2026-27ನೇ ಸಾಲಿನ ನವೋದಯ ಸ್ಕೂಲ್ ಪ್ರವೇಶಕ್ಕೆ (Navodaya Admission 2026) ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
2026-27ನೇ ಸಾಲಿಗೆ ಜವಾಹರ ನವೋದಯ ಸ್ಕೂಲ್ ಪ್ರವೇಶಕ್ಕಾಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸಲುವಾಗಿ, 653 ನವೋದಯ ವಿದ್ಯಾಲಯಗಳಲ್ಲಿ ಈ ಪರೀಕ್ಷೆಯ ಮೂಲಕ ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ.
JNVs ನಲ್ಲಿ ಪ್ರವೇಶವನ್ನು ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ (JNVST) ಮೂಲಕ 6ನೇ ತರಗತಿಗೆ ಮಾಡಲಾಗುತ್ತದೆ. ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯಲಿದೆ; ಮೊದಲ ಹಂತ ಜನವರಿ 17 ಮತ್ತು ಎರಡನೇ ಏಪ್ರಿಲ್ 11. ಒಟ್ಟು 100 ಅಂಕಗಳಿಗೆ 2 ಗಂಟೆಗಳ ಪರೀಕ್ಷೆ ನಡೆಯಲಿದ್ದು; ಜೂನ್‌ನಲ್ಲಿ ಫಲಿತಾಂಶ ಬಿಡುಗಡೆಯಾಗಲಿದೆ.
ಕೇಂದ್ರ ಸರ್ಕಾರದ ನೆರವು
ರಾಷ್ಟ್ರೀಯ ಶಿಕ್ಷಣ ನೀತಿ (1986)ಕ್ಕೆ ಅನುಗುಣವಾಗಿ, ಭಾರತ ಸರ್ಕಾರವು ಜವಾಹರ್ ನವೋದಯ ವಿದ್ಯಾಲಯಗಳನ್ನು (JNVs) ಪ್ರಾರಂಭಿಸಿದೆ. ಪ್ರಸ್ತುತ JNVs 27 ರಾಜ್ಯಗಳು ಮತ್ತು 08 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿಕೊಂಡಿವೆ.
ಇವು ಸಹ-ಶಿಕ್ಷಣ ವಸತಿ ಶಾಲೆಗಳಾಗಿದ್ದು, ಭಾರತ ಸರ್ಕಾರವು ಸ್ವಾಯತ್ತ ಸಂಸ್ಥೆಯಾದ ನವೋದಯ ವಿದ್ಯಾಲಯ ಸಮಿತಿಯ ಮೂಲಕ ಸಂಪೂರ್ಣವಾಗಿ ಹಣಕಾಸು ಒದಗಿಸಿ ನಿರ್ವಹಿಸುತ್ತದೆ.

ನವೋದಯ ಸ್ಕೂಲ್‌ಗಳಲ್ಲಿ ಸಿಗುವ ಸೌಲಭ್ಯಗಳು
- ಪ್ರತಿ ಜಿಲ್ಲೆಯಲ್ಲಿ ಜವಾಹರ್ ನವೋದಯ ವಿದ್ಯಾಲಯ ಸಮಿತಿ (NVS) ಶಿಕ್ಷಣ ವಸತಿ ಶಾಲೆಗಳು ಇವೆ
- ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ
- ಉಚಿತ ಶಿಕ್ಷಣದ ಜೊತೆಗೆ ವಸತಿ ಸಹಿತ ಉಟೋಪಚಾರ ವ್ಯವಸ್ಥೆ
- ವಲಸೆ ಯೋಜನೆಯ ಮೂಲಕ ವೈವಿಧ್ಯಮಯ ಸಾಂಸ್ಕೃತಿಕ ವಿನಿಮಯ, ಕ್ರೀಡೆ ಮತ್ತು ಆಟೋಟಗಳಿಗೆ ಉತ್ತೇಜನ
- ಎನ್‌ಸಿಸಿ, ಸೈಟ್ಸ್ & ಗೈಡ್ಸ್ ಮತ್ತು ಎನ್.ಎಸ್.ಎಸ್ ತರಬೇತಿ
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
- ಅಭ್ಯರ್ಥಿಗಳು ಕಾರ್ಯನಿರ್ವಹಿಸುತ್ತಿರುವ ಸಂಬಂಧಿಸಿದ ಜವಾಹರ ನವೋದಯ ವಿದ್ಯಾಲಯಗಳ ಆಯಾ ಜಿಲ್ಲೆಯ ವಿಶ್ವಾಸಾರ್ಹ ನಿವಾಸಿಗಳೇ ಆಗಿರಬೇಕು.
