New BPL Ration Card List : ಹೊಸ ರೇಷನ್ ಕಾರ್ಡ್’ಗಾಗಿ ಕಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೊಸ ಕಾರ್ಡ್’ಗಳಿಗಾಗಿ (New Ration Card) ಅರ್ಜಿ ಸಲ್ಲಿಸಿ ಹಲವು ವರ್ಷಗಳೇ ಕಳೆದಿದ್ದರೂ ಲಕ್ಷಾಂತರ ಜನರ ಅರ್ಜಿಗಳಿಗೆ ಸದ್ಗತಿ ಸಿಗುತ್ತಿಲ್ಲ. ಇದೀಗ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ನಿರೀಕ್ಷೆಯಲ್ಲಿರುವವರಿಗೆ ಆಹಾರ ಸಚಿವ ಕೆ ಎಚ್ ಮುನಿಯಪ್ಪ ( K H Muniyappa) ಸಿಹಿ ಸುದ್ದಿ ನೀಡಿದ್ದಾರೆ.
ಬಿಪಿಎಲ್ ಕಾರ್ಡ್’ಗಾಗಿ ರಾಜ್ಯದಲ್ಲಿ 1.73 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಶೀಘ್ರ ವಿಲೇವಾರಿ ಮಾಡಿ ಅರ್ಹರಿಗೆ ಕಾರ್ಡ್ ವಿತರಿಸಲಾಗುವುದು ಎಂದು ಸಚಿವರು ಜುಲೈ 16ರಂದು ವಿಧಾನ ಪರಿಷತ್‌ಗೆ ಮಾಹಿತಿ ನೀಡಿದ್ದಾರೆ. ಬಿಜೆಪಿಯ ಪ್ರತಾಪ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು ನೀಡಿದ ವಿವರ ಈ ಕೆಳಗಿನಂತಿದೆ:
- ಸಲ್ಲಿಕೆಯಾದ ಅರ್ಜಿಗಳು : 2.95 ಲಕ್ಷ
- ಅರ್ಹವಾದ ಅರ್ಜಿಗಳು : 2.36
- ವಿತರಣೆಯಾಗಲಿರುವ ಬಿಪಿಎಲ್ ಕಾರ್ಡ್ : 1.73
ಹೊಸ ರೇಷನ್ ಕಾರ್ಡ್’ಗಾಗಿ ಸಲ್ಲಿಸಿದ್ದ ತಮ್ಮ ಅರ್ಜಿ ಏನಾಯ್ತು? ಹೊಸ ರೇಷನ್ ಕಾರ್ಡ್ ಪಟ್ಟಿಯಲ್ಲಿ ನಮ್ಮ ಹೆಸರಿದೆಯೋ ಇಲ್ಲವೋ? ಎಂಬ ಗೊಂದಲ ಅನೇಕರಲ್ಲಿದೆ. ನಿಮ್ಮಲ್ಲಿ ಫೋನ್ ಇದ್ದರೆ ಈ ಗೊಂದಲವನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು.
ನಾವು ಕೆಳಗೆ ಬೇರೆ ಬೇರೆ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಎರಡು ಲಿಂಕ್’ಗಳನ್ನು ನೀಡಿದ್ದೇವೆ. ಮೊದಲಿಗೆ ನಿಮ್ಮ ಜಿಲ್ಲೆಗೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ಆಹಾರ ಇಲಾಖೆಯ e-Status ಪುಟ ತೆರೆದುಕೊಳ್ಳುತ್ತದೆ.
ಅಲ್ಲಿ ನೀವು ನಗರ ಪ್ರದೇಶದವರಾ? ಅಥವಾ ಗ್ರಾಮೀಣ ಪ್ರದೇಶದವರಾ? ಎಂಬುದನ್ನು ನಮೂದಿಸಲು Urban/IRA ಹಾಗೂ Rural ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನಿಮ್ಮ ಆಯ್ಕೆ ಸೆಲೆಕ್ಟ್ ಮಾಡಿ.
ನಂತರ ಕೆಳಗಡೆ ನೀವು ಅರ್ಜಿ ಸಲ್ಲಿಸಿದಾಗ ನೀಡಿದ Enter Acknowledgment No ಹಿಂಬರಹ ಸಂಖ್ಯೆ ನಮೂದಿಸಿ, ಬಳಿಕ Select District/ Taluk/ Panchayat ಜಿಲ್ಲಾ / ತಾಲ್ಲೂಕು / ಪಂಚಾಯತ್ ಆಯ್ಕೆ ಮಾಡಿ Go ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಅರ್ಜಿ ಸ್ಥಿತಿ ತಿಳಿಯಲಿದೆ. ಅದರಲ್ಲಿ ನಿಮ್ಮ ಅರ್ಜಿ ಅರ್ಹವಾಗಿದ್ದರೆ ಶೀಘ್ರದಲ್ಲಿಯೇ ನಿಮಗೆ ಹೊಸ ಬಿಪಿಎಲ್ ಕಾರ್ಡ್ ಸಿಗಲಿದೆ.
ಆಹಾರ ಇಲಾಖೆಯ ಈ ಕೆಳಗಿನ ಲಿಂಕ್ ಬಳಸಿ ಚೆಕ್ ಮಾಡಿ
ನೀವು ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಜಿಲ್ಲೆಯವರಾಗಿದ್ದರೆ
👉 ಇಲ್ಲಿ ಒತ್ತಿ…
ಇನ್ನು ನೀವು ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಯವರಾಗಿದ್ದರೆ
👉 ಇಲ್ಲಿ ಒತ್ತಿ…
1 thought on “1.73 ಲಕ್ಷ ರೇಷನ್ ಕಾರ್ಡ್ ವಿತರಣೆ | ನಿಮಗೆ ಹೊಸ ರೇಷನ್ ಕಾರ್ಡ್ ಸಿಗುತ್ತಾ? ಮೊಬೈಲ್‌ನಲ್ಲೇ ಚೆಕ್ ಮಾಡಿ… New BPL Ration Card List”