NEET-UG Exam 2025- ಮೇ 4ರಂದು ರಾಜ್ಯದಾದ್ಯಂತ ವೈದ್ಯಕೀಯ ಪ್ರವೇಶ ಪರೀಕ್ಷೆ | ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಮಾಹಿತಿ ಇಲ್ಲಿದೆ…

Spread the love

WhatsApp Group Join Now
Telegram Group Join Now

2025ನೇ ಸಾಲಿನ ನೀಟ್-ಯುಜಿ ಪರೀಕ್ಷೆ ಸಂಬಂಧ ಪರೀಕ್ಷಾ ಕೇಂದ್ರಗಳಲ್ಲಿ ಅನುಸರಿಸಬೇಕಾದ ಸುರಕ್ಷಾತಾ ಕ್ರಮಗಳ ಕುರಿತ ಮಾರ್ಗಸೂಚಿ ಪ್ರಕಟಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…

ವೈದ್ಯಕೀಯ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಇಚ್ಛಿಸುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ವತಿಯಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ (NEET-UG) 2025 ಅನ್ನು ಇದೇ ಮೇ 4, 2025ರ ಭಾನುವಾರ ದೇಶದಾದ್ಯಂತ ನಡೆಸಲಾಗುತ್ತಿದೆ.

ಕರ್ನಾಟಕದಲ್ಲಿಯೂ ಈ ಪರೀಕ್ಷೆಗಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಈ ಸಲದ ಪರೀಕ್ಷೆಗೆ ಸುಮಾರು 1.49 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದ 381 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಏರ್ಪಡಿಸಲಾಗಿದ್ದು, ಪ್ರತಿ ವಿದ್ಯಾರ್ಥಿಗೆ ಸರಿಯಾಗಿ ಮಾರ್ಗಸೂಚನೆ ಅನುಸರಿಸಿ ಹಾಜರಾಗುವ ಜವಾಬ್ದಾರಿ ಇದೆ.

Karnataka Rain Forecast- ಮೇ 6ರ ವರೆಗೆ ಕರ್ನಾಟಕದಲ್ಲಿ ಮಳೆ ಮುನ್ಸೂಚನೆ | ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ?

ಪರೀಕ್ಷೆಯ ಪ್ರಮುಖ ವಿವರಗಳು
  • ಪರೀಕ್ಷೆಯ ದಿನಾಂಕ: 2025ರ ಮೇ 4, ಭಾನುವಾರ
  • ಪರೀಕ್ಷಾ ಸಮಯ: ಮಧ್ಯಾಹ್ನ 2:00 ರಿಂದ ಸಂಜೆ 5:00
  • ಪ್ರವೇಶ ಸಮಯ: ಬೆಳಿಗ್ಗೆ 11:00ರಿಂದ ಮಧ್ಯಾಹ್ನ 1:30ರೊಳಗೆ
  • ಪರೀಕ್ಷಾ ಕೇಂದ್ರಗಳು: ಕರ್ನಾಟಕದಾದ್ಯಂತ 381
  • ವಿದ್ಯಾರ್ಥಿಗಳ ಸಂಖ್ಯೆ: 1.49 ಲಕ್ಷ
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತರಬೇಕಾದ ದಾಖಲೆಗಳು

ವಿದ್ಯಾರ್ಥಿಗಳು ನಿಗದಿತ ಪರೀಕ್ಷಾ ದಿನ, ಈ ಕೆಳಗಿನ ದಾಖಲೆಗಳು ಮತ್ತು ಸಾಮಗ್ರಿಗಳೊಂದಿಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಬೇಕು:

  • ಪ್ರವೇಶ ಪತ್ರದ (Admit Card) ಡೌನ್‌ಲೋಡ್ ಮಾಡಿರುವ ಪ್ರಿಂಟೆಡ್ ಪ್ರತಿಯನ್ನು ತರಬೇಕು.
  • ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಇತ್ಯಾದಿಗಳಲ್ಲಿ ಯಾವುದಾದರೂ ಒಂದು.
  • ವಿದ್ಯಾರ್ಥಿಯ ಶಾಲೆ/ಕಾಲೇಜು ನೀಡಿರುವ ಗುರುತಿನ ಚೀಟಿ
  • ಒಂದು ಪೋಸ್ಟ್ ಕಾರ್ಡ್ ಅಳತೆಯ ಭಾವಚಿತ್ರ
  • ಪ್ರವೇಶ ಪತ್ರದಲ್ಲಿ ನೀಡಿರುವ ಸ್ಥಳದಲ್ಲಿ ಅಂಟಿಸಲು ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು

ATM Transaction Fee Hike- ಮೇ 1ರಿಂದ ಬ್ಯಾಂಕ್ ಎಟಿಎಂ ಶುಲ್ಕ ಹೆಚ್ಚಳ: ಆರ್‌ಬಿಐ ಪರಿಷ್ಕೃತ ನಿಯಮ ಜಾರಿ

ನೀಟ್-ಯುಜಿ ಪರೀಕ್ಷೆ ಸಂಬಂಧ ಪರೀಕ್ಷಾ ಕೇಂದ್ರಗಳಲ್ಲಿ ಅನುಸರಿಸಬೇಕಾದ ಸುರಕ್ಷಾತಾ ಕ್ರಮಗಳ ಕುರಿತ ಮಾರ್ಗಸೂಚಿ ಪ್ರಕಟಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ...
NEET-UG Exam 2025 Karnataka Guidelines
ವಿದ್ಯಾರ್ಥಿಗಳು ತರಬಾರದ ವಸ್ತುಗಳ ಪಟ್ಟಿ