- 2025-26 ನೇ ಶೈಕ್ಷಣಿಕ ವರ್ಷದಲ್ಲಿ ಅದೇ ಜಿಲ್ಲೆಯ ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡದಿರುವ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು.
- ವಿದ್ಯಾರ್ಥಿಯು 3 ಮತ್ತು 4ನೇ ತರಗತಿಯ ಪೂರ್ಣ ಶೈಕ್ಷಣಿಕ ವರ್ಷವನ್ನು ಸರ್ಕಾರಿ/ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ ಪೂರ್ಣಾವಧಿ ಶಾಲಾ ಶಿಕ್ಷಣ ಪಡೆದು ತೇರ್ಗಡ ಹೊಂದಿರಬೇಕು.
- ವಯಸ್ಸು ಮೇ 1, 2014 ಮತ್ತು ಏಪ್ರಿಲ್ 30, 2016ರ ನಡುವೆ ಜನಿಸಿದವರಾಗಿರಬೇಕು.
ಮೀಸಲಾತಿ ವಿವರ
- ಜಿಲ್ಲೆಯಲ್ಲಿ ಕನಿಷ್ಠ ಶೇ.75 ರಷ್ಟು ಸ್ಥಾನಗಳು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಂದ ತುಂಬಲಾಗುವುದು.
- ಸರ್ಕಾರದ ನಿಯಮದನ್ವಯ SC, ST, OBC ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಮೀಸಲಾತಿ ಇದೆ.
- ಕನಿಷ್ಠ 1/3 ರಷ್ಟು ಸ್ಥಾನಗಳು ಬಾಲಕಿಯರಿಗೆ ಮೀಸಲಾಗಿರುತ್ತವೆ.ಅರ್ಜಿ
ಅರ್ಜ ಸಲ್ಲಿಕೆ ದಿನಾಂಕ
ಯಾವುದೇ ಅರ್ಜಿ ಶುಲ್ಕವಿಲ್ಲದೆ navodaya.gov.in ಅಥವಾ cbseitms.rcil.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-07-2025
ಅರ್ಜಿ ಸಲ್ಲಿಸುವ ವಿಧಾನ
- JNV ತರಗತಿ 6ನೇ ತರಗತಿಯಲ್ಲಿ ಪ್ರವೇಶಕ್ಕಾಗಿ ನೋಂದಾಯಿಸಲು, ಕೆಳಗೆ ನೀಡಿರುವ ನವೋದಯ ವಿದ್ಯಾಲಯದ ಅಧಿಕೃತ ವೆಬ್‌ಸೈಟ್ navodaya.gov.in ನೇರ ಲಿಂಕ್ ಬಳಸಿಕೊಂಡು ಅರ್ಜಿ ಸಲ್ಲಿಸಬಹುದು.
- ನಿಮಗೆ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಅಗತ್ಯ ವಿವರಗಳನ್ನು ನಮೂದಿಸಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಮುಂದಿನ ಹಂತದಲ್ಲಿ, ಶುಲ್ಕವನ್ನು ಪಾವತಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ. ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿದ ನಂತರ ಮತ್ತು ದೃಢೀಕರಣದ ನಂತರ, ಫಾರ್ಮ್ ಅನ್ನು ಸಲ್ಲಿಸಿ.
- ಅರ್ಜಿ ಲಿಂಕ್ : navodaya.gov.in