
ಸರ್ಕಾರಿ ಹಾಗೂ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಪುರುಷರಿಗಿಂತ ಮಹಿಳೆಯರಿಗಾಗಿಯೇ (Loan benefits for Womens) ಹಲವು ವಿಶೇಷ ಸೌಲಭ್ಯಗಳಿವೆ. ಪ್ರಮುಖವಾಗಿ ಕಡಿಮೆ ಬಡ್ಡಿ ಸಾಲ, ಬಡ್ಡಿ ದರದಲ್ಲಿ ಸಬ್ಸಿಡಿ, ಹೆಚ್ಚಿನ ಮರುಪಾವತಿ ಅವಧಿ ಸೇರಿದಂತೆ ವಿವಿಧ ವಿಶೇಷ ಸೌಲಭ್ಯಗಳಿವೆ.
ಇಂದಿನ ದುಬಾರಿ ಯುಗದಲ್ಲಿ ಹೊಸ ಮನೆ ಖರೀದಿಗೆ (Real estate) ಲಕ್ಷಗಟ್ಟಲೆ ಹಣಬೇಕು. ಈ ಹಣದಕ್ಕಾಗಿ ಬಹಳಷ್ಟು ಜನ ಹೋಂ ಲೋನ್ ಪಡೆಯುತ್ತಾರೆ. ಆದರೆ, ಈ ಸಾಲವನ್ನು ಮಹಿಳೆಯರ ಹೆಸರಿನಲ್ಲಿ ಪಡೆದರೆ ಯಾವೆಲ್ಲ ಪ್ರಯೋಜನಗಳು ಸಿಗಲಿವೆ? ಯಾವ್ಯಾವ ಬ್ಯಾಂಕುಗಳು ಎಷ್ಟೆಷ್ಟು ಬಡ್ಡಿ ದರದಲ್ಲಿ ಗೃಹ ಸಾಲ ನೀಡುತ್ತವೆ? ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ…
ಇದನ್ನೂ ಓದಿ: Mobile Canteen Subsidy- ಮೊಬೈಲ್ ಕ್ಯಾಂಟೀನ್ ತೆರೆಯಲು ಅರ್ಜಿ ಆಹ್ವಾನ | 4 ಲಕ್ಷ ರೂ. ಸಹಾಯಧನ
ಮಹಿಳೆಯರಿಗೆ ಕಡಿಮೆ ಬಡ್ಡಿ ಸಾಲ ಸೌಲಭ್ಯ
ಹೊಸ ಮನೆ ಖರೀದಿ (New Home Purchase), ಮನೆ ನಿರ್ಮಾಣಕ್ಕೆ ಗೃಹ ಸಾಲ ಪಡೆಯಲು ಮಹಿಳೆಯರಿಗಾಗಿಯೇ ಹಲವಾರು ಬ್ಯಾಂಕುಗಳು ಪುರುಷರಿಗಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತವೆ.
ಹಲವಾರು ಬ್ಯಾಂಕುಗಳಲ್ಲಿ ಮಹಿಳೆಯರಿಗೆ ಬಡ್ಡಿ ದರದಲ್ಲಿ ಪುರುಷರಿಗಿಂತ 5 ರಿಂದ 10 ಮೂಲಾಂಶದಷ್ಟು ರಿಯಾಯಿತಿ ನೀಡುತ್ತವೆ. ಇದರ ಅರ್ಥ ಮಹಿಳೆಯರಿಗೆ ಸಾಮಾನ್ಯ ಬಡ್ಡಿ ದರಕ್ಕಿಂತ 0.05 ರಿಂದ 0.10 ರಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.

ಮಹಿಳೆಯರಿಗೆ ಗೃಹ ಸಾಲದ ಪ್ರಯೋಜನೆಗಳೇನು?
ಮಹಿಳೆಯರ ಹೆಸರಿನಲ್ಲಿ ಗೃಹ ಸಾಲ ಪಡೆಯುವುದರಿಂದ ಕಡಿಮೆ ಬಡ್ಡಿ ದರ ದೊರೆಯುವುದರ ಜೊತೆಗೆ ಇನ್ನು ಹಲವಾರು ಪ್ರಯೋಜನಗಳಿವೆ. ಕಡಿಮೆ ಬಡ್ಡಿ ದರ, ಬಡ್ಡಿ ದರದಲ್ಲಿ ಸಬ್ಸಿಡಿ, ಹೆಚ್ಚಿನ ಮರುಪಾವತಿ ಅವಧಿ, ಕಡಿಮೆ ದರದಲ್ಲಿ ಸ್ಟ್ಯಾಂಪ್ ಡ್ಯೂಟಿ ಥರದ ಪ್ರಯೋಜನಗಳು ಸಿಗಲಿವೆ.
