NSDC Recruitment 2024 : ನ್ಯಾಷನಲ್ ಸ್ಕಿಲ್ ಡೆವಲಪ್’ಮೆಂಟ್ ಕಾರ್ಪೊರೇಷನ್ ವತಿಯಿಂದ (National Skill Development Corporation) ಕೇವಲ 10ನೇ ತರಗತಿ ಪಾಸಾದ (10th class pass) ಅಭ್ಯರ್ಥಿಗಳಿಗೆ ವಿದೇಶದಲ್ಲಿ ಖಾಲಿ ಇರುವ 5,000 ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಪ್ರತಿಯೊಬ್ಬ ಅರ್ಹ ಅಭ್ಯರ್ಥಿಗಳಿಗೂ ಇದೊಂದು ಸುವರ್ಣ ಅವಕಾಶವಾಗಿದೆ.
ಈ ನೇಮಕಾತಿಯಲ್ಲಿ ಆಯ್ಕೆ ಆದವರಿಗೆ ಯಾವ ದೇಶದಲ್ಲಿ ಉದ್ಯೋಗಾವಕಾಶ ಸಿಗಲಿದೆ? ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ಮಾಸಿಕ ವೇತನ? ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? ಸೇರಿದಂತೆ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ನೇಮಕಾತಿ ಸಂಕ್ಷಿಪ್ತ ವಿವರ
- ನೇಮಕಾತಿ ಸಂಸ್ಥೆ : ನ್ಯಾಷನಲ್ ಸ್ಕಿಲ್ ಡೆವಲಪಮೆಂಟ್ ಕಾರ್ಪೊರೇಷನ್
- ಹುದ್ದೆಗಳ ಹೆಸರು : ಗೃಹ ಆಧಾರಿತ ಆರೈಕೆದಾರರು
- ಒಟ್ಟು ಹುದ್ದೆಗಳ ಸಂಖ್ಯೆ : 5,000
- ಉದ್ಯೋಗ ಸ್ಥಳ : ಇಸ್ರೇಲ್ ದೇಶ
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
ಈ ನೇಮಕಾತಿಗೆ ಪುರುಷ ಮಾತ್ರವಲ್ಲದೇ ಮಹಿಳೆಯರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಮುಗಿಸಿರಬೇಕು. 25 ವರ್ಷದಿಂದ 45 ವಯಸ್ಸಿನ ವಯೋಮಿತಿಯಲ್ಲಿರಬೇಕು. 5 ಅಡಿ ಎತ್ತರ ಹಾಗೂ ಕನಿಷ್ಠ 45 ಕೆಜಿ ತೂಕವನ್ನು ಹೊಂದಿರಬೇಕು. ಕನಿಷ್ಠ ಇಂಗ್ಲೀಷ್ ಮಾತನಾಡುವ ಜ್ಞಾನವನ್ನು ಹೊಂದಿರಬೇಕು.
ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸಿಗುವ ವೇತನ
ಗೃಹ ಆಧಾರಿತ ಆರೈಕೆದಾರರು (Home Based Caregivers) ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 1,30,000 ರೂಪಾಯಿ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅನುಭವ ಹಾಗೂ ಇತರೆ ಅರ್ಹತೆಗಳ ವಿವರ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 990 ಗಂಟೆಗಳ ಆರೈಕೆಯ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದು, ಭಾರತೀಯ ಅಧಿಕಾರಿಗಳಿಂದ ಮೇಲ್ವಿಚಾರಣೆಗೆ ಒಳಪಟ್ಟ ಆರೈಕೆ ಸೇವೆಗಳನ್ನು ಒದಗಿಸುವುದರಲ್ಲಿ ಅರ್ಹತೆ ಪ್ರಮಾಣ ಪತ್ರ ಪಡೆದಿರಬೇಕು ಅಥವಾ ಇದನ್ನು ಹೊರತುಪಡಿಸಿ ಸಂಬ೦ಧಿತ ಭಾರತೀಯ ಅಧಿಕಾರಿಗಳಿಂದ ನರ್ಸಿಂಗ್, ಪಿಜಿಯೋಥೆರಪಿ, ನರ್ಸ್ ಅಸಿಸ್ಟೆಂಟ್ ಅಥವಾ ಸೂಲಗಿತ್ತಿಯಲ್ಲಿ ತರಬೇತಿ ಪೂರ್ಣಗೊಳಿಸಿರಬೇಕು.
ಮೇಲಿನ ಅರ್ಹತೆಗಳನ್ನು ಹೊರತುಪಡಿಸಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಮೊದಲು ಇಸ್ರೇಲ್ ದೇಶದಲ್ಲಿ ಎಂದಿಗೂ ಕೆಲಸ ಮಾಡಿರಬಾರದು ಹಾಗೂ ಸಂಗಾತಿ, ಪೋಷಕರು ಅಥವಾ ಮಕ್ಕಳನ್ನು ಇಸ್ರೇಲ್ ದೇಶದಲ್ಲಿ ಹೊಂದಿರಬಾರದು.
ಅರ್ಜಿ ಸಲ್ಲಿಸುವ ವಿಧಾನ ಹೇಗೆ? How to apply?
ಅರ್ಜಿ ಸಲ್ಲಿಸಲು ಅರ್ಹರಿರುವವರು ಕೆಳಗೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ Home Based Caregiver ಹುದ್ದೆಗಳ ಕುರಿತಾದ ಡೀಟೇಲ್ಸ್ ಓದಿ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ. ನಂತರದಲ್ಲಿ ಅಲ್ಲಿ ಕೇಳಲಾಗುವ ಸಂಪೂರ್ಣ ಮಾಹಿತಿಯನ್ನು ತುಂಬಿ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
ಈ ಒಂದು ಉದ್ಯೋಗ ಅವಕಾಶವೂ ವಿದೇಶದಲ್ಲಿದೆ ಎಂಬ ವಿಷಯವನ್ನು ಬಿಟ್ಟರೆ 10ನೇ ತರಗತಿ ಪಾಸಾದವರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಆಯ್ಕೆಯಾದವರಿಗೆ ಬಹಳಷ್ಟು ಅನುಕೂಲಗಳು ಸಿಗಲಿವೆ.