ್ದು, ಬಹುಪಾಲು ಹಣವನ್ನು ರಾಜ್ಯ ಸರ್ಕಾರವೇ ವಿನಿಯೋಗಿಸುತ್ತಿದೆ. ಹೀಗಾಗಿ ಸರ್ಕಾರಕ್ಕೆ ಆಗುತ್ತಿರುವ ಹೊರೆ ತಪ್ಪಿಸಿ ಅರ್ಹರಿಗೆ ಮಾತ್ರ ಪ್ರಯೋಜನ ತಲುಪಿಸುವ ಹಿನ್ನಲೆಯಲ್ಲಿ ಅನರ್ಹರನ್ನು ಯೋಜನೆಯಿಂದ ರದ್ದು ಮಾಡಲಾಗಿದೆ.
ಅಧಿಕೃತ ದತ್ತಾಂಶಗಳೊಂದಿಗೆ ಫಲಾನುಭವಿಗಳ ಮಾಹಿತಿಯನ್ನು ಹೋಲಿಸಿದಾಗ ಅನರ್ಹ ಫಲಾನುಭವಿಗಳು ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿದ್ದಾರೆ. ಈ ಹಂತದಲ್ಲಿ ಹಲವು ಲಕ್ಷ ರೂಪಾಯಿ ಮಾಸಾಶನ ಅನರ್ಹ ವ್ಯಕ್ತಿಗಳಿಗೆ ವಿತರಣೆಯಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.

ಅನರ್ಹರನ್ನು ಹೇಗೆ ಗುರುತಿಸಲಾಗಿದೆ?
- ಸರ್ಕಾರ ತಂತ್ರಜ್ಞಾನವನ್ನು ಉಪಯೋಗಿಸಿ ಡೇಟಾ ಹೋಲಿಕೆ ಮೂಲಕ ಅನರ್ಹ ಫಲಾನುಭವಿಗಳನ್ನು ಗುರುತಿಸಿದೆ. ಇವು ಪ್ರಮುಖ ವ್ಯವಸ್ಥೆಗಳು:
- ಆಧಾರ್ ಡೇಟಾ ಮತ್ತು DOB ಮ್ಯಾಚಿಂಗ್ ಮೂಲಕ ವಯೋಮಾನ ಪರಿಶೀಲನೆ
- ಎಚ್ಆರ್ಎಂಎಸ್ (HRMS) ಡೇಟಾ ಮೂಲಕ ನಿವೃತ್ತ ಸರ್ಕಾರಿ ನೌಕರರ ಗುರುತು
- ಆದಾಯ ತೆರಿಗೆ ಪಾವತಿ ವಿವರಗಳಿಂದ ಟ್ಯಾಕ್ಸ್ಪೇಯರ್ಗಳ ಪತ್ತೆ
- ಕುಟುಂಬ ದತ್ತಾಂಶ ತಂತ್ರಾಂಶ (Kutumba Database) ಮೂಲಕ ಕುಟುಂಬದ ಒಟ್ಟು ಆದಾಯ ಮತ್ತು ಸದಸ್ಯರ ವಿವರ ಗುರುತು
ನಿಮ್ಮ ಹೆಸರು ಅನರ್ಹರ ಪಟ್ಟಿಯಲ್ಲಿದೆಯಾ? ಈಗಲೇ ಪರಿಶೀಲಿಸಿ
ಪ್ರಸ್ತುತ ಸರಕಾರ ಅನರ್ಹರ ಪಟ್ಟಿಯನ್ನು ಇನ್ನೂ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಆದರೆ, ಈ ಕೆಳಗಿನ ಅರ್ಹತೆ ಇರುವವರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ:
- ನಿಮ್ಮ ವಯಸ್ಸು 60 ಅಥವಾ 65ಕ್ಕಿಂತ ಹೆಚ್ಚಿದ್ದರೆ
- ನೀವು ಎಪಿಎಲ್ ಕಾರ್ಡ್ ಹೊಂದಿದ್ದರೆ
- ಆದಾಯ ತೆರಿಗೆ ಪಾವತಿಸುತ್ತಿಲ್ಲವೆಂದರೆ
- ಸರ್ಕಾರಿ ನೌಕರಿ ಮಾಡಿ ನಿವೃತ್ತರಾಗಿಲ್ಲದಿದ್ದರೆ
- ನಿಮ್ಮ ಕುಟುಂಬದ ಒಟ್ಟು ಆದಾಯ ಮಿತಿ ಮೀರಿರದಿದ್ದರೆ
ಇಷ್ಟಾಗಿಯೂ ನಿಮಗೆ ನಾನು ಅನರ್ಹರರ ಪಟ್ಟಿಗೆ ಸೇರ್ಪಡೆ ಆಗಿರಬಹುದಾ? ಎಂಬ ಅನುಮಾನವಿದ್ದರೆ, ಕೂಡಲೇ ಗ್ರಾಮ ಪಂಚಾಯಿತಿ / ನಗರ ಪೌರಾಯುಕ್ತ ಕಚೇರಿ ಭೇಟಿ ನೀಡಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಅಥವಾ ಕಚೇರಿ ಸಂಪರ್ಕಿಸಿ ಅಥವಾ Seva Sindhu portal ನಲ್ಲಿರುವ ಸೇವೆಗಳ ಮೂಲಕ ಪರಿಶೀಲಿಸಿ ಖಚಿತಪಡಿಸಿಕೊಳ್ಳಬಹುದು.
ಅರ್ಹರಿದ್ದರೆ ಮರುಪರಿಶೀಲನೆಗೆ ಅರ್ಜಿ ಸಲ್ಲಸಿ
ಹಾಗೊಂದು ವೇಳೆ ನಿಮಗೆ ವೃದ್ಧಾಪ್ಯ ವೇತನ ಪಡೆಯುವ ಎಲ್ಲಾ ಅರ್ಹತೆಗಳಿದ್ದೂ ಕೂಡ ತಾಂತ್ರಿಕ ದೋಷದಿಂದ ನಿಮಗೆ ಪಿಂಚಣಿ ಸ್ಥಗಿತಗೊಂಡಿದ್ದರೆ, ಕೂಡಲೇ ಪಿಂಚಣಿ ಮರುಪಡೆಯಲು ನಿಮ್ಮ ಆಧಾರ್, ರೇಷನ್ ಕಾರ್ಡ್, ಕುಟುಂಬದ ಆದಾಯ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ಸಲ್ಲಿಸಿ ಪುನಃ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಿ.
ರಾಜ್ಯ ಸರ್ಕಾರದ ಈ ಕ್ರಮದಿಂದ ನೈಜ ಫಲಾನುಭವಿಗಳಿಗೆ ನ್ಯಾಯ ದೊರೆಯಲಿದೆ. ನಿಮ್ಮ ಹೆಸರು ಇನ್ನೂ ಪಿಂಚಣಿ ಪಟ್ಟಿಯಲ್ಲಿದೆಯೇ ಎಂಬುದನ್ನು ತಕ್ಷಣವೇ ಪರಿಶೀಲಿಸಿ ಮತ್ತು ಪಿಂಚಣಿ ರದ್ದಾಗಿದ್ದರೆ ತಕ್ಷಣ ಸೂಕ್ತ ಕ್ರಮ ತೆಗೆದುಕೊಳ್ಳಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.