ಕಡಿಮೆ ಬಡ್ಡಿ ದರದಲ್ಲಿ (Low Interest) ಗೃಹ ಸಾಲ ಸಿಗಬೇಕೆಂದರೆ ಅನುಸರಿಸಬೇಕಾದ ಕ್ರಮಗಳೇನು? ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಕೆಲವು ಬ್ಯಾಂಕುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…
ಸಾಲವಿಲ್ಲದೇ ಮನೆ ಕಟ್ಟುವುದು ಇಂದು ಕಷ್ಟಸಾಧ್ಯ. ಮನೆ ಕಟ್ಟಲು ಜೀವಮಾನ ಪೂರ್ತಿ ಹಣ ಕೂಡಿಟ್ಟರೂ ಕೊಂಚವಾದರೂ ಸಾಲ ಮಾಡುವ ಪ್ರಮೇಯ ಬರುತ್ತದೆ. ಇದಕ್ಕೆಂದೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವು ವಸತಿ ಯೋಜನೆಗಳನ್ನು ಜಾರಿಗೊಳಿಸಿ, ಸಾಲ ಮತ್ತು ಸಬ್ಸಿಡಿ (Loan and subsidy) ಸೌಲಭ್ಯವನ್ನು ಕಲ್ಪಿಸುತ್ತಿವೆ. ಸರ್ಕಾರದ ಸಾಲ ಮತ್ತು ಸಬ್ಸಿಡಿ ಯೋಜನೆಗಳನ್ನು ಗಿಟ್ಟಿಸಿಕೊಳ್ಳುವುದು ಕೂಡ ಹಲವರಿಗೆ ಕಷ್ಟ.
ಹೀಗಾಗಿ ಸಹಜವಾಗಿಯೇ ಅನೇಕರು ಗೃಹಸಾಲಕ್ಕಾಗಿ ವಿವಿಧ ಬ್ಯಾಂಕು, ಹಣಕಾಸು ಸಂಸ್ಥೆಗಳ ಮೊರೆ ಹೋಗುತ್ತಾರೆ. ಅದಕ್ಕೆಂದೇ ಹಲವು ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ನಾನಾ ನಮೂನೆಯ ಗೃಹಸಾಲ ನೀಡುತ್ತವೆ. ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಸಿಗಬೇಕೆಂದರೆ ಅನುಸರಿಸಬೇಕಾದ ಕ್ರಮಗಳೇನು? ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಕೆಲವು ಬ್ಯಾಂಕುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…
PUC Board Exam 2- ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ-2 ಆರಂಭ | ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆಗಳು ಇಲ್ಲಿವೆ…
ಗೃಹ ಸಾಲದ ವಿಧಗಳು
ಗೃಹಸಾಲವೆಂದರೆ ಕೇವಲ ಮನೆ ನಿರ್ಮಾಣಕ್ಕೆ ಮಾತ್ರ ಅನ್ವಯಿಸುವ ಸಾಲವಲ್ಲ. ನೀವು ಮನೆ ನಿರ್ಮಾಣ, ಮನೆ ರಿಪೇರಿ, ಮನೆ ಖರೀದಿ ಸೇರಿದಂತೆ ವಿವಿಧ ಗೃಹ ಸಂಬAಧಿ ಕಾರಣಗಳಿಗೆ ಗೃಹ ಸಾಲ ತೆಗೆದುಕೊಳ್ಳಬಹುದು.
- ಗೃಹ ವಸತಿ ಸಾಲ
- ಮನೆ ವಿಸ್ತರಣೆ ಸಾಲ
- ಮನೆಯ ಸುಧಾರಣೆ ಸಾಲ
- ಹೋಂ ಲೋನ್ ಬ್ಯಾಲೆನ್ಸ್ ವರ್ಗಾವಣೆ
- ಸಂಯೋಜಿತ ಗೃಹ ಸಾಲ
ಗೃಹ ಸಾಲ ಪಡೆದುಕೊಳ್ಳುವ ಮೊದಲು ಯಾವ್ಯಾವ ಬ್ಯಾಂಕ್‌ಗಳಲ್ಲಿ ಎಷ್ಟೆಷ್ಟು ಬಡ್ಡಿ ದರದಲ್ಲಿ ಗೃಹಸಾಲ ದೊರೆಯುತ್ತದೆ? ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು. ವಿವಿಧ ಬಡ್ಡಿ ದರದಲ್ಲಿ ಗೃಹ ಸಾಲ ಸೌಲಭ್ಯವಿದ್ದು; ಹೆಚ್ಚು ಹಣವನ್ನು ಪಡೆದುಕೊಂಡು ದೀರ್ಘಾವಧಿ ವರೆಗೆ ಸುಲಭ ಕಂತುಗಳಲ್ಲಿ ಮರುಪಾವತಿಸುವ ಅವಕಾಶವಿರುತ್ತದೆ.