ಇದನ್ನು ಹೊರತುಪಡಿಸಿ ಮಹಿಳೆಯರಿಗಾಗಿಯೇ ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ, ಪ್ರತಿಯೊಬ್ಬ ಮಹಿಳೆಯರ ಸ್ವಂತ ಮನೆಯನ್ನು ಹೊಂದಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯು (PM- Avas Yojane) ಕೂಡ ಜಾರಿಗೆಯಲ್ಲಿದೆ. ಪ್ರತಿಯೊಬ್ಬ ಮಹಿಳೆಯರು ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ: Har Ghar Lakhpati Yojana- ಎಸ್‌ಬಿಐ ಹರ್ ಘರ್ ಲಖ್ಪತಿ ಯೋಜನೆ: ಪ್ರತಿ ತಿಂಗಳು ಕೇವಲ 500 ರೂ. ಉಳಿಸಿ ಲಕ್ಷಾಧಿಪತಿ ಆಗಿ
ಮಹಿಳೆಯರಿಗೆ ಎಷ್ಟೆಷ್ಟು ಬಡ್ಡಿ ದರದಲ್ಲಿ ಗೃಹ ಸಾಲ ದೊರೆಯುತ್ತದೆ?
ಮಹಿಳೆಯರಿಗೆ ಗೃಹ ಸಾಲದಲ್ಲಿ ಬಡ್ಡಿದರ ರಿಯಾಯ್ತಿ ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುತ್ತದೆ. ಗೃಹ ಸಾಲದ ಮೇಲಿನ ಬಡ್ಡಿ ದರವು ಬ್ಯಾಂಕಿನಿAದ ಬ್ಯಾಂಕಿಗೆ ಹೊರತುಪಡಿಸಿ ಇದು ವೈಯಕ್ತಿಕ ಕ್ರೆಡಿಟ್ ಸ್ಕೋರ್ (Cibil Score) ಮೇಲೆಯೂ ಕೂಡ ಅವಲಂಬಿತವಾಗಿರುತ್ತದೆ.
ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (State Bank of India) ಸಾಲ ತೆಗೆದುಕೊಂಡರೆ ಪುರುಷರಿಗೆ 9.15 ರಷ್ಟು ಬಡ್ಡಿ ದರದಲ್ಲಿ (Interest Rate) ಸಾಲ ದೊರೆಯುತ್ತದೆ. ಅದೇ ಮಹಿಳೆಯರಿಗೆ 9.10 ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ. ಇದರ ವ್ಯತ್ಯಾಸ ಕೇವಲ 0.05 ರಷ್ಟು ಮಾತ್ರ, ಆದರೆ ಧೀರ್ಘಾವಧಿಯಲ್ಲಿ ಇದು ನಿಮಗೆ ಹೆಚ್ಚಿನ ಹಣವನ್ನು ಉಳಿತಾಯ ಮಾಡಲು ಸಹಾಯವಾಗುತ್ತದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (Central Bank of India) ಮಹಿಳೆಯರಿಗಾಗಿ ಗೃಹ ಸಾಲವು 8.35 ರಿಂದ 9.25 ಬಡ್ಡಿ ದರದಲ್ಲಿ ದೊರೆಯುತ್ತದೆ. ಆದರೆ, ಪುರುಷರಿಗೆ ಇದು 8.5 ರಿಂದ 9.5 ರಷ್ಟು ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ.
ಗೃಹ ಸಾಲ ಪಡೆಯುವ ಮುಂಚೆ ವಿವಿಧ ಬ್ಯಾಂಕುಗಳ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ತಿಳಿದುಕೊಂಡು, ನಂತರದಲ್ಲಿ ಸಂಬಂಧಪಟ್ಟ ಬ್ಯಾಂಕಿಗೆ ಭೇಟಿ ನೀಡಿ ಅಗತ್ಯವಿರುವ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಗೃಹ ಸಾಲ ಪಡೆಯಬಹುದು.