ಪರೀಕ್ಷಾ ಕೇಂದ್ರದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಈ ಕೆಳಗಿನ ವಸ್ತುಗಳನ್ನು ತರಲು ನಿರ್ಬಂದಿಸಲಾಗಿದೆ:

  • ಪೂರ್ಣತೋಳಿನ ಉಡುಪುಗಳು, ದೊಡ್ಡ ಬಟನ್‌ಗಳಿರುವ ಶರ್ಟ್ಗಳು
  • ಶೂ-ಸಾಕ್ಸ್’ಗಳು, ಎತ್ತರದ ಚಪ್ಪಲಿಗಳು
  • ಕಿವಿಯೋಲೆ, ಸರ, ಮೂಗುತಿ, ಜಡೆ ಕ್ಲಿಪ್ ಇತ್ಯಾದಿ ಲೋಹದ ಆಭರಣಗಳು
  • ಮೊಬೈಲ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು
  • ಕಾಗದದ ಚೀಟಿಗಳು, ಕೈಲಿಖಿತ ನೋಟ್‌ಗಳು
ಪರೀಕ್ಷಾ ಕೇಂದ್ರದಲ್ಲಿ ನಡೆಯುವ ಪ್ರಮುಖ ಕ್ರಮಗಳು
  • ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿದ್ದು; ಬೆರಳಚ್ಚು ಅಥವಾ ಮುಖದ ಗುರುತು ಪರೀಕ್ಷೆ ನಡೆಸಲಾಗುತ್ತದೆ.
  • ನಿರ್ಬಂಧಿತ ವಸ್ತುಗಳ ಪತ್ತೆಗಾಗಿ ಫ್ರಿಸ್ಕಿಂಗ್ (ಚೆಕ್) ಹಾಗೂ ಜಾಮರ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.
  • ಸಮಯದ ಸೂಚನೆಗಾಗಿ ಪ್ರತಿ ಗಂಟೆಗೆ ಒಂದು ಗಂಟೆ ಸೂಚಿಸುವ ಬೆಲ್ ಮೊಳಗಿಸಲಾಗುತ್ತದೆ.
  • ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಗದಿತ ಕೊಠಡಿಗೆ ತೆರಳಬೇಕು.

Arivu Education Loan Scheme- ಸರ್ಕಾರದಿಂದ 5 ಲಕ್ಷ ರೂಪಾಯಿ ವರೆಗೆ ಶಿಕ್ಷಣ ಸಾಲ | ಅರ್ಜಿ ಆಹ್ವಾನ

ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಜಿಲ್ಲಾಡಳಿತದ ವ್ಯವಸ್ಥೆಗಳು

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ತುರ್ತು ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಸಹಾಯ, ನಿರಂತರ ವಿದ್ಯುತ್, ಶುದ್ಧ ನೀರಿನ ಸೌಲಭ್ಯ, ಅಂಗವಿಕಲರು ಹಾಗೂ ವಿಶೇಷ ಚೇತನ ವಿದ್ಯಾರ್ಥಿಗಳಿಗಾಗಿ ವೀಲ್‌ಚೇರ್ ಸೌಲಭ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹಾಗೂ ತುರ್ತು ನಿರ್ವಹಣಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಾಗಿರುತ್ತದೆ ನಿಯೋಜಿತ ಸಿಬ್ಬಂದಿ ಹೊರತುಪಡಿಸಿ ಯಾರಿಗೂ ಪ್ರವೇಶ ಇರುವುದಿಲ್ಲ. ಪರೀಕ್ಷಾ ಕೇಂದ್ರದ ಮುಖ್ಯಸ್ಥರು ವ್ಯವಸ್ಥೆಗಳನ್ನು ಖಚಿತಪಡಿಸಬೇಕು ಎಂಬ ಸೂಚನೆ ನೀಡಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಬಿಡುಗಡೆ ಮಾಡಿರುವ ಮಾರ್ಗಸೂಚಿಗಳ ಪ್ರತಿ ಅಂಶವನ್ನು ಗಮನಿಸಿ, ಯಾವುದೇ ನಿಯಮ ಉಲ್ಲಂಘನೆಗೆ ಅವಕಾಶ ನೀಡದಂತೆ ಶ್ರದ್ಧೆಯಿಂದ ಪರೀಕ್ಷೆ ಬರೆಯಿರಿ. ಪರೀಕ್ಷೆ ಮುಗಿದ ನಂತರದ ದಿನಗಳಲ್ಲಿ ಫಲಿತಾಂಶ ಪ್ರಕಟನೆಯ ಕುರಿತ ಮಾಹಿತಿ ಎನ್‌ಟಿಎ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.

ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು… ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿ. ವೈದ್ಯಕೀಯ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯ ಬೆಳಗಲಿ…

Karnataka SSLC Result 2025- ಇನ್ನೆರಡು ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ | ಪರೀಕ್ಷಾ ಮಂಡಳಿಯ ಅಧಿಕೃತ ಮಾಹಿತಿ ಇಲ್ಲಿದೆ…


Spread the love
error: Content is protected !!