Akshaya Tritiya 2025- ಅಕ್ಷಯ ತೃತೀಯ 2025: ಚಿನ್ನಾಭರಣ ಖರೀದಿಗೆ 12,000 ರೂ. ವರೆಗೂ ಭರ್ಜರಿ ಆಫರ್

ಬ್ಯಾಂಕ್’ಗಳು ಗೃಹಸಾಲಕ್ಕೆ ಹೇಗೆ ಬಡ್ಡಿದರ ನಿಗದಿಪಡಿಸುತ್ತವೆ?
ಒಂದೊಂದು ಬ್ಯಾಂಕುಗಳು ಒಂದೊಂದು ರೀತಿಯ ಬಡ್ಡಿ ದರದಲ್ಲಿ ಗೃಹ ಸಾಲವನ್ನು (Hoame Loan) ನೀಡುತ್ತವೆ. ಅದೇ ರೀತಿ ಹಲವು ನಿಯಮ, ಶರತ್ತುಗಳ ಆಧಾರದ ಮೇಲೆ ಗೃಹಸಾಲ ಒದಗಿಸುತ್ತವೆ. ಬ್ಯಾಂಕುಗಳು ಸಾಲ ಮತ್ತು ಸಾಲದ ಮೇಲಿನ ಬಡ್ಡಿದರವನ್ನು ನಿಮ್ಮ ಕ್ರೆಡಿಟ್ ಸ್ಕೋರ್ (Credit score) ಮತ್ತು ಎಲ್‌ಟಿವಿ ಅನುಪಾತ (LTV ratio) ಈ ಎರಡರ ಆಧಾರದ ಮೇಲೆ ನಿಗದಿಡಿಸುತ್ತವೆ.
300ರಿಂದ 900ರ ವರೆಗಿನ ಮೂರು ಅಂಕಿಯ ಸಂಖ್ಯೆಯಾಗಿರುವ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ (Cibil score) ಸಾಲವನ್ನು ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯದ ಅಂಶವಾಗಿದೆ. ಕ್ರೆಡಿಟ್ ಸ್ಕೋರ್ ಉತ್ತವಾಗಿದ್ದರೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುತ್ತದೆ. ಮಧ್ಯಮವಾಗಿದ್ದರೆ ಸಾಧಾರಣ ಬಡ್ಡಿ, ಸ್ಕೋರ್ ಕಡಿಮೆಯಾಗಿದ್ದರೆ ಹೆಚ್ಚು ಬಡ್ಡಿಗೆ ಸಾಲ ಸಿಗುತ್ತದೆ. ಕಳಪೆಯಾಗಿದ್ದರೆ ಯಾವುದೇ ರೀತಿಯ ಸಾಲ ಸಿಗದೇ ಇರಬಹುದು.
ಇನ್ನು ಬ್ಯಾಂಕುಗಳು ನೀಡುವ ಸಾಲದ ಮೌಲ್ಯಕ್ಕೂ ಹಾಗೂ ಅರ್ಜಿದಾರರನ ಆಸ್ತಿ ಮೌಲ್ಯಕ್ಕೂ ಇರುವ ಅನುಪಾತವನು ಎಲ್‌ಟಿವಿ ಅನುಪಾತವೆಂದು (Loan-to-Value) ಕರೆಯಲಾಗುತ್ತದೆ. ಇಲ್ಲೂ ಕೂಡ ಈ ಅನುಪಾತ ಹೆಚ್ಚಿದ್ದಷ್ಟು ಹೆಚ್ಚಿನ ಬಡ್ಡಿ ದರ ನಿಗದಿಪಡಿಸಲಾಗುತ್ತದೆ.ಇಲ್ಲಿ ಕ್ರೆಡಿಟ್ ಸ್ಕೋರ್ ಮತ್ತು ಎಲ್‌ಟಿವಿ ಆಧಾರದ ಮೇಲೆ ಕೆಲವು ಬ್ಯಾಂಕುಗಳು ವಿಧಿಸುವ ಗೃಹಸಾಲದ ಬಡ್ಡಿ ದರಗಳ (home loan low interest Banks) ವಿವರವನ್ನು ನೋಡೋಣ…
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಮೊದಲಿಗೆ ನಾವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ಬಡ್ಡಿದರ (interest rate) ನೋಡುವುದಾದರೆ, ಗೃಹ ಸಾಲದ ಮೇಲೆ 8.6% ರಿಂದ 9.65% ವರೆಗೆ ಬಡ್ಡಿ ವಿಧಿಸುತ್ತದೆ. ಅರ್ಜಿದಾರನ ಕ್ರೆಡಿಟ್ ಸ್ಕೋರ್ 750ಕ್ಕಿಂತ ಮೇಲಿದ್ದರೆ 8.6%, 650 ರಿಂದ 699 ಇದ್ದರೆ 9.45%, 550 ರಿಂದ 649 ಇದ್ದರೆ 9.65% ದರದಲ್ಲಿ ನಿಮಗೆ ಗೃಹ ಸಾಲ ಸಿಗುತ್ತದೆ.
ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್ (ICICI Bank) ಗೃಹ ಸಾಲದ ಮೇಲೆ ವಿಧಿಸುವ ಬಡ್ಡಿ ದರ ನೋಡುವುದಾದರೆ, 9% ನಿಂದ 9.10%ರ ವರೆಗೆ ಬಡ್ಡಿ ಇದ್ದು, ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ನೀಡಲಾಗುವುದು. ಕ್ರೆಡಿಟ್ ಸ್ಕೋರ್ ಹೊರತುಪಡಿಸಿ ಇದು ಸಂಬಳ ಪಡೆಯುವ ಅರ್ಜಿದಾರರಿಗೆ 9% ನಷ್ಟು ಬಡ್ಡಿ ವಿದಿಸುತ್ತದೆ. ಸ್ವಯಂ ಉದ್ಯೋಗಿಗಳ ಕ್ರೆಡಿಟ್ ಸ್ಕೋರ್ 800 ಕ್ಕಿಂತ ಹೆಚ್ಚಿದ್ದರೆ ಬಡ್ಡಿ ದರ ಶೇಕಡ 9ರಷ್ಟು ಮತ್ತು 750-800ರ ಕ್ರೆಡಿಟ್ ಸ್ಕೋರ್ ಇದ್ದವರಿಗೆ 9.10%ರ ಬಡ್ಡಿ ವಿಧಿಸಲಾಗುತ್ತದೆ.
MUDRA Loan- ಶ್ಯೂರಿಟಿ ಇಲ್ಲದೇ ₹20 ಲಕ್ಷ ಸಾಲ | 33 ಲಕ್ಷ ಕೋಟಿ ರೂ. ಸಾಲ ವಿತರಣೆ
ಬ್ಯಾಂಕ್ ಆಫ್ ಬರೋಡ
ಬ್ಯಾಂಕ್ ಆಫ್ ಬರೋಡ (Bank of Baroda) ಗೃಹ ಸಾಲದ ಮೇಲೆ 8.40% ನಿಂದ 10.60% ಬಡ್ಡಿದರ ವಿಧಿಸುತ್ತದೆ. ಈ ಬಡ್ಡಿಯನ್ನು ಪ್ರತಿ ತಿಂಗಳು ಖಚಿತ ಸಂಬಳ ಪಡೆಯುವ ಹಾಗೂ ಕೃಷಿ, ಸ್ವಯಂ ಉದ್ಯೋಗ ಇತ್ಯಾದಿ ಆದಾಯ ಮೂಲ ಹೊಂದಿರುವ ವ್ಯಕ್ತಿಗಳಿಗೆ ಅನುಗುಣವಾಗಿ ವಿಧಿಸಲಾಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ತನ್ನ ಗ್ರಾಹಕರಿಗೆ ಗೃಹ ಸಾಲದ ಮೇಲೆ ಬಡ್ಡಿದರವನ್ನು ಶೇಕಡ 8.40 ರಿಂದ ಶೇಕಡ 10.10ರ ವರೆಗೆ ವಿಧಿಸುತ್ತ್ತದೆ. ಈ ಬಡ್ಡಿ ದರವನ್ನು ಎಲ್‌ಟಿವಿ ಅನುಪಾತ ಮತ್ತೊಂದು ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ನೀಡಲಾಗುತ್ತದೆ.
ಹೆಚ್‌ಡಿಎಫ್‌ಸಿ ಬ್ಯಾಂಕ್
ಕೊನೆಯದಾಗಿ ಹೆಚ್‌ಡಿಎಫ್‌ಸಿ ಬ್ಯಾಂಕ್ (HDFC Bank)ಗ್ರಾಹಕರಿಗೆ ಗೃಹ ಸಾಲದ ಮೇಲೆ ಬಡ್ಡಿ ದರವನ್ನು ನೋಡುವುದಾದರೆ, ಶೇಕಡಾ 8.50 ರಿಂದ 9.15ರ ವರೆಗೆ ಬಡ್ಡಿ ದರವನ್ನು ಗೃಹ ಸಾಲದ ಮೇಲೆ ವಿಧಿಸುತ್ತಿದ್ದು; ಯಥಾಪ್ರಕಾರ ಈ ದರವು ವಿವಿಧ ಆಧಾರದ ಮೇಲೆ ಅನ್ವಯವಾಗಿರುತ್ತದೆ.