Mobile Kaladare Enu Madabeku: ಮೊಬೈಲ್ ಕಳೆದು ಹೋದ ತಕ್ಷಣ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳೇನು? ಮೊಬೈಲ್‌ನಲ್ಲಿರುವ ಮಾಹಿತಿ ಸುರಕ್ಷಿತವಾಗಿಡುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ಇಂದಿನ ದಿನಗಳಲ್ಲಿ ಮೊಬೈಲ್ (Mobile) ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದೆ. ಕರೆ-ಮೆಸೇಜ್‌ಗಳಿಂದ ಹಿಡಿದು ಬ್ಯಾಂಕಿಂಗ್ (Banking), ಸೋಶಿಯಲ್ ಮೀಡಿಯಾ, ಆನ್‌ಲೈನ್ ವ್ಯವಹಾರಗಳು (Online businesses) ಎಲ್ಲವೂ ಮೊಬೈಲ್‌ನಲ್ಲೇ ನಡೆಯುತ್ತಿವೆ. ಹೀಗಿರುವಾಗ ಮೊಬೈಲ್ ಕಳವಾಗಿದೆ ಅಥವಾ ಕಳೆದು ಹೋಗಿದೆ ಎಂಬುದು ಗೊತ್ತಾದ ಕ್ಷಣವೇ ಸಹಜವಾಗಿ ಗಾಬರಿಯಾಗುತ್ತದೆ.
ಆದರೆ ಈ ಸಂದರ್ಭದಲ್ಲಿ ಆತಂಕಕ್ಕೊಳಗಾಗದೇ, ಸರಿಯಾದ ಕ್ರಮವನ್ನು ತಕ್ಷಣ ಕೈಗೊಂಡರೆ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಹಣವನ್ನು ರಕ್ಷಿಸಬಹುದು. ಈ ಲೇಖನದಲ್ಲಿ ಮೊಬೈಲ್ ಕಳವಾದಾಗ ಏನು ಮಾಡಬೇಕು ಎಂಬುದನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ.
ಇದನ್ನೂ ಓದಿ: UPI EPF Withdrawal- ಯುಪಿಐ ಮೂಲಕ ಇಪಿಎಫ್ | ಇನ್ಮುಂದೆ ಮೂರೇ ದಿನದಲ್ಲಿ ಉದ್ಯೋಗಿಗಳ ಕೈಗೆ ಪಿಎಫ್ ಹಣ
Inform Telecom Provider – ಮೊದಲು ಟೆಲಿಕಾಂ ಕಂಪನಿಗೆ ಮಾಹಿತಿ ನೀಡಿ
ಮೊಬೈಲ್ ಕಳವಾಗಿದೆ ಎಂದು ಗೊತ್ತಾದ ಕೂಡಲೇ, ನೀವು ಬಳಸುತ್ತಿದ್ದ ಟೆಲಿಕಾಂ ಸೇವಾ ಕಂಪನಿಗೆ (ಜಿಯೋ, ಏರ್‌ಟೆಲ್, ವಿಐ, ಬಿಎಸ್‌ಎನ್‌ಎಲ್) ತಕ್ಷಣ ಫೋನ್ ಮಾಡಿ ಮಾಹಿತಿ ನೀಡಬೇಕು.
ಅವರು ನಿಮ್ಮ ಸಿಮ್ ಕಾರ್ಡ್ ಅನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡುತ್ತಾರೆ. ಇದರಿಂದ ನಿಮ್ಮ ನಂಬರ್ ದುರುಪಯೋಗವಾಗುವುದನ್ನು ತಡೆಯಬಹುದು.
ಓಟಿಪಿ, ಬ್ಯಾಂಕ್ ಸಂದೇಶಗಳು ದುಷ್ಕರ್ಮಿಗಳ ಕೈಗೆ ಹೋಗುವುದನ್ನು ತಪ್ಪಿಸಬಹುದು. ನಂತರ ಅಗತ್ಯವಿದ್ದರೆ ಅದೇ ನಂಬರ್‌ಗೆ ಡ್ಯುಪ್ಲಿಕೇಟ್ ಸಿಮ್ ಪಡೆಯಬಹುದು.
