ನಿರುದ್ಯೋಗಿಗಳಿಗೆ ರಾಜ್ಯ ಸರ್ಕಾರ ಮೊಬೈಲ್ ಕ್ಯಾಂಟೀನ್ ಆರಂಭಿಸಲು 5 ಲಕ್ಷ ರೂ. ಸಹಾಯಧನ (Mobile Canteen Subsidy) ನೀಡುತ್ತದೆ. ಈ ಸಬ್ಸಿಡಿ ಪಡೆಯಲು ಅರ್ಜಿ ಸಲ್ಲಿಸುವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರುದ್ಯೋಗಿ ಯುವಕರಿಗೆ ಉದ್ಯಮಶೀಲತೆಯತ್ತ ಪ್ರೇರಣೆ ನೀಡುವ ಉದ್ದೇಶದಿಂದ ‘ಮೊಬೈಲ್ ಕ್ಯಾಂಟೀನ್ ಸಹಾಯಧನ ಯೋಜನೆ’ ಜಾರಿಗೆ ಬಂದಿದೆ. ಈ ಯೋಜನೆಯಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಗರಿಷ್ಠ ₹5 ಲಕ್ಷದವರೆಗೆ ಸಹಾಯಧನ ಒದಗಿಸಲಾಗುತ್ತದೆ.
ನಿರುದ್ಯೋಗಿ ಯುವಕರಲ್ಲಿ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುವುದು, ಪ್ರವಾಸೋದ್ಯಮಕ್ಕೆ ಬೆಂಬಲ ನೀಡುವ ವ್ಯಾಪಾರಗಳ ಬೆಳವಣಿಗೆಗೆ ಸಹಾಯ ಒದಗಿಸುವುದು ಹಾಗೂ ಊಟದ ವಾಹನಗಳ ಮೂಲಕ ತ್ವರಿತ ಸೇವೆ ಒದಗಿಸುವ ವ್ಯವಸ್ಥೆಯನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಸಹಾಯಧನ ಎಷ್ಟು ಸಿಗುತ್ತದೆ?
ಈ ಯೋಜನೆಯಡಿ ಮೊಬೈಲ್ ಕ್ಯಾಂಟೀನ್ ತೆರೆಯಲು ಇಚ್ಛಿಸುವ ಅರ್ಹ ಫಲಾನುಭವಿಗಳಿಗೆ ಗರಿಷ್ಠ ₹5,00,000 ಸಹಾಯಧನ ಸಿಗಲಿದೆ. ಘಟಕ ವೆಚ್ಚದ ಶೇ.70ರಷ್ಟು ಮೊತ್ತವನ್ನು ಸರ್ಕಾರ ನೀಡಲಿದೆ. ಉಳಿದ ಮೊತ್ತವನ್ನು ಫಲಾನುಭವಿಯು ಸ್ವಂತ ಹಣ ಅಥವಾ ಬ್ಯಾಂಕ್ ಸಾಲದಿಂದ ಜೋಗಿಸಲಾಗುವುದು.
ಅರ್ಜಿ ಸಲ್ಲಿಕೆಗೆ ಯಾರು ಅರ್ಹರು?
