Low Interest Loans- ಇನ್ಮುಂದೆ ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ | ಮತ್ತೆ ರೆಪೋ ದರ ಇಳಿಸಿದ ಆರ್‌ಬಿಐ

Spread the love

ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India-RBI) ಮತ್ತೆ ರೆಪೊ ದರ (Repo Rate) ಇಳಿಕೆ ಮಾಡಿದ್ದು; ಇನ್ಮುಂದೆ ಗೃಹ ಸಾಲ (Home loan), ವಾಹನ ಸಾಲ (Vehicle loan) ಸೇರಿದಂತೆ ಬಹುತೇಕ ಸಾಲಗಳ ಮೇಲಿನ ಬಡ್ಡಿದರ (Decrease in interest rate) ಇಳಿಕೆಯಾಗಲಿದೆ. ಹೊಸದಾಗಿ ಸಾಲ ಮಾಡುವವರಿಗೆ ಕಡಿಮೆ ಬಡ್ಡಿಗೆ ಸಾಲ (Low Interest Loan) ಸಿಗಲಿದೆ.

WhatsApp Group Join Now
Telegram Group Join Now

ರೆಪೊ ದರ (RBI Repo Rate) ಎಂದರೆ, ವಾಣಿಜ್ಯ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನಿ೦ದ ತಾತ್ಕಾಲಿಕವಾಗಿ ಸಾಲ ಪಡೆಯುವಾಗ ಆರ್‌ಬಿಐ ವಿಧಿಸುವ ಬಡ್ಡಿದರ. ಈ ದರ ಕಡಿಮೆಯಾದರೆ, ಬ್ಯಾಂಕುಗಳಿಗೆ ಹಣ ಪೂರೈಕೆ ಮಾಡಲು ವೆಚ್ಚ ತಗ್ಗುತ್ತದೆ. ಅದರಿಂದಾಗಿ ಅವರು ಗ್ರಾಹಕರಿಗೂ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಬಹುದು.

Gold Price Drop- ಅಕ್ಷಯ ತೃತೀಯಕ್ಕೆ ಪಾತಾಳಕ್ಕೆ ಇಳಿಯುತ್ತಾ ಚಿನ್ನದ ಬೆಲೆ? ಸತತ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆ

ಒಂದೇ ವರ್ಷದಲ್ಲಿ ಎರಡು ಬಾರಿ ರೆಪೊ ದರ ಕಡಿತ

2020ರ ನಂತರದಲ್ಲಿ ಒಂದೇ ವರ್ಷದಲ್ಲಿ ಎರಡು ಬಾರಿ ಆರ್‌ಬಿಐ, ರೆಪೊ ದರ ಕಡಿಮೆ ಮಾಡಿದೆ. ಈಗ್ಗೆ ಎರಡು ತಿಂಗಳ ಹಿಂದಷ್ಟೇ ರೆಪೊ ದರದಲ್ಲಿ ಶೇ.0.25ರಷ್ಟು ಬೇಸಿಸ್ ಪಾಯಿಂಟ್ ಕಡಿತಗೊಳಿಸಲಾಗಿತ್ತು. ಮತ್ತೀಗ 2ನೇ ಬಾರಿಗೆ ರೆಪೊ ದರವನ್ನು ಪುನಃ ಶೇ. 0.25ರಷ್ಟು ಕಡಿತಗೊಳಿಸುವ ಮೂಲಕ ರಿಸರ್ವ್ ಬ್ಯಾಂಕ್ ಸಾಲಗಾರರಿಗೆ ಹೊರೆಯನ್ನು ಮತ್ತಷ್ಟು ಇಳಿಸಿದೆ.