File Police Complaint – ಪೊಲೀಸ್ ಠಾಣೆಯಲ್ಲಿ ದೂರು (FIR) ದಾಖಲಿಸಿ
ಮೊಬೈಲ್ ಕಳವಾದ ವಿಷಯವನ್ನು ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದು ಅತ್ಯಂತ ಮುಖ್ಯ. ಇದು ಕೇವಲ ಕಾನೂನು ಪ್ರಕ್ರಿಯೆ ಮಾತ್ರವಲ್ಲ, ಮುಂದಿನ ಹಂತಗಳಲ್ಲಿ ಅಗತ್ಯವಿರುವ ದಾಖಲೆ ಕೂಡ ಆಗಿರುತ್ತದೆ.
ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳವಾದ ದಿನ, ಸಮಯ ಮತ್ತು ಸ್ಥಳ, ಮೊಬೈಲ್ ನಂಬರ್, ಫೋನಿನ ಬ್ರಾಂಡ್ ಮತ್ತು ಬಣ್ಣ ಇತ್ಯಾದಿ ಮಾಹಿತಿಯನ್ನು ನೀಡಿ ಎಫ್‌ಐಆರ್ ಪ್ರತಿಯನ್ನು ಪಡೆಯಿರಿ. ಈ ಪ್ರತಿಯನ್ನು ಮುಂದಿನ ಹಂತದಲ್ಲಿ ಲಗತ್ತಿಸಬೇಕಾಗುತ್ತದೆ.

Importance of IMEI Number – ಐಎಂಇಐ ಸಂಖ್ಯೆ ಏಕೆ ಮುಖ್ಯ?
ಪ್ರತಿ ಮೊಬೈಲ್ ಫೋನಿಗೂ ಒಂದೇ ಒಂದು ವಿಶಿಷ್ಟ ಐಎಂಇಐ ಸಂಖ್ಯೆ ಇರುತ್ತದೆ. ಈ ಸಂಖ್ಯೆಯ ಮೂಲಕವೇ ನಿಮ್ಮ ಕಳವಾದ ಮೊಬೈಲ್ ಅನ್ನು ಪತ್ತೆಹಚ್ಚಲು ಅಥವಾ ಬ್ಲಾಕ್ ಮಾಡಲು ಸಾಧ್ಯವಾಗುತ್ತದೆ.
ಮೊಬೈಲ್ ಖರೀದಿಸಿದಾಗ ಬಂದ ಬಾಕ್ಸ್ ಮೇಲೆ, ಫೋನಿನ ಬಿಲ್ ಅಥವಾ ವಾರಂಟಿ ಕಾರ್ಡ್ನಲ್ಲಿ ಅಥವಾ ಮೊಬೈಲ್ ಇದ್ದಾಗ *#06# ಡಯಲ್ ಮಾಡಿದರೆ ಐಎಂಇಐ ಸಂಖ್ಯೆ ಸಿಗುತ್ತದೆ. ಮುಂಚಿತವಾಗಿ ಈ ಸಂಖ್ಯೆಯನ್ನು ಒಂದು ಸುರಕ್ಷಿತ ಜಾಗದಲ್ಲಿ ಬರೆದು ಇಟ್ಟುಕೊಳ್ಳುವುದು ಬಹಳ ಉತ್ತಮ ಅಭ್ಯಾಸ.
Report on CEIR Portal – CEIR – ಅಇIಖ ಪೋರ್ಟಲ್‌ನಲ್ಲಿ ದೂರು ದಾಖಲಿಸಿ
ಇನ್ನು ಭಾರತ ಸರ್ಕಾರದ CEIR (Central Equipment Identity Register) ಪೋರ್ಟಲ್ ಮೂಲಕ ಕಳವಾದ ಮೊಬೈಲ್ ಅನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಬಹುದು. ದೂರು ಸಲ್ಲಿಸುವ ವಿಧಾನ ಹೀಗಿದೆ:
CEIR ಅಧಿಕೃತ ಜಾಲತಾಣ ceir.gov.in ಕ್ಕೆ ಭೇಟಿ ನೀಡಿ. ಅಲ್ಲಿ Block Stolen/Lost Mobile ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಕಳವಾದ ಮೊಬೈಲ್ ನಂಬರ್ ನಮೂದಿಸಿ, ಐಎಂಇಐ ಸಂಖ್ಯೆ ದಾಖಲಿಸಿ.