- ಕರ್ನಾಟಕ ರಾಜ್ಯದ ನಿವಾಸಿ ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿರಬೇಕು
- 20 ರಿಂದ 45 ವರ್ಷ ವಯಸ್ಸಿನ ನಡುವೆ ಇರಬೇಕು
- ಕನಿಷ್ಠ SSLC ಉತ್ತೀರ್ಣರಾಗಿರಬೇಕು
- ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು
- ಆದಾಯ ಮಿತಿ ಗ್ರಾಮಾಂತರ ಪ್ರದೇಶ – ವಾರ್ಷಿಕ ₹1.5 ಲಕ್ಷದೊಳಗೆ ಮತ್ತು ನಗರ ಪ್ರದೇಶ – ವಾರ್ಷಿಕ ₹2 ಲಕ್ಷದೊಳಗೆ ಇರಬೇಕು
- ಅರ್ಜಿದಾರರು ಅಥವಾ ಅವರ ಕುಟುಂಬದವರು ಸರ್ಕಾರಿ ನೌಕರರಾಗಿರಬಾರದು

ಅರ್ಜಿಗೆ ಬೇಕಾದ ದಾಖಲೆಗಳು
- ಅರ್ಜಿ ನಮೂನೆ (ಸ್ಥಳೀಯ ಪ್ರವಾಸೋದ್ಯಮ ಇಲಾಖೆಯಿಂದ ಲಭ್ಯ)
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್ ಗಾತ್ರದ 2 ಭಾವಚಿತ್ರಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- SSLC ಅಂಕಪಟ್ಟಿ
- ಡ್ರೈವಿಂಗ್ ಲೈಸೆನ್ಸ್ ಪ್ರತಿ
- ₹50 ಛಾಪಾ ಕಾಗದದಲ್ಲಿ ಅಫಿಡೆವಿಟ್ (ನೌಕರರಾಗಿಲ್ಲ ಎಂಬ ಪ್ರಮಾಣಪತ್ರ)
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಅರ್ಹ ಅಭ್ಯರ್ಥಿಗಳು ‘ಮೊಬೈಲ್ ಕ್ಯಾಂಟೀನ್ ಸಹಾಯಧನ ಯೋಜನೆ’ ಅಡಿಯಲ್ಲಿ ಸಹಾಯಧನ ಪಡೆಯಲು ನಿಮ್ಮ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕಚೇರಿಗೆ ಭೇಟಿಯಾಗಿ ಅರ್ಜಿ ನಮೂನೆ ಪಡೆದು, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿಯೊಂದಿಗೆ ಸಲ್ಲಿಸಿ.
ಅರ್ಜಿ ಪರಿಶೀಲನೆಯ ನಂತರ ಒಂದು ತಿಂಗಳ ಉದ್ಯಮಶೀಲತೆ ತರಬೇತಿಗೆ ಕರೆ ನೀಡಲಾಗುತ್ತದೆ. ತರಬೇತಿ ಯಶಸ್ವಿಯಾಗಿ ಮುಗಿಸಿದವರಿಗೆ ಸಹಾಯಧನ ಬಿಡುಗಡೆ ಮಾಡಲಾಗುತ್ತದೆ.
ಯೋಜನೆಯ ಪ್ರಮುಖ ಲಾಭಗಳು
- ₹5 ಲಕ್ಷವರೆಗೆ ಹಣಕಾಸು ನೆರವು
- ಉಚಿತ ತರಬೇತಿ, ಊಟ, ವಸತಿ ವ್ಯವಸ್ಥೆ
- ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಸಲು ಸುಲಭ ಅವಕಾಶ
- ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಣ್ಣ ಉದ್ಯಮಕ್ಕೆ ಸರ್ಕಾರಿ ಮಾನ್ಯತೆ
ಗಮನಿಸಿ: ಈ ಯೋಜನೆ ಸದ್ಯಕ್ಕೆ ಆಯ್ದ ಜಿಲ್ಲೆಗಳಿಗೆ ಮಾತ್ರ ಲಭ್ಯವಿದೆ. ಅರ್ಜಿಗೆ ಮುನ್ನ ಸ್ಥಳೀಯ ಪ್ರವಾಸೋದ್ಯಮ ಕಚೇರಿಯನ್ನು ಸಂಪರ್ಕಿಸಿ. ತರಬೇತಿ ಮುಗಿಸಿದ ನಂತರವಷ್ಟೇ ಅನುದಾನ ಬಿಡುಗಡೆ ಮಾಡಲಾಗುತ್ತದೆ.
ಈ ಯೋಜನೆ ನಿರುದ್ಯೋಗಿ ಯುವಕರಿಗೆ ಒಂದಷ್ಟು ಪ್ರೇರಣಾದಾಯಕ ಅವಕಾಶ. ಸರಕಾರದ ನೆರವಿನಿಂದ ತಮ್ಮದೇ ಮೊಬೈಲ್ ಕ್ಯಾಂಟೀನ್ ಆರಂಭಿಸಲು ಇದೊಂದು ಸುವರ್ಣಾವಕಾಶ. ಅಗತ್ಯ ಅರ್ಹತೆ ಪೂರೈಸುವವರು ಈಗಲೇ ಅರ್ಜಿ ಸಲ್ಲಿಸಿ, ಉದ್ಯಮಶೀಲತೆಯ ಕನಸು ನೆರವೇರಿಸಬಹುದು!

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.