ನಿನ್ನೆ ಏಪ್ರಿಲ್ 09ರಂದು ಅಂತ್ಯಗೊಂಡ ಆರ್‌ಬಿಐ ತ್ರೈಮಾಸಿಕ ‘ಹಣಕಾಸು ನೀತಿ ಪರಾಮರ್ಶೆ ಸಮಿತಿ’ (Monetary Policy Committee-MPC) ಸಭೆಯ ಬಳಿಕ ಆರ್‌ಬಿಐ ಗವರ್ನರ್ ಸಂಜಯ್ ಮಲ್ಲೋತ್ರಾ ಅವರು ಬಡ್ಡಿದರ ಇಳಿಕೆ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದರೊಂದಿಗೆ ಪ್ರಸ್ತುತ ರೆಪೊ ದರ ಶೇ.6ಕ್ಕೆ ತಲುಪಿದೆ. 2022ರ ನವೆಂಬರ್ ಬಳಿಕ ಇದು ಅತ್ಯಂತ ಕನಿಷ್ಠ ಮಟ್ಟವಾಗಿದೆ.

Electric Scooter Zelio- ₹50,000ಕ್ಕಿಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ | ಝೆಲಿಯೋ ಲಿಟಲ್ ಗ್ರೇಸಿ ಹೊಸ ಸ್ಕೂಟರ್

ಬಡ್ಡಿದರ ಇಳಿಕೆಗೆ ಕಾರಣವೇನು?

ಅಮೆರಿಕ ಅಧ್ಯಕ್ಷ ಟ್ರಂಪ್ ಸಾರಿರುವ ಸುಂಕ ಸಮರದಿಂದ ಜಾಗತಿಕ ಮಟ್ಟದಲ್ಲಿ ಆರ್ಥಿಕ ಅನಿಶ್ಚಿತತೆ ತಲೆದೋರಿದೆ. ಇದು ಆರ್ಥಿಕ ಹಿಂಜರಿಕೆಗೂ ದಾರಿ ಮಾಡುವ ಆತಂಕ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕತೆಗೆ ಪುಷ್ಟಿ ನೀಡಲು ಆರ್‌ಬಿಐ ಬಡ್ಡಿದರ ಇಳಿಕೆ ಕ್ರಮ ಕೈಗೊಂಡಿದೆ. ಜಾಗತಿಕ ಕಚ್ಚಾತೈಲ ದರ, ಹಣದುಬ್ಬರ ಪ್ರಮಾಣ ಸಹ ಇಳಿಮುಖವಾಗಿರುವುದು ಆರ್‌ಬಿಐ ನಡೆಗೆ ಕಾರಣ.

ಆರ್‌ಬಿಐ ಮುಂದಿನ ಸತತ ಮೂರು ಸಭೆಗಳಲ್ಲೂ ರೆಪೊ ದರವನ್ನು ತಲಾ 0.25% ಇಳಿಕೆ ಮಾಡುವ ಮೂಲಕ ಒಟ್ಟಾರೆ ರೆಪೊ ದರವನ್ನು ಈಗಿರುವ ಶೇ. 6ರಿಂದ ಶೇ. 5.25ಕ್ಕೆ ಕೊಂಡೊಯ್ಯುವ ನಿರೀಕ್ಷೆಯನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ಗೃಹ ಸಾಲ, ವಾಹನ ಸಾಲ ಸೇರಿದಂತೆ ಬಹುತೇಕ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ. ಹೊಸದಾಗಿ ಸಾಲ ಮಾಡುವವರಿಗೆ ಕಡಿಮೆ ಬಡ್ಡಿಗೆ ಸಾಲ ಸಿಗಲಿದೆ...
Low Interest Loans RBI Repo Rate Cut

Gold Silver Price- ಚಿನ್ನದ ಬೆಲೆ ಭಾರೀ ಇಳಿಕೆ | 10 ಗ್ರಾಂಗೆ ಕೇವಲ ₹55,000 ಇಳಿಯಲಿದೆಯೇ?

ಬಡ್ಡಿದರ ಇಳಿಕೆಯಿಂದಾಗುವ ಲಾಭಗಳು

ಪ್ರಮುಖವಾಗಿ ಸಾಲಗಾರರಿಗೆ ಇದರ ದೊಡ್ಡ ಲಾಭ ಸಿಗಲಿದೆ. ಗೃಹ ಸಾಲ, ವಾಹನ ಸಾಲ, ವಾಹನ ಸಾಲಗಳ ಮೇಲೆ ಬಡ್ಡಿದರ ಇಳಿಕೆಯಾಗುತ್ತದೆ. ಹೊಸ ಸಾಲಗಳನ್ನು ತೆಗೆದುಕೊಳ್ಳುವವರಿಗೆ ಕಡಿಮೆ ಬಡ್ಡಿದರದಲ್ಲಿ ಲೋನ್ ಸಿಗುತ್ತದೆ.