ಮೊಬೈಲ್ ಫೋನಿನ ಬ್ರಾಂಡ್, ಮಾದರಿ ಮತ್ತು ಅಂದಾಜು ಬೆಲೆ ಬರೆಯಿರಿ. ಜೊತೆಗೆ ಕಳವಾದ ಸ್ಥಳ ಮತ್ತು ದಿನಾಂಕದ ಮಾಹಿತಿ ನೀಡಿ. ಪೊಲೀಸ್ ದೂರಿನ ವಿವರ ಮತ್ತು ಎಫ್‌ಐಆರ್ ಪ್ರತಿಯನ್ನು ಅಪ್‌ಲೋಡ್ ಮಾಡಿ.
ನಿಮ್ಮ ಹೆಸರು, ವಿಳಾಸ, ಗುರುತಿನ ವಿವರಗಳನ್ನು ತುಂಬಿ. ಇವೆಲ್ಲ ಮುಗಿಸಿದ ನಂತರ ಕ್ಯಾಪ್ಚಾ ವೆರಿಫಿಕೇಷನ್ ಪೂರ್ಣಗೊಳಿಸಿ. ಮತ್ತೊಂದು ಮೊಬೈಲ್ ನಂಬರ್ ನೀಡಿ OTP ಪಡೆದು ಸಬ್‌ಮಿಟ್ ಮಾಡಿ.
ದೂರು ಸಲ್ಲಿಸಿದ ಬಳಿಕ ನಿಮಗೆ ಒಂದು ರೆಫರೆನ್ಸ್ ಸಂಖ್ಯೆ ಸಿಗುತ್ತದೆ. ಅದನ್ನು ಸುರಕ್ಷಿತವಾಗಿ ಉಳಿಸಿಕೊಂಡಿರಿ.
Change Passwords Immediately – ಪಾಸ್‌ವರ್ಡ್’ಗಳನ್ನು ತಕ್ಷಣ ಬದಲಾಯಿಸಿ
ಮೊಬೈಲ್ ಕಳವಾದರೆ ಕೇವಲ ಫೋನ್ ಮಾತ್ರವಲ್ಲ, ಅದರಲ್ಲಿರುವ ವೈಯಕ್ತಿಕ ಮಾಹಿತಿ ಅಪಾಯದಲ್ಲಿರುತ್ತದೆ. ಆದ್ದರಿಂದ ತಕ್ಷಣ ಈ ಕ್ರಮ ಕೈಗೊಳ್ಳಬೇಕು:
- ಬ್ಯಾಂಕ್ ಆಪ್ ಪಾಸ್‌ವರ್ಡ್ ಬದಲಾಯಿಸಿ
- ಜಿಮೇಲ್ / ಇಮೇಲ್ ಖಾತೆಯ ಪಾಸ್‌ವರ್ಡ್ ಬದಲಿಸಿ
- ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಮುಂತಾದ ಆಪ್‌ಗಳ ಲಾಗಿನ್ ವಿವರ ಬದಲಿಸಿ
- ಗೂಗಲ್ ಖಾತೆಯಿಂದ ಆ ಮೊಬೈಲ್ ಅನ್ನು Logout / Remove device ಮಾಡಿ
ಇದರಿಂದ ನಿಮ್ಮ ಹಣ ಮತ್ತು ಮಾಹಿತಿಗೆ ಹೆಚ್ಚುವರಿ ಭದ್ರತೆ ಸಿಗುತ್ತದೆ.
ಕೊನೆಯಾಗಿ ಮೊಬೈಲ್ ಕಳವಾದಾಗ ಆತಂಕಕ್ಕೆ ಒಳಗಾಗುವುದು ಸಹಜ, ಆದರೆ ಸಮಯಕ್ಕೆ ಸರಿಯಾದ ಕ್ರಮ ಕೈಗೊಂಡರೆ ದೊಡ್ಡ ಸಮಸ್ಯೆ ತಪ್ಪಿಸಬಹುದು.
- ಸಿಮ್ ಬ್ಲಾಕ್ ಮಾಡಿ
- ಪೊಲೀಸ್ ದೂರು ನೀಡಿ
- CEIR ಪೋರ್ಟಲ್‌ನಲ್ಲಿ ಮೊಬೈಲ್ ಬ್ಲಾಕ್ ಮಾಡಿ
- ಪಾಸ್‌ವರ್ಡ್’ಗಳನ್ನು ಬದಲಿಸಿ
ಇವೆಲ್ಲ ಹಂತಗಳನ್ನು ಸರಿಯಾಗಿ ಅನುಸರಿಸಿದರೆ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಹಣವನ್ನು ಬಹುತೇಕ ರಕ್ಷಿಸಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.