ಇದು ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ನೀಡಲಿದೆ. ರೆಪೊ ದರ ಇಳಿಕೆಯಿಂದ ರಿಯಲ್ ಎಸ್ಟೇಟ್ ಕ್ಷೇತ್ರ ಚುರುಕು ಹೊಂದುತ್ತದೆ. ವಾಹನ ಉದ್ಯಮ ಪುಟೆದೇಳುತ್ತದೆ. ವ್ಯಾಪಾರಿಗಳು ಹಾಗೂ ಕೈಗಾರಿಕೆಗೆ ಸಾಲ ಸಿಗುವಿಕೆ ಸುಲಭವಾಗುತ್ತದೆ.

ಮತ್ತಷ್ಟು ಬಡ್ಡಿದರ ಕಡಿತದ ಮುನ್ಸೂಚನೆ

ಇದುವರೆಗೂ ರೆಪೊ ದರ ಇಳಿಕೆ ವಿಚಾರದಲ್ಲಿ ಕಠಿಣ ಮತ್ತು ಹೊಂದಾಣಿಕೆಯ ನಡೆ ಅನುಸರಿಸುತ್ತಿದ್ದ ರಿಸರ್ವ್ ಬ್ಯಾಂಕ್, ಈ ಬಾರಿಯಿಂದ ತಟಸ್ಥ ನೀತಿ ಅನುಸರಿಸಿದೆ. ಅಲ್ಲದೆ, ಆರ್ಥಿಕ ಚಟುವಟಿಕೆ ಚುರುಕುಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬಡ್ಡಿದರ ಕಡಿತದ ಮುನ್ಸೂಚನೆಯನ್ನೂ ಆರ್‌ಬಿಐ ನೀಡಿದೆ.

ಬಡ್ಡಿದರ ಇಳಿಕೆಯಿಂದ ಗೃಹ ಮತ್ತು ವಾಹನ ಸಾಲಗಳ ಹೆಚ್ಚಳಕ್ಕೆ ಉತ್ತೇಜನ ನೀಡಲಿದ್ದು, ರಿಯಲ್ ಎಸ್ಟೇಟ್ ಮತ್ತು ವಾಹನ ಕ್ಷೇತ್ರದ ಬೆಳವಣಿಗೆಗೆ ವೇಗ ದೊರೆಯಲಿದೆ. ಆರ್‌ಬಿಐ ರೆಪೊ ದರ ಇಳಿಕೆ ಘೋಷಿಸಿದ ಬೆನ್ನಲ್ಲೇ ಸಾರ್ವಜನಿಕ ವಲಯದ ‘ಯೂಕೊ ಬ್ಯಾಂಕ್’ ಮತ್ತು ‘ಬ್ಯಾಂಕ್ ಆಫ್ ಇಂಡಿಯಾ’ ಬಡ್ಡಿದರದಲ್ಲಿ 0.25% ಇಳಿಕೆ ಪ್ರಕಟಿಸಿವೆ. ಇತರೆ ಬ್ಯಾಂಕ್‌ಗಳೂ ಶೀಘ್ರ ಇದೇ ಹಾದಿ ತುಳಿಯುವ ನಿರೀಕ್ಷೆಯಿದೆ.

MUDRA Loan- ಶ್ಯೂರಿಟಿ ಇಲ್ಲದೇ ₹20 ಲಕ್ಷ ಸಾಲ | 33 ಲಕ್ಷ ಕೋಟಿ ರೂ. ಸಾಲ ವಿತರಣೆ


Spread the love
WhatsApp Group Join Now
Telegram Group Join Now
error: Content is